~
ಉ: ಹಾಲು-ಹುಡುಗ-ಹಸು ಇತ್ಯಾದಿ..
- ಉ: By: mahesha (Apr 23 2007 - 8:20pm)
- ಉ: By: ಸಂಗನಗೌಡ (Apr 28 2007 - 12:40am)
- ಉ: By: ವೈಭವ (Apr 26 2007 - 11:55am)
- ಉ: By: mahesha (Apr 26 2007 - 11:59am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 22 2007 - 5:57pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 25 2007 - 11:51pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 26 2007 - 9:45am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:36am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:46pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 26 2007 - 11:06am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:45pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:46am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:36am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 26 2007 - 9:45am)
- ಉ: By: mahesha (Apr 23 2007 - 7:59pm)
- ಉ: By: skakkilaya (Apr 23 2007 - 9:30pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 23 2007 - 12:19pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 25 2007 - 11:51pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 21 2007 - 10:36am)

RSS:
ಉ: ಹಾಲು-ಹುಡುಗ-ಹಸು ಇತ್ಯಾದಿ..
ದನಗಳು ಮತ್ತಿತರ ಸಾಕುಪ್ರಾಣಿಗಳ ಬಗ್ಗೆ ಮನುಷ್ಯನಿಗಿರುವ ಮಮತೆ ಬಹಳ ಹಳೆಯದು, ಎಷ್ಟಾದರೂ ನಾವೇ ಸಾಕಿದ ಪ್ರಾಣಿಗಳಲ್ಲವೆ? ದನವೇ ಇರಲಿ, ನಾಯಿಯೇ ಇರಲಿ, ಸಾಕುವವರು ಅವನ್ನು ತಮ್ಮ ಕುಟುಂಬದ ಸದಸ್ಯರೆಂಬಂತೆಯೇ ಕಾಣುತ್ತಾರೆ, ಅದು ಸಹಜ ಧರ್ಮ, ತಮಾಷೆಯ ವಿಚಾರವೂ ಅಲ್ಲ. ಆದರೆ, ಪ್ರಾಣಿಗಳ ಮೇಲಿನ ಪ್ರೀತಿಯು ವೈಯಕ್ತಿಕ ನೆಲೆಯನ್ನು ಮೀರಿ ರಾಜಕೀಯದ ವಸ್ತುವಾದಾಗ, ಸಾಮಾನ್ಯ ಪ್ರಜ್ಞೆ ಮರೆತು, ವೈಚಾರಿಕತೆ ಸತ್ತು ಹೋದಾಗ ಮಾತ್ರ ಈ ವಿಚಾರಗಳು ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಬಲ್ಲ ಹುಚ್ಚುತನವಾಗುತ್ತವೆ. ಹಸುವಿನ ಮೂತ್ರವು ಕಶ್ಮಲವೆಂದು ನಾನು ಹೇಳಿರುವುದು ತಮಾಷೆಗಾಗಿಯಲ್ಲ, ಅದು ನಿಜಕ್ಕೂ ಕಶ್ಮಲವೇ, ಅದರಲ್ಲಿ ಯಾರಿಗಾದರೂ ಯಾಕಾಗಿ ಸಂಶಯ ಹುಟ್ಟಬೇಕು? ದನದ ಮೂತ್ರವು ಕಶ್ಮಲವಲ್ಲದಿದ್ದರೆ, ಮನುಷ್ಯನ ಹಾಗೂ ಅವನಂತೆ ಬೇರಾವ ಪ್ರಾಣಿಯ ಮೂತ್ರವೂ (ಹಾಗೆಯೇ ಮಲವೂ) ಕಶ್ಮಲವಲ್ಲ ಎನ್ನಬಹುದು. ಹಾಗಾದರೆ ಈ ವಿಸರ್ಜಿತ ವಸ್ತುಗಳನ್ನು ಕಲೆಹಾಕಿ, ನಗರದಾಚೆಗೆ ಹರಿಯಿಸಿ ಅವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಒಳಚರಂಡಿ ವ್ಯವಸ್ಥೆಯೇ ಮುಂತಾದ ಏರ್ಪಾಟುಗಳ ಅಗತ್ಯವೇ ಇಲ್ಲವಲ್ಲ?
ಇನ್ನು ಮೂತ್ರದ ಔಷಧೀಯ ಗುಣಗಳ ಬಗ್ಗೆ. ಮನುಷ್ಯನ ಮೂತ್ರಕ್ಕೂ ಔಷಧೀಯ ಗುಣಗಳಿವೆ, ಗೊತ್ತೆ? ಹೃದಯಾಘಾತವಾದಾಗ ಚುಚ್ಚುವ ಯೂರೋಕೈನೇಸ್ ಎಂಬ ಔಷಧವನ್ನು ಮನುಷ್ಯನ ಮೂತ್ರದಿಂದಲೇ ಪ್ರತ್ಯೇಕಿಸಿ ತಯಾರಿಸಲಾಗುತ್ತದೆ. ಹಾಗೆಂದೊಡನೆ, ಮನುಷ್ಯನ ಮೂತ್ರವನ್ನೇ ಕುಡಿಯುತ್ತಿದ್ದರೆ ಹೃದಯಾಘಾತವೇ ಆಗುವುದಿಲ್ಲ ಎನ್ನಲಾಗುತ್ತದೆಯೇ? ಮೂತ್ರಜನಕಾಂಗದಿಂದ ಸ್ರವಿಸಲಲ್ಪಟ್ಟ ಮೂತ್ರವು ಎಲ್ಲೂ ಹೆಪ್ಪುಗಟ್ಟದೆಯೇ ಸಲೀಸಾಗಿ ವಿಸರ್ಜನೆಗೊಳ್ಳುವಂತಾಗಲಿಕ್ಕಾಗಿಯೇ ಮೂತ್ರದಲ್ಲಿ ಯೂರೋಕೈನೇಸ್ ಇರುತ್ತದೆ. ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ನಾವಿಂದು ಅದನ್ನು ಬಳಸುತ್ತಿದ್ದೇವೆ. ಹಾಗಾದರೆ, ಪ್ರಾಣವನ್ನು ಉಳಿಸುವ ಮನುಷ್ಯನ ಮೂತ್ರವೂ ಪರಮ ಪಾವನವೆಂದು ಪೂಜಿಸಬಹುದಲ್ಲವೆ? ಯಾವುದೇ ವಿಚಾರವಾದರೂ ತನ್ನ ಮಿತಿಯನ್ನು ದಾಟಿದಾಗ ಗೊಂದಲವಾಗುವುದು ಸಹಜವೇ.
ಭೂಮಿಯ ತಾಪಮಾನದ ಏರಿಕೆಗೆ ಗೋವುಗಳೇ ಕಾರಣವೆಂದು ನಾನೆಲ್ಲೂ ಹೇಳಿಲ್ಲ. ಅಮೆರಿಕಾದ ಮಾನವ ವಿರೋಧಿ ನೀತಿಗಳನ್ನು ಬೆಂಬಲಿಸಿಯೂ ಇಲ್ಲ. ಅಮೆರಿಕಾದಂತಹ ಅಭಿವೃಧ್ಧಿ ಹೊಂದಿರುವ (ಹಾಗೆ ಅಂದುಕೊಳ್ಳವ) ರಾಷ್ಟ್ರಗಳಲ್ಲಿರುವ ವಾಹನಗಳು, ಕಾರ್ಖಾನೆಗಳು, ಹವಾನಿಯಂತ್ರಕಗಳು ಇವೇ ಮುಂತಾದುವೆಲ್ಲವೂ ಭೂಮಿಯ ತಾಪಮಾನದ ಏರಿಕೆಗೆ ಕಾರಣಗಳೆನ್ನುವುದರಲ್ಲಿ ಯಾರಿಗೂ ಯಾವುದೇ ಸಂಶಯಗಳಿಲ್ಲ. ಆದರೆ, ಭಾರತ, ಬ್ರೆಜಿಲ್ ಗಳಂತಹ ಅಭಿವೃಧ್ಧಿಶೀಲ ರಾಷ್ಟ್ರಗಳಲ್ಲಿ ಜಾನುವಾರುಗಳಿಂದಾಗಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತಿರುವ ಬಗ್ಗೆ ಮತ್ತು ಇವು ವಾಹನಗಳಿಂದಾಗುತ್ತಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ಬಗ್ಗೆ ವಿಶ್ವಸಂಸ್ಥೆಯ ವರದಿಯು ಎಚ್ಚರಿಕೆಯನ್ನು ನೀಡಿದೆ. ಈ ವರದಿಯನ್ನು ತಯಾರಿಸಿದವರ ಗುಂಪಿನಲ್ಲಿ ಎಲ್ಲ ದೇಶಗಳವರೂ ಇದ್ದಾರೆ, ನಮ್ಮವರೂ ಇದ್ದಾರೆ (ಇಲ್ಲಿ ನೋಡಿ: http://www.virtualcentre.org/in/index.htm ). ವರದಿಗಳು ನಮಗೆ ಒಪ್ಪಿಗೆಯಾಗದಿದ್ದರೆ ಅದರ ಹಿಂದೆ ಅಮೆರಿಕಾದ ಕೈವಾಡವನ್ನು ಕಾಣುವ ನಮಗೆ, ಗೋಮೂತ್ರದ ಸದ್ಗುಣಗಳನ್ನು ಸಾಬೀತು ಪಡಿಸಲು ಅಮೆರಿಕದ ಪೇಟೆಂಟಿನ ಅಗತ್ಯವೇಕೆ ಬರುತ್ತದೆಯೆಂಬುದು ನನಗರ್ಥವಾಗದ ವಿಚಾರ.
ಭಾರತೀಯ ಪರಂಪರೆಯ ಭವ್ಯತೆಯ ಬಗ್ಗೆ, ಮನುಕುಲದ ಬೆಳವಣಿಗೆಯ ವಿವಿಧ ಮಜಲುಗಳಿಗೆ ಭಾರತದ ಕೊಡುಗೆಯ ಬಗ್ಗೆ ಅತ್ಯಂತ ಹೆಮ್ಮೆ ಪಡುವವರಲ್ಲಿ ನಾನೂ ಒಬ್ಬನಿದ್ದೇನೆ. ಆದರೆ ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ಸಂಗತಿಗಳು ಗೋಮೂತ್ರದ ಔಷಧೀಯ ಗುಣಗಳಿಗಷ್ಟೇ ಸೀಮಿತವಾಗಿದ್ದರೆ ಅದೊಂದು ದುರಂತವಷ್ಟೇ ಅನ್ನದೆ ಬೇರೆ ದಾರಿಯಿಲ್ಲ. ಆಯುರ್ವೇದದಲ್ಲಿ ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಹೇಳಿರುವಂತೆಯೇ, ಗೋಮಾಂಸದ ಒಳಿತುಗಳ ಬಗೆಗೂ ಹೇಳಿದೆಯೆನ್ನುವುದನ್ನು ನಾವು ಅಡಗಿಸಿಡುವುದೇಕೆ? ಇದೂ ಒಂದು ಹುನ್ನಾರವಲ್ಲವೇ?
ಈ ಲೇಖನವನ್ನು ಓದಬಹುದೇನೋ?
DN Jha. Paradox of the Indian Cow. ಅದು ಇಲ್ಲಿದೆ: http://www.indowindow.net/sad/article.php?child=17&article=11