~
ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: anivaasi (May 25 2007 - 8:18am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 26 2007 - 8:49am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 25 2007 - 8:47pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: kuchela (May 25 2007 - 3:27am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 11:03am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 8:21pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 21 2007 - 12:55am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 24 2007 - 8:57pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)

RSS:
ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
ಶ್ಯಾಮ್,
ನಿಮಗೆ ನನ್ನ ಮಾತು ಅರ್ಥವಾಗುವುದಾಗಲೀ, ಅಚಿನ್‌ರ ವಿಚಾರ ಸರಿಯೆನ್ನಿಸುವುದಾಗಲೀ ಮುಖ್ಯವಲ್ಲ. ನೀವು ಸ್ವತಂತ್ರವಾಗಿ ಯೋಚಿಸಿ ಸತ್ಯ ಕಂಡುಕೊಳ್ಳುವುದೇ ಹೆಚ್ಚು ಮುಖ್ಯವಾದದ್ದು. ಅದನ್ನು ಹಂಚಿಕೊಳ್ಳಿ, ಪರ ವಿರೋಧೀ ನಿಲುವುಗಳು ಇದ್ದೇ ಇರುತ್ತವೆ. ಎಷ್ಟೋ ಬಾರಿ ಅವೇ ನಮ್ಮ ಕಣ್ಣು ತೆರೆಸುತ್ತವೆ.
ಕೋಮುಗಲಭೆಗಳ ಬಗ್ಗೆ ನಿಮಗೆ ತಿಳಿದಿಲ್ಲ ಎಂದಲ್ಲ. ಈ ಗಲಭೆಗಳ ಪ್ರಾಯೋಜಕರ ಬಗ್ಗೆ, ಅದರ ನಿಯೋಜಕರ ಬಗ್ಗೆ ಮತ್ತು ಅದರ ನಿರ್ವಾಹಕರ ಬಗ್ಗೆ ಯಾರಾದರೂ ಹೇಳಿದರೆ ತಿಳಿಯುವುದಿಲ್ಲ, ಅದನ್ನು ಕಣ್ಣಾರೆ ಕಂಡರೆ ಆಗುವ ಆಘಾತ ಹೆಚ್ಚು ಪರಿಣಾಮಕಾರಿ. ಅಂಥ ಅವಕಾಶ ನಿಮಗೆ ಸಿಕ್ಕಿರಲಿಕ್ಕಿಲ್ಲ ಅನಿಸಿತು. ಎರಡನೆಯದಾಗಿ ಕೋಮುಗಲಭೆ ಕೂಡ ಇವತ್ತು ಬಡ ಮಧ್ಯಮವರ್ಗದವರಿಗೆ ಒಂದು ಆದಾಯ ಮೂಲವಾಗಿರುವುದರ ಬಗ್ಗೆಯೂ ನಿಮಗೆ ಅರಿವಿರಲಾರದು ಅಂದುಕೊಂಡಿದ್ದೇನೆ. ಉದ್ಯಮಿಗಳ ಅದರಲ್ಲೂ ಕಳ್ಳನೋಟು ಮುದ್ರಣ, ಹೈಟೆಕ್ ವೇಶ್ಯಾವಾಟಿಕೆ, ಸಾರಿಗೆ ಮಾಫಿಯಾ ಮತ್ತು ಬಿಲ್ಡರ್‌ಗಳ ಮಾಫಿಯಾ ಜಗತ್ತು ಇವತ್ತು ಇದನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಹಣ ಇಲ್ಲಿ ಅಂತರ್ಗಾಮಿಯಾಗಿ ಹರಿಯುತ್ತಿರುವುದರಿಂದಲೇ ಇವತ್ತು ಕೆಲವು ಶಕ್ತಿಗಳು ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ. ನೀವು ದಕ್ಷಿಣಕನ್ನಡದವರೇ ಅನಿಸುತ್ತದೆ, ನಿಮಗೆ ಇದು ಇತರರಿಗಿಂತ ಹೆಚ್ಚು ಚೆನ್ನಾಗಿ ಅರ್ಥವಾಗುತ್ತದೆ. ಅಚಿನ್ ತರದ ನೂರು ಮಂದಿ ಏನು ಭಾಷಣ ಕುಟ್ಟಿದರೂ ಏನೂ ಬದಲಾಗುವುದಿಲ್ಲ ಎಂದು ನನಗೂ ಗೊತ್ತು. ಆದರೆ ಜನ ಎಲ್ಲಿ ಪ್ರಜ್ಞಾವಂತರಾಗುತ್ತಾರೋ, ತರ್ಕಬದ್ಧವಾಗಿ ಯೋಚಿಸುತ್ತಾರೋ, ಪ್ರಶ್ನಿಸುತ್ತಾರೋ, ಅಥವಾ ಹಾಗೆಲ್ಲ ಮಾಡುವವರ ಬೆಂಬಲಕ್ಕೆ ನಿಲ್ಲುತ್ತಾರೋ ಎಂಬ ಭಯವೇ ಇಂಥವರ ಮಾತುಗಳನ್ನು ವಿರೋಧಿಸುವವರ ಭಯವೇ ಹೊರತು, ಇವರ ಮಾತುಗಳು ಐಕ್ಯತೆಗಿಂತ ವಿಭಜನೆಗೇ ಪ್ರೇರಕ ಎಂಬ ವಾದ ಹುರುಳಿಲ್ಲದ್ದು ಮತ್ತು ಇವರೇ ಮೇಲೆ ಹೇಳಿದ ಕಾರಣಕ್ಕಾಗಿಯೇ ಹುಟ್ಟುಹಾಕಿದ್ದು. ಐಕ್ಯತೆ ಎಂಬುದು ಇವತ್ತು ಓಟ್ ಬ್ಯಾಂಕ್ ಕಟ್ಟುವವರ ತಲೆಬಿಸಿಯೇ ಹೊರತು ದುಡಿದು ತಿನ್ನುವವರ ತುರ್ತು ಅಲ್ಲ ಎನಿಸುತ್ತದೆ. ಈ ವರ್ಗದ ಹೆಚ್ಚಿನವರಿಗೆ ಧರ್ಮದ ಬಗ್ಗೆಯೂ ಅಂಥ ಮಮಕಾರವಿಲ್ಲ. ತೀರ ಹೊಟ್ಟೆ ತುಂಬಿದ ಮಂದಿಗೂ ಇಲ್ಲ. ಮಧ್ಯಮವರ್ಗಕ್ಕೆ ಇರುವ ನಿಜವಾದ ಹಸಿವು ಹಣದ್ದು. ಅದನ್ನು ಈ ಕೋಮುವಾದ ಬಳಸಿಕೊಳ್ಳುತ್ತಿದೆಯೇ ಹೊರತು ಇನ್ನೇನೂ ಅಲ್ಲ ಎಂಬುದನ್ನು ಅರಿಯಲು ಫಲಾನುಭವಿಗಳನ್ನೇ ಕಂಡು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ. ಆಗ ಇದೆಲ್ಲ ಕಾಣುವ ಬಗೆಯೇ ಬೇರೆ.