ನನ್ನದೊಂದು ಕಹಿ ಅನುಭವ ಹೇಳಲೆ?
- ನನ್ನದೊಂದು ಕಹಿ ಅನುಭವ ಹೇಳಲೆ? By: beluru (Sep 22 2005 - 9:25am)
- ಅಲ್ಲಿ ಇಲ್ಲಿ ಯಾಕೆ By: tvsrinivas41 (Sep 22 2005 - 11:32am)
- ಯಾಕೆ ಅಂದ್ರೆ By: beluru (Sep 22 2005 - 1:12pm)
- ಕೊಂಡು ಓದುವ ಹವ್ಯಾಸ By: (Sep 22 2005 - 3:05pm)
- ಇನ್ನೂ ಬಹಳ ಸಿದ್ಧತೆ ಬೇಕು By: olnswamy (Sep 22 2005 - 7:38pm)
- ನಿಜವಾದ ಮಾತು By: (Sep 22 2005 - 9:09pm)
- ಒಳ್ಳೆಯ ಪ್ರಗತಿ By: tvsrinivas41 (Sep 22 2005 - 3:50pm)
- ಇನ್ನೂ ಬಹಳ ಸಿದ್ಧತೆ ಬೇಕು By: olnswamy (Sep 22 2005 - 7:38pm)
- ಕೊಂಡು ಓದುವ ಹವ್ಯಾಸ By: (Sep 22 2005 - 3:05pm)
- ಯಾಕೆ ಅಂದ್ರೆ By: beluru (Sep 22 2005 - 1:12pm)
- ಇಲ್ಲೇ ಪ್ರಕಟಿಸಿ By: honnung (Sep 22 2005 - 10:39am)
- ಅಲ್ಲಿ ಇಲ್ಲಿ ಯಾಕೆ By: tvsrinivas41 (Sep 22 2005 - 11:32am)
- ಕನ್ನಡ ಪತ್ರಿಕೆಯೂ ಹಿಂದೆ By: Vinay (Sep 21 2005 - 7:30pm)
- ಓಹೋ By: (Sep 21 2005 - 6:32pm)

RSS:
ನನ್ನದೊಂದು ಕಹಿ ಅನುಭವ ಹೇಳಲೆ?
ನಾನು ಒಂದೂವರೆ ವರ್ಷದ ಹಿಂದೆ ಒಂದು ಅಂತರಜಾಲ ಆಧಾರಿತ, ತಂತ್ರಾಂಶ ಕುರಿತ ಲೇಖನ ಬರೆದು ವಿಜಯ ಕರ್ನಾಟಕಕ್ಕೆ ಕಳಿಸಿದೆ. ಅರ್ಥವೇ ಆಗಲ್ಲ ಎಂದು ವಾಪಸಾಯ್ತು. ತರಂಗಕ್ಕೆ ಕಳಿಸಿದೆ. ಅಲ್ಲಿಂದಲೂ ಮರಳಿತು. ಆಮೇಲೆ ಅದನ್ನು ಸುಧಾಗೆ ಕೊಟ್ಟೆ. ಅಲ್ಲಿನ ಸಂಪಾದಕರು (ಈಗ ಇರುವ ನಾಗೇಶ್ ಹೆಗಡೆ ಅಲ್ಲ ಮಾರಾಯ್ರೆ!) ಒಮ್ಮೆ ನನ್ನನ್ನು ಕಚೇರಿಗೆ ಕರೆದು ಎಲ್ಲ ವಿಚಾರಿಸಿದರು. ಆಮೇಲೆ ಅಲ್ಲಿಂದಲೂ ವಾಪಸಾಯಿತು. ನನ್ನ ಮಟ್ಟಿಗೆ ಅದು ಒಳ್ಳೆಯ ಕುತೂಹಲಕರ ಮಾಹಿತಿಯಾಗಿತ್ತು. ಅದರ ಸಂಶೋಧಕನ ಸಂದರ್ಶನವೂ ಅದರಲ್ಲಿತ್ತು. ಕನ್ನಡದ ಮಟ್ಟಿಗೇನು, ಒಟ್ಟಾರೆ ತಾಜಾ ಮಾಹಿತಿಯೇ.
ಈಗಲೂ ಅದು ತಾಜಾ ಆಗೇ ಉಳಿದಿದೆ. ಯಾಕಂದ್ರೆ ಅದು ಗೂಗಲ್ ಅರ್ಥ್ ನಷ್ಟು ಜನಪ್ರಿಯವಲ್ಲದಿದ್ದರೂ ನವೀನ ವಿಷಯ. ಬೇರಾವ ಪತ್ರಿಕೆಯಲ್ಲೂ ಈ ವಿಷಯ ಬಂದಂತೆ ನನಗೆ ಕಂಡಿಲ್ಲ.
ಯಾಕೆ ವಿಷಯ ಹೇಳಲ್ಲ ಅಂದ್ರೆ, ಅದನ್ನು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಿಯೇ ಬಿಡಬೇಕೆಂಬ ಆಸೆ. ಪವನಜರೆ, ನಿಮಗೆ ಅದರ ಪ್ರತಿಯನ್ನು ಕಳಿಸ್ತಾ ಇದೇನೆ. ಒಳ್ಳೆ ಲೇಖನ ಬರೆದ ನೀವೇ ನನ್ನ ಲೇಖನವನ್ನು ಪರಾಮರ್ಶಿಸಿ. ನಿಮಗೂ ಈ ಲೇಖನ ಹೊಸತು, ಒಳ್ಳೆಯದು ಎಂದೆನಿಸಿದರೆ, ತಿಳಿಸಿ. ಕಟುವಿಮರ್ಶೆ ಸ್ವಾಗತಾರ್ಹ!!