~
ಉ: ಅನುವಾದ ಅಕಾಡೆಮಿ ಏನು ಮಾಡಬಹುದು?
- ನನ್ನ ಅಭಿಪ್ರಾಯ By: pavanaja (Sep 28 2005 - 7:20pm)
- ಒ ಏಲ್ ಎನ್ By: Gopinath Rao (Sep 28 2005 - 2:21pm)
- ಅನುವಾದ ಅಕಾಡೆಮಿ By: beluru (Sep 28 2005 - 11:29am)
- ಅನುವಾದ ಅಕಾಡೆಮಿಯ ಬಗ್ಗೆ ... By: ಪ್ರಶಾಂತ.ಪಂಡಿತ (Sep 28 2005 - 11:03am)
- ಅನುವಾದ ಹಾಗು ವ್ಯಾಖ್ಯಾನ... By: ravikh (Sep 28 2005 - 4:53pm)

RSS:
ಒ ಏಲ್ ಎನ್
ಒ ಏಲ್ ಎನ್ ಸ್ವಾಮಿಯವರಿಗೆ ಅಭಿನಂದನೆಗಳು.
ಏನು ಮಾಡಬಹುದು ಅಂತ ಸಲಹೆ ಕೇಳಿದ್ದೀರಾ. ಪ್ರಾಮಾಣಿಕವಾದ ಆಶಯಕ್ಕೆ ನನ್ನ ಅಭಿಪ್ರಾಯ ಹೀಗಿದೆ:
೧. ಇಂಗ್ಲಿಷ್ ಹಾಗೂ ಹಿಂದಿ ಬಿಟ್ಟು ಇತರ ಭಾರತೀಯ ಭಾಷೆಯ ಸಾಹಿತ್ಯ ಕನ್ನಡಕ್ಕೆ ಅನುವಾದಗೊಳ್ಳ ಬೇಕು
(ಹಿಂದಿ ಇಂಗ್ಲಿಷ್ ಗಳನ್ನು ಬಿಡುವುದು ನಾವೆಲ್ಲ ಶಾಲೆಯಲ್ಲಿ ಕಲಿತಿದ್ದೇವೆ, ಬೇಕಿದ್ದರೆ ಮೂಲ ಲೇಖನಗಳನ್ನೇ ಓದಬಹುದು ಎಂಬ ಕಾರಣಕ್ಕಾಗಿ)
೨. ಕನ್ನಡದ ಉತ್ತಮ ಹಾಗೂ ಇತ್ತೀಚೆಗಿನ ಜನಪ್ರಿಯ ಹಾಗೂ ವೈಚಾರಿಕ ಸಾಹಿತ್ಯ ಮುಖ್ಯವಾಗಿ ಇಂಗ್ಲಿಷಿಗೆ ಹಾಗೂ ಹಿಂದಿಗೆ ಅನುವಾದಗೊಳ್ಳಬೇಕು.
(ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷಿಗೆ ಯಾಕೆ ಅಂದರೆ ಇದರಿಂದ ಬಹಳಷ್ಟು ಭಾರತೀಯರನ್ನು ತಲುಪಬಹುದು ಹಾಗೂ ಕನ್ನಡದ ರುಚಿ ಹಿಡಿಸಬಹುದು)
೩. ಪುಸ್ತಕಗಳ ಗುಣಮಟ್ಟ ಅತ್ಯುತ್ತಮವಾಗಿರಬೇಕಾದದ್ದು ಬಹಳ ಮುಖ್ಯ.
೪. ನಿಮ್ಮ ಒತ್ತು ಕನ್ನಡದ ಪುಸ್ತಕಗಳನ್ನು ಇತರ ಭಾಷೆಗೆ ಅನುವಾದಿಸುವುದರತ್ತ ಇರಲಿ.
ಮತ್ತೊಮ್ಮೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.
ಗೋಪೀನಾಥ ರಾವ್.