~
ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???
- ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: kishorpatwardhan (May 13 2007 - 11:03pm)
- ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: mahesha (May 14 2007 - 10:53am)
- Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: H.S.R.Raghavendra Rao (Mar 15 2007 - 11:03am)
- Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: hamsanandi (Mar 15 2007 - 11:25am)
- Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: ವೈಭವ (Mar 15 2007 - 9:08am)
- ತಮಿಳು ಚಂಗ By: mahesha (Mar 15 2007 - 11:10am)
- Re: ತಮಿಳು ಚಂಗ By: hamsanandi (Mar 15 2007 - 11:37am)
- ದನಿಗೂಡು: ತಮಿಳು ಚಂಗ...ಇಂಗ್ಲೀಷು ಕೂಡಾ ಹಾಗೇ ಅಲ್ವಾ? By: Shyam Kishore (Mar 15 2007 - 11:17am)
- ತಮಿಳು ಚಂಗ By: mahesha (Mar 15 2007 - 11:10am)
- ಪ್ರತಿಕ್ರಿಯೆ: ಕನ್ನಡದ ಆಡು ಮಾತಿಗೂ...ಸರ್ಕಾರೀ ಕನ್ನಡ By: Shyam Kishore (Mar 15 2007 - 2:49am)
- ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 9:02am)
- ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: Shyam Kishore (Mar 15 2007 - 10:21am)
- Re: ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 10:49am)
- ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: Shyam Kishore (Mar 15 2007 - 10:21am)
- ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 9:02am)

RSS:
ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???
ಕಿಶೋರ್..
ಹಿಂದಿಯಲ್ಲಿ ಕಡಿಬೊಲಿ, ಬನಾರಸೀ, ಬೋಜಪುರಿ/ಬಿಹಾರಿ, ಮೈಥಿಲಿ( ಇದು ಹಿಂದಿಯೇ ಅಲ್ಲ ಅಂತಾರೆ ಕೆಲವರು ), ರಾಜಸ್ತಾನಿ, ಮಾಗಧಿ, ಬಾರಕ್ಕಡಿ, ಪಾಹಾಡೀ, ಇನ್ನೂ ಹಲವು ಬಗ್ಗೆಯವಿವೆ.
ಅಲ್ಲೂ ಈಗ ಮೈಥಿಲಿಗೆ recongised statusಗಾಗಿ ಹೋರಾಟ ಒಡರಿದೆ. "ಮಿಥಿಲಾಂಜಲ ಅಂನೋ ರಾಜ್ಯ ಮಾಡಿ ಅಲ್ಲಿಗೆ ಮೈಥಿಲಿಯನ್ನು ರಾಜ್ಯದ ನುಡಿ ಮಾಡಿ ಅಂದ ಅವರ ಬೇಡಿಕೆ."
ಇನ್ನೋ ಭೋಜಪುರಿ ಸಿನಿಮಾಗಳು ಈಗ ಜೋರಾಗಿ ನಡೇತಾ ಇವೆ ಅಲ್ವಾ!!! ಈ ನುಡಿಗೂ status ಗಾಗಿ ಹೋರಾಟ ನಡೇಬಹುದು.
ಈ ೪೮ ಹಿಂದಿಯವರಲ್ಲೀ ಕಿತ್ತಾಟ ನಮ್ಮದು ಸರಿಯಾದ ಹಿಂದಿ, ಇವರದು ಸರಿ ಎಂದು. ದೂರದರ್ಶನದಲ್ಲಿ ಒಮ್ಮೆ "ಹಿಂದಿ ದಿವಸ" ಒಂದು ಪ್ರೋಗ್ರಾಮ್ ಬಂದಿತ್ತು. ಹಿಂದಿಯ ಕೊರತೆ ಬಗ್ಗೆ..
ಅದರಲ್ಲಿ ನೀವು ಹೇಳಿದಂತೆ ಸಕ್ಕದ ಮತ್ತು ಉರ್ದುಗಳ ಮಾತು ಎದ್ದುವು. ಆದರೆ ಹಲವು ಹೇಳಿದು ಉರ್ದು ಓಕೆ. ಉರ್ದು ಇನ್ನೂ ನಮ್ಮ ಸುತ್ತಲ ಮಂದಿ ಮಾತಾಡ್ತಾರೆ. ಜೊತೆಗೆ ಉರ್ದು ಸರಳವಾಗಿದೆ.
ಆದರೆ ಉರ್ದು ಎಂದು ನೇರ ಪಾರಸೀ ಒರೆಗಳನ್ನು ಸುರಿಯುವದನ್ನು ಸರಿಯಲ್ಲ ಅಂದರೆ. ಹಾಗೆ
ಸಕ್ಕದದ ಬಗ್ಗೆಯಂತೂ ಒಬ್ಬರು "ನೀವು ಹೆಚ್ಚು ನೇರ ಸಂಸ್ಕೃತ ಹಾಕಿ ಬರೆದ ಯಾವ ಹಿಂದಿ ಹೊತ್ತಗೆಗಳನ್ನು ಮಂದಿ ಓದದೇ, ಉರ್ದು ಹೊತ್ತಗೆಗಳನ್ನೇ ಹೆಚ್ಚು ಹೆಚ್ಚು ಓದಲು ಹತ್ತಿದ್ದಾರೆ. ತುಸು ಸಂಸ್ಕೃತ ತಗ್ಗಿಸಿ" ಎಂದು ಹೇಳಿದರು.
ಆದರೆ ಇಲ್ಲಿ ವಿಸಯ ಅದಲ್ಲ. ಬರವಣಿಗೆಯ ಹಿಂದಿ, ಒಂದು ಆಡುಹಿಂದಿಗೆ ಹತ್ತಿರವಾಗಿಯೇ ಇದೆ. ಖಡಿಬೊಲಿಗೆ ಅಲ್ವಾ!!
ಆದರೆ ಕನ್ನಡದಲ್ಲಂತೂ ಬರೆದಂತೆ ಮಾತಾಡೋ ಮಂದಿ ಕಡಮೇ ಅಂದ್ರೆ ಕಡಮೇ.
===========================================================
ಮಂಗಳೂರಿನ ಕಡೆಯವರು ಕನ್ನಡವನ್ನು ಬರೆದಂತೆ ಮಾತಾಡ್ತಾರೆ ಅಂತ ಬಹಳ ಮಂದಿ ಅಂದುಕೊಂಡಿದ್ದಾರೆ. ಆದರೆ ಅದು ಹಾಗಿಲ್ಲ. ಅವರ ಮಾತು ಬರೆವಣಿಗೆಗೆ ತುಸು ಹತ್ತಿರವಿರಬಹುದು, ಆದರೆ ಹೆಚ್ಚಿಲ್ಲ.!!!
( ಅಲ್ಲಿ ಹೆಚ್ಚು ಮಂದಿಯ ಮನೆಮಾತು ತುಳು, ಕೊಂಕಣಿ, ಬ್ಯಾರಿ, ಮುಂತಾದವು, ಕನ್ನಡ ಕಡಮೆ ಅದಕ್ಕೆ. ಕನ್ನಡದ ಬಳಕೆ ಹೆಚ್ಚು ಆಪೀಸುಗಳಿಗೆ , ಸ್ಕೂಲ್ಗಳಿಗೆ ಅಸ್ಟೆ. ಅಲ್ಲಿ ಹಲವೆಡೆ ಆಟೋದೋರು ತುಳುವಲ್ಲೇ ಮಾತಾಡೋದು )