ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕನ್ನಡದ ಬಳ್ಳಿ

March 29, 2007 - 9:35am — mahesha

ಕನ್ನಡದ ಬಳ್ಳಿ

mahesha's picture

Quote:

೧. ನೀವು ತೋರಿದ ತಮಿಳು-ಪಹ್ಲವೀ-ಸಕ್ಕದ ನಿಘಂಟನ್ನು ನಾನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ; ನಾನು ಹುಡುಕುತ್ತಿದ್ದುದು ಇದಲ್ಲ. ಆದರೂ, ಇಲ್ಲಿಯೂ "ಮೂಲ" ಯಾವುದೆಂಬುದರ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಸಂಶೋಧನೆಯ ಅಗತ್ಯ ಇಲ್ಲದಿಲ್ಲ.

"’ಬಳ್ಳಿ’ ೧೦೦% ಸಂಸ್ಕೃತದ್ದೇ" ಇಂದ, ಈಗ "ಸಂಶೋಧನೆಯ ಅಗತ್ಯ ಇಲ್ಲದಿಲ್ಲ" ಕ್ಕೆ ಬಂದಿದೆ. ಇದನ್ನೇ ಮೊದಲೂ ಹೇಳಿದುದು. ಸಂಸ್ಕೃತದ್ದೇ ಅನ್ನಲು ’ಪುರಾವೆ’ ಇಲ್ಲ ಅಂತ. ಆದರೆ Dravidian Etmology ಕನ್ನಡದ್ದೇ ಆಗಿರುವ chances ಇದೆ ಎಂದು ತೋರಿಸಿದೆ.

Quote:

೨. ಈಗ ಪ್ರತಿಯೊಬ್ಬ ಭಾರತೀಯನೂ ಶಾಲೆಯಲ್ಲಿ ಮೂರು ಭಾಷೆಯನ್ನು ಅವಶ್ಯಕವಾಗಿ ಕಲಿತಿರುವುದರಿಂದ ಸಂಸ್ಕೃತ ಬೇಕಿಲ್ಲದಿರಬಹುದು. ಆದರೆ ಸಕ್ಕದ ಪದಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಹಾಸುಹೊಕ್ಕಾಗಿದೆ; ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ; ಕಾಲಕ್ರಮೇಣ ರೂಪಾಂತರ ಹೊಂದಿರಬಹುದು ಅಷ್ಟೇ! "ಗಣೇಶ" ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. "ಪಿಳ್ಳಾರಿ" ಎಂದರೆ ತಮಿಳರಿಗೆ ಮಾತ್ರ! ನೀವು ಕೊಯಮತ್ತೂರಿನಲ್ಲಿ ಎರೆದುಕೊಂಡರೂ, ಹುಬ್ಬಳ್ಳಿಯಲ್ಲಿ ಜಳಕಮಾಡಿದರೂ, ಮೈಸೂರಿನಲ್ಲಿ ಮಿಂದರೂ, ಅರ್ಥವಾಗುವುದು ಕನ್ನಡಿಗರಿಗೆ ಮಾತ್ರ. "ಸ್ನಾನ" ಎಂದರೆ ನಮಗೂ ಪಕ್ಕದ ರಾಜ್ಯದವರಿಗೂ ಎಲ್ಲರಿಗೆ ಅರ್ಥವಾಗುತ್ತದೆ. ಆದ್ದರಿಂದಲೇ ಕನ್ನಡದ ಪದಗಳ ಜೊತೆಗೆ ಸಕ್ಕದ ಅವಶ್ಯಕ; ಅದು ಆರ್ಯಾವರ್ತವನ್ನೂ ದಕ್ಷಿಣಾಪಥವನ್ನೂ ಬೆಸೆವ ದೊಡ್ಡ ಕೊಂಡಿ. ಇದೇ ಸಕ್ಕದಕ್ಕೆ ಇರುವ "ನಂಟಿನ" ಗುಣ. ನಂಟಿರಲು ಎಲ್ಲರಿಗೂ ಆ ಭಾಷೆ ಆಡಲು ಬರಲೇಬೇಕೆನ್ನುವ ಅಗತ್ಯವಂತೂ ಇಲ್ಲವೇ ಇಲ್ಲ. "ರಾಮನವಮಿ" ಎನ್ನಲು ಸಕ್ಕದ ಸಂಭಾಷಣೆ ಬರಬೇಕೇ?

"ಸ್ನಾನ" ಇದನ್ನು ಬಹಳ ಮಂದಿಗೆ ಹೇಳಲೇ ಬರುವುದಿಲ್ಲ. ಇನ್ನು ಇದು standard ಅನ್ನೋದು ತಪ್ಪು. ’ರಾಮನವಮಿ’ಗೂ ಕನ್ನಡಕ್ಕೂ ಏನು ನಂಟು? ಕನ್ನಡಿಗರೆಲ್ಲ ಹಿಂದುಗಳೇ?
ನಮ್ಮ ಬಿಸಿಲು ಮಾರಮ್ಮ, ಅಣ್ಣಮ್ಮ, ಹಾಸನಾಂಬೆ, ಮದ್ದೂರಮ್ಮ, ಮಲೆಯ ಮಾದೇವ, ಇವರನ್ನು ಯಾವ ಹಿಂದು ಸಂಸ್ಕೃತದ ಹೊತ್ತಗೆ ಒಪ್ಪುವುದು, ಹೆಸರಿಸುವುದು? ಹೀಗೆ ಒಂದು ಜಾತಿ/religion ಅವರಿಗೆ ಬೇಕು, ಅಂತ ಎಲ್ಲರ ಮೇಲೂ ಹೇರಲಾಗದು.

ಉತ್ತರದವರ ನಂಬಿಕೆ "ಹೆಣವನ್ನು ಹಿಂದುಗಳು ಹೂಳುವುದಿಲ್ಲ", ಇದು ಸರಿಯೇ? ಸಂಸ್ಕೃತದಲ್ಲಿ ಇರುವ ಅಪರಶಾಸ್ತ್ರಗಳು ಬರಿ ಸುಡುವುದಕ್ಕೆ ಇವೆ, ಹೊರತು ಹೂಳಲು, ಇಲ್ಲವೆ ಬೇರಾವುದೇ ಬಗೆಯಲ್ಲಿ ಹೆಣಕ್ಕೆ ಗತಿ ಕಾಣಿಸಲು ಇಲ್ಲ ಅಂತ(ದಿಟವಿಲ್ಲದಿದ್ದರೆ ಹೇಳಬಹುದು). ಗರುಡ ಪುರಾಣದಲ್ಲಿ ಹೂಳಲು ಏನೂ ಹೇಳಿಲ್ಲ ಅಂತ!! ಒಕ್ಕಲಿಗರು ಹೂಳುವಾಗ ಯಾವ ಸಂಸ್ಕೃತದ ಮಂತ್ರ ಹೇಳಲ್ಲ(ಇದು ಗೊತ್ತು); ತಿಥೀ ಮಾಡಲ್ಲ. ಅಂದರೆ ಸಂಸ್ಕೃತದ ಹೊತ್ತಗೆ ಹೇಳುವುದನ್ನು ಮಾಡಲ್ಲ, ಹಾಗಂತ ಅವರು ಧರ್ಮಭ್ರಷ್ಟರೇ? ಅದಕ್ಕೆ ಈ ಧರ್ಮದ/ಗಳ ಸುದ್ದಿ ಬೇಡ.

ಇನ್ನು ನಾವು "ಆರ್ಯಾವರ್ತ ದಕ್ಷಿಣಾಪಥ ಗೌಡದೇಶ ಪಾಂಚಾಲ"ದ ಕಾಲವನ್ನು ದಾಟಿದ್ದೇವೆ. ಸಂಸ್ಕೃತವನ್ನು ಒತ್ತಾಯವಾಗಿ ಹೇರಲು ಅಂತಹ ಅರಸುಗಳೂ ಇಲ್ಲ. ಅವರ ಕಾಲದಲ್ಲೂ ಸಂಸ್ಕೃತವನ್ನು ಹಾದಿಬೀದಿಯಲ್ಲಿ, ಎಲ್ಲರು ಮಾತಾಡಿದ್ದೂ ಅನುಮಾನ ಅಂತ ಇದೆ. ಈಗ recent ಆಗಿ ಟಿಪ್ಪು ಮೇಲೇ ಹಾಯ್ದು ಬಿದ್ದ ಮಂದಿಗೆ, ನಮ್ಮ ಹಿಂದೂ ಅರಸರೂ ಕೂಡ ದೇಶಭಾಷೆಯಲ್ಲದ(local language) ಸಂಸ್ಕೃತವನ್ನು ಆಡಳಿತ ನುಡಿಯನ್ನಾಗಿ ಮಾಡಿ, ಸಂಸ್ಕೃತದ ಹೇರಿಕೆ ಮಾಡಿದ್ದರು ಎಂದು ಅನ್ನಿಸುವುದೇ ಇಲ್ಲ. ಕಾರಣ ಅವರು "ಹಿಂದೂ"(ಜೈನರೂ ಹಿಂದೂ ಅಂತ) ಅಷ್ಟೇ, ಬೇರೇನು ಇಲ್ಲ.

ಈಗ ಬೆಸೆಯುವ ಕೊಂಡಿ "English". ಅದಕ್ಕೆ ಸಂಸ್ಕೃತವನ್ನು ಎಲ್ಲೂ ಆಡಳಿತ ನುಡಿ ಮಾಡಿಲ್ಲ. ಸಂಸ್ಕೃತದಲ್ಲಿ ಯಾವ ಅರ್ಜಿ ಕೊಟ್ಟರು ಸರಕಾರ ತಗೋಳಲ್ಲ. ಬೇಕಾದರೆ ಕೊಟ್ಟಿ ನೋಡಬಹುದು.
ಕರ್ನಾಟಕದಲ್ಲೂ ಆಡಳಿತ ನುಡಿ ಇಂಗ್ಲೀಷೇ. ಅದರಲ್ಲಿ ಸಂಸ್ಕೃತ ಬರೆಸಲ್ಲ. ಅಂದರೂ ಕೆಲಸ ನಡೆಯತ್ತೆ.

Quote:

ಇದರರ್ಥ ಕನ್ನಡದಲ್ಲಿ "ಅನಗತ್ಯ" ಸಕ್ಕದಪದಗಳನ್ನು ತುಂಬಿ ಎಂದಲ್ಲ; ಸಕ್ಕದದ "ನಂಟು" ಇಲ್ಲದೆ ಕನ್ನಡಕ್ಕೆ ಅವಮಾನವೆಂದು ಹೇಳಿದವರಾರು?[ ಭಾಷಾ ಅನ್ಯೋನ್ಯತೆಗೆ ಸಕ್ಕದ ಒಂದು ವರವೇ ಹೊರತು, ಕೇವಲ ಅದೊಂದೇ ಮಾಧ್ಯಮ ಎಂದು ತಿಳಿವ ಅವಶ್ಯಕತೆಯಿಲ್ಲ. ಇದು ನಿಮಗೆ ತಿಳಿಯದ್ದೇನಲ್ಲ! ಸಂಸ್ಕೃತ ಕೇವಲ ಭಾಷೆಯಲ್ಲ; ಅದು ಆಡುಭಾಷೆಗಳನ್ನು ಸಂಸ್ಕರಿಸಿದ ಭಾಷೆ; ನಮ್ಮ ಸಂಸ್ಕೃತಿಗೆ ತಾಗಿರುವ ಸಾಹಿತ್ಯದ ಭಾಷೆ; ನಮ್ಮ ಧರ್ಮದೊಡನೆ ಹಾಸುಹೊಕ್ಕಾಗಿರುವ ಭಾಷೆ. ಇದನ್ನು ಕನ್ನಡದಿಂದ ದೂರವಿಡುವುದು ಕಸ್ತೂರಿಯಿಂದ ಪರಿಮಳವನ್ನು ಕಿತ್ತೆಸೆದಂತೆ! ದೈನಂದಿನ ಆಡು ಭಾಷೆಗೆ ಸಕ್ಕದ ಬೇಡದಿರಬಹುದು; ಸಾಹಿತ್ಯಕ್ಕೆ ಅಗತ್ಯವಾಗಿ ಬೇಕು; ಯೋಚಿಸಿ ನೋಡಿ. ೨೦೦೦ ವರ್ಷಗಳ ಇತಿಹಾಸದಲ್ಲಿ ಕನ್ನಡಕ್ಕೆ ಸಕ್ಕದ ಮುಳುವಾಗುತ್ತದೆ ಎಂದೆನಿಸಿದ್ದ ಪಕ್ಷದಲ್ಲಿ, ಅದು ಯಾವಾಗಲೋ ಕಿತ್ತೆಸೆಯಲ್ಪಡುತ್ತಿತ್ತು!

ಕನ್ನಡದ ಪದಗಳು ತಿಂದು ಹಾಕುತ್ತಿರುವ ಸಕ್ಕದಪದಗಳನ್ನು, ಇಂಗ್ಲೀಸು ಪದಗಳನ್ನೂ ಇಂದೂ ನುಸುಳಿಸಲಾಗುತ್ತಿದೆ. "ಹಾಲು/ಕ್ಷೀರ", "ನೀರು/ಜಲ", "ಗಾಳಿ/ವಾಯು", "ದೊಡ್ಡ ಬೆಂಗಳೂರು/ಬೃಹತ್ ಬೆಂಗಳೂರು", "ಕೋಳಿ ಸಾಕಣೆ/ಕುಕ್ಕುಟ ಪಾಲನೆ"(ನಮ್ಮ ಹಳ್ಳಿಯಲ್ಲಿ "ಕುಕ್ಕುಟ ಪಾಲನಾ ಇಲಾಖೆ"ಯ ಕಛೇರಿ ಇದೆ). ಇದಕ್ಕೆ ಕಾರಣವಿಷ್ಟೆ: "ಸಕ್ಕದ ಒಂದು ಸತ್ತ ನುಡಿ, ಇಲ್ಲವೇ ಅದಕ್ಕೆ ತ್ರಾಣವೇ ಇಲ್ಲ. ಅದರ fanaticಗಳು ಅದನ್ನು ಬೇರೆ ನುಡಿಗಳಿಗೆ infect ಮಾಡಿ ಬದುಕಿಸುವ ಹುನ್ನಾರದಲ್ಲಿದ್ದಾರೆ ಅಷ್ಟೇ", ಹೀಗೆ ಹೇಳಿದರೆ ಹಲವರಿಗೆ ’ಅತಿ’ ಅನ್ನಿಸಬಹುದು. ಆದರೆ ಅದರಿಂದ ಸಕ್ಕದದ ಕೂಟೆ ಕನ್ನಡವೂ ಸಾಯುದೆ ಹೊರತು, ಕನ್ನಡ ಅದರಿಂದ ಬದುಕಲ್ಲ.

ಕನ್ನಡ ಬದುಕಬೇಕಾದರೆ ಇಂದಿನ generation ಇಷ್ಟ ಪಡುವ, ಅವರಿಗೆ ಬೇಕಾಗಿರುವ ಬರಹ/ಬರೆವಣಿಗೆ ಕನ್ನಡದಲ್ಲಿ ಬರಬೇಕು. ಅದರಲ್ಲಿ ಒಂದು science, politics, economics, technology ಮುಂತಾದವು ಇರಬೇಕು. ಅದು ಸಕ್ಕದ ಬರೆಸುವುದಿಂದ ಆಗಲ್ಲ. ಬದಲಿಗೆ ನಾವು ಇಂಗ್ಲೀಷು ಕಡೆಗೆ ನೋಡಲೇ ಬೇಕು( ಅಂದರೆ ಇಂಗ್ಲೀಸು ಮಾದರಿ. ಇಂಗ್ಲೀಸು ಬರೆಸಿ ಅಂತ ಹೇಳ್ತಿಲ್ಲ). ಕನ್ನಡವನ್ನು ಓದುವವರು ಕಡಮೆಯಾಗುತ್ತಿರುವುದೂ, ಸಿನಿಮಾ ಕನ್ನಡವನ್ನು ಹೆಚ್ಚು ಮಂದಿ ಮೆಚ್ಚುತ್ತಿರುವುದೂ ಇದನ್ನು ತೋರಿಸುವುದು( 5 ಕೋಟಿಯಲ್ಲಿ ನೂರು ಪಂಡಿತರೂ ಇದನ್ನು ಕೀಳೆಂದರೆ, who cares? ಅಂತಾರೆ).

ಸಂಸ್ಕೃತವು ಕನ್ನಡವನ್ನು ಸಂಸ್ಕರಿಸಿದ್ದರಿಂದ ಬಂದುದಲ್ಲ. ಇದಕ್ಕೆ ಪುರಾವೆಯೇ ಇಲ್ಲ. ಸಂಸ್ಕೃತ ಸಂಸ್ಕರಿಸಿದ್ದೇ ಅಲ್ಲ; ಹೇಗೆ "ಸಂಸ್ಥಾ" ಅಂದರೆ ’ಗುಂಪು/ಹಲವರು ನೆಲೆಸಿಸಿದ್ದು/ಒಕ್ಕೂಟ’ವೋ, ಹಾಗೆ "ಸಂಸ್ಕೃತ" ಅಂದರೆ "ಹಲವರು ಸೇರಿ ಮಾಡಿದ್ದು"( ಈ ವಾದವೂ ಇದೆ), ಯಾವುದೂ ಕಾಲದಲ್ಲಿ. ಪಾಣಿನಿ ಇದ್ದ ಪೇಷಾವರದಲ್ಲಿ( ಇಲ್ಲ ಬೇರೊಂದೆಡೆ, ಯಾರಿಗೆ ಬೇಕದು! ). ಅದಕ್ಕೆ ಬೆಳೆವಣಿಗೆಯೇ ಇಲ್ಲ. ಯಾವುದೋ ಕಾಲದಲ್ಲಿ ಯಾರೋ ಒಬ್ಬ ಹಾಕಿ ಬೇಲಿಯೊಳಗೆ ಇದ್ದು ಸತ್ತಿದೆ. ಅದರಲ್ಲಿ updation ಇಲ್ಲ . Refined oil ಕೂಡ ಹಳೆಯದಾಗಿ ಕಮಟುತ್ತೆ. ಕನ್ನಡದಂತೆ ಬಂಡಾಯ, ಮಾರ್ಕವಾದ, ನಕ್ಸಲ್ವಾದ ಮುಂತಾದ ಹೊಸಕಾಲದ ಯೋಚನೆಗಳು ಇದೆಯೇ? democracy, communism, capitalism ಬಗ್ಗೆ ಯಾವ ಸಂಸ್ಕೃತದ ಗ್ರಂಥ/ಹೊತ್ತಗೆ ಇದೆ?

ಸಕ್ಕದವು ಕನ್ನಡ ಸಾಹಿತ್ಯದಲ್ಲಿ ಇದೆ, ಆದರೆ ಎಲ್ಲಾ ಸಾಹಿತ್ಯದಲ್ಲಿ ಇಲ್ಲ. ಕಾರಣ ಕನ್ನಡದಲ್ಲಿ ಹಿಂದೆ ಸಂಸ್ಕೃತದಿಂದ ಇಳಿಸಿದ ಸಾಹಿತ್ಯವೇ ಹೆಚ್ಚು ಅದಕ್ಕೆ. ಕನ್ನಡದಲ್ಲಿ ಸಂಸ್ಕೃತವನ್ನು ಬಹಳ ಕಡಮೆ ಬಳಸಿದ ಬರಹಗಳೂ, ಹಾಡುಗಳೂ ಬೇಕಾದಷ್ಟಿವೆ. ಇದಕ್ಕೆ "ವಚನ ಸಾಹಿತ್ಯ, "ಜಾನಪದ"ವೇ ಪುರಾವೆ. ಇಂದು ಸಂಸ್ಕೃತದಿಂದ ಇಳಿಸುವವರು ಕಡಮೆ.( ಬದಲಿಗೆ ಇಂಗ್ಲೀಷಿಂದ ಹೆಚ್ಚು Smiling )

ಸಂಸ್ಕೃತವನ್ನು ೧೨ನೇ ಶತಮಾನದಲ್ಲೇ ತಕ್ಕ ಮಟ್ಟಿಗೆ ಕಿತ್ತೆಸೆದವರು ವಚನಕಾರರು"(ಪ್ರಭುಲಿಂಗಲೀಲೆ ಬಗ್ಗೆ ಮಾತುಕತೆ ನೋಡಬಹುದು). ಅವರೇ, ಕನ್ನಡದಲ್ಲಿ ಸಂಸ್ಕೃತದ ಪಾಟಿಯನ್ನು ತಗ್ಗಿಸಿದವರು. ಕೆ.ಎಸ್.ನರಸಿಂಹ ಸ್ವಾಮಿ, ಬೇಂದ್ರೆ, ಮುಂತಾದವರು ಹಳಗನ್ನಡದಷ್ಟು ಸಂಸ್ಕೃತ ಬಳಸಿಲ್ಲ. ಹಾಗೆ ನೋಡಿದರೆ ವಚನ ಸಾಹಿತ್ಯದ ಬಳಿಕ ಸಂಸ್ಕೃತದ ಪದಗಳು ಕನ್ನಡದ ತಗ್ಗುತ್ತಾ ಹೋಗಿ, ಪಾರಸೀ, ಇಂಗ್ಲೀಷು ಪದಗಳು ಹೆಚ್ಚುತ್ತಾ ಬಂದಿದೆ( ಎಲ್ಲೋ ಓದಿದ ನೆನಪು + ನನ್ನ ಅನಿಸಿಕೆ ಕೂಡ ).

ಇಂದು ೨೧ ಶತಮಾನಕ್ಕೆ ಒಬ್ಬ common manಗೆ ಕನ್ನಡಿಗನಿಗೆ ಸಂಸ್ಕೃತದ ಬಾಳಿಕೆಯೇ ಇಲ್ಲ. ಸಂಸ್ಕೃತದಿಂದ modern science, economics, computer, ಮುಂತಾದವುಗಳನ್ನು ಕಲಿಯಲಾಗುವುದಿಲ್ಲ. ಒಬ್ದ ಸಂಸ್ಕೃತ ಕಲಿಯದೇ, ಕನ್ನಡ ಕಲಿಯದೇ ಬರಿ ಇಂಗ್ಲೀಸಿಂದ ಬರಿ ಬದುಕುವುದೇನು ಬಂತು, ಏಳಿಗೆಯನ್ನು ಎಲ್ಲ fieldಗಳಲ್ಲಿ ಪಡೆಯಬಲ್ಲ. ಏಕೆಂದರೆ ಇಂಗ್ಲೀಸಲ್ಲಿ ಎಲ್ಲ ಸಂಗತಿಯ( ಇಂದು ಬೇಕಾದ) ಬಗ್ಗೆ ಅರಿವು ಸಿಗುವುದು, ಅಲ್ಲದೇ ಅದು ಹೊತ್ತು ಹೊತ್ತಿಗೆ ತನ್ನನ್ನು ತಾನು ತಿದ್ದಿಕೊಂಡು/ಸಂಸ್ಕರಿಸಿಕೊಂಡು ಮುನ್ನುಗ್ಗುತ್ತಿದೆ.

ಇಂದು ಕನ್ನಡವೂ ಅಷ್ಟು ಬಾಳಿಕೆಗೆ ಬರದಿದ್ದರೂ, ನಮ್ಮ ತಾಯ್ನುಡಿ ಅಂತ sentimentಇಂದ ಅದಕ್ಕೆ ಮನ್ನಣೆ ಕೊಡಬಹುದು( ಕೊಡಬೇಕು ಎಂದು ಹೇಳಿದರೆ ಅನಿಸಿಕೆಯ ಹೇರಿಕೆ ಅನ್ನಬಹುದು ).

ಒಟ್ಟಿನಲ್ಲಿ ಇಂದಿನ ಟೈಮ್ಗೆ practicalityಗೆ ಸಂಸ್ಕೃತ outdated/obsolete ಆದುದರಿಂದ ಅದು ಯಾವ difference ಮಾಡಲ್ಲ. ಸಂಸ್ಕೃತದ ಬದಲು ಇಂಗ್ಲೀಸಿದೆ. ಅದನ್ನು ಬೆರೆಸಿದರೂ ನಡೆಯುವುದು( ಬರಿ ಕನ್ನಡದಲ್ಲೇ ಹೇಳಿದರೆ ಸಾಲದು, ಯಾವುದನ್ನಾದರೂ ಬೆರೆಸಲೇ ಬೇಕು ಅಂತ ಇದ್ದರೆ ). ಇದಕ್ಕೆ ಇಂದಿನ ಬದಲಾಗುತ್ತಿರುವ newspaper, news channelಗಳು proof.
.
.
.
.
.
.
ಇಷ್ಟೆಲ್ಲ ಮಾತಿನಿಂದ, ಇವೆಲ್ಲ ಕಾರಣಗಳಿಂದ ’ಬಳ್ಳಿ’ ಸಂಸ್ಕೃತದ್ದೇ ಎಂದು ತೋರಿಸಿಲ್ಲ, ಒಪ್ಪಲಾಗುವುದಿಲ್ಲ.
ಕನ್ನಡದವನಾಗಿ ಇಂತಹ ಹೊತ್ತುಗಳಲ್ಲಿ ಕನ್ನಡದ ಕಡೆ ಒರಗಿ, ’ಬಳ್ಳಿ’ ಕನ್ನಡದ್ದೇ ಎಂದು ನಂಬುತ್ತೇನೆ!!

=====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: bhcsb (25 replies) March 21, 2007 - 5:34pm
  • ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: kannadakanda (May 23 2008 - 8:27pm)
    • ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: ವೈಭವ (May 24 2008 - 9:31pm)
    • ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: mahesha (May 24 2008 - 8:06am)
  • ಉ: ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? By: mahesha (Aug 5 2007 - 9:31am)
  • ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) By: benaka (Mar 22 2007 - 1:37am)
    • ಕನ್ನಡದ ಬಳ್ಳಿಗಳು By: Sunil Jayaprakash (Mar 22 2007 - 12:52pm)
    • Re: ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) By: mahesha (Mar 22 2007 - 1:07pm)
      • Re: ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) By: benaka (Mar 25 2007 - 12:59am)
        • ’ಬಳ್ಳಿ’ ಕನ್ನಡದ್ದೇ ಪದ By: mahesha (Mar 25 2007 - 3:16am)
          • ’ಬಳ್ಳಿ’ ಕನ್ನಡದ್ದೇ ಮೂಲ ಪದ - ಎನ್ನಲು ಪುರಾವೆ ಸಾಲದು! By: benaka (Mar 26 2007 - 1:50am)
            • Re: ’ಬಳ್ಳಿ’ ಕನ್ನಡದ್ದೇ ಮೂಲ ಪದ By: mahesha (Mar 26 2007 - 2:57pm)
              • ಸಕ್ಕದದ "ನಂಟು" By: benaka (Mar 29 2007 - 2:11am)
                • ಕನ್ನಡದ ಬಳ್ಳಿ By: mahesha (Mar 29 2007 - 9:35am)
                  • ನಿಮ್ಮ ಊಹೆಗೆ ನೀವೇ ಜವಾಬ್ದಾರರು! By: benaka (Mar 30 2007 - 2:28am)
                    • ಕನ್ನಡದ ಬಳ್ಳಿ By: mahesha (Mar 30 2007 - 11:14am)
                      • Re: ಕನ್ನಡದ ಬಳ್ಳಿ By: benaka (Apr 2 2007 - 2:26am)
                        • ಕನ್ನಡದ್ದೇ ಬಳ್ಳಿ By: mahesha (Apr 2 2007 - 4:00am)
                          • ವಲ್ಲೀ ಸಕ್ಕದವೇ! By: benaka (Apr 5 2007 - 1:34am)
                            • ಬಳ್ಳಿ ಕನ್ನಡವೇ. By: mahesha (Apr 5 2007 - 11:29am)
                              • ಉ: ಬಳ್ಳಿ ಕನ್ನಡವೇ. By: kpbolumbu (Jul 5 2007 - 5:10pm)
                  • Re: ಕನ್ನಡದ ಬಳ್ಳಿ By: ಸಂಗನಗೌಡ (Mar 29 2007 - 12:20pm)
                    • Re: ಕನ್ನಡದ ಬಳ್ಳಿ By: mahesha (Mar 29 2007 - 12:37pm)
              • Re: ’ಬಳ್ಳಿ’ ಕನ್ನಡದ್ದೇ ಮೂಲ ಪದ By: anivaasi (Mar 26 2007 - 3:31pm)
                • Re: ’ಬಳ್ಳಿ’ ಕನ್ನಡದ್ದೇ ಮೂಲ ಪದ - ಚರ್ಚೆ ಮುಂದುವರೆಯಲಿ By: bhcsb (Apr 5 2007 - 5:41pm)
  • ವಲ್ಲಿ. By: mahesha (Mar 24 2007 - 4:27pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • manju1968
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 11, 2008 - 1:22am
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
ಇನ್ನಷ್ಟು


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator