ನನಗೆ ಗೊತ್ತಿತ್ತು ;)
- ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 13 2007 - 9:09pm)
- Re: ಪದಗಳ ಸೈಡ್ ಡಿಶಸ್ ;) By: suresh_k (Apr 15 2007 - 1:59pm)
- ದನಿಗೂಡು: ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 16 2007 - 1:31pm)
- ಕನ್ನಡದಲ್ಲಿ ಬಾಡು-ತಿನಿಸು By: mahesha (Apr 16 2007 - 2:16pm)
- Re: ತತ್ತಿ ದ್ವಾಸಿ ಮತ್ತು ಆಮ್ಲೆಟ್ಟು By: shreekant.mishrikoti (Apr 17 2007 - 10:38am)
- ಕನ್ನಡದಲ್ಲಿ ಬಾಡು-ತಿನಿಸು By: mahesha (Apr 16 2007 - 2:16pm)
- ಮಾಂಸಾಹಾರಕ್ಕೆ ಕನ್ನಡ ಪದಗಳು By: hpn (Apr 15 2007 - 2:45pm)
- ಕನ್ನಡ ಪದಗಳು By: shreekant.mishrikoti (Apr 15 2007 - 3:38pm)
- Re: ಮೂವರು ಆಟೇನಾ? By: ಸಂಗನಗೌಡ (Apr 17 2007 - 9:49am)
- ಹೊಸ ಸವಾಲುಗಳಿಗೆ ಹೇಗೆ ಸಿದ್ದಗೊಳಿಸಬೇಕು By: mahesha (Apr 16 2007 - 12:08pm)
- ದನಿಗೂಡು: ಕನ್ನಡ ಪದಗಳು By: Sunil Jayaprakash (Apr 16 2007 - 11:12am)
- ಉ: ಕನ್ನಡ ಪದಗಳು By: hpn (Apr 15 2007 - 11:01pm)
- "ನಾನು ಹೇಳಿದಂತೆ ಕೇಳು, ನಾನು ಮಾಡಿದಂತೆ ಮಾಡಬೇಡ"..ಸಂಪದದ ಓದುಗರು ದಡ್ಡರೇ By: Sunil Jayaprakash (Apr 16 2007 - 11:45am)
- ಕನ್ನಡ ಪದಗಳು By: shreekant.mishrikoti (Apr 15 2007 - 3:38pm)
- ದನಿಗೂಡು: ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 16 2007 - 1:31pm)
- Re: ಪದಗಳ ಸೈಡ್ ಡಿಶಸ್ ;) By: mahesha (Apr 14 2007 - 3:49pm)
- Re: ಪದಗಳ ಸೈಡ್ ಡಿಶಸ್ ;) By: ರಘುನಂದನ (Apr 13 2007 - 10:29pm)
- Re: ಪದಗಳ ಸೈಡ್ ಡಿಶಸ್ ;) By: Yamini (Apr 14 2007 - 3:39pm)
- Re: ಪದ ಜಾಮೂನು By: ASHOKKUMAR (Apr 13 2007 - 9:29pm)
- Re: ಪದಗಳ ಸೈಡ್ ಡಿಶಸ್ ;) By: suresh_k (Apr 15 2007 - 1:59pm)
- Re: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: ASHOKKUMAR (Apr 12 2007 - 2:17pm)
- Re: ಪದಗಳನ್ನು ಒಣಗಿಸಿ ಬಳಸಬಹುದಾ? By: ಸಂಗನಗೌಡ (Apr 13 2007 - 9:41pm)
- ಒರೆಗಳ ಬಳಕೆಯ ಬಗ್ಗೆ ಒಂದು ಕಿರುಟಿಪ್ಪಣಿ By: mahesha (Apr 12 2007 - 2:38pm)
- ಬೆಳ್ಳಿ ರೇಖೆ By: Yamini (Apr 13 2007 - 8:49pm)
- Re: ಬೆಳ್ಳಿ ರೇಖೆ By: ಸಂಗನಗೌಡ (Apr 18 2007 - 8:58pm)
- ಬೆಳ್ಳಿ ಗೆರೆ By: mahesha (Apr 14 2007 - 2:29pm)
- Re: ಬೆಳ್ಳಿ ಗೆರೆ By: Yamini (Apr 14 2007 - 3:44pm)
- Re: ಬೆಳ್ಳಿ ಗೆರೆ By: mahesha (Apr 14 2007 - 4:30pm)
- Re: ಬೆಳ್ಳಿ ಗೆರೆ By: tksbhat (Apr 15 2007 - 1:54am)
- Re: ಬೆಳ್ಳಿ ಗೆರೆ By: mahesha (Apr 15 2007 - 2:15pm)
- Re: ಬೆಳ್ಳಿ ಗೆರೆ By: tksbhat (Apr 15 2007 - 1:54am)
- Re: ಬೆಳ್ಳಿ ಗೆರೆ By: mahesha (Apr 14 2007 - 4:30pm)
- Re: ಬೆಳ್ಳಿ ಗೆರೆ By: Yamini (Apr 14 2007 - 3:44pm)
- ಉ: ಬೆಳ್ಳಿ ರೇಖೆ By: hpn (Apr 13 2007 - 10:44pm)
- Re: ಉ: ಬೆಳ್ಳಿ ರೇಖೆ By: ವೈಭವ (Apr 15 2007 - 2:16am)
- AC ಕೋಣೆ By: mahesha (Apr 14 2007 - 2:54pm)
- ನನಗೆ ಗೊತ್ತಿತ್ತು ;) By: Sunil Jayaprakash (Apr 14 2007 - 9:35am)
- ಅಂಜಿಕೆ By: mahesha (Apr 14 2007 - 3:06pm)
- ಬೆಳ್ಳಿ ರೇಖೆ By: Yamini (Apr 13 2007 - 8:49pm)

RSS:
ನನಗೆ ಗೊತ್ತಿತ್ತು ;)
ಲೋ, ಹರಿ ನನಗೆ ಗೊತ್ತಿತ್ತು ಕಣೋ, ನೀನು ಇದಕ್ಕೆ ಗ್ಯಾರೆಂಟಿ ಸೇರಿಸುತ್ತೀಯಾ ಅಂತ
LOL. ಇರಲಿ ಸರಳವಾದ ಕನ್ನಡದಲ್ಲಿ ಪುಸ್ತಕಗಳನ್ನು ಬರೆಯುತ್ತಿರುವ ಶಂಕರಭಟ್ಟರಿಗೇ, ಪಂಡಿತೋತ್ತಮರೆನಿಸಿಕೊಂಡ ಅನೇಕ ಬಿರುದಾಂಕಿತರು "ಕೂಚುಬಟ್ಟ, ಚಂಕರ ಪಟ್ಟ, ಪಯಂಕರ ಪಟ್ಟ" ಎಂದೆಲ್ಲ ಬಿರುದಿತ್ತಿರುವಾಗ, ನಮ್ಮ ಮೇಲಿನ ಆಪಾದನೆ ಯಾವ ಮೂಲೆಯದ್ದು. ಅಂದ ಹಾಗೆ, ನಿನಗೆ ಗೊತ್ತಿದೆಯೋ ಇಲ್ಲವೋ, ಯಾಮಿನಿಯವರಿಗೆ ಭಯವಾದ ಹಾಗೆ, ಕನ್ನಡದಲ್ಲಿ ಜ್ಞಾನದ ಹುಡುಕಾಟವನ್ನು ಮೆಚ್ಚಿದವರೂ ತುಂಬಾ ಮಂದಿ. ಅವುಗಳು ಆಯಾ ಎಳೆಗಳಲ್ಲಿ ಮತ್ತು ನಮಗೆ ಬಂದ ವೈಯಕ್ತಿಕ ಮೇಯ್ಲುಗಳಲ್ಲಿ ವ್ಯಕ್ತವಾಗಿದೆ. ಅದು ಇಲ್ಲಿ ಅಪ್ರಸ್ತುತ.
@ಯಾಮಿನಿ,
ಅಂದ ಹಾಗೆ. ನೀವು ಗಮನಿಸಿದ್ದೀರೋ ಇಲ್ಲವೋ, ಬರೆಯುವವರು ಮೂರೇ ಜನ (ಇದು ಬರೀ ಹರಿಯ ಪ್ರಕಾರ, ಆದರೆ ಕನ್ನಡದ ಬಗ್ಗೆ ಬರೆದವರು, ಬರೆಯುತ್ತಿರುವವರು ಇನ್ನೂ ತುಂಬಾ, ಕಳೆದೆರೆಡು ವಾರಗಳ ಚರ್ಚೆಗಳನ್ನು ಫಾಲೋ ಮಾಡಿದ ಎಂಥವರಿಗೂ ತಿಳಿದೀತು). ಆದರೂ, ನಾವು ಬರೆದದ್ದನ್ನು ಓದಿ ಅದರಲ್ಲಿರುವ ಸತ್ಯಾಸತ್ಯತೆಯನ್ನು ಕಂಡುಕೊಂಡು, ನಮ್ಮದೇ ಕನ್ನಡವನ್ನು ಸರಳವಾಗಿಸಿಕೊಳ್ಳುವ ಕಡೆ, ತುದಿಗಾಲಲ್ಲಿ ನಿಂತಿರುವವರು ತುಂಬಾ ಮಂದಿ. ಬಹುಶಃ ನಾವು ಮೂವರು (ಮತ್ತೆ, ಬರೀ ಹರಿ ಪ್ರಕಾರ) ಬರೆದಿರುವ ಲೇಖನಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾದದ್ದು ನಾವುಗಳು, ಸಂಸ್ಕೃತವಾಗಲೀ, ಇಂಗ್ಲೀಷಾಗಲೀ, ಹಳಗನ್ನಡವಾಗಲೀ, ಹೊಸಗನ್ನಡವಾಗಲೀ ಯಾರ ಮೇಲೂ ಹೇರಿಲ್ಲ. ಒಟ್ಟಿನಲ್ಲಿ ಜ್ಞಾನ ಕನ್ನಡದಲ್ಲಿ ಹಂಚಿಕೆಯಾಗಬೇಕು. "ಹೀಗಲ್ಲ, ಹೀಗೂ ಕನ್ನಡದಲ್ಲಿ ಸರಳವಾಗಿ ಹೇಳಬಹುದು" ಎಂದು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅದು ಜನರಿಗೆ ಇಷ್ಟವಾದರೆ, ಬಳಸುತ್ತಾರೆ. ಅದು ಅವರವರ ಇಷ್ಟ. ಇದಕ್ಕೆ ನೀವೇಕೆ ಭಯಪಟ್ಟುಕೊಳ್ಳಬೇಕು ?. ಕನ್ನಡವು ಜಾಳು, ಎಂಬ ಮನಸ್ಥಿತಿಯನ್ನು ಆಧಾರಸಮೇತ ವಸ್ತುನಿಷ್ಟವಾಗಿ ಕನ್ನಡವು ಜಾಳಲ್ಲ ಎಂದು ನಿರೂಪಿಸಿವುದು ಒಬ್ಬ ಸಹೃದಯನಾಗಿ, ನನಗೆ ಯಾವ ರೀತಿಯ ಅಪರಾಧವೂ ಕಾಣಿಸದು. ಇದನ್ನು ಒಪ್ಪಿಕೊಳ್ಳುವ ಬಗೆ ಇಲ್ಲದೆ ಏನೇನೋ ಆಪಾದನೆ ಮಾಡುವುದು ಸಂಕುಚಿತ ಮನೋಭಾವವಷ್ಟೇ (ನೀವು ಹಾಗೆ ಎಂದು ನಾನು ಹೇಳುತ್ತಿಲ್ಲ).
ನೋಡಿ, ನಿಮಗೆ ಏನು ಹೇಳಬೇಕೋ ಅದನ್ನು ನಿರ್ಭಯವಾಗಿ ಹೇಳುವ ಹಕ್ಕು ನಿಮಗೆ ಇದೆ. ಭಯಪಟ್ಟುಕೊಂಡು ಬರೆಯುವುದನ್ನು ನಿಲ್ಲಿಸಬೇಕಾಗಿಲ್ಲ. ಅಂದ ಹಾಗೆ, ನೀವು ಇನ್ನೂ ಭಯದಲ್ಲಿಯೇ ಇರುವಿರಾದರೆ (ನನಗೆ ಇದರ ಬಗ್ಗೆ ಅನುಮಾನ), ಕವಿರಾಜಮಾರ್ಗದಲ್ಲಿ ಹೀಗೆ ಹೇಳಿದೆ, "ಮದ, ಮಾನ, ಮಾಯ, ಭಯ, ಲೋಭ, ವಿಷಾದ, ಹರ್ಷಾಭ್ಯುದಿ" ಇವುಗಳು ಅಂತರಂಗ ರಿಪುವರ್ಗ. ಭಯಪಟ್ಟಕೊಂಡು ಬರೆಯುವುದು, ಅಥವಾ ಭಯಪಟ್ಟುಕೊಂಡು ಬರೆಯುವುದನ್ನು ನಿಲ್ಲಿಸುವುದು, ತನ್ನತನವನ್ನು ಇನ್ನೂ ಕಂಡುಕೊಳ್ಳದಿರುವ ಸಂಕೇತ. ಆವರಣದ ಬಗ್ಗೆ ನಿರ್ಭಯವಾಗಿ ನಿಮ್ಮ ಅನಿಸಿಕೆ ಮುಂದಿಟ್ಟಿರುವ ನೀವು, ಇದಕ್ಕೆ ಹೊರತಾದವರು ಎಂದು ಭಾವಿಸುತ್ತೇನೆ.
@ಎಲ್ಲರಿಗೂ,
ಕನ್ನಡದ ಬಗೆಗಿನ ಮಾತನ್ನು ಕಂಡು ಕೆಲವರಿಗೆ ಭಯವಾಗುವುದಾದರೆ, ಅದು ಎಲ್ಲಿ ತಾವು ಇಷ್ಟು ವರ್ಷ ಆಚರಿಸಿಕೊಂಡು ಬಂದ ಮಡಿವಂತಿಕೆ ದೂರವಾಗಿಬಿಡುವುದೋ ಎಂಬ ಶಂಕೆ ಅಥವಾ ಎಲ್ಲಿ ತಾವು ಇಷ್ಟು ವರ್ಷ ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದ ಜ್ಞಾನ ಇತರರ ಪಾಲಾಗುವದೋ ಎಂಬ ದುಗುಡ ಕಾಡಿರಬಹುದು. (ಈ ಕಡೆಯ ಮಾತು ಕೂಡ ಯಾಮಿನಿಯವರನ್ನು ಉದ್ದೇಶಿಸಿದ್ದಲ್ಲ)