ಉ: `ಓವಿ ' ಪದದ ಅರ್ಥವೇನು?
- Re: `ಓವಿ ' ಪದದ ಅರ್ಥವೇನು? By: sunaath (Apr 11 2007 - 8:14pm)
- ನನ್ನಿ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 10:18pm)
- ಉ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 7:11pm)
- ಅವ, ಇವ, ಉವ, ಎವ By: mahesha (Apr 11 2007 - 8:02pm)
- ಟಿ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 3:18pm)
- Re: `ಓವಿ ' ಪದದ ಅರ್ಥವೇನು? By: mahesha (Apr 11 2007 - 1:41pm)

RSS:
ಉ: `ಓವಿ ' ಪದದ ಅರ್ಥವೇನು?
ಓವಿ ಪದ ಸದ್ಯಕ್ಕೆ ಇನ್ನೂ ಸಿಕ್ಕಿಲ್ಲ. ಆದರೆ ಪಂಡಿತ ಕವಲೀ ಎಂಬುವರ ಕಸ್ತೂರೀ ಕೋಶದಲ್ಲಿ ಓವು ಪದ ಸಿಕ್ಕಿತು.
ಓವು - ಕಾಪಾಡು, ಉಪಚರಿಸು, ಪ್ರೀತಿಸು, ಲಕ್ಷಿಸು, ಗೌರವಿಸು, ಮನ್ನಣೆ ನೀಡು. ಇಂಗ್ಲೀಷಿನ owing ಗೆ ಹತ್ತಿರವಾಗಿದೆ ಇದು.
ಓವ - (=ಓಪ, ಓಮ ನೋಡಿರಿ), ಒಬ್ಬ, ಪರಮಾತ್ಮ, ರಕ್ಷಕ.
ಓಪ - ಕಾಪಾಡುವವ, ರಕ್ಷಕ, ಪ್ರೀತಿಸುವವ, ಪ್ರಿಯ, ಗಂಡ, ಸ್ವಾಮಿ, ಯಜಮಾನ.
ಓಮ - ದಯೆ, ಕೃಪೆ, ಸಹಾಯ, ನೆರವು, ಉಪಕಾರ, ವಾಮ, ಎಡಗಡೆ, ಒಂದು ಬಗೆಯ ಸುಗಂಧ ದ್ರವ್ಯ.
ನನಗೆ ಹೇಳಬೇಕೆನಿಸಿದ ಮತ್ತೊಂದು ವಿಷಯವೆಂದರೆ, ಕನ್ನಡದಲ್ಲಿ ಆವ, ಈವ (ಕೆಲವು ಸೀಮೆಯಲ್ಲಿ ಆವಿ, ಈವಿ ಅಂತ ಇರಬಹುದು) ಎಂಬ ಪದಗಳಿವೆ.
ಆ (ಆ ಎನ್ನುವುದು ಅದು, ಅವನು, ಅಲ್ಲಿ, ಅತ್ತ ಎಂಬುದರ ಸರ್ವನಾಮರೂಪದಲ್ಲಿ ಬಳಕೆಯಾಗುತ್ತದೆ) + ಪ -> ಆವ
ಈ(ಈ ಎನ್ನುವುದು ಇದು, ಇವನು, ಇಲ್ಲಿ, ಇತ್ತ ಎಂಬುದರ ಸರ್ವನಾಮರೂಪದಲ್ಲಿ ಬಳಕೆಯಾಗುತ್ತದೆ) + ಪ -> ಈವ
ಹಾಗೆಯೇ ಊ (ಉದು, ಉವನು, ಉಲ್ಲಿ ಎಂಬ ಬಳಕೆಗಳೂ ಇದೆ ಮತ್ತು ನಾವದನ್ನು ದಿನವೂ ಬಳಸುತ್ತಿರುತ್ತೇ
ವೆ. ಇದರ ಬಗ್ಗೆ ದೊಡ್ಡ ಚರ್ಚೆಯೇ ಆಗಿಹೋಗಿದೆನೋಡಿ, ಕನ್ನಡದ ಬಗ್ಗೆ ನಾವು ತಿಳಿದುಕೊಳ್ಳುವುದು ತುಂಬಾ ಇದೆಯಲ್ಲವೇ
ಬಹುಶಃ ಓವಿಯಷ್ಟನ್ನಾದರೂ ಎಂದರೆ ಒಂದುಚೂರಾದರೂ ಅಥವಾ ನಮಗಿಷ್ಟವಾದ ಭಾಗವನ್ನಾದರೂ ಎಂದು ತಿಳಿಯಬಹುದೇ ?