~
ಉ:
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: veena (May 11 2007 - 6:11pm)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: mahesha (May 11 2007 - 6:15pm)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: ವೈಭವ (Apr 23 2007 - 11:51pm)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: hamsanandi (Apr 24 2007 - 1:18am)
- ಉ: By: anivaasi (Apr 24 2007 - 3:35am)
- ಉ: By: ವೈಭವ (Apr 24 2007 - 4:54am)
- ಉ: By: anivaasi (Apr 24 2007 - 7:06am)
- ಉ: By: hamsanandi (Apr 24 2007 - 11:34pm)
- ಉ: By: anivaasi (Apr 25 2007 - 2:55am)
- ಉ: By: ಶಿವ (Apr 26 2007 - 5:43pm)
- ಉ: By: shreekant.mishrikoti (Apr 27 2007 - 12:28pm)
- ಉ: By: ಶಿವ (Apr 27 2007 - 9:40pm)
- ಉ: By: mahesha (Apr 27 2007 - 1:29pm)
- ಉ: By: shreekant.mishrikoti (Apr 27 2007 - 12:28pm)
- ಉ: By: ಶಿವ (Apr 26 2007 - 5:43pm)
- ಉ: By: ವೈಭವ (Apr 24 2007 - 11:38pm)
- ಉ: By: ASHOKKUMAR (Apr 25 2007 - 12:05am)
- ಉ: By: anivaasi (Apr 25 2007 - 2:55am)
- ಉ: By: hamsanandi (Apr 24 2007 - 11:34pm)
- ಉ: By: anivaasi (Apr 24 2007 - 7:06am)
- ಉ: By: ವೈಭವ (Apr 24 2007 - 4:54am)
- ಉ: By: anivaasi (Apr 24 2007 - 3:35am)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: hamsanandi (Apr 24 2007 - 1:18am)

RSS:
ಉ:
ವೈಭವ ಮತ್ತು ಅನಿವಾಸಿ ಅವರೆ, ಮೊದಲು ನಾನು ಬರೆದ ಮಾತನ್ನು ಸ್ವಲ್ಪ ಬದಲಾಯಿಸಬೇಕಾಗುತ್ತೆ
ನೀವು ಹೇಳಿದ್ದೂ ಸರಿ, ನಾನು ಹೇಳಿದ್ದೂ ಸರಿ!
ಎಲ್ಲ ಹರಿದಾಸರ ಮೂಲಭೂತ ಮೌಲ್ಯಗಳು ಒಂದೇ ಆದುದ್ದರಿಂದ, ಒಂದೇ ತರಹದ ರಚನೆಗಳನ್ನು ಅವರು ಮಾಡಿದ್ದರೂ ಆಶ್ಚರ್ಯವಿಲ್ಲ. ನಾನು ಇಲ್ಲಿಯವರೆಗೆ ತಿಳಿದಿದ್ದ ಎಲ್ಲರು ಮಾಡುವುದು ಎಂಬ ರಚನೆ ಕನಕದಾಸರದ್ದು. ಆದರೆ, ಸ್ವಲ್ಪ ಹುಡುಕಿ ನೋಡಲಾಗಿ, ಪುರಂದರ ದಾಸರದ್ದೂ ಆ ರೀತಿ ಒಂದು ರಚನೆ ಇದೆ ಎಂದು ತಿಳಿದುಬಂತು.
ಎಲ್ಲರಿಗೂ ಅನುಕೂಲವಾಗಲಿ ಎಂದು ಎರಡನ್ನೂ ಇಲ್ಲಿ ಬರೆದ್ದೇನೆ. ನನಗೆ ತಿಳಿದ ಮಟ್ಟಿಗೆ, ಕನಕದಾಸರ ರಚನೆ ಸ್ವಲ್ಪ ಹೆಚ್ಚಾಗಿ ಪ್ರಚಲಿತದಲ್ಲಿದೆ. (ಸಾಧಾರಣವಾಗಿ, ಎಲ್ಲಾ ಚರಣಗಳನ್ನೂ ಹಾಡುವುದಿಲ್ಲ)
ಎಲ್ಲರು ಮಾಡುವುದು ಹೊಟ್ಟೆಗಾಗಿ - ಕನಕದಾಸರು
ಪಲ್ಲವಿ:
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ
ಚರಣಗಳು:
ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಬೆಲ್ಲದಂತೆ ಮಾತನಾಡಿ ಎಲ್ಲರನು ಮರಳುಮಾಡಿ
ಸುಳ್ಳು ಬೊಗಳಿ ತುಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷಂಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್‍ಬಲಗೂಡಿ
ಚಂದದಿಂದ ಮೆರೆವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಉನ್ನತ ನೆಲೆಯಾದಿ ಕೇಶವನ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕ್ಕಾಗಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ - ಪುರಂದರದಾಸರು
ಪಲ್ಲವಿ:
ಎಲ್ಲರು ಮಾಡುವುದು ಹೊಟ್ಟಗಾಗಿ ಗೇಣು ಬಟ್ಟೆಗಾಗಿ
ಅನುಪಲ್ಲವಿ:
ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ
ಚರಣಗಳು:
ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ ದೊಡ್ಡ ಮಲ್ಲರೊಡನಾಡುವುದು ಹೊಟ್ಟೆಗಾಗಿ
ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ
ದೊರೆತನ ಮಾಡುವುದು ಹೊಟ್ಟೆಗಾಗಿ ಕರಿ ತುರಗವೇರುವುದು ಹೊಟ್ಟೆಗಾಗಿ
ದುರಿತವ ಮಾಡುವುದು ಹೊಟ್ಟೆಗಾಗಿ ಸಿರಿ ಹರಿಯ ಭಜಿಸುವುದು ಮುಕ್ತಿಗಾಗಿ
ಬೆಟ್ಟವ ಹತ್ತುವುದು ಹೊಟ್ಟೆಗಾಗಿ ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ
ದಿಟವಾಗಿ ನಮ್ಮ ಶ್ರೀ ಪುರಂದರ ವಿಠಲನ್ನ ಧ್ಯಾನವು ಮುಕ್ತಿಗಾಗಿ
-ಹಂಸಾನಂದಿ