ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: muralihr (Apr 27 2007 - 10:21pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: ವೈಭವ (Apr 27 2007 - 7:16am)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: HV SURYANARAYANA SHARMA (Aug 13 2007 - 4:01pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: ವೈಭವ (Aug 13 2007 - 5:14pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: HV SURYANARAYANA SHARMA (Aug 13 2007 - 4:01pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: benaka (Apr 27 2007 - 2:18am)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: Sunil Jayaprakash (Nov 12 2007 - 10:46am)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: Sunil Jayaprakash (Apr 27 2007 - 11:13am)

RSS:
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
@ಬೆನಕರೆ,
"ಧಿಷಣ" ಪದದ ವಿವರಣೆ ನೀಡಿದ್ದು ತುಂಬಾ ನೆರವಿಗೆ ಬಂತು. ಈ "ಆತ್ಮಧಿಷಣ" ~= 'ಆತ್ಮವನ್ನು ಬೇರೆಯೆಂದು ವಿಚಾರಮಾಡುವ ಬುದ್ಧಿವಂತಿಕೆ' ಎಂಬ ವಿಚಾರ ಮತ್ತು ವಿವರಣೆ ತುಂಬಾ ನೆಚ್ಚುಗೆಯಾಯಿತು. ಇದನ್ನು ಎಲ್ಲರಿಗೂ ತಿಳಿಸಿಕೊಟ್ಟದ್ದಕ್ಕಾಗಿ ತುಂಬಾ ನನ್ನಿ. ಹೀಗೆಯೇ ನಿಮ್ಮಲ್ಲಿರುವ ಜ್ಞಾನವನ್ನು ನಮ್ಮೆಲ್ಲರೊಡನೆ ಹಂಚಿಕೊಳ್ಳುತ್ತಿರಿ ಎಂದು ಕೇಳಿಕೊಳ್ಳುವೆ.
@ವೈಭವ,
ನಿಜಹೇಳಬೇಕೆಂದರೆ ಈ ವಾಕ್ಯದ ಪೂರ್ಣ ಇಂಟರ್ಪ್ರಿಟೇಷನ್ ನನ್ನಿಂದ ಈಗ ನಿಜಕ್ಕೂ ಸಾಧ್ಯವಿಲ್ಲ
"ಅನುಭವಕ್ಕೆ" ಬಂದ ಅಥವಾ "ಅನುಭವಕ್ಕೆ ಬಂದಿರದಿದ್ದರೂ ಕಲ್ಪನೆಗೆ ನಿಲುಕುವ" ಕೆಲವನ್ನು ವಿವರಿಸಬಹುದು. ಮಿಕ್ಕವುಗಳನ್ನು ವಿವರಿಸುವದು ಕಷ್ಟ. ಅಂದ ಹಾಗೆ ಕುತೂಹಲವಿದ್ದಾಗ, ಕೆಲವೊಮ್ಮೆ ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ ಶಿವಾನಂದಲಹರೀ, ಸೌಂದರ್ಯಲಹರೀ ಮುಂತಾದವುಗಳ ಬಗ್ಗೆ ಉಪನ್ಯಾಸಗಳು ನಡೆಯುತ್ತಿರುತ್ತವೆ. ಬಿಡುವಿದ್ದಾಗ ಅವುಗಳಲ್ಲಿ ಭಾಗವಹಿಸಿ. ಏನಾದರೂ ಉತ್ತರ ಸಿಗಬಹುದು 
ಅಂದಹಾಗೆ ನಮ್ಮೆಲ್ಲರಿಗೂ ಕಿವಿಮಾತು, ಉಪನ್ಯಾಸಗಳಿಗೆ ಮುಂಚೆ ಇವುಗಳನ್ನು ನಾವುಗಳೇ ಓದಿ, ನಮಗೆ ಅರ್ಥವಾಗುವಷ್ಟನ್ನು ಅರ್ಥಮಾಡಿಕೊಂಡು ನಂತರ ಪಾಲ್ಗೊಳ್ಳುವದು ಉತ್ತಮ, ಆಗ ಗ್ರಂಥಗಳ ಆಳ ಅರಿವಿಗೆ ಬರುತ್ತದೆ ಮತ್ತು ಹೆಚ್ಚು ನಾಟುತ್ತದೆ.