~
ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: anivaasi (May 25 2007 - 8:18am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 26 2007 - 8:49am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 25 2007 - 8:47pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: kuchela (May 25 2007 - 3:27am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 11:03am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 8:21pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 21 2007 - 12:55am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 24 2007 - 8:57pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)

RSS:
ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
ನಾನು ಇಲ್ಲಿ ನಡೆದಿರುವ ಚರ್ಚೆಗೆ ನನ್ನ ಅನಿಸಿಕೆಯನ್ನು ನೀಡಬೇಕೆಂದು ಮೊದಲಿನಿಂದಲೂ ಅನಿಸಿದ್ದರೂ ಕೂಡ ಕೂತು ಬರೆಯುವುದಕ್ಕಾಗದೆ ಹೋಯಿತು. ಈಗಲಾದರೂ ಅದನ್ನು ಮಾಡಿಬಿಡುವ ಎಂದು ಇಲ್ಲಿ ಹಾಕುತ್ತಿದ್ದೇನೆ.
)
ಒಂದು ವಿಶಾಲವಾದ ತಳಹದಿಯ ಮೇಲೆ ನಮ್ಮ ನಿಲುವುಗಳು ಒಂದು ಪಂಥಕ್ಕೆ ತಾಳೆ ಹಾಕಿಕೊಳ್ಳುವುದನ್ನು ಏಕೆ ನಿರಾಕರಿಸಬೇಕೆಂದು ಗೊತ್ತಾಗುತ್ತಿಲ್ಲ. ಆಕಾಶ ನೀಲಿಯಾಗಿದೆ, ಹುಲ್ಲು ಹಸಿರಾಗಿದೆ ಅನ್ನುವುದಕ್ಕೆ ಯಾವ ಪಂಥವೂ ಬೇಕಾಗುವುದಿಲ್ಲ. ಆದರೆ ವಾಯುಮಾಲಿನ್ಯ ಕಡಿಮೆಗೊಳಿಸಿ ಆಕಾಶದ ಬಣ್ಣ ಮತ್ತೆ ನೀಲಿಯಾಗುವಂತೆ ಹೇಗೆ ಮಾಡುವುದು, ಹಸಿರಾಗಿರುವ ಹುಲ್ಲನ್ನು ಹೇಗೆ ಕಾಪಾಡುವುದು ಎಂದು ಯೋಚಿಸುವಾಗ ನಮ್ಮ ವಿಚಾರಗಳಿಗೆ ತಾಳೆ ಹಾಕಿಕೊಳ್ಳುವ ವಿಚಾರಧಾರೆಯ ಬೆಳಕಲ್ಲಿ ಒರೆ ಹಚ್ಚಿ ನೋಡಿಕೊಳ್ಳುವುದು ತಪ್ಪೆನಿಸುವುದಿಲ್ಲ. ಇಲ್ಲದಿದ್ದರೆ ಮತ್ತೆ ಮತ್ತೆ ಗಾಲಿಯನ್ನು ಹೊಸದಾಗಿ ಕಂಡುಕೊಳ್ಳುವ ಕೆಲಸದಲ್ಲೇ ನಮ್ಮ ಹೊತ್ತು/ಬಲವೆಲ್ಲಾ ಕಳೆಯುತ್ತದೆ ಅನಿಸುತ್ತದೆ. ಹಾಗೆ ಹೇಳಿದ ಮಾತ್ರಕ್ಕೆ ಕುರುಡಾಗಿ ಒಂದು ಪಂಥಕ್ಕೆ ಜೋತುಬೀಳುವುದು ಎಂದಲ್ಲ.
ರಾಜಕೀಯ ನಿಲುವಿನ (ಅಥವಾ ವಿಚಾರಧಾರೆಯ) ಅಗತ್ಯವೇ ಇಲ್ಲದೆ, ವೈಜ್ಙಾನಿಕ/ಸಾಮಾಜಿಕ ಹಂದರದಲ್ಲೇ ನಮ್ಮ ಸಮಸ್ಯೆಗೆ ಉತ್ತರ ಕಂಡುಕೊಳ್ಳುತ್ತೇವೆ ಅನ್ನುವುದನ್ನು ನಾನು ಪ್ರಶ್ನಿಸುತ್ತೇನೆ. ಮೊದಲ ಕಾರಣ, ವಿಜ್ಙಾನ ಮತ್ತು ಸಮಾಜ ಕೂಡ ಎಷ್ಟೇ ಬೇಡವೆಂದರೂ ರಾಜಕೀಯ ನಿಲುವುಗಳನ್ನು ಒಳಗೊಂಡಿರುತ್ತದೆ. ಎರಡನೇ ಕಾರಣ, ಪ್ರಜಾತಂತ್ರದಲ್ಲಿ ರಾಜಕೀಯ ನಿಲುವನ್ನು ಪ್ರತಿಯೊಬ್ಬ ಪ್ರಜೆಯೂ ತನ್ನ ಒಲವುಗಳ ಮೂಲಕ ಕ್ರೋಢೀಕರಿಸಿಕೊಳ್ಳುವುದು ಮತ್ತು ಪ್ರಕಟಿಸುವುದು ನಡೆದೇ ಇರುತ್ತದೆ. ಎಷ್ಟೇ ಅಲ್ಲಗಳೆದರೂ, ಅಪ್ರಜ್ಙಾಪೂರ್ವಕವಾಗಿಯಾದರೂ ಇದು ನಡೆದಿರುತ್ತದೆ ಎನ್ನುವುದು ಸತ್ಯವಲ್ಲವೆ? (ಅಲ್ಲದಿದ್ದರೆ, ಹಾಲಿವುಡ್ ಚಿತ್ರಗಳಲ್ಲಿ ರಾಜಕೀಯ ನಿಲುವಿಲ್ಲ ಎಂದ ಹಾಗಾಯಿತು
ಸಾಮಾನ್ಯವಾಗಿ ಪಂಥಗಳ ಜತೆ ಗುರುತಿಸಿಕೊಳ್ಳಲು ಹೆದರುವುದಕ್ಕೆ ಬಲವಾದ ಕಾರಣ ತಮ್ಮ ಒಲವಿರುವ ಪಂಥ ಪ್ರಭುತ್ವಕ್ಕೆ ಬಂದಾಗ ನಮಗೆ ಒಪ್ಪಿಗೆಯಾಗದ ಹಾಗೆ ನಡೆದುಕೊಂಡ ಉದಾಹರಣೆಗಳು ಇರುವುದು. ಆದರೆ, ಪ್ರಭುತ್ವಕ್ಕೆ ಯಾವುದೇ ಪಂಥವಿಲ್ಲ ಎಂದು ನನ್ನೆಣಿಕೆ. ಇದಕ್ಕೆ ಜಾಗತಿಕ ಚರಿತ್ರೆಯಲ್ಲಿ ಹಲವಾರು ನಿದರ್ಶನಗಳಿವೆ. ಇತ್ತೀಚಿನ ನಮ್ಮ ಉದಾಹರಣೆಗಳನ್ನೇ ಕೊಡಬಹುದಾದರೆ - ಜನಪರ ನೀತಿಯನ್ನು ಹೇಳುವ ಪ್ರಭುತ್ವದಡಿ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಡೆದ ನರಹತ್ಯೆ ನೆನಪಿಸಿಕೊಳ್ಳಿ. ಜಗತ್ತೇ ಒಂದು ಕುಟುಂಬ ಎನ್ನುವ ಗುಜರಾತಿನ ಪ್ರಭುತ್ವದಡಿ ಗೋದ್ರಾದಲ್ಲಿ ನಡೆದ ನರಹತ್ಯೆ ನೆನಪಿಸಿಕೊಳ್ಳಿ. ಪಂಥಗಳು ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡರೂ, ಪ್ರಭುತ್ವಕ್ಕಾಗಿಯೇ ಪಂಥಗಳ ವಿಚಾರಧಾರೆ ಬಳಕೆಯಾಗುವುದನ್ನು ವಿರೋಧಿಸುವುದು ಮುಖ್ಯವಾಗುತ್ತದೆ.
ಯಾವುದೇ ಪಂಥವನ್ನು ಅಖಂಡ (ಮನೋಲಿತಿಕ್) ಎಂಬಂತೆ ನೋಡಿದಾಗ ಒಪ್ಪಬೇಕೋ ಬಿಡಬೇಕೋ, ಸೇರಬೇಕೋ ಬೇಡವೋ ಎಂಬ ತಾಕಲಾಟ ಸಹಜವಾಗಿ ಏಳುತ್ತದೆ. ಆದರೆ, ಎಲ್ಲ ಪಂಥಗಳ ಒಳಗೇ ವಿಚಾರಬೇಧಗಳು ಇರುತ್ತವೆ ಅನ್ನುವದನ್ನು ಗಮನಿಸಿ. ಹಾಗಿರುವುದರಿಂದಲೇ ಅವು ಸಜೀವವಾಗಿ ಉಳಿಯುತ್ತವೆ. ಇಲ್ಲದಿದ್ದರೆ ಅವು ಪೂಜಿಸಲು ಮಾತ್ರ ಪ್ರಯೋಜನಕ್ಕೆ ಬರುವಂಥ ವಿಚಾರಧಾರೆಗಳಾಗಿ ಬಿಡುತ್ತವೆ. ಆ ವಿಚಾರಬೇಧಗಳು ಒಂದು ವಿಚಾರಧಾರೆಯ ಬೆಳವಣಿಗೆಗೆ ಆರೋಗ್ಯಕರ ಎಂದು ನಾನು ಎಣಿಸುತ್ತೇನೆ. ಲ್ಯಾಟಿನ್ ಅಮೇರಿಕಾದ ಪಾದ್ರಿಗಳ ಲಿಬರ್‍ಟೇರಿಯನ್ ಥಿಯಾಲಜಿ ಬಲಪಂಥವೋ ಎಡಪಂಥವೋ ಹೇಳುವದು ಕಷ್ಟ. ಎರಡು ಪಂಥದವರೂ ಅವರನ್ನು ಜರೆಯುತ್ತಾರೆ.
ಜನರನ್ನು ದಬ್ಬಾಳಿಕೆಯ ವಿರುದ್ಧ ಎತ್ತಿ ಕಟ್ಟುವಾಗ "ದೇವರೇ, ನೀನು ನಮಗೆ ಸಹಾಯ ಮಾಡದಿದ್ದರೆ, ನೀನು ತಪ್ಪು ಮಾಡುತ್ತಿದ್ದೀಯ" ಎಂದು ದೇವರನ್ನೇ ಎಚ್ಚರಿಸುತ್ತ ಬಲಪಡೆಯುವ ದನಿಯವರು ಅವರು!
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ "ಒಳ್ಳಗೊಳ್ಳುವ ರಾಷ್ಟ್ರೀಯತೆ" ವಲಸಿಗರಿಂದಾಗಿ ಇದೆ ಎಂಬ ಮಾತನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕು. ರಾಷ್ಟ್ರೀಯತೆ ಒಂದು ದೇಶದ ಆಂತರಿಕ ಮೌಲ್ಯವಾಗಿ ಇಲ್ಲಿ ಆ ಮಾತು ಬಂದಿದೆ ಎಂದು ನಾನು ಬಗೆಯುತ್ತೇನೆ. ಅದನ್ನು ಜಾಗತಿಕ ಸಂಬಂಧಕ್ಕೆ ಆರೋಪಿಸುವುದು ವಿಷಯವನ್ನು ಜಗ್ಗಿದಂತೆ ಎಂದು ಅನಿಸುತ್ತಿದೆ. ಮತ್ತು ಆ ಮಾತು ಬಂದಿರುವ ಸಂದರ್ಭದಲ್ಲಿ ಒತ್ತಿರುವುದು "ಒಳಗೊಳ್ಳುವ" ಎಂಬ ಮಾತಿಗೆ ಎಂಬುದನ್ನು ಗಮನಿಸಿ. (ಇಂದಿನ "ಜಾಗತೀಕರಣ"ದ ಸಂದರ್ಭದಲ್ಲಿ ಎಂಥ ರಾಷ್ಟ್ರೀಯತೆಯನ್ನೂ ಒಪ್ಪಲಾದೀತೆ ಎಂಬುದು ಬೇರೆ ಪ್ರಶ್ನೆ) ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯತೆಯ ಪರಿಶುದ್ಧ ಉದಾಹರಣೆ ನಮಗೆ ಇನ್ನೂ ದೊರಕಿಲ್ಲ. ಆದರೆ, ಅಪಾಯಕಾರಿ ರಾಷ್ಟ್ರೀಯತೆಯ ಗಲಾಟೆಗಳಿರುವಾಗ "ಒಳ್ಳಗೊಳ್ಳುವ ರಾಷ್ಟ್ರೀಯತೆ"ಯನ್ನು ಆಶಯವನ್ನಾಗಿ ಇಟ್ಟುಕೊಳ್ಳದೇ ಇರಲು ಸಾಧ್ಯವೇ? ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದು ಇಲ್ಲವೇ ಇಲ್ಲ ಎಂದರೆ ತುಂಬಾ ಅಪಾಯಕಾರಿ ಅನಿಸುತ್ತದೆ. ಕಾರಣ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಒಳಗೊಳ್ಳುವಿಕೆಯನ್ನು ಯಾರೂ ಯಾರಿಗೂ ವರವಾಗಿ ಕೊಟ್ಟಿದ್ದಲ್ಲ. ಒಳ್ಳಗೊಳ್ಳುವಿಕೆ ಇಲ್ಲ ಎಂದು ಬಿಟ್ಟರೆ, ಅಮೇರಿಕದಲ್ಲಿ ಅಮೇರಿಕನ್ ಇಂಡಿಯನ್ನರು, ಆಫ್ರಿಕನ್ ಅಮೇರಿಕನ್ನರು, ಹಿಸ್ಪಾನಿಕ್ ಜನ ಮತ್ತು ಇನ್ನುಳಿದ ಜನಾಂಗಗಳು ಅದನ್ನು ಸತತವಾಗಿ ಗುದ್ದಾಡಿ ಗಳಿಸಿರುವುದನ್ನು ಕಡೆಗಣಿಸಿದಂತಾಗುತ್ತದೆ. ಆಸ್ಟ್ರೇಲಿಯಾದ ಅಬಾರಿಜಿನಗಳು ಮತ್ತು ವಲಸಿಗರನ್ನು ಹೊರಗಿಡುವ ಭಾವನೆ ಈಗಲೂ ಇದೆಯಾದರೂ, ಈಗ್ಗೆ ಐವತ್ತು ಅರವತ್ತು ವರ್ಷಗಳಿಂದ ನಡೆದ ಹೋರಾಟಗಳು ಮತ್ತು ಚಳವಳಿಗಳ ದೆಸೆಯಿಂದಾಗಿ ಪರಿಸ್ಥಿತಿ ಎಷ್ಟೋ ಸುಧಾರಿಸಿದೆ ಅನ್ನುವುದು ಸುಳ್ಳಲ್ಲ. ಅದನ್ನು ಒಪ್ಪದಿದ್ದರೆ, ಆ ಎಲ್ಲ ಹೋರಾಟಗಳು, ಚಳವಳಿಗಳು ನಿಷ್ಫಲವಾಯಿತು ಅಂದ ಹಾಗಾಯಿತು. ಅದು ನಿಜವಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವಲ್ಲವೆ?
ಇನ್ನು ಆರೋಗ್ಯಕರ ಸಮಾಜದ ಬಗ್ಗೆಗಿನ ಮಾತನ್ನೂ ಎಚ್ಚರಿಕೆಯಿಂದ ಗಮನಿಸಿ. ಅವರು ಹೇಳಿರುವುದು "ಒಳಗೊಳ್ಳುವ ರಾಷ್ಟ್ರೀಯತೆಯ ಒಂದು ಆರೋಗ್ಯಕರ ಸಮಾಜವಿದೆ". ಅದನ್ನು "ಒಳಗೊಳ್ಳುವ ರಾಷ್ಟ್ರೀಯತೆ" "ಆರೋಗ್ಯಕರ ಸಮಾಜದ" ಒಂದು ಅಂಗ ಎಂದು ಮಾತ್ರ ನಾನು ಅರ್ಥೈಸಿಕೊಂಡದ್ದು. ರಾಷ್ಟ್ರೀಯತೆಯನ್ನು ಅದು ರೂಪಿಸುತ್ತದೆ ಎಂಬ ತದ್ವಿರುದ್ಧ ಅರ್ಥದಲ್ಲಿ ಅಲ್ಲ. ಹಾಗಾಗಿ ನನಗೆ ಆ ಮಾತು ಒಪ್ಪಿಗೆಯಾಗುತ್ತದೆ.
ಇನ್ನು "ಆರೋಗ್ಯಕರ ಸಮಾಜ" ಎಂಬ ಮಾತೂ ಕೂಡ ಪರಿಶುದ್ಧ ಉದಾಹರಣೆಯಿಲ್ಲದ ಒಂದು ಮೌಲ್ಯ. ಸಮಾಜದ ಆರೋಗ್ಯ ಅಂದರೇನು ಎಂಬಂಥ ಮೂಲಭೂತ ವಿಚಾರದಲ್ಲೇ ನನಗೆ ಗೊಂದಲವಿರುವುದರಿಂದ ಅದರ ಬಗ್ಗೆ ಹೆಚ್ಚು ಹೇಳಲು ಹಿಂಜರಿಯುತ್ತೇನೆ.
ಸಂಪದದಲ್ಲಿ ಇಂಥ ಮುಖ್ಯವಾದ ಮಾತುಕತೆ ನಡೆಯುತ್ತಿರುವುದು, ಹೆಚ್ಚೆಚ್ಚು ನಡೆಯಬೇಕಾಗಿರುವುದು ಒಳ್ಳೆಯದೇ. ನರೇಂದ್ರರಿಗೆ ಮತ್ತು ಶ್ಯಾಮರಿಗೆ ನನ್ನ ಥ್ಯಾಂಕ್ಸ್.