ಬೃಹತ್ ಮುಂಬೈ ನ ೨೫೫ ಅಡಿ ಎತ್ತರದ ಗೋಪುರದ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡವನ್ನು ಕಟ್ಟಿದ ಶಿಲ್ಪಿ, ಫ್ರೆಡರಿಕ್ ವಿಲಿಯಮ್ಸ್ ಸ್ಟಿವೆನ್ಸ್ ; ೧೮೯೩ ರಲ್ಲಿ ಬೀ. ಎಮ್. ಸೀ ಕಟ್ಟಡವನ್ನು ಕಟ್ಟಿ ತಮ್ಮ ಸರ್ಕಾರಕ್ಕೆ ಒಪ್ಪಿಸಿದರು. ಇವರು ಹುಟ್ಟಿದ್ದು, ನವೆಂಬರ್, ೧೧ ರಂದು, ೧೮೪೭ ರಲ್ಲಿ- ಇಂಗ್ಲೆಂಡಿನ ಬಾತ್ ಎಂಬ ಸ್ಥಳದಲ್ಲಿ. ೧೮೬೭ ರಲ್ಲಿ ಇವರು ಪುಣೆಯಲ್ಲಿ ಸಿ. ಪಿ. ಡಬ್ಲ್ಯು ಆಫೀಸಿನಲ್ಲಿ ಇಂಜಿನಿಯರ್ ಆಗಿ ಕೆಲಸಮಾಡುತ್ತಿದ್ದರು. ಒಂದು ವರ್ಷದ ನಂತರ ಬೊಂಬಾಯಿಯ [ G.I.P. Railways ] ರೈಲ್ವೆಯ ಆಫೀಸಿನ ಬ್ರಿಟಿಷ್ ಸರ್ಕಾರದ ಅಧಿಕೃತ ಇಂಜಿನಿಯರ್ ಆಗಿ ನೇಮಿಸಲ್ಪಟ್ಟರು. ಅವರಿಗೆ ವಿಕ್ಟೋರಿಯಾ ಟರ್ಮಿನಸ್ ನಂತಹ ಭವ್ಯ, ಮತ್ತು ಬೃಹತ್ ಕಟ್ಟಡದ ನಿರ್ಮಾಣದ ಕೆಲಸವನ್ನು ವಹಿಸಿಕೊಡಲಾಗಿತ್ತು. ಇವರು ಆಗಿನ ಬೊಂಬಾಯಿನಲ್ಲಿ ನಿರ್ಮಿಸಿದ ಹೆಸರಾಂತ ಕಟ್ಟಡಗಳು ಹೀಗಿವೆ :
೧. ವಿಶ್ವವಿಖ್ಯಾತ ವೀ ಟೀ ಕಟ್ಟಡ.
೨. ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಂ- ಈಗ ಅದು ಪೋಲಿಸ್ ಆಯುಕ್ತದ ಪ್ರಮುಖ ಕಛೇರಿ.
೩. ಪಶ್ಚಿಮ ರೈಲ್ವೆಯ ಪ್ರಧಾನ ಕಛೇರಿ, ಚರ್ಚ್ಗೇಟ್. [B.B & C.I Railways ]
೪. ಓರಿಯೆಂಟಾಲ್ ಲೈಫ್ ಇನ್ಸೂರೆಂಸ್ ಆಫೀಸ್, ಹುತಾತ್ಮ ಚೌಕ್/ ಫ್ಲೋರಾ ಫೌಂಟನ್.
ಫ್ರೆ. ವಿಲಿಯಮ್ಸ್, ಮಲೇರಿಯ ರೋಗದಿಂದ ನರಳಿ, ಮಾರ್ಚ್ ೩ ರಂದು, ೧೯೦೦ ನೇ ಇಸವಿಯಲ್ಲಿ ಆಗಿನ ಬಾಂಬೆ ನಗರದಲ್ಲೇ ಮರಣ ಹೊಂದಿದರು. ಅವರ ಪಾರ್ಥಿವ ದೇಹವನ್ನು ಬೊಂಬಾಯಿನ ಸಿವ್ರಿ, ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.
ಉ: