ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: anivaasi (May 25 2007 - 8:18am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 26 2007 - 8:49am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 25 2007 - 8:47pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: kuchela (May 25 2007 - 3:27am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 11:03am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 8:21pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 21 2007 - 12:55am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 24 2007 - 8:57pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)

RSS:
ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
ಶ್ಯಾಮ್,
ನನಗೆ ನಿಮ್ಮ ವಿಚಾರ ಅರ್ಥವಾಗಿದ್ದು ಹೀಗೆ:
೧. ಇತಿಹಾಸವನ್ನು ದೇಶದಲ್ಲಿ ವಿಭಜನೆಯ ಉದ್ದೇಶಕ್ಕಾಗಿಯೂ, ಐಕ್ಯತೆಯ ಉದ್ದೇಶಕ್ಕಾಗಿಯೂ ಬಳಸಿಕೊಳ್ಳುವುದು ನಡೆದಿದೆ. ಐಕ್ಯತೆಯ ಉದ್ದೇಶಕ್ಕಾಗಿ ಬಳಸುವಾಗಲೂ ಇತರ ಉದ್ದೇಶಗಳಿದ್ದಲ್ಲೆಲ್ಲ ಅದು ಪರಿಣಾಮದಲ್ಲಿ ಮತ್ತೆ ವಿಭಜನೆಯತ್ತಲೇ ಸಾಗಿದೆ.
೨. ಹಿಂದೂ ಧರ್ಮದ ಐಕ್ಯತೆಗೆ ಆರೋಗ್ಯಕರ ದಾರಿಯನ್ನು ಯಾಕೆ ಇವರು ಪ್ರಯತ್ನಿಸುತ್ತಿಲ್ಲ ಅಥವಾ ಯಾಕೆ ಆ ಪ್ರಯತ್ನವನ್ನು ಆಗಗೊಡುವುದಿಲ್ಲ? ಮತ್ತು ಹಾಗೆ ಮಾಡಿ ಪರೋಕ್ಷವಾಗಿ ಯಾಕೆ ವಿಭಜನೆಯತ್ತಲೇ ಪ್ರಯತ್ನಗಳು ಸಾಗುವಂತೆ ಮಾಡುತ್ತಾರೆ?
ಮುಸ್ಲಿಂ ದ್ವೇಷವನ್ನು ಬಿಜೆಪಿ ಮತ್ತು ಅದರ ಬೆಂಬಲಿಗ ಹಿಂದೂ ಸಂಘಟನೆಗಳು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿವೆ ಎನ್ನುವುದು ಒಟ್ಟಾರೆಯಾಗಿ ವಿಷಯ. ಉಳಿದಂತೆ ಇತಿಹಾಸದ ತಿರುಚುವಿಕೆ ಅಥವಾ ಆ ತಿರುಚುವಿಕೆಯ ವಿರುದ್ಧ ನಡೆದ ಕಿರುಚಾಟ ಕೇವಲ ಅದರ ಒಂದು ಮುಖ ಮಾತ್ರ. ಇದನ್ನು ನೀವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ನನಗೆ ಇದು ಹೌದೆನಿಸಿದೆ. ಅಷ್ಟರಮಟ್ಟಿಗೆ ನಾನು ಅಚಿನ್ ಮಾತುಗಳನ್ನು ಒಪ್ಪಿಕೊಂಡವ.
ಇನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಟ್ಟರೆ (ಆಗ ಈ ದೇಶ ಇವತ್ತಿನ ಸ್ವರೂಪದಲ್ಲಿ ಒಂದೇ ದೇಶ ಆಗಿರಲೇ ಇಲ್ಲ ಎನ್ನುವ ಕಾರಣಕ್ಕೆ) ದೇಶದ ಐಕ್ಯತೆ ಯಾವತ್ತೂ ಒಂದು ಇಶ್ಯೂ ಆಗಿತ್ತೆಂದು ನನಗೆ ಅನಿಸುವುದೇ ಇಲ್ಲ ಶ್ಯಾಮ್. ಯಾರಾದರೂ ಅದಕ್ಕಾಗಿ ಯಾಕೆ ಪ್ರಯತ್ನಿಸಬೇಕಾಗುತ್ತದೆಯೋ ನನಗೆ ಗೊತ್ತಿಲ್ಲ. ನಮ್ಮ ನಿಮ್ಮ ಮನೆಯಲ್ಲಿ ನಾವೆಂದಾದರೂ ಐಕ್ಯತೆಗಾಗಿ ಏನಾದರೂ ಸ್ಟ್ರಾಟಜಿ ಮಾಡುತ್ತೇವಾ? ಮಾಡಿದರೂ ಕೃತಕ ತೇಪೆ ಎಷ್ಟು ಕಾಲ ಬರುತ್ತದೆ? ಐಕ್ಯತೆ ಎನ್ನುವುದು ಯಾವತ್ತೂ ಸಂಪೂರ್ಣ ಪರಿಪೂರ್ಣ ಆಗಿರುವುದಿಲ್ಲ. ಭಿನ್ನಮಾತ ಸದಾ ಘಟಸ್ಪೋಟಕ್ಕೇ ಗುರಿಯಾಗಬೇಕಿಲ್ಲ, ಅಲ್ಲವೆ? ಹಾಗಿರುತ್ತ ಐಕ್ಯತೆಗಾಗಿ ನಡೆಯುವ ಪ್ರಯತ್ನದ ಬಗ್ಗೆ ಮಾತನಾಡುವುದೇ ಪರೋಕ್ಷವಾಗಿ ಅದನ್ನು ಆಗಗೊಡದ ಬೆಳವಣಿಗೆಗಳಿಗೆ ಕಾರಣವಾಯಿತು ಎನ್ನುವುದು ಕೂಡ ನನಗೆ ಸರಿಯಾದ ವಿಶ್ಲೇಷಣೆ ಎನಿಸಿಲ್ಲ.
ನೀವು ಚರ್ಚೆಯಲ್ಲಿ ತೋರಿಸುತ್ತಿರುವ ಆಸಕ್ತಿಗಾಗಿ ನಾನು ನಿಜಕ್ಕೂ ಕೃತಜ್ಞ.