ಇನ್ನೂ ಕೆಲವು ಏಕಾಕ್ಷರಿಗಳು
- ಉ: ಏಕಾಕ್ಷರೀ By: agilenag (May 12 2008 - 8:01pm)
- ಇನ್ನೂ ಕೆಲವು ಏಕಾಕ್ಷರಿಗಳು By: tvsrinivas41 (Sep 30 2005 - 1:08pm)
- ಟ ಟಾ ಟಿ ಟೂ By: pavanaja (Sep 30 2005 - 1:15pm)
- ಕಾ ಕ ಕಾ.. ಕಾ.. By: prakashaka (Sep 30 2005 - 2:43pm)
- ಆಡಿಕೊಳ್ಳುವುದೋ ಹಾಡಿಕೊಳ್ಳುವುದೋ? By: tvsrinivas41 (Sep 30 2005 - 4:00pm)
- ಮಾಡರ್ನ್ ಆರ್ಟೂ ಏಕಾಕ್ಷರಿಯೂ By: prakashaka (Oct 1 2005 - 11:39am)
- ಆಡಿಕೊಳ್ಳುವುದೋ ಹಾಡಿಕೊಳ್ಳುವುದೋ? By: tvsrinivas41 (Sep 30 2005 - 4:00pm)
- ಕಾ ಕ ಕಾ.. ಕಾ.. By: prakashaka (Sep 30 2005 - 2:43pm)
- ಟ ಟಾ ಟಿ ಟೂ By: pavanaja (Sep 30 2005 - 1:15pm)
- ಹ ಹಾ By: ಪ್ರದೀಪ್ ಕಿಶೋರ್ (Sep 29 2005 - 8:19pm)

RSS:
ಇನ್ನೂ ಕೆಲವು ಏಕಾಕ್ಷರಿಗಳು
ಪಪ್ಪ ಪಪ್ಪ ಪೀಪೀ ಪಪ್ಪ (ಅಪ್ಪ ಪೀಪೀ ಊದಲೇ )
ಪಾಪಾ ಪೀಪೀ ಪಾಪ ಪಾಪಾ (ಮಗನೇ ಪೀಪೀ ಊದೋದು ತಪ್ಪು, ಬೇಡ )
ಪಂಪ ಪೀಪೀ ಪೂಪೂ ಪಪ್ಪ (ಮತ್ತೆ ಪಂಪ ಪೀಪೀ ಊದ್ತಾ ಇದ್ದಾನೆ )
ಪಂಪ ಅಪ್ಪನ ಮುತ್ತಾತ
ಪಪ್ಪ ಪಂಪ ಪ್ರಪೌ ಪೀಪೀ ಪಾಪಾ (ನಿಮ್ಮಪ್ಪ ಪಂಪನ ಮರಿಮಗ ಹಾಗಾಗಿ ಮುತ್ತಾತ ಪೀಪೀ ಊದಿದರೆ ಪಾಪವಿಲ್ಲ ) = ನೀನು ಮಾತ್ರ ಊದಬೇಡ ಅಂತ
ಗಂಗಿ ಗಂಗೆ ಗೋಗ್ರಾಗಾಗಿ ಗೋಗೋ
ಗಂಗ ಗಂಗಿ ಗೋಗೋ ಗುಂಗು
ಗೋ ಗುಂ ಗುಂ ಗಂಗ
ಗುಗ್ಗು ಗಂಗ ಗಗ್ಗಗ್ಗ
ಗಂಗಿ ಹಸು ಗಂಗೆಗೆ ಹುಲ್ಲನ್ನು (ಗೋಗ್ರಾಸ ) ತರಲು ಹೊರಟಳು
ಆಗ ಗಂಗ ಗಂಗಿಯನ್ನು ಸುತ್ತಾಡಿ ಬರಲು ಇಷ್ಟ ಪಟ್ಟ
ಇದನ್ನು ತಿಳಿದ ಹಸು ಗಂಗೆ ಗಂಗನನ್ನು ಗುಮ್ಮಲು (ತಿವಿಯಲು ಹೊರಟಿತು )
ಆಗ ಗಂಗ ಕಕ್ಕಾಬಿಕ್ಕಿಯಾದ
ಬೀಬೀ ಬೇಬಿ ಬೈ ಬೈ ಬೈ
ಬೌ ಬೌ ಬಿಂಬ ಬೇಬಿ ಬೌ ಬೌ ಬೌ
ಬೇಬಿ ಬೌ ಬೌ ಬಿಬ್ಬಿ ಬ್ರೈಬೇ
ಬೀಬೀ ಬಂಬು ಬೌ ಬೌ ಬೌ ಬೌ
ಇದನ್ನು ಗಂಡ ಹೇಳ್ತಿರೋದು
ಅವನ ಹೆಂಡತಿ (ಬೀಬಿ ) ಮತ್ತು ಮಗಳು (ಬೇಬಿ ) ಸುತ್ತಾಟಕ್ಕೆ (ಬೈ ಬೈ ) ಹೋಗ್ತಿದ್ದಾರೆ
ಆಗ ನಾಯಿ (ಬೌ ಬೌ ) ನೆರಳಿನಂತೆ (ಬಿಂಬ ) ಹಿಂಬಾಲಿಸಿಕೊಂಡು ಬೊಗಳುತ್ತಾ ಬರುತ್ತದೆ
ಮಗಳು ಅದಕ್ಕೆ ಬಿಸ್ಕತ್ತನ್ನು (ಬಿಬ್ಬಿ ) ಲಂಚವಾಗಿ (ಬ್ರೈಬೆ ) ತೋರಿಸ್ತಾಳೆ
ಆದರೆ ಹೆಂಡತಿ ನಾಯಿಗೆ ಕೋಲಿನಲ್ಲಿ (ಬಂಬು ) ಹೊಡೆಯಲು ಹೋದಾಗ ನಾಯಿ ಬೊಗಳುತ್ತದೆ.
ನಿನ್ನೆ ನಾನು ನಾನೇನೇ ನೀನು ನೀನೇನೇ
ನನ್ನನು ನೀನು ನಿನ್ನನು ನಾನು ನೋ
ನನ್ನನ್ನ ನೀನೂ ನಿನ್ನನ್ನ ನಾನು
ನೆನೆ ನನ್ನನ್ನೇ ನೀನು ನಿನ್ನನ್ನೇ ನಾನು
ಟಿಪ್ಪಣಿ : ನಿನ್ನೆಯವರೆವಿಗೆ ನಾವಿಬ್ಬರು ಅಪರಿಚಿತರು
ಇಬ್ಬರೂ ಮುಖಾಮುಖಿ ನೋಡಲು
ಆಹಾರ ವಿನಿಮಯ ಮಾಡಿಕೊಂಡ ಮೇಲೆ
ನನ್ನನ್ನು ನೀನು ನಿನ್ನನ್ನು ನಾನು ನೆನೆಸಿಕೊಳ್ಳುತ್ತಿದ್ದೇವೆ