ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ

April 24, 2007 - 10:21pm — Sunil Jayaprakash

ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ

Sunil Jayaprakash's picture

ಅಶೋಕ್‌ಕುಮಾರ್ ನೀವು ನೀಡಿದ ಲಿಂಕಿನಿಂದ ಸುದ್ಧಿಯನ್ನು ನೇರವಾಗಿ ಓದಲು ಆಗುತ್ತಿರಲಿಲ್ಲ. ಆದ್ದರಿಂದ ಓದುಗರಿಗೆ ಅನುಕೂಲವಾಗಲೆಂದು ಸುಧೀಂದ್ರ ಅವರ ಲೇಖನಕ್ಕೆ ನೇರವಾದ ಲಿಂಕ್ ನೀಡುತ್ತಿದ್ದೇನೆ. ಸೈಬರ್ ಅವಳಿ - ಹರಟಿದರೆ ನಿಮಗಿಲ್ಲಿ ಬವಳಿ!

AIಗೆ ಕೃತಕ ಬುದ್ಧಿಮತ್ತೆ ಅಲ್ಲದೆ ಬೇರೆ ಸೂಕ್ತ ಪದ ಇದೆಯೇ? ಎಂಬುದಾಗಿ ನೀವು ಕೇಳಿದ ಮೇಲೆ ಇದರ ಬಗ್ಗೆ ಓವಿ ತಲೆಕೆಡಿಸಿಕೊಂಡಿದ್ದೆ. ಈ ದಿನ ಆಫೀಸಿನಿಂದ ಮನೆಗೆ ಬರುವಾಗ ಒಬ್ಬರು ತಾತ ಊರುಗೋಲಿನ ನೆರವಿನಿಂದ ನಡೆಯುತ್ತಿದ್ದರು. ಆಗ ನನಗೆ ಒಂದು ವಿಷಯ ಹೊಳಯಿತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸಿತು ಎಂಬುದನ್ನು ತಿಳಿಸಿ. intelligence - ತಿಳಿವು, ಚುರುಕು, ಬುದ್ಧಿಮತ್ತೆ, ಪ್ರಜ್ಞೆ ಮುಂತಾದವುಗಳಲ್ಲಿ ಚುರುಕು ಎಂಬ ಪದ ಎಲ್ಲರಿಗೂ ಓದಿದೊಡನೆಯೇ ತಿಳಿಯುತ್ತದೆ. ಆದ್ದರಿಂದ ಚುರುಕು ಎಂಬುದನ್ನ ಇಟ್ಟುಕೊಳ್ಳೋಣ. ಕನ್ನಡದ ಪರಿಭಾಷೆಯಲ್ಲಿ ಕೃತಕವಾದದ್ದು ಎಂದರೆ, ಏನೋ ಒಂಥರಾ ಮಾಡಬಾರದ್ದು (ಕೃತ್ರಿಮ ಎಂಬ ಬಳಕೆಯಿಲ್ಲವೇ) ಎಂಬ ಅರ್ಥದಲ್ಲಿಯೇ ಹೆಚ್ಚು ಬಳಕೆಯಲ್ಲಿದೆ.
artificial - ನಮ್ಮ ಕೈಯಲ್ಲಿ ಸ್ವಾಭಾವಿಕವಾಗಿ(natural) ಮಾಡಲಾಗದ್ದಕ್ಕೆ ಬೇರೆ ಯಾವುದಾದನ್ನಾದರೂ (ಅಥವಾ ಯಾರನ್ನಾದರೂ) ನಾವು ನೆಚ್ಚಿಕೊಳ್ಳುತ್ತೇವೆ. ಹಾಗಾಗಿ ನೆಚ್ಚು ಎಂಬ ಪದವನ್ನು ಪಾರಿಭಾಷಿಕವಾಗಿ ಇಲ್ಲಿ ಬಳಸಬಹುದು ಅಂತ ಅನಿಸಿತು. ಆ ಊರುಗೋಲನ್ನು ನೆನಪಿಗೆ ತಂದುಕೊಳ್ಳಿ. ಆ ಊತಾತ ನಡೆಯಲು ಊರುಗೋಲನ್ನು ನೆಚ್ಚಿಕೊಂಡಿದ್ದರು. ನೆಚ್ಚಿಕೊಳ್ಳೋದು ಎಂದರೇನು. ಕೆಲವು ದಿನನಿತ್ಯ ಬಳಕೆಗಳನ್ನು ಕೆಳಗೆ ನೀಡಿದ್ದೇನೆ. ನಿಮ್ಮ ನಿಮ್ಮ ಮನೆಗಳಲ್ಲಿಯೂ ಈ ರೀತಿಯ ಬಳಕೆಗಳು ಇರಬಹುದು. ೧. ನೆಚ್ಚು - ಅವ್ನುನ್ ನೆಚ್ಕೊಳಕ್ ಆಗಲ್ಲ ಬಿಡು. ಕೆಲವ್ ಸಲಿ ಬರ್ತಾನೆ ಇಲ್ಲಾಂದ್ರೆ ಇಲ್ಲ. ೨. ಅವ್ರು ಬರೋದೇನ್ ನೆಚ್ಕೆಯಿಲ್ಲ. ೩. ಕಡೇಗಾಲ್ದಲ್ಲಿ ಅವ್ರು ಪಾಪ ಅವನನ್ನ ತುಂಬಾ ನೆಚ್ಕೊಂಡಿದ್ರು(ಹಚ್ಕೊಂಡಿದ್ರು ಎಂಬ ಬಳಕೆಯೂ ಇದೆ). ೪. ಕರೆಂಟ್ದೇನ್ ನೆಚ್ಗೆಯಿಲ್ಲ. ಮುಂತಾದವು.....ನೆಚ್ಚು ಎಂಬುದನ್ನು ನಂಬಿಕೆ, ವಿಶ್ವಾಸವಿಡು ಎನ್ನುವ ಅರ್ಥದಲ್ಲಿ ಹೆಚ್ಚು ಬಳಸುತ್ತೇವೆ. ಕೆಳಗೆ ಪೂರಕ ಓದಿನಲ್ಲಿ ನೆಚ್ಚು ಪದದ ಲಿಂಕ್ ನೀಡಿದ್ದೇನೆ. ಕವಲಿಯವರ ಕಸ್ತೂರೀ ಕೋಶದಲ್ಲಿ ನಚ್ಚು(ಕ) = ನಂಬು, ವಿಶ್ವಾಸವಿಡು, ಅಪೇಕ್ಷಿಸು, ಆಶ್ರಯಿಸು, ಅಪೇಕ್ಷೆ, ನಂಬಿಕೆ, ವಿಶ್ವಾಸ. ಎಂಬುದಾಗಿಯಿದೆ.

ನೆಚ್ಚು, ನೆರ್ಚು ನೆರವು ಎಂಬುದರ ರೂಟ್ ನೆರ್. ಅದನ್ನು ಪಾರಿಭಾಷಿಕವಾಗಿ ಹೀಗೆ ಬಳಸಬಹುದು. ನೀವು ಇನ್ನೊಂದು ಗಮನಿಸಿರಬಹುದು. ಧಾರವಾಡ ಕಡೆ, ಮಾಡು ಎನ್ನುವುದಕ್ಕೆ ಹಚ್ಚು ಎನ್ನುತ್ತಾರೆ. ಫೋನ್ ಹಚ್ಚು ಎಂಬುದಾಗಿ.
ನೆಚ್ಚುರುಕು = ನೆರ್ + ಚುರುಕು = ನೆಚ್ಚುರುಕು (ಬೇಗ ಬೇಗ ಮಾತನಾಡುವಾಗ ನೆಚ್ಚುರ್ಕು ಅಂತಾಗುತ್ತದೆ)
ಹಚ್ಚುರುಕು = ಹಚ್ + ಚುರುಕು = ಹಚ್ಚುರುಕು or ಚುರುಕುಹಚ್ಚು -> ಅಥವಾ ಹೆಚ್ಚುರುಕು ಯಾಕೆ ಬೇಡ Eye-wink (ಬೇಗ ಬೇಗ ಮಾತನಾಡುವಾಗ ಹೆಚ್ಚುರ್ಕು, ಚುರ್ಕ್-ಹಚ್ಚು ಅಂತಾಗುತ್ತದೆ)-> ಹಚ್ಚಿದ ಚುರುಕುತನ-> ಚುರುಕುತನ ಹಚ್ಚೋದು.

ಹೀಗೆ ಕನ್ನಡದಲ್ಲಿ ಪ್ರತಿಯೊಂದಕ್ಕೂ ಕಾನ್ಪೆಪ್ಚುಯಲೈಸೇಷನ್ ಮಾಡಲು. ಆದರೆ ನಾವುಗಳು ಓವಿ ಎಚ್ಚರವಹಿಸಬೇಕು ಮತ್ತು ಕನ್ನಡದ ವಿಷಯದಲ್ಲಿಯೂ ಸ್ವಲ್ಪ ಓಪನ್ ಆಗಿರಬೇಕು ಅಷ್ಟೇ.

ಪೂರಕ ಓದು.
೧. ನೆರ್ಚು ನೆಚ್ಚು ಪದದ ಬಗ್ಗೆ ದ್ರಾವಿಡ ಪದಕೋಶದ ವಿವರಣೆ.
೨. ಚುರುಕು ಪದದ ವಿವರಣೆ

ಕುಚೇಷ್ಟಗೆ
robot - ಸಂಸ್ಕೃತದಲ್ಲಿ ಯಂತ್ರಮಾನವ, ಕನ್ನಡದಲ್ಲಿ ಏನು ?
ಮಕ್ಕಿಕಾಮಕ್ಕಿ ಓದುವನಂ ಆ ಕುಡ್ಮಿ,
ಪೋಲಿ ಅಲಿಯುವಂ ಊ ಪೊರ್ಕಿ,
ಪೇಳ್ದ ಕೆಲಸವಂ ಚೆಂಗೈವನು ನಮ್ಮ ಈ ಚುರ್ಕಿ Eye-wink

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ By: ASHOKKUMAR (3 replies) April 23, 2007 - 8:13am
  • ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ By: Sunil Jayaprakash (Apr 24 2007 - 10:21pm)
    • ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ By: mahesha (Apr 25 2007 - 10:39am)
    • ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ By: ASHOKKUMAR (Apr 24 2007 - 11:22pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 5:17pm
ಇನ್ನಷ್ಟು


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator