ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?
- TRP V/S ಜನಪ್ರಿಯತೆ By: radhakrishna anegundi (Apr 1 2007 - 7:03pm)
- ಆಧುನಿಕ ಮೂಢ ನಂಬಿಕೆಗಳು By: ismail (Mar 30 2007 - 5:15pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- ಕುರುಡು ನಂಬಿಕೆಗಳು By: mahesha (Mar 30 2007 - 9:35pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: shreedn (Mar 30 2007 - 4:46pm)
- ಕಣ್ಣೀರು ಸುರಿಸಿ ಮೋಜು By: mahesha (Mar 30 2007 - 4:52pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: ಸಂಗನಗೌಡ (Mar 30 2007 - 3:35pm)
- ಕಣ್ಣೀರಿಗೆ background music By: mahesha (Mar 30 2007 - 4:09pm)
- ಕಣ್ಣೀರ ನೀರೆ ಇದೇಕೆ, ಇದೇಕೆ ! By: mahesha (Mar 30 2007 - 1:44pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಪಾರ್ವತಿ By: mahesha (Mar 30 2007 - 4:56pm)
- Re: ಕಣ್ಣೀರ ನೀರೆ ಇದೇಕೆ, ಇದೇಕೆ ! By: aithalsandy (Mar 30 2007 - 3:45pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: hpn (Mar 30 2007 - 1:40pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: anupkumart (Apr 5 2007 - 1:34am)

RSS:
ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?
ಟಿ.ವಿ ಯಿಂದಾಗಿ ಬಹುಶ ಓದೋರು ಕಡಿಮೇನೇ ಆಗಿದಾರೆ ಅನ್ನಬಹುದು. technical ಮಂದಿ ಬೇರೆ ದಾರಿ ಇರಲ್ಲ ಅಂತ ಹೇಳಿ technical ಹೊತ್ತಗೆಗಳನ್ನಷ್ಟೇ ಓದೋ ಗೋಜಲಿಗೆ ಹೋಗ್ತಾರೆ. ಓದೋರು ಕಡಿಮೆ ಆಗಿದಾರೆ ಅಂತ ಬುಕ್ಕುಗಳ ಬೆಲೆ ಹಾಗೆ ಗಗನಕ್ಕೇರಿ ಕುಳಿತಿದೆ. ಬೆಲೆ ಹೆಚ್ಚಾಯ್ತು ಅಂತ ಒದೋರು ಇನ್ನೂ ಕಡಿಮೆ ಆಗಿದಾರೆ.
'ಕಾವ್ಯಾಂಜಲಿ' ಅನ್ನೋ ಸೀರಿಯಲ್ ಬಂದಾಗಲಂತೂ, ಅಂಜಲಿ ಒಂದು ದಿವಸ ಊಟ ಮಾಡ್ಲಿಲ್ಲ ಅಂದ್ರೆ, ಅಯ್ಯೋ ಪಾಪ ಅಂತ ಹೆಂಗಳೆಯರು ಮರುಗಿದ್ದೇ ಮರುಗಿದ್ದು. ತಮ್ಮ ಸೊಂತ ಅಕ್ಕನೋ ತಂಗಿನೋ ಊಟ ಬಿಟ್ಟರೆ ಅಷ್ಟು ಮರುಗುತ್ತಾರೋ ಇಲ್ಲವೋ!
ಸೀರಿಯಲ್ ಕಿಂಗ್ ಎಸ್.ನಾರಯಣರ ಕೈಗೆ ಸಿಕ್ಕರೆ ಮುಗೀತು. ಒಂದು dialogue ಅಯ್ತು ಅಂದರೆ, ಅಲ್ಲಿ ನಿಂತಿರುವವರ ಮುಖಗಳನ್ನು ಕೆಟ್ಟ background music ನಲ್ಲಿ ತೋರಿಸಿದ್ದೇ ತೋರಿಸಿದ್ದು. ಪಾಪ ಆ actor ಗಳು, ಅಷ್ಟೊತ್ತು expression ಹಿಡಿದಿಟ್ಟುಕೊಳ್ಳಲಾಗದೇ, ಸುಮ್ಮನೆ ಯಾವ ಕಡೆನೋ ನೋಡ್ತಾ ನಿಂತಿರ್ತಾರೆ, background music ಕೇಳಿದ್ರೆ ಅವ್ರು ಗಾಭರಿಯಾಗಿರಬೇಕು, ಅವರ ಮುಖದಲ್ಲಿ ನೋಡಿದ್ರೆ ಯಾವ ಎಕ್ಸಪ್ರೆಶನ್ನೂ ಇರಲ್ಲಾ.
ಒಂದು ಕಡೆಯಿಂದ ಇನ್ನೊಂದು ಕಡೆ ಕಾರಲ್ಲಿ ಹೋಗೋ ಸೀನ್ ಇದ್ರೆ, ಅವರು ಕಾರಲ್ಲಿ ಕೂತು, ಕೀ ಹಾಕಿ, ಸ್ಟಾರ್ಟ್ ಮಾಡಿ( ಟೈಮ್ ತುಂಬಾ ಇತ್ತು ಅಂದ್ರೆ, ಕಾರು ಸೊಲ್ಪ ಕೈ ಕೊಡುತ್ತೆ
), ಊರೆಲ್ಲ ಒಂದು ಸುತ್ತು ಸುತ್ತಿ, ಸರಿಯಾಗಿ ಅರ್ಧ ತಾಸು ಆಗೋ ಹೊತ್ತಿಗೆ ಮನೆಗೆ ಬಂದು ನಿಲ್ಲುತ್ತೆ!!