ಅವ, ಇವ, ಉವ, ಎವ
- Re: `ಓವಿ ' ಪದದ ಅರ್ಥವೇನು? By: sunaath (Apr 11 2007 - 8:14pm)
- ನನ್ನಿ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 10:18pm)
- ಉ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 7:11pm)
- ಅವ, ಇವ, ಉವ, ಎವ By: mahesha (Apr 11 2007 - 8:02pm)
- ಟಿ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 3:18pm)
- Re: `ಓವಿ ' ಪದದ ಅರ್ಥವೇನು? By: mahesha (Apr 11 2007 - 1:41pm)

RSS:
ಅವ, ಇವ, ಉವ, ಎವ
ಸುನಿಲ...
ಅವನು, ಇವನು ಮುಂತಾದವನ್ನು "ಸರ್ವನಾಮ" ಎಂದು ಕರೆಯುವುದು ತಪ್ಪು ಎಂದು ಶಂಕರ ಭಟ್ಟರ ಮಾತು "ಕನ್ನಡ ಸರ್ವನಾಮಗಳು"( ಏಕೆ ಅಲ್ಲಿ ನೋಡಬೇಕು ).
ಅವನು, ಇವನು, ಉವನು, ಎವನು/ಯಾವನು...ಒಬ್ಬನು "ಆಗ/ಅಲ್ಲಿ, ಈಗ/ಇಲ್ಲಿ, ಊಗ/ಉಲ್ಲಿ, ಏಗ/ಯಾವಗ/ಎಲ್ಲಿ" ಇದ್ದಾನೆ/ಇದ್ದನು ಎಂದು ತೋರುವುದು.
ಇನ್ನು...
ಹೇಗೆ
ಆ + ಪೊತ್ತು = ಅವೊತ್ತು ( ತೆಲುಗು ತ್ರಿಕ ಸಂಧಿ ತೆರ , ಕನ್ನಡದ ಆದೇಶ ಸಂಧಿ ಪವರ್ಗಕ್ಕೆ ವಕಾರಾದೇಶ )
ಈ + ಪೊತ್ತು = ಇವೊತ್ತು
ಆ + ಆಗ = ಅವಾಗ
ಈ + ಆಗ = ಇವಾಗ
ತೆಲಗು ತ್ರಿಕ ಸಂಧಿ( ನನ್ನ ಗೆಳೆಯ ಹೇಳಿದಂತೆ )
ಏ + ಕಡಾ = ಎಕ್ಕಡಾ
ಆ + ಕಡಾ = ಅಕ್ಕಡಾ
ಈ + ಕಡಾ = ಇಕ್ಕಡಾ
ತೆಲುಗಲ್ಲಿ "ಏ ಪನಿ" ಅಂದರೆ "ಯಾವ ಕೆಲಸ" ಅಲ್ವಾ? ಕನ್ನಡದಲ್ಲಿ ಏ ಕೆಲವು ಒರೆಗಳಲ್ಲಿ "ಯಾ/ಯಾವ" ಆಗಿದೆ.
)
ತಮಿಳು "ಎವನೋ ಒರುವನ್ ವಾಸಕ್ಕಿರಾನ್ " ( 'ಅಲೈಪಾಯುದೇ'
ಇಲ್ಲಿ
ಆ - ( ಆಗ, ಆಲ್ಲಿ, ದೂರದಲ್ಲಿ ),
ಈ - ( ಈಗ, ಇಲ್ಲಿ, ಹತ್ತಿರದಲ್ಲಿ ),
ಊ - ( ಊಗ, ಉಲ್ಲಿ, somewhere )
ಏ - ( ಏಗ/ಯಾವಾಗ, ಎಲ್ಲಿ, where )
ಈ ಒರೆಗಳು ಅರ್ತವನ್ನು ಬದಲಿಸುವುವು.
ಹಾಗೆ
ನೋಡ್ + ಪ = ನೋಡ್ಪ => ನೋಡ್ವ => ನೋಡುವ
ನೋಡ್ಪನ್ => ನೋಡ್ವನ್ => ನೋಡುವನು
ನೋಡ್ಪಳ್ => ನೋಡ್ವಳ್ => ನೋಡುವಳು
ನೋಡ್ಪರ್ => ನೋಡ್ವರ್ => ನೋಡುವರು
ನೋಡ್ಪುದಂ? => ನೋಡ್ವುದು => ನೋಡುವುದು
ಆ + ಪ + ನು = ಅವನು
ಈ + ಪ + ಳು = ಇವಳು
ಊ + ಪ + ರು = ಉವರು
ಏ + ಪ + ರು = ಎವರು ( ತೆಲುಗಲ್ಲಿ ಇದೆ, ಎವರು, ಎದು, ಎಂತ, ಎಂದುಕು; ಕನ್ನಡದಲ್ಲಿ ಬಳಕೆಯಲ್ಲಿಲ್ಲ )
ಈ 'ಪ/ವ' ಒಬ್ಬ human ಅನ್ನು ತೋರಿಸುತ್ತದೆ. ಹಾಗೆ 'ಪು/ವು' non-human ಅನ್ನು ತೋರಿಸುವುದು.
======
