ಉ: ಬೆಣ್ಣೆಹೂವು ಮತ್ತು ಅಶ್ವಮೇಧ
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: ವೈಭವ (May 18 2007 - 9:19am)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: narendra (May 18 2007 - 8:00pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: anivaasi (May 18 2007 - 8:12am)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: narendra (May 18 2007 - 7:54pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: anivaasi (May 18 2007 - 8:10am)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: mahesha (May 17 2007 - 9:17pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: narendra (May 18 2007 - 12:02am)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: mahesha (May 18 2007 - 10:31am)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: narendra (May 18 2007 - 8:14pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: mahesha (May 18 2007 - 8:28pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: mahesha (May 18 2007 - 8:31pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: mahesha (May 18 2007 - 8:28pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: narendra (May 18 2007 - 8:14pm)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: mahesha (May 18 2007 - 10:31am)
- ಉ: ಬೆಣ್ಣೆಹೂವು ಮತ್ತು ಅಶ್ವಮೇಧ By: narendra (May 18 2007 - 12:02am)

RSS:
ಉ: ಬೆಣ್ಣೆಹೂವು ಮತ್ತು ಅಶ್ವಮೇಧ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನನ್ನ ಬರಹಕ್ಕೆ ಚುರುಕಿನ ಚುಟುಕಿನ ಓದು ಸಾಕು. ಕಾದಂಬರಿಯನ್ನು ಮಾತ್ರ ಅಗತ್ಯ ಓದಿ. ನನ್ನ ಬರಹದ ಒಂದು ಒಳ ಉದ್ದೇಶ ಅದೇ.
ಜಾತಿ ಜಾತಿಗಳೊಳಗಿನ ಕಲಹಗಳನ್ನು ಮತ್ತು ಧರ್ಮ ಧರ್ಮಗಳ ನಡುವಿನ ಕಲಹವನ್ನು ಒಂದೇ ರೀತಿಯಲ್ಲಿ ನೋಡುವುದು ಸರಿಯೆ? ನನಗೆ ಈ ಬಗ್ಗೆ ಅನುಮಾನಗಳಿವೆ. ಪರಸ್ಪರ ಜಗಳವಾಡುತ್ತಿರುವ ಜಾತಿಗಳವರೂ ಬೇರೆ ಧರ್ಮದವರ ಎದುರು ನಿಲ್ಲುವಾಗ ಒಂದಾಗಿ ನಿಂತ ಉದಾಹರಣೆಗಳಿಲ್ಲವೆ? ಮತ್ತು ಜಾತಿಗಳ ನಡುವಿನ ಜಗಳಗಳಿಗಿಂತ ಧರ್ಮಗಳ ನಡುವಿನ ಜಗಳಕ್ಕೆ ಸಂಕೀರ್ಣವಾದ ಕಾರಣ (`ರಾಜ' ಕಾರಣ?) ಗಳಿರುವಂತೆಯೂ, ಇಂಥ ಜಗಳಗಳಿಗೆ ಪ್ರಾಯೋಜಕರೂ, ಫಲಾನುಭವಿಗಳೂ ಎಲ್ಲ ಇರುವಂತೆಯೂ ಕಾಣುವುದಿಲ್ಲವೆ. ಜಾತಿ ಜಗಳಗಳು ಕೆಲ ಮಟ್ಟಿಗೆ ಸರಳವಾಗಿದ್ದವು ಅನಿಸುತ್ತದೆ. ಅಶೋಕರು ಕಾದಂಬರಿಯ ಕಾಲಮಾನಕ್ಕೆ ತಕ್ಕಂತೆ ಜಾತಿಜಗಳದ ವ್ಯಾಪ್ತಿಯಲ್ಲೇ ಕಾದಂಬರಿ ಹೆಣೆದಿದ್ದಾರೆ. ಬಹುಷಃ ನಲ್ವತ್ತು ಐವತ್ತು ವರ್ಷಗಳ ಹಿಂದೆ, ಅದೇ ಮುಖ್ಯವಿತ್ತು. ವಿಭಜನೆಯ ನಂತರವೇ ನಮ್ಮಲ್ಲಿ ಹಿಂದೂ ಮುಸ್ಲಿಂ ಭೇದ ತೀವೃವಾದಂತೆ ಕಾಣುತ್ತದೆ. ಒಂದೇ ಮನೆಯಲ್ಲಿದ್ದಾಗ ನಮ್ಮೊಳಗಿನ ಜಗಳವಾಗಿದ್ದು ಮುಂದೆ ನೆರೆಹೊರೆಯವರ ಜಗಳವಾದಾಗ ಅದಕ್ಕೆ ಹೆಚ್ಚು ಹೆಚ್ಚು ಆಯಾಮಗಳೊದಗಿದಂತೆ ಕಾಣುತ್ತದೆ. ಜಾತಿ ಜಗಳ ಮಾತ್ರ ಇವತ್ತಿಗೂ ಮನೆಯೊಳಗಿನ (ಧರ್ಮ ಇಲ್ಲಿ ಎರಡೂ ಜಾತಿಗೆ ಸಮಾನ ಅಂಶ ಆಗಿರುವುದರಿಂದ) ಜಗಳವಾಗಿಯೇ ಇದೆ. ದಲಿತರ ಪ್ರಶ್ನೆ ಬಂದಾಗ, ಕಂಬಾಲಪಲ್ಲಿ ಅಥವಾ ಬೆಂಡಿಗೇರಿಯಂಥ ವಿದ್ಯಮಾನಗಳ ವಿಚಾರದಲ್ಲಿ ಇದು ವಿಕೋಪಕ್ಕೆ ಹೋಗಿದೆ, ನಿಜ. ಆದರೂ ಇವತ್ತು ನಾವು ಎದುರಿಸುತ್ತಿರುವ ಧರ್ಮ ಧರ್ಮಗಳ ನಡುವಿನ ಜಗಳದ ಎದುರು ಜಾತಿ ಜಗಳಗಳು ಎಲ್ಲೋ ಭಿನ್ನ ಎನಿಸುವುದಿಲ್ಲವೆ? ಕುರುಬರ ಕನಕ ಗೋಪುರದ ವಿವಾದ ಅಥವಾ ನಮ್ಮ ಲಿಂಗಾಯತರ ಕೆಲವು ಗೊಂದಲದ ಜಗಳಗಳಿಗೂ ಗುಜರಾತ್‌ನಲ್ಲಾದ ಗೋಧ್ರಾ ಗಲಭೆಗೂ ವ್ಯತ್ಯಾಸವಿಲ್ಲವೆ. ಇದು ಸ್ವಲ್ಪ ಸೂಕ್ಷ್ಮ ವ್ಯತ್ಯಾಸ ಎನ್ನುವುದು ನಿಜ, ಆದರೆ ಅದು ಇದೆ. ಎರಡನ್ನೂ ಸಮಾನವಾಗಿ ಪರಿಗ್ರಹಿಸಿ ವಿಶ್ಲೇಷಿಸುವುದು ತಪ್ಪಾಗಬಹುದು ಅನಿಸಿದೆ ನನಗೆ. ಇದರ ಬಗ್ಗೆ ನಮ್ಮ ಗೆಳೆಯರು ಹೆಚ್ಚು ಬೆಳಕು ಚೆಲ್ಲುವರೆ?
ಮನುಷ್ಯ ಎಂದಿಗೂ ಜಾತಿ/ಪಂಗಡ ಪ್ರೇಮಿ, ಅವನು ಹೊಡೆದಾಟವಿಲ್ಲದೇ ಅಗ್ರೆಶ್ಶನ್ ಇಲ್ಲದೆ ಬದುಕಲಾರನು ಎಂದಿದ್ದೀರಿ. ಇದಕ್ಕೆ ಇತಿಹಾಸವೇ ಪುರಾವೆ ಎಂದೂ ಹೇಳಿದ್ದೀರಿ. ನೀವು ಹೇಳಿರುವುದು ಕಟುಸತ್ಯ. ಆದರೆ ಈ ಇತಿಹಾಸದಿಂದ ನಾಗರೀಕ ಮನುಷ್ಯ ಕಲಿತಿದ್ದೇನು ಹಾಗಾದರೆ ಎಂಬ ಪ್ರಶ್ನೆ ಬರುತ್ತದೆ. ಐದಾರು ದಶಕಗಳ ಹಿಂದೆ ಇದ್ದ ಹಾಗೆ ಇವತ್ತು ಜಾತಿ ಕಲಹ ಇಲ್ಲ ಎನ್ನುವ ಸ್ಥಿತಿಗೆ ನಾವು ಬಂದಿದ್ದೆವು. ಆದರೆ ಅಷ್ಟರಲ್ಲಿ ಈ ಧರ್ಮದ ಅಪಭ್ರಂಶಗಳು ಹುಟ್ಟಿಕೊಂಡವು. ಯಾಕೆ ಹುಟ್ಟಿಕೊಂಡವು ಎಂಬುದು ಎಲ್ಲ ಪ್ರಜ್ಞಾವಂತರಿಗೂ ಗೊತ್ತು. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆ ಇರುವುದು ಈ ತಲೆಮಾರಿನ ದುರಂತ. ಅದನ್ನು ನಾವು ನೀವು ಮೀರುವುದರಲ್ಲೇ ಮುಂದಿನ ಭವಿಷ್ಯ ಇರುವುದರಿಂದ ಮನುಷ್ಯರ ಬಗ್ಗೆ ಆಶಾವಾದಿಗಳಾಗಿರೋಣ ಮಹೇಶ್.