ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ

May 21, 2007 - 12:55am — ಶ್ಯಾಮ ಕಶ್ಯಪ

ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ

ಶ್ಯಾಮ ಕಶ್ಯಪ's picture

ಅಚಿನ್ ವನಾಯಕ್ ಅವರ ವಿಚಾರಧಾರೆಗಳನ್ನು ಸಮಗ್ರವಾಗಿ, ಚೆನ್ನಾಗಿ ಚಿತ್ರಿಸಿದ್ದೀರ. ಬರಹ ದೊಡ್ಡದಿದ್ದರೂ ಚೆನ್ನಾಗಿ ಓದಿಸಿಕೊಂಡು ಹೋಯಿತು, ಧನ್ಯವಾದಗಳು. ಮಂಗಳೂರಿನ ಈ ಸಭೆಯ ಸುದ್ದಿ ಇನ್ನು ಮೇಲೆ ಹಲವು ದಿನ ನಮ್ಮಲ್ಲಿ ಚರ್ಚೆಯಾಗಲಿಕ್ಕುಂಟು, ಈ ಮಾತುಕತೆಯನ್ನು ನೀವೆ ಶುರುಮಾಡಿದ್ದು ಒಳ್ಳೆಯದಾಯಿತು.

Quote:
ಎಲ್ಲಾ ಕೋಮುವಾದಗಳೂ ಸಮಾನವಾಗಿ ಕೆಟ್ಟವು ಮತ್ತು ಕೇಡುತರುವಂಥವು. ಅದು ಹಿಂದೂ ಕೋಮುವಾದವಿರಲಿ ಮುಸ್ಲಿಂ ಕೋಮುವಾದವಿರಲಿ ಅಥವಾ ಯಹೂದಿಗಳ ಕೋಮುವಾದವೇ ಇರಲಿ. ಎಲ್ಲವೂ ಸಮಾನವಾಗಿ ಅಪಾಯಕಾರಿ. ಆದರೆ ಬಹುಸಂಖ್ಯಾತರ ಕೋಮುವಾದ ಇದೆಯಲ್ಲ, ಅದು ಹೆಚ್ಚು ಅಪಾಯಕಾರಿ ಮತ್ತು ವಿಧ್ವಂಸಕ. ಹಾಗಾಗಿ ಆ ದೃಷ್ಟಿಯಿಂದ ಅಲ್ಪಸಂಖ್ಯಾತರ ಕೋಮುವಾದ ಸಹ್ಯ ಎನ್ನಬೇಕಾಗುತ್ತದೆ.

ಈ ಮಾತು ತೀರಾ ವಿವಾದಾಸ್ಪದವಾದರೂ ನಾನು ಇದಕ್ಕೆ ಒಪ್ಪುತ್ತೇನೆ. ಆದರೆ,
Quote:
ಮೊದಲನೆಯದು ಸರಳವಾದದ್ದು, ನೇರವಾದದ್ದು ಮತ್ತು ನಿರಪಾಯಕಾರಿಯಾದದ್ದು. ಹಿಂದೂ ಧರ್ಮದಲ್ಲೇ ಆಂತರಿಕವಾಗಿ ಲಭ್ಯವಿರುವ ಆ ಧರ್ಮದ ಎಲ್ಲಾ ವರ್ಗಕ್ಕೂ ಸಮಾನವಾಗಿ ಅನ್ವಯವಾಗಬಲ್ಲ, ಸಮಾನತೆಯನ್ನು ನೀಡುವ ಯಾವುದಾದರೂ ಒಂದು ತಿರುಳನ್ನು ಹಿಡಿದು ಅದರ ಎಳೆಯಲ್ಲಿ ಅವರೆಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುವುದು.
ಇದು ಸಾಧ್ಯವೇ ಇರಲಿಲ್ಲ! ಯಾಕೆಂದರೆ, ಹಿಂದೂ ಧರ್ಮದಲ್ಲೆ ಅಂಥ ಎಲ್ಲರಿಗೂ ಸಮಾನವಾದ ಒಂದು ತಿರುಳಿನಂಥದು ಇದ್ದರಲ್ಲವೆ ಅದನ್ನು ಒಗ್ಗೂಡಿಸಲು ಬಳಸುವುದು? ಜಾತೀಯತೆಯನ್ನು ಬಿಟ್ಟರೆ ಹಿಂದೂ ಧರ್ಮವೇ ಇಲ್ಲದಂಥ ಪರಿಸ್ಥಿತಿ ಇರುವಾಗ ಒಗ್ಗಟ್ಟಿನ ಎಳೆ ಎಲ್ಲಿತ್ತು?

ಇದನ್ನು ಇಷ್ಟು ಸುಲಭವಾಗಿ ಒಪ್ಪಲು ನನ್ನ ಹಿಂದು ಮನಸ್ಸು ಹಿಂಜರಿಯುತ್ತಿದೆ. ಈ ಮಾರ್ಗವು ಕಷ್ಟಸಾಧ್ಯ, ಆದರೆ ಅಸಾಧ್ಯವಲ್ಲ ಅಂತ ನನ್ನ ಅನಿಸಿಕೆ. ಅದೃಷ್ಟವಶಾತ್ ಹಿಂದುಗಳಲ್ಲಿ ಕೆಲವರಾದರೂ ಬದಲಾಗಿದ್ದಾರೆ, ದೈನಂದಿಕ ಜೀವನದಲ್ಲಿ ಸಮಾನತೆಯನ್ನು ಕಂಡುಕೊಂಡಿದ್ದಾರೆ. ಇದನ್ನು ಈ ೪೦ - ೫೦ ವರ್ಷದಲ್ಲಿ ಸಾಧಿಸಿರುವುದೇ ಹಿಂದುತ್ವದಲ್ಲಿ ಸಮಾನತೆಯನ್ನು ಸಾಧಿಸುವ ಹಂಬಲವಿದೆ ಎನ್ನುವುದಕ್ಕೆ ಸಾಕ್ಷಿ.

Quote:

ಇದು ವರ್ತಮಾನದ ತಿರುಚುವಿಕೆಯಾದರೆ ಭೂತ ಮತ್ತು ಭವಿಷ್ಯತ್ ಕಾಲದ ವಿದ್ಯಮಾನಗಳ ತಿರುಚುವಿಕೆ ಕೂಡ ನಡೆಸಲಾಗುತ್ತಿದೆ. ಅವುಗಳಲ್ಲಿ ಒಂದು, ಈಗಲ್ಲದಿದ್ದರೂ ಹಿಂದೆ, ಮುಸ್ಲಿಮರದ್ದೇ ಪ್ರಭುತ್ವ ಇದ್ದ ಕಾಲದಲ್ಲಿ ಅವರು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಹಿಂದೂಗಳ ದೇವಾಲಯ ಪುಡಿಮಾಡಿದ್ದಾರೆ, ಹಿಂದೂ ಹೆಂಗಸರನ್ನು ಕೆಡಿಸಿದ್ದಾರೆ, ಮತಾಂತರ ಮಾಡಿದ್ದಾರೆ ಎಂಬುದನ್ನು ಕೆದಕಿ, ಆ ಮೂಲಕ ಇವತ್ತಿನ ಹಿಂದೂ ಮನಸ್ಥಿತಿಯನ್ನು ಕೆಡಿಸಿ, ಅವರನ್ನು ಮುಸ್ಲಿಂ ದ್ವೇಷದ ತಳಹದಿಯ ಮೇಲೆ ಒಗ್ಗೂಡಿಸುವುದು.

ಇತಿಹಾಸವನ್ನು ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ. ಕೇವಲ ಬಲಪಂಥೀಯರ ಮೇಲೆ ಕೈಮಾಡಿ ತೋರಿಸುವುದು ಕೋಮುಸೌಹಾರ್ದತೆಗೆ ಸಹಕಾರಿಯಲ್ಲ ಎಂದು ನನ್ನ ಅನಿಸಿಕೆ. ಈಗಾಗಲೆ ಕರ್ನಾಟಕದಲ್ಲಿ ಹೊತ್ತಿ ಉರಿಯುತ್ತಿರುವ ಈ ವಿಷಯಕ್ಕೆ ಅಚಿನ್ ತುಪ್ಪ ಸುರಿಯುವುದು ಬೇಡಿತ್ತು.

ಕೊನೆಯದಾಗಿ,

Quote:

ರಾಷ್ಟ್ರೀಯತೆ ಎಂಬುದು ಒಂದು ಸದಾಕಾಲವೂ ನಡೆಯುತ್ತಲೇ ಇರುವ ಅಭಿಯಾನ. ಅಮೆರಿಕವನ್ನು ಗಮನಿಸಿ. ಅದೃಷ್ಟವಶಾತ್ ಅಲ್ಲಿರುವುದು ವಲಸೆಗಾರ ಸಮಾಜವೇ ಎನ್ನಬಹುದು. ಅದೇ ಹೊರಗಿನಿಂದ ಬಂದಿರುವ ಸಮಾಜ. ಹಾಗಾಗಿಯೇ ಅಲ್ಲಿ ಒಳಗೊಳ್ಳುವ ರಾಷ್ಟ್ರೀಯತೆಯ ಒಂದು ಆರೋಗ್ಯಕರ ಸಮಾಜವಿದೆ. ಹಾಗೆ ಒಳಗೊಳ್ಳುವ ಸಮಾಜ, ರಾಷ್ಟ್ರೀಯತೆ ಅಗತ್ಯ.

ಅಮೇರಿಕನ್ ರಾಷ್ಟ್ರೀಯತೆ ಬೆಳೆಯಲು ಅಲ್ಲಿಯ ಸಮಾಜ ಆರೋಗ್ಯಕರವಾಗಿದೆ ಎಂದರೆ ನನ್ನನ್ನೂ ಸೇರಿ ಹಲವು ಜನ ಒಪ್ಪದೇ ಇರಬಹುದು. ಸಮಾಜದಲ್ಲಿ ಸಂಸ್ಕೃತಿಯಷ್ಟೇ ಮುಖ್ಯವಾದ ಹಲವು ವಿಷಯಗಳು ರಾಷ್ಟ್ರೀಯತೆಯನ್ನು ರೂಪಿಸುತ್ತವೆ, ಹಾಗು ಅಮೇರಿಕ ವಿಷಯದಲ್ಲಿ ಈ ಎಲ್ಲಾ (ಸಂಸ್ಕೃತಿಯನ್ನೂ ಸೇರಿ, ಆರ್ಥಿಕ, ರೇಸ್, ಕ್ಲಾಸ್, ಇತಿಹಾಸ ಮತ್ತಿತರ) ವಿಷಯಗಳು ಆರೋಗ್ಯಕರ ಸಮಾಜವನ್ನು ಸೃಷ್ಟಿಸಲು ಸಹಾಯಕಾರಿಯಾಗಿಲ್ಲ. ಜೊತೆಗೆ ಅಮೇರಿಕನ್ ರಾಷ್ಟ್ರೀಯತೆ ಇಡೀ ಜಗತ್ತಿಗೆಷ್ಟು ಮುಳುವಾಗಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲವಲ್ಲ!ಆದರೆ, ಅಮೇರಿಕನ್ ಸಮಾಜವನ್ನು ಎಡಪಂಥೀಯರೊಬ್ಬರು ಆರೋಗ್ಯಕರವಾಗಿದೆ ಎಂದು ಬಣ್ಣಿಸಿರುವುದು ಆಶ್ಚರ್ಯಕರವೇ!

ಒಟ್ಟಿನಲ್ಲಿ, ನೀವು ಬಹಳ ಶ್ರಮ ತೆಗೆದುಕೊಂಡು ಎಡಪಂಥೀಯರೊಬ್ಬರ ವಿಚಾರಧಾರೆಯನ್ನು ಚೆನ್ನಾಗಿಯೇ ಕೊಟ್ಟಿದ್ದೀರಿ, ನಿಮ್ಮ ಅನಿಸಿಕೆಗಳ ಬಗ್ಗೆ ನನಗೆ ಹೆಚ್ಚಿನ ಕುತೂಹಲವಿದೆ. ಖಂಡಿತ ಅದನ್ನು ಸಂಪದದಲ್ಲಿ ಪ್ರಕಟಿಸಿ.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (17 replies) May 20, 2007 - 7:38pm
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: anivaasi (May 25 2007 - 8:18am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 26 2007 - 8:49am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 25 2007 - 8:47pm)
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: kuchela (May 25 2007 - 3:27am)
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 11:03am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
      • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 8:21pm)
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 21 2007 - 12:55am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)
      • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
        • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
          • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
            • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
              • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
                • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
                  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
                    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 24 2007 - 8:57pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:37am
  • bhasip
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:35am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:30am
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:26am
  • nkumar
    ಉ: ಅನರ್ಥಕೋಶ ೬
    January 8, 2009 - 11:21am
  • anil.ramesh
    ಉ: ನಗುವ ನಯನ, ಮಧುರ ಮೌನ
    January 8, 2009 - 11:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:18am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:18am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:16am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
ಇನ್ನಷ್ಟು


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator