ಸಕ್ಕದದ "ನಂಟು"
- ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: kannadakanda (May 23 2008 - 8:27pm)
- ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: ವೈಭವ (May 24 2008 - 9:31pm)
- ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: mahesha (May 24 2008 - 8:06am)
- ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: mahesha (Aug 5 2007 - 9:31am)
- ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) By: benaka (Mar 22 2007 - 1:37am)
- ಕನ್ನಡದ ಬಳ್ಳಿಗಳು By: Sunil Jayaprakash (Mar 22 2007 - 12:52pm)
- Re: ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) By: mahesha (Mar 22 2007 - 1:07pm)
- Re: ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) By: benaka (Mar 25 2007 - 12:59am)
- ’ಬಳ್ಳಿ’ ಕನ್ನಡದ್ದೇ ಪದ By: mahesha (Mar 25 2007 - 3:16am)
- ’ಬಳ್ಳಿ’ ಕನ್ನಡದ್ದೇ ಮೂಲ ಪದ - ಎನ್ನಲು ಪುರಾವೆ ಸಾಲದು! By: benaka (Mar 26 2007 - 1:50am)
- Re: ’ಬಳ್ಳಿ’ ಕನ್ನಡದ್ದೇ ಮೂಲ ಪದ By: mahesha (Mar 26 2007 - 2:57pm)
- ಸಕ್ಕದದ "ನಂಟು" By: benaka (Mar 29 2007 - 2:11am)
- ಕನ್ನಡದ ಬಳ್ಳಿ By: mahesha (Mar 29 2007 - 9:35am)
- ನಿಮ್ಮ ಊಹೆಗೆ ನೀವೇ ಜವಾಬ್ದಾರರು! By: benaka (Mar 30 2007 - 2:28am)
- ಕನ್ನಡದ ಬಳ್ಳಿ By: mahesha (Mar 30 2007 - 11:14am)
- Re: ಕನ್ನಡದ ಬಳ್ಳಿ By: benaka (Apr 2 2007 - 2:26am)
- ಕನ್ನಡದ್ದೇ ಬಳ್ಳಿ By: mahesha (Apr 2 2007 - 4:00am)
- ವಲ್ಲೀ ಸಕ್ಕದವೇ! By: benaka (Apr 5 2007 - 1:34am)
- ಬಳ್ಳಿ ಕನ್ನಡವೇ. By: mahesha (Apr 5 2007 - 11:29am)
- ಉ: ಬಳ್ಳಿ ಕನ್ನಡವೇ. By: kpbolumbu (Jul 5 2007 - 5:10pm)
- ಬಳ್ಳಿ ಕನ್ನಡವೇ. By: mahesha (Apr 5 2007 - 11:29am)
- ವಲ್ಲೀ ಸಕ್ಕದವೇ! By: benaka (Apr 5 2007 - 1:34am)
- ಕನ್ನಡದ್ದೇ ಬಳ್ಳಿ By: mahesha (Apr 2 2007 - 4:00am)
- Re: ಕನ್ನಡದ ಬಳ್ಳಿ By: benaka (Apr 2 2007 - 2:26am)
- ಕನ್ನಡದ ಬಳ್ಳಿ By: mahesha (Mar 30 2007 - 11:14am)
- Re: ಕನ್ನಡದ ಬಳ್ಳಿ By: ಸಂಗನಗೌಡ (Mar 29 2007 - 12:20pm)
- Re: ಕನ್ನಡದ ಬಳ್ಳಿ By: mahesha (Mar 29 2007 - 12:37pm)
- ನಿಮ್ಮ ಊಹೆಗೆ ನೀವೇ ಜವಾಬ್ದಾರರು! By: benaka (Mar 30 2007 - 2:28am)
- ಕನ್ನಡದ ಬಳ್ಳಿ By: mahesha (Mar 29 2007 - 9:35am)
- Re: ’ಬಳ್ಳಿ’ ಕನ್ನಡದ್ದೇ ಮೂಲ ಪದ By: anivaasi (Mar 26 2007 - 3:31pm)
- Re: ’ಬಳ್ಳಿ’ ಕನ್ನಡದ್ದೇ ಮೂಲ ಪದ - ಚರ್ಚೆ ಮುಂದುವರೆಯಲಿ By: bhcsb (Apr 5 2007 - 5:41pm)
- ಸಕ್ಕದದ "ನಂಟು" By: benaka (Mar 29 2007 - 2:11am)
- Re: ’ಬಳ್ಳಿ’ ಕನ್ನಡದ್ದೇ ಮೂಲ ಪದ By: mahesha (Mar 26 2007 - 2:57pm)
- ’ಬಳ್ಳಿ’ ಕನ್ನಡದ್ದೇ ಮೂಲ ಪದ - ಎನ್ನಲು ಪುರಾವೆ ಸಾಲದು! By: benaka (Mar 26 2007 - 1:50am)
- ’ಬಳ್ಳಿ’ ಕನ್ನಡದ್ದೇ ಪದ By: mahesha (Mar 25 2007 - 3:16am)
- Re: ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) By: benaka (Mar 25 2007 - 12:59am)
- ವಲ್ಲಿ. By: mahesha (Mar 24 2007 - 4:27pm)

RSS:
ಸಕ್ಕದದ "ನಂಟು"
ಮಹೇಶರೆ,
೧. ನೀವು ತೋರಿದ ತಮಿಳು-ಪಹ್ಲವೀ-ಸಕ್ಕದ ನಿಘಂಟನ್ನು ನಾನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ; ನಾನು ಹುಡುಕುತ್ತಿದ್ದುದು ಇದಲ್ಲ. ಆದರೂ, ಇಲ್ಲಿಯೂ "ಮೂಲ" ಯಾವುದೆಂಬುದರ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಸಂಶೋಧನೆಯ ಅಗತ್ಯ ಇಲ್ಲದಿಲ್ಲ.
೨. ಈಗ ಪ್ರತಿಯೊಬ್ಬ ಭಾರತೀಯನೂ ಶಾಲೆಯಲ್ಲಿ ಮೂರು ಭಾಷೆಯನ್ನು ಅವಶ್ಯಕವಾಗಿ ಕಲಿತಿರುವುದರಿಂದ ಸಂಸ್ಕೃತ ಬೇಕಿಲ್ಲದಿರಬಹುದು. ಆದರೆ ಸಕ್ಕದ ಪದಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಹಾಸುಹೊಕ್ಕಾಗಿದೆ; ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ; ಕಾಲಕ್ರಮೇಣ ರೂಪಾಂತರ ಹೊಂದಿರಬಹುದು ಅಷ್ಟೇ! "ಗಣೇಶ" ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. "ಪಿಳ್ಳಾರಿ" ಎಂದರೆ ತಮಿಳರಿಗೆ ಮಾತ್ರ! ನೀವು ಕೊಯಮತ್ತೂರಿನಲ್ಲಿ ಎರೆದುಕೊಂಡರೂ, ಹುಬ್ಬಳ್ಳಿಯಲ್ಲಿ ಜಳಕಮಾಡಿದರೂ, ಮೈಸೂರಿನಲ್ಲಿ ಮಿಂದರೂ, ಅರ್ಥವಾಗುವುದು ಕನ್ನಡಿಗರಿಗೆ ಮಾತ್ರ. "ಸ್ನಾನ" ಎಂದರೆ ನಮಗೂ ಪಕ್ಕದ ರಾಜ್ಯದವರಿಗೂ ಎಲ್ಲರಿಗೆ ಅರ್ಥವಾಗುತ್ತದೆ. ಆದ್ದರಿಂದಲೇ ಕನ್ನಡದ ಪದಗಳ ಜೊತೆಗೆ ಸಕ್ಕದ ಅವಶ್ಯಕ; ಅದು ಆರ್ಯಾವರ್ತವನ್ನೂ ದಕ್ಷಿಣಾಪಥವನ್ನೂ ಬೆಸೆವ ದೊಡ್ಡ ಕೊಂಡಿ. ಇದೇ ಸಕ್ಕದಕ್ಕೆ ಇರುವ "ನಂಟಿನ" ಗುಣ. ನಂಟಿರಲು ಎಲ್ಲರಿಗೂ ಆ ಭಾಷೆ ಆಡಲು ಬರಲೇಬೇಕೆನ್ನುವ ಅಗತ್ಯವಂತೂ ಇಲ್ಲವೇ ಇಲ್ಲ. "ರಾಮನವಮಿ" ಎನ್ನಲು ಸಕ್ಕದ ಸಂಭಾಷಣೆ ಬರಬೇಕೇ?
ಇದರರ್ಥ ಕನ್ನಡದಲ್ಲಿ "ಅನಗತ್ಯ" ಸಕ್ಕದಪದಗಳನ್ನು ತುಂಬಿ ಎಂದಲ್ಲ; ಸಕ್ಕದದ "ನಂಟು" ಇಲ್ಲದೆ ಕನ್ನಡಕ್ಕೆ ಅವಮಾನವೆಂದು ಹೇಳಿದವರಾರು? ಭಾಷಾ ಅನ್ಯೋನ್ಯತೆಗೆ ಸಕ್ಕದ ಒಂದು ವರವೇ ಹೊರತು, ಕೇವಲ ಅದೊಂದೇ ಮಾಧ್ಯಮ ಎಂದು ತಿಳಿವ ಅವಶ್ಯಕತೆಯಿಲ್ಲ. ಇದು ನಿಮಗೆ ತಿಳಿಯದ್ದೇನಲ್ಲ! ಸಂಸ್ಕೃತ ಕೇವಲ ಭಾಷೆಯಲ್ಲ; ಅದು ಆಡುಭಾಷೆಗಳನ್ನು ಸಂಸ್ಕರಿಸಿದ ಭಾಷೆ; ನಮ್ಮ ಸಂಸ್ಕೃತಿಗೆ ತಾಗಿರುವ ಸಾಹಿತ್ಯದ ಭಾಷೆ; ನಮ್ಮ ಧರ್ಮದೊಡನೆ ಹಾಸುಹೊಕ್ಕಾಗಿರುವ ಭಾಷೆ. ಇದನ್ನು ಕನ್ನಡದಿಂದ ದೂರವಿಡುವುದು ಕಸ್ತೂರಿಯಿಂದ ಪರಿಮಳವನ್ನು ಕಿತ್ತೆಸೆದಂತೆ! ದೈನಂದಿನ ಆಡು ಭಾಷೆಗೆ ಸಕ್ಕದ ಬೇಡದಿರಬಹುದು; ಸಾಹಿತ್ಯಕ್ಕೆ ಅಗತ್ಯವಾಗಿ ಬೇಕು; ಯೋಚಿಸಿ ನೋಡಿ. ೨೦೦೦ ವರ್ಷಗಳ ಇತಿಹಾಸದಲ್ಲಿ ಕನ್ನಡಕ್ಕೆ ಸಕ್ಕದ ಮುಳುವಾಗುತ್ತದೆ ಎಂದೆನಿಸಿದ್ದ ಪಕ್ಷದಲ್ಲಿ, ಅದು ಯಾವಾಗಲೋ ಕಿತ್ತೆಸೆಯಲ್ಪಡುತ್ತಿತ್ತು!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.