ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಧರ್ಮಾಂಧತೆಯ ಬಗ್ಗೆ

April 9, 2007 - 1:35pm — Sunil Jayaprakash

ಧರ್ಮಾಂಧತೆಯ ಬಗ್ಗೆ

Sunil Jayaprakash's picture

ಶ್ಯಾಮ್ ಕಶ್ಯಪ್, ಕಳೆದ ವಾರ ಪ್ರಕಟವಾದ ನಿಮ್ಮ ಲೇಖನ ನನ್ನ ತುಂಬಾ ಆಕರ್ಷಿಸಿತ್ತು. ಪ್ರತಿಕ್ರಿಯಿಸಲು ವಿಷಯಗಳು ಬಯಳಷ್ಟಿತ್ತಾದರೂ, ಕೆಲಸದೊತ್ತಡದಲ್ಲಿ ಹಾಗು ನೀವು ಊಹಿಸಬಹುದಾದ ಹಾಗೆ ಗುಣಾಗುಣಗಳ ಬಗ್ಗೆ ಖಚಿತ ನಿಲುವು ಹೊಂದಿರದ ಕೆಲವು ಪತ್ರಿಕಾ ವರದಿಗಳಿಂದ ಬೇಸರವಾಗಿದ್ದರಿಂದ ಬರೆಯಲಾಗಿರಲಿಲ್ಲ.

ನಿಮ್ಮ ಲೇಖನದಲ್ಲಿ ಮಾತನಾಡಲು ಅನೇಕ ವಿಷಯಗಳಿವೆಯಾದರೂ ನಾನು ಎರಡಕ್ಕೆ ಸೀಮಿತಗೊಳಿಸಿಕೊಳ್ಳುತ್ತೇನೆ. ಒಂದು ಚಿಕ್ಕ ಪ್ರತಿಕ್ರಿಯೆ ಮತ್ತೊಂದು ಸ್ವಲ್ಪ ಉದ್ದವಾಗಿದೆ. ವಿಷಯವೇ ಇಲ್ಲದ ಉದ್ದ ಕಾಮಿಂಟಿದು ಎಂದೆನಿಸಿದರೆ ದಯವಿಟ್ಟು ಕ್ಷಮಿಸಿ.
೧. ದುರ್ಬಲರ ಮೇಲೆ ಸಬರಲ ಸವಾರಿ - uniquesupri ಅವರಿಗೆ ಅನಿಸಿದಂತೆ ಈ ಲೇಖನ ಇತರ ಧರ್ಮೀಯರು ಭಾರತದಲ್ಲಿ ಎಸಗಿದ ಕುಕೃತ್ಯಗಳನ್ನು ಸಮರ್ಥಿಸುವ ನಿಲುವಿನ ಧಾಟಿಯಲ್ಲಿದೆ ಎಂದು ಮೊದಲ ಓದಿನಲ್ಲಿ ಅನಿಸಿತ್ತು. ಆದರೆ ನಿಮ್ಮ ಸಮಜಾಯಿಷಿಯು ಚರ್ಚೆಯನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುವಲ್ಲಿ ಸಹಾಯಕವಾಯಿತು. ನಿಮ್ಮ ಲೇಖನದ ಒಳ್ಳೆಯ ಆಶಯಗಳಲ್ಲಿ "ದುಮೇಸಸ" ಕೂಡ ಒಂದಾಗಿತ್ತು ಎಂದು ನಂಬಿ ಟಿಪ್ಪಣಿ ಬರೆಯುತ್ತಿದ್ದೇನೆ. ಇದು ಯಾವ ಕಾಲಕ್ಕೂ ಹೊಸತಲ್ಲ. ಇದಕ್ಕೆ ಪೂರಕವಾಗಿ ನಾನು ಇದೇ ಧಾಟಿಯಲ್ಲಿ ಜಾತಿಯು ಧರ್ಮಾಧಾರಿತವೇ, ಸಾಮಾಜಿಕವೇ ಎಂಬ ಎಳೆಯಲ್ಲಿ ನಮ್ಮ ದೇಶದಲ್ಲಿ ಇರುವುದು 'ಒಬ್ಬರು ಮಾಡುವ ಕೆಲಸದ ಮೇಲೆ ಮತ್ತೊಬ್ಬರಿಗೆ ತಿರಸ್ಕಾರ, ಜಿಗುಪ್ಸೆ, ಉಡಾಫೆ.." ಎಂಬುದಾಗಿ ಬರೆದಿದ್ದೆ. ಇದನ್ನು ಹೋಗಲಾಡಿಸಲು ನಾವು, ನೀವು ಮಾಡಬಹುದಾದ ಉದಾತ್ತ ಕೆಲಸವೆಂದರೆ ನಮ್ಮಲ್ಲಿರುವ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳುವುದು ಮತ್ತು ನಾವುಗಳೇ ಸಮಸ್ತ ಜ್ಞಾನದ ಒಡೆಯರು ಎಂದು ಅಹಂಕಾರದಿಂದ ಮೆರೆಯದಿರುವುದು. ತುಂಬಿದ ಕೊಡ ತುಳುಕುವುದಿಲ್ಲ ಎಂಬ ನಿಯಮವನ್ನು ಅನುಸರಿಸಿ ಬಾಳೋಣ. ನಿಮ್ಮ ಲೇಖನಕ್ಕೆ ದನಿಗೂಡಿಸಬೇಕು ಎಂಬ ಆಶಯದಿಂದ ಬರೆದ ಚಿಕ್ಕ ಟಿಪ್ಪಣಿ ಇದು.

೨. ಒಂದು ಸಮಾಜದ ಆಂತರಿಕ ಅವಶ್ಯಕತೆಗಳಿಂದಾಗುವ ಹೊರಳುಗಳು - ಇದರ ಬಗ್ಗೆ ಮಾತನಾಡುವುದಕ್ಕೆ ಬಹಳಷ್ಟು ವಿಷಯಗಳು ಇದೆಯೆಂದು ಭಾಸವಾಯಿತು.

ಒಂದು ಸಮಾಜಕ್ಕೆ, ತನ್ನ ಪರಿಸ್ಥಿತಿ, ತನ್ನ ನಡುವಳಿಕೆ, ಬೆಳವಣಿಗೆ ಇವುಗಳ ಬಗ್ಗೆ ತಾನಾಗಿಯೇ ಕಾಳಜಿ ಬರಬೇಕು. ತನ್ನಷ್ಟಕ್ಕೆ ತಾನೆ ತನ್ನನ್ನೇ‌ ಪರಿಶೀಲಿಸಿಕೊಳ್ಳುವ ಅಗತ್ಯ ಅದಕ್ಕೆ ಕಾಣಬೇಕು. ಆಗ ಅದರಲ್ಲಿ ಸುಧಾರಣೆ ಸಾಧ್ಯ. ....ನಮ್ಮ, ಅವರ ಒಳಿತಿಗಾಗಿಯೇ ನಾವುಗಳು ಸುಮ್ಮನಿರುವುದೇ ಸೂಕ್ತ. ಬೇರಾವುದೇ ಮಾನವೀಯ ಮಾರ್ಗ ನನಗೆ ತೋಚುತ್ತಿಲ್ಲ.

ನೀವು ನಂಬಿದ ತತ್ವಗಳು ಸರಿಯಾದ ದಿಕ್ಕಿನಲ್ಲಿ ಇದೆ. ಮೇಲುನೋಟಕ್ಕೆ ಹರಿ ಹೇಳಿದ ಹಾಗೆ ಇದು ಒಳ್ಳೆಯ ಚಿಂತನೆಯಾದರೂ, ಒಂದು ಅತ್ಯಂತ ಪ್ರಮುಖ ಅಂಶದ ಬಗ್ಗೆ ನೀವು ನಿಮ್ಮ ಲೇಖನದಲ್ಲಿ ಪ್ರಸ್ತಾಪಿಸದಿರುವುದನ್ನು ಎಲ್ಲರ ಗಮನಕ್ಕೆ ತರಲಿಚ್ಛಿಸುತ್ತೇನೆ. ಸುಮ್ಮನಿದ್ದುಬಿಡೋಣ ಎಂದು ನೀವು ಹೇಳಿರುವಿರಾದರೂ, ಬಹುಶಃ ಇದರ ಬಗ್ಗೆ ಬರೆಯಬೇಕೆಂದು ನೀವು ಅಂದುಕೊಂಡಿದ್ದಿರಬಹುದು, ಆದರೆ ನಿಮ್ಮ ಲೇಖನದಲ್ಲಿ ಅದರ ಬಗ್ಗೆ ಸಮರ್ಪಕವಾದ ಮಾತುಗಳು ಹೊರಬಂದಿಲ್ಲ. ನನ್ನ ಕಾಮೆಂಟುನ್ನು ನಿಮ್ಮ ಲೇಖನಕ್ಕೆ ಪೂರಕವಾಗಬಹುದಾದ ಕಾಮೆಂಟ್ ಎಂದು ಭಾವಿಸಿರಿ. ನನ್ನ "ಬೇರಾವುದೇ ಮಾನವೀಯ ಮಾರ್ಗ ನನಗೆ ತೋಚುತ್ತಿಲ್ಲ" ಎಂಬ ನಿಮ್ಮ ಮಾತಿಗೆ ಉತ್ತರ ಸಿಗಲಿ ಎಂಬ ಆಶಯದಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಇದರಿಂದ ಓದುಗರಿಗೆ ಒಳ್ಳೆಯ ಓದು ಸಿಕ್ಕರೆ ಅಷ್ಟು ಸಾಕು ನನಗೆ.

ಈಗ ನೋಡಿ, ಯಾವಾಗಲೂ ಹೊರಳುಗಳನ್ನು ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಳ್ಳುತ್ತಾ ಬಂದಿರುವ ಹಿಂದು ಧರ್ಮ ಸುಮಾರು ೧೮ ಶತಮಾನದಿಂದ ಆರಂಭವಾಗಿ ಬಹುಮುಖ್ಯವಾಗಿ ೧೯-೨೦ನೆಯ ಶತಮಾನದಲ್ಲಿ ಸುಧಾರಣೆಗಳನ್ನು ಕಂಡಿದೆ. ಭಾರತೀಯ ಸಂಸ್ಕೃತಿ ಹಾಳಾಗುತ್ತಿದೆ ಎಂದು ಹಲುಬುವವರು ಹಿಂದು ಧರ್ಮದ ಸುಧಾರಣೆ ಹಾಗೆಯೇ ಭಾರತದಲ್ಲಿ ಎಷ್ಟೆಲ್ಲ ಸಾಮಾಜಿಕ ಸುಧಾರಣೆಗಳಾಗಿವೆ ಎಂಬುದನ್ನು ಗಮನಿಸುವುದಿಲ್ಲ. ಈ ಕಾಮೆಂಟಿನಲ್ಲಿ "ಹಿಂದಿನ ಬ್ರಾಹ್ಮಣ್ಯದ" ಬಗ್ಗೆ ಪ್ರಸ್ತಾಪ ಮಾಡಲೇ ಬೇಕು ಎನಿಸಿತು. ಒಬ್ಬ ಬ್ರಾಹ್ಮಣ ಇಂತಹ ಸಮಯದಲ್ಲಿಯೇ ಎದ್ದು, ಕೆರೆಯ ಇಂತಹುದೇ ದಿಕ್ಕಿನಲ್ಲಿ, ಇಂತಹುದೇ ಭಂಗಿಯಲ್ಲಿ, ಕಣ್ಣುಗಳನ್ನು ಇಂತಹುದೇ ದೃಷ್ಟಯತ್ತ ಇರಿಸಿ ಶೌಕಕರ್ಮ ಮಾಡಬೇಕು.. ವೇದಗಳನ್ನು ಇಂತಹವರಿಗೇ ಹೇಳಿಕೊಡಬೇಕು. ಇಂತಹವರಿಗೇ ಅಕ್ಷರಾಭ್ಯಾಸ ಮಾಡಿಸಬೇಕು, ಇಂತಹವರಿಗೆ ಕೆರೆಯ ನೀರನ್ನು ಮುಟ್ಟಲು ಬಿಡಬಾರದು. ಇಂತಹವರೊಡನೆ ಇಷ್ಟು ಗಜ ದೂರವಿದ್ದುಕೊಂಡು ಮಾತನಾಡಬೇಕು.....ಎಂಬೆಲ್ಲ ತಲೆಬುಡವಿಲ್ಲದ ನಿಯಮಗಳು ಪಾಲಿಸಲಾಗಿತ್ತು. ಸನಾತನ ವೈದಿಕ ಧರ್ಮದಲ್ಲಿ ಇಂತಹ ಕಟ್ಟುನಿಟ್ಟುಗಳು ಇರಲಿಲ್ಲವೆಂಬ ವಾದವನ್ನು ಒಪ್ಪಬಹುದಾದರೂ, ಕಾಲಕ್ರಮೇಣದಲ್ಲಿ ಇಂತಹ ಕೆಲವು ತಲೆಗೆಟ್ಟ ರೂಢಿಗಳು ಜಾರಿಯಲ್ಲಿತ್ತು ಎಂಬುದರಲ್ಲಿ ಸತ್ಯವಿಲ್ಲದಿಲ್ಲ.

ಕೆಲವು ಅಂಶಗಳನ್ನು ಗಮನಿಸಿ.
೧. ರಾಜಾರಾಮ್ ಮೋಹನ್ ರಾಯ್ ಅವರಂತಹ ಸಮಾಜ ಸುಧಾರಕರು, ದಯಾನಂದ ಸರಸ್ವತಿಯವರ ವಿಮರ್ಶೆ, ಮುಂತಾದ ಹಿಂದುಗಳು ಹಿಂದುಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವೆಡೆ ಹಿಂದು ಸಮಾಜವನ್ನು ಒಯ್ದಿತಾದರೂ, ೧೯-೨೦ ಶತಮಾನದಲ್ಲಿ ಹಿಂದುಗಳಲ್ಲಿ ಆದ ಸಾಮಾಜಿಕ ಸುಧಾರಣೆಗೆ ಮತ್ತು ಈಗಲೂ ಆಗುತ್ತಿರುವುದಕ್ಕೆ ಕೇವಲ ಹಿಂದುಗಳು ಕಾರಣರಲ್ಲ.
೨. ಹಿಂದು ಧರ್ಮದ ವಿಮರ್ಶೆ, ಟೀಕೆಗಳನ್ನು ಕೇವಲ ಹಿಂದುಗಳು ಮಾಡಿಲ್ಲ. ಹಾಗೆಯೇ ಹಿಂದು ಧರ್ಮದ ವರ್ಗವಾದ ಬ್ರಾಹ್ಮಣ್ಯದ ವಿಮರ್ಶೆಯನ್ನು ಕೇವಲ ಬ್ರಾಹ್ಮಣರು ಮಾಡಿಲ್ಲ. ಈಗಿನ ಸಮಾಜಕ್ಕೆ ಪ್ರಸ್ತುತವಲ್ಲದ ಮನುಸ್ಮೃತಿಯ ಎಷ್ಟೋ ಅಂಶಗಳನ್ನು ಹಿಂದುಗಳು ಈಗ ಆಚರಿಸುತ್ತಿಲ್ಲದಿರುವುದಕ್ಕೆ ಕೇವಲ ಹಿಂದುಗಳು ಕಾರಣರಲ್ಲ.
೩. ಜಾತಿ ವ್ಯವಸ್ಥೆಯು ದಟ್ಟವಾಗಿದ್ದ ಕಾಲದಲ್ಲಿ, ಹೊಲೆಯರು, ಮಾದಿಗರು, ದಂಡೀರ್ ಮುಂತಾದವರನ್ನು ಸಮಾಜದಲ್ಲಿ ಮೇಲೆತ್ತುವ ಕೆಲಸವನ್ನು ಕೇವಲ ಅವರವರ ಜಾತಿಯವರಷ್ಟೇ ಮಾಡಿಲ್ಲ. ಮೇಲು ಜಾತಿಯವರೆನಿಸಿದ್ದ, ಬ್ರಾಹ್ಮಣರಲ್ಲಿಯೂ ಸಮಾಜ ಸುಧಾರಕರು ಇದ್ದರು. ನಾವು ಕೆಳಗಿನವರು ಎಂಬ ಕೀಳರಿಮೆಯನ್ನು ಹಿಂದುಳಿದವರಿಂದ ಹೋಗಲಾಡಿಸುವಲ್ಲಿ ಬ್ರಾಹ್ಮರೂ ಕೆಲಸಮಾಡಿದ್ದಾರೆ.
೪. ಹಿಂದುಗಳಲ್ಲದವರು ಹಿಂದು ಧರ್ಮದ ಸಾಮಾಜಿಕ ಸುಧಾರಣೆಗೆ ಗುರುತರ ಕೆಲಸ ಮಾಡಿದ್ದಾರೆ. ಬ್ರಾಹ್ಮಣರಲ್ಲದವರೂ ವೈದಿಕ ಧರ್ಮದ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ.

ಸಮಾಜ ಸುಧಾರಣೆ ಎಂಬುದು ಹೊಡೆದಾಟ ಬಡಿದಾಟದಿಂದ ಆಗುವಂಥದ್ದಲ್ಲ ಎಂಬುದನ್ನು ನೀವು ಈಗಾಗಲೇ ಇದರ ಬಗ್ಗೆ ನಿಮ್ಮ ಲೇಖನದಲ್ಲಿ ಸಮರ್ಪಕವಾಗಿ ಬರೆದಿದ್ದೀರಿ. ನೀವು ಪ್ರಸ್ತಾಪಿಸಿದಂತೆ, "ಒಂದು ಸಮಾಜದ ಬೆಳವಣಿಗೆಯ ಬಗ್ಗೆ ಆಯಾ ಸಮಾಜಕ್ಕೆ ಕಾಳಜಿ ಇರಬೇಕಾದ್ದೆ", ಆದರೆ ಈ ನಿಟ್ಟಿನಲ್ಲಿ ಸಹಾಯವಾಗುವ ಹಾಗೆ ಆಯಾ ಸಮಾಜಕ್ಕೆ ಹೊರತಾದವರೂ ಮಾಡಬಹುದು, ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳಿಂದ, ಸಂಸ್ಥೆಗಳಿಂದ ಅಂತಹ ಕಾರ್ಯಗಳು ಹಿಂದೆಯೂ ನಮ್ಮ ದೇಶದಲ್ಲಿ ನಡೆದಿವೆ. ಹೊಡೆದಾಟದಿಂದಲ್ಲ ಬದಲಾಗಿ ವಿಮರ್ಶೆಗಳಿಂದ. ಆಗಲೇ ಹೇಳಿದ ಹಾಗೆ, ಬ್ರಾಹ್ಮಣ್ಯದ ಬಗ್ಗೆ ಎಂಥೆಂಥಹ ಕಟು ವಿಮರ್ಶೆಗಳು ಬ್ರಾಹ್ಮಣೇತರರಿಂದಲೂ, ಹಿಂದುವಲ್ಲದವರಿಂದಲೂ ಆಗಿವೆ, ಆಗುತ್ತಿವೆ. ಆದರೂ ಬ್ರಾಹ್ಮಣ ಸಮಾಜ ಮತ್ತು ಒಟ್ಟಾರೆ ಹಿಂದು ಸಮಾಜ ಇಂದಿಗೂ ಸಾಮಾಜಿಕವಾಗಿ ಬಲವಾಗಿಯೇ ಇದೆ. ಎಲ್ಲಿಯವರೆಗೆ ಸಮಾಜದಲ್ಲಿ ವ್ಯಕ್ತಿಗತವಲ್ಲದ, ಒಳ್ಳೆಯ ಆಶಯದ ಚರ್ಚೆಗಳು, ಟೀಕೆ, ವ್ಯಾಖ್ಯಾನಗಳು, ವಿಮರ್ಶೆಗಳು ಇರುತ್ತವೆಯೋ ಅಲ್ಲಿಯವರೆಗೂ ಸಮಾಜ ಗಟ್ಟಿಯಾಗುವತ್ತ ಸಾಗುತ್ತಲೇ ಇರುತ್ತದೆ. ಸಮಾಜ ಚಿಂತನಾಶೀಲವಾಗಿರುತ್ತದೆ. ಇನ್ನೊಂದು ಸಮಾಜದ ಬಗ್ಗೆ ಕಾಳಜಿಯಿರುವ ಯಾರಿಗೆ ಆದರೂ ಮತ್ತೊಂದು ಸಮಾಜವನ್ನು ಬಗ್ಗೆ ವಿಮರ್ಶಿಸುವ, ವ್ಯಾಖ್ಯಾನಿಸುವ ಸ್ವಾತಂತ್ರ್ಯವನ್ನು ಇದ್ದೇ ಇರುತ್ತದೆ. ಗಮನಿಸಿ ಸ್ವಾತಂತ್ರ್ಯ, ಸ್ವೇಚ್ಛೆಯಲ್ಲ.

ನಾನು ಹೇಳುವುದು "ಆಯಾ ಸಾಮಾಜಿಕ ಸುಧಾರಣಾ ಕಾರ್ಯಗಳು ಅವರವರಿಂದ ಮಾತ್ರವೇ ಆಗಬೇಕು ಎಂಬ ನಿಯಮವಿಲ್ಲ ಬದಲಾಗಿ ಸುಧಾರಣೆಗಳನ್ನು ಒಪ್ಪಿಕೊಳ್ಳುವ ಆಯ್ಕೆ, ಹೊಣೆ ಮತ್ತು ಸಮಜಾಯಿಷಿ ಆ ಸಮಾಜಕ್ಕೆ ಇರುತ್ತದೆ" ಅಷ್ಟೇ. ಹೊಡೆದಾಟ ಬಡಿದಾಟದ ಹೊರತಾಗಿಯೂ ಸಾಮಾಜಿಕ ಸುಧಾರಣೆ ಸಾಧ್ಯವಿದೆ. ಮತ್ತು ನಮ್ಮ ದೇಶದಲ್ಲಿ ಅದು ಆಗುತ್ತಿದೆ ಎಂಬುದರ ಹೆಮ್ಮೆ ನನಗಿದೆ. ಕೇವಲ ಹಿಂದು ಧರ್ಮದಲ್ಲಷ್ಟೇ ಅಲ್ಲ ಮುಸ್ಲಿಮರಲ್ಲಿಯೂ ಕೂಡ ಸಾಮಾಜಿಕ ಸುಧಾರಣೆಗಳಾಗಿವೆ. ಮುಸ್ಲಿಮರಲ್ಲಾಗುತ್ತಿರುವ ಹಾಗು ಮುಂದೆ ಆಗಬಹುದಾದ ಸಾಮಾಜಿಕ ಸುಧಾರಣೆಗೆ ಮುಸ್ಲಿಮರಷ್ಟೇ ಕಾರಣರಲ್ಲ ಮತ್ತು ಮುಸ್ಲಿಮರಷ್ಟೇ ಕಾರಣರಾಗಿರುವುದಿಲ್ಲ. ನಾವು, ನೀವು ಇಂದು ಸುಮ್ಮನಿದ್ದುಬಿಟ್ಟರೆ ಸಮಾಜವು ಇರುವಿದ್ದೆಡೆಯಿಂದ ಹೊರಬಂದು ಇನ್ನೋವೇಟೀವ್ ಆಗುವುದಕ್ಕೆ ಅನೇಕ ಶತಮಾನಗಳು ಬೇಕಾಗಬಹುದು.

------------ಇಲ್ಲಿಯವರೆಗೆ ಶ್ಯಾಮ್ ಕಶ್ಯಪರ ಲೇಖನಕ್ಕೆ ದನಿಗೂಡಿಸುವುದಾಯಿತು. ಈಗ ಕೊನೆಯ ಕೊಸರು.

ತಸ್ಲೀಮಾ ನಜ್ರೀನ್ ಅವರ ಪುಸ್ತಕಗಳನ್ನು ಬ್ಯಾನ್ ಮಾಡುವುದು, ಅವರಿಗೆ ಘೆರಾವ್ ಹಾಕುವುದು ಮುಂತಾದ ಕೆಲಸಗಳು ನಮ್ಮ ದೇಶದಲ್ಲಿ ನಡೆಯುತ್ತಿದೆಯಾದರೂ, ಒಟ್ಟಾರೆ ಸಾಮಾಜಿಕ ಸುಧಾರಣೆಯ ನಿಟ್ಟಿನಲ್ಲಿ ನಾನು ಯಾವಾಗಲೂ ಆಶಾವಾದಿ. ನಮ್ಮ ದೇಶದಲ್ಲಿ ಕೇವಲ ಕೋಮುವಾದವಿಲ್ಲ ಬದಲಿಗೆ ಸಾಮಾಜಿಕ ಸುಧಾರಣೆಯ ಬೆಳ್ಳಿರೇಖೆಯೂ ಇದೆ. ಕೋಮುವಾದ ಬಿರುಗಾಳಿಯಿಂದ ಕೂಡಿರುವ ಪ್ರವಾಹ ಏರಿಸುವ ಮಳೆಯಾದರೆ, ಸಾಮಾಜಿಕ ಸುಧಾರಣೆ ಪ್ರತಿವರ್ಷವೂ ತಪ್ಪದೆ ಬರುವ ವಸಂತನ ಹಾಗೆ ತನ್ನ ಕಂಪನ್ನು ಸೂಸುತ್ತಲೇ ಇದೆ.

@ಎಲ್ಲರಿಗೂ - ಮಾತು ಮುಗಿಸುವ ಮುನ್ನ
ಓದುಗರೊಬ್ಬರು ಭಟ್ಟರ ಪೂಜೆಯ ಬಗ್ಗೆ ಪ್ರಸ್ತಾಪಿಸಿದ್ದರಿಂದ ಇದು. ಹೊಟ್ಟೆಬಿಟ್ಟುಕೊಂಡು ಪೂಜಾರಿಗಳು ಮಾಡುವ ದೇವಸ್ಥಾನದಲ್ಲಿಯಷ್ಟೇ ಹಿಂದು ಧರ್ಮವಿಲ್ಲ. ಚಿದಂಬರ ರಹಸ್ಯ ಎಂದರೇನು ಎಂದು ಅವಲೋಕಿಸಿದರೆ ತಿಳಿಯುತ್ತದೆ. ಹಾಗೆಯೇ ಮತ್ತೊಂದು ಪ್ರಮುಖ ವಿಷಯ ಎಲ್ಲರೂ ಗಮನಿಸಬೇಕಾದ್ದು, ಉತ್ತರ ಭಾರತದ ಎಷ್ಟೋ ಕಡೆ, ಅರ್ಚಕರು ದಕ್ಷಿಣ ಭಾರತದಲ್ಲಿರುವಂತೆ ಅರೆ ಬರೆ ಬಟ್ಟೆಯಲ್ಲಿರುವುದಿಲ್ಲ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (12 replies) April 2, 2007 - 1:34pm
  • Re: ಧರ್ಮಾಂಧತೆಯ ಬಗ್ಗೆ By: sunaath (Apr 6 2007 - 6:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ರೀನಿಧಿ (Apr 7 2007 - 8:51am)
      • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 16 2007 - 8:03pm)
  • Re: ಧರ್ಮಾಂಧತೆಯ ಬಗ್ಗೆ- ಶ್ಯಾಮ ಹೇಳಿದ್ದು ಸರಿ By: vijayamma (Apr 5 2007 - 12:43am)
    • ಧರ್ಮಾಂಧತೆಯ ಬಗ್ಗೆ By: Sunil Jayaprakash (Apr 9 2007 - 1:35pm)
      • ಹಿಂದು ಧರ್ಮ ಅಂದರೆ? By: mahesha (Apr 9 2007 - 2:27pm)
        • ಟಿ: ಹಿಂದು ಧರ್ಮ ಅಂದರೆ? By: Sunil Jayaprakash (Apr 9 2007 - 3:34pm)
          • ಜೀವನ ಕ್ರಮ ಅಂದರೆ? By: mahesha (Apr 9 2007 - 3:43pm)
  • ಕಡವಳದ ಹೆಸರಲ್ಲಿ ಕಾದಾಟ, ಕಾರಾಟ, ಕೊಲ್ಲಾಟ By: mahesha (Apr 4 2007 - 1:19pm)
  • Re: ಧರ್ಮಾಂಧತೆಯ ಬಗ್ಗೆ By: uniquesupri (Apr 3 2007 - 9:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 3 2007 - 11:51pm)
      • ಧರ್ಮಾಂಧತೆಯ ಬಗ್ಗೆ By: hpn (Apr 4 2007 - 12:02am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator