ಆಧುನಿಕ ಮೂಢ ನಂಬಿಕೆಗಳು
- TRP V/S ಜನಪ್ರಿಯತೆ By: radhakrishna anegundi (Apr 1 2007 - 7:03pm)
- ಆಧುನಿಕ ಮೂಢ ನಂಬಿಕೆಗಳು By: ismail (Mar 30 2007 - 5:15pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- ಕುರುಡು ನಂಬಿಕೆಗಳು By: mahesha (Mar 30 2007 - 9:35pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: shreedn (Mar 30 2007 - 4:46pm)
- ಕಣ್ಣೀರು ಸುರಿಸಿ ಮೋಜು By: mahesha (Mar 30 2007 - 4:52pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: ಸಂಗನಗೌಡ (Mar 30 2007 - 3:35pm)
- ಕಣ್ಣೀರಿಗೆ background music By: mahesha (Mar 30 2007 - 4:09pm)
- ಕಣ್ಣೀರ ನೀರೆ ಇದೇಕೆ, ಇದೇಕೆ ! By: mahesha (Mar 30 2007 - 1:44pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಪಾರ್ವತಿ By: mahesha (Mar 30 2007 - 4:56pm)
- Re: ಕಣ್ಣೀರ ನೀರೆ ಇದೇಕೆ, ಇದೇಕೆ ! By: aithalsandy (Mar 30 2007 - 3:45pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: hpn (Mar 30 2007 - 1:40pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: anupkumart (Apr 5 2007 - 1:34am)

RSS:
ಆಧುನಿಕ ಮೂಢ ನಂಬಿಕೆಗಳು
ಧರ್ಮಸ್ಥಳದಲ್ಲಿ ಹಾವೊಂದು ಕಾಣಿಸಿಕೊಂಡು ಬ್ರಾಹ್ಮಣ ರೂಪ ಪಡೆದು ಏನೇನೋ ಹೇಳಿ ಕೊನೆಗೆ ಆ ವಿಷಯವಿರುವ ಕರಪತ್ರದ ಹದಿನಾಲ್ಕು ಪ್ರತಿಗಳನ್ನು ಹಂಚಿದವರಿಗೆ ಲಾಟರಿ ಬಂದದ್ದು, 28 ಪ್ರತಿ ಹಂಚಿದವರಿಗೆ ವ್ಯವಹಾರದ ಗೆಲುವುದು ಸಿಕ್ಕಿದ್ದು ಹಂಚದವರ ಮಗ ಸತ್ತು ಹೋದದ್ದು ಮುಂತಾದ ವಿಷಯಗಳನ್ನು ಓದಿದ ನೆನಪು ಎಲ್ಲರಿಗೂ ಇರಬೇಕು. ಕೊನೆಗೆ ವೀರೇಂದ್ರ ಹೆಗ್ಗಡೆಯವರೇ ಇಂಥದ್ದೇನೂ ಸಂಭವಿಸಿಲ್ಲ ಎಂದು ಹೇಳಿದರು. ಆದರೂ ಈಗಲೂ ಈ ಕರಪತ್ರಗಳು ಹರಿದಾಡುತ್ತಲೇ ಇವೆ. ಇತ್ತೀಚೆಗೆ ಯಾರೋ ಇಡೀ ವಿಷಯವನ್ನು ಇಂಗ್ಲಿಷ್ ಗೆ ಭಾಷಾಂತರಿಸಿ ಮೇಲ್ ನಲ್ಲಿ ಕಳುಹಿಸಿದ್ದರು. ಇಂಥದ್ದು ಎಲ್ಲಾ ಕಾಲಕ್ಕೂ ಇರುತ್ತವೆಯೇನೋ.
ಮೂಲತಃ ಪುಕ್ಕಲರಾದ ಕೆಲವರು ನಮಗ್ಯಾಕೆ ರಿಸ್ಕು ಎಂದು ಕೊಂಡು ಒಂದಷ್ಟು ಮಂದಿಗೆ ಪ್ರತಿಗಳನ್ನು ಹಂಚಿಬಿಡುತ್ತಾರೆ. ನಾವು ಕಾಲೇಜಿನಲ್ಲಿರುವಾಗ ಇಂಥ ಕರಪತ್ರವನ್ನು ಕೈಯಲ್ಲಿ ಬರೆದೇ ಹಂಚುವವರಿದ್ದರು. ಹೀಗೆ ಹಂಚಲು ಬಂದವರಿಂದ ಅವುಗಳನ್ನು ಪಡೆದುಕೊಳ್ಳದೆ ಬ್ಲಾಕ್ ಮೇಲ್ ಮಾಡುವರೂ ಇದ್ದರು. ನಾವೊಂದಷ್ಟು ಮಂದಿ ಎಲ್ಲರಿಂದಲೂ ಇವನ್ನು ಪಡೆದು ಅವರೆದುರೇ ಹರಿದು ಹಾಕಿ ಕ್ರಾಂತಿಕಾರಿಗಳಾದದ್ದೂ ಉಂಟು.
ಈಗ ಅದೇ ಸೀರಿಯಲ್ ಗಳಿಗೆ ವ್ಯಾಪಿಸಿದೆ. ಕರ ಪತ್ರ ಪುಸ್ತಕ, ಮೇಲ್ ಗಳಾಗಿವೆ. ಟೆಕ್ನಾಲಜಿಯನ್ನು ಬಳಸಿಕೊಂಡು ಉಳಿದೆಲ್ಲವೂ ಬೆಳೆದ ಹಾಗೆ ಮೂಢನಂಬಿಕೆಯೂ ಬೆಳೆಯುತ್ತದೆ ಅನ್ನಿಸುತ್ತದೆ. ರಾಕೆಟ್ ಹಾರಿಸುವವರೂ ರಾಹುಕಾಲ ತಪ್ಪಿಸಿ ಹಾರಿಸಲು ಪ್ರಯತ್ನಿಸಿದಂತೆ....
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net