ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: anivaasi (May 5 2007 - 3:46am)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: hamsanandi (May 5 2007 - 4:53am)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: anivaasi (May 6 2007 - 4:17am)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: kishorpatwardhan (May 7 2007 - 9:31am)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: anivaasi (May 6 2007 - 4:17am)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: hamsanandi (May 5 2007 - 4:53am)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: mahesha (May 4 2007 - 8:55pm)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: hamsanandi (May 4 2007 - 11:24pm)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: mahesha (May 6 2007 - 12:02pm)
- ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು By: hamsanandi (May 4 2007 - 11:24pm)
- ರಾಹು ಕೇತು... By: (Oct 10 2005 - 6:13pm)
- idu prove madokke alla By: koumodiki (Oct 11 2005 - 12:32pm)
- ಯಾವ ರೀತಿಯ metaphor ಇದೆ By: Rohit (Oct 11 2005 - 1:43pm)
- idu prove madokke alla By: koumodiki (Oct 11 2005 - 12:32pm)



RSS:
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ನನ್ನ ಸಂದೇಹಕ್ಕೆ ಉತ್ತರಿಸಿದ್ದಕ್ಕೆ ವಂದನೆಗಳು.
"ಹಿಂದಿನ" definition ತುಂಬಾ ಸಡಿಲವಾಗಿತ್ತು ಎಂಬುದನ್ನು ನಿಮ್ಮ ಮಾತು ಸ್ಪಷ್ಟಪಡಿಸಿತು. ಈಗಿನಂತಯೇ ಅವರ definition ಇರಬೇಕಿತ್ತು ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ ಖಗೋಳ ವಿಜ್ಙಾನದ ಪ್ರಗತಿಗೆ ಗಣಿತ ವಿಜ್ಙಾನ, ಭೌತವಿಜ್ಙಾನಗಳೂ ಪೂರಕವಾಗಿ ನಿಲ್ಲಬೇಕಾಗುತ್ತದೆ.
ಇಲ್ಲ. ಇನ್ನೊಂದು ಬಿಂದುವಿಗೆ ಹೋಲಿಸಬೇಕು. ಆ ಬಿಂದುವೂ ಚಲಿಸುತ್ತಿರಬಹುದು. ಅದು ಸಾಪೇಕ್ಷ ಚಲನೆಯಾಗುತ್ತದೆ. ಖಗೋಳ ವಿಜ್ಙಾನದ ಪ್ರಗತಿ "ಭಾಸವಾಗು"ವುದಕ್ಕೆ ನಿಲ್ಲಬಾರದಲ್ಲವೆ? ಎಲ್ಲವೂ ಸುತ್ತುತ್ತಿದೆ ಎನ್ನುವ ಮಾತು ಗ್ರಹ, ನಕ್ಷತ್ರಗಳ ಚಲನೆಯ ವಿಷಯದಲ್ಲಿ ಸರಿಯಲ್ಲ ಅನಿಸುತ್ತದೆ. ಯಾಕೆಂದರೆ, ವಿಶ್ವವೇ ಹಿಗ್ಗುತ್ತಿದೆ/ಕುಗ್ಗುತ್ತಿದೆ ಎಂಬುದು ಸತ್ಯವಾದರೂ ಚಲಿಸುವ/ಚಲಿಸದಿರುವ ಕಾಯಗಳ ವಿಚಾರದಲ್ಲಿ ಆ ಸತ್ಯ ಸಹಾಯ ಮಾಡುವುದಿಲ್ಲ.
ಆರ್ಯಭಟನ ವಿಷಯ ಪ್ರಸ್ತಾಪಿಸಿದ್ದೀರಿ. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ, ಚರಕ, ಶೂಶ್ರುತ ಇವರೆಲ್ಲರ ಕೊಡುಗೆಯನ್ನು ವಸ್ತುನಿಷ್ಥವಾಗಿ, ಜಾಗತಿಕ ವಿಜ್ಙಾನದ ಸನ್ನಿವೇಶದಲ್ಲಿ ವಿವೇಚಿಸುವ ಯಾವುದಾದರು ಪುಸ್ತಕವಿದ್ದರೆ ತಿಳಿಸಿ, ಓದುವ ಇಷ್ಟವಿದೆ.
ಕಡೆಯದಾಗಿ, ದುರಾದೃಷ್ಟ ಎಂದು ಕೈಚೆಲ್ಲುವುದಕ್ಕಿಂತ, ಈವತ್ತೂ ಕೂಡ ಧರ್ಮ ಮತ್ತು ವಿಜ್ಙಾನದ ನಡುವಿನ ಸಂಬಂಧವನ್ನು ಅವಲೋಕಿಸುವುದು ಹೆಚ್ಚು ಪಾಸಿಟಿವ್ ಅಲ್ಲವೆ? ಪ್ರಗತಿಯ ಮುಖ್ಯ ಅಂಗವಾದ ತಪ್ಪೊಪ್ಪಿಗೆ ಮತ್ತು ತಿದ್ದುಪಡಿಯನ್ನು ಈವತ್ತೂ ಮಾಡಿಕೊಳ್ಳದೆ ಬೇರೆ ಬೇರೆ ಭಾಷೆ ಬಳಸಿ ಸಮರ್ಥಿಸುತ್ತಾ ಹೋದರೆ ನಮಗೇ ನಷ್ಟವಲ್ಲವೆ?
"ಆರ್ಯಭಟನ ದಾರಿ" ಮಸುಕಾಗದ ಹಾಗೆ ನೋಡಿಕೊಳ್ಳುವ ಜವಾಬ್ಬಾರಿ ನಮ್ಮೆಲ್ಲರದೂ.