~
ಕೊಯ್ಲಿನ ಉತ್ಸವ...
- ವಿಷುವಿನ ನಲಿವು By: mahesha (Apr 14 2007 - 3:10pm)
- Re: ಮತ್ತೆ ಬ೦ದಿದೆ ವಿಷು... By: ASHOKKUMAR (Apr 13 2007 - 8:44pm)
- ಕೊಯ್ಲಿನ ಉತ್ಸವ... By: shreedn (Apr 14 2007 - 12:50pm)
- Re: ಕೊಯ್ಲಿನ ಉತ್ಸವ...ಕಣಿಯಲ್ಲಿ ಕನ್ನಡಿ By: ASHOKKUMAR (Apr 14 2007 - 1:01pm)
- ಕೊಯ್ಲಿನ ಉತ್ಸವ... By: shreedn (Apr 14 2007 - 12:50pm)

RSS:
ಕೊಯ್ಲಿನ ಉತ್ಸವ...
ಬೇವು-ಬೆಲ್ಲ ಕೊಟ್ಟ್ಟು ಹೊಸ ವರ್ಷ ಸ್ವಾಗತಿಸುವುದು ಕರ್ನಾಟಕ, ಆ೦ಧ್ರಗಳಲ್ಲಿನ ಸ೦ಪ್ರದಾಯ, ಅದು ಚಾ೦ದ್ರಮಾನ ಯುಗಾದಿ.
ಕೇರಳದಲ್ಲಿ (ಮತ್ತು ಅವಿಭಜಿತ ದಕ್ಷಿಣ ಕನ್ನಡದಲ್ಲಿ) ಆಚರಿಸುವುದು ಸೌರಮಾನ ಯುಗಾದಿ. ಇದರಲ್ಲಿ ಬೇವು-ಬೆಲ್ಲ ಇಲ್ಲ. 'ಕಣಿ' ಇಟ್ಟು ಹೊಸವರ್ಷವನ್ನು ಸ್ವಾಗತಿಸುವುದು ಸ೦ಪ್ರದಾಯ.
ಶ್ರೀಕೃಷ್ಣ ಕ೦ಸನನ್ನು ಕೊಂದ ದಿನವೂ ಇದೇ ಅಂತೆ, ವರ್ಷದ ಕೊಯ್ಲು-ಫಸಲು ಏನಿರುತ್ತದೆಯೋ ಅದನ್ನು ವಿಷ್ಣುದೇವರಿಗೆ ಉಡುಗೊರೆಯಾಗಿ ಕೊಡುವ ಮೂಲಕ ಹೊಸವರ್ಷವನ್ನು ಸ್ವಾಗತಿಸಿ ಮು೦ದಿನ ವರ್ಷ ಒಳೆಯದಾಗಲೆ೦ದು ಹಾರೈಸುವುದು 'ಕಣಿ'ಯ ಹಿ೦ದಿನ ಆಶಯವ೦ತೆ..
ಹೌದು, ಈ ಸಲ ೧೫ ರಂದು ಆದಿತ್ಯವಾರ ವಿಷು-ಕಣಿ... ..
ಪಂಜಾಬ್, ಅಸ್ಸಾಂ, ತಮಿಳ್ನಾಡಿಗೆ ಕೂಡ ಎಪ್ರಿಲ್ ೧೫ರಂದೇ ಹೊಸವರ್ಷ... ಸೌರಮಾನ ಯುಗಾದಿಯನ್ನು ಹೆಚ್ಚಿನ ಎಲ್ಲ ಕಡೆಯೂ ಕೊಯ್ಲಿನ ಉತ್ಸವವೆಂದೇ ಆಚರಿಸುತ್ತಾರೆ.