ಉ: ಇವುಗಳಿಗೆ ಏನನ್ನುತ್ತಾರೆ ?
- ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 25 2007 - 10:11pm)
- ಉ: ಇವುಗಳಿಗೆ ಏನನ್ನುತ್ತಾರೆ ? By: ವೈಭವ (May 26 2007 - 12:43pm)
- ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 26 2007 - 12:49pm)
- ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 26 2007 - 12:42pm)
- ಉ: ಇವುಗಳಿಗೆ ಏನನ್ನುತ್ತಾರೆ ? By: hamsanandi (May 25 2007 - 10:54pm)
- ಉ: ಇವುಗಳಿಗೆ ಏನನ್ನುತ್ತಾರೆ ? By: ವೈಭವ (May 26 2007 - 12:43pm)
- ಉ: ಇವುಗಳಿಗೆ ಏನನ್ನುತ್ತಾರೆ ? By: ASHOKKUMAR (May 25 2007 - 8:28pm)
- ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 26 2007 - 12:50pm)
- ಉ: ಇವುಗಳಿಗೆ ಏನನ್ನುತ್ತಾರೆ ? By: kishorpatwardhan (May 25 2007 - 8:54pm)

RSS:
ಉ: ಇವುಗಳಿಗೆ ಏನನ್ನುತ್ತಾರೆ ?
ಕಿಶೋರ್ ಮತ್ತು ಮಾಯ್ಸರು ಹೇಳಿದ ಹಾಗೆ ಇದು ಜೋಡು ಪದ/ದ್ವಿರುಕ್ತಿ ಎನ್ನುವುದೇ ಸರಿ ಎನ್ನಿಸುತ್ತೆ. ಜಿ.ವೆಂಕಟಸುಬ್ಬಯ್ಯನವರ ಇಗೋ ಕನ್ನಡ ದಲ್ಲಿ ಇವುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ನೆನಪು.
ಎಲ್ಲಾ ದ್ರಾವಿಡ ಭಾಷೆಗಳಲ್ಲೂ ಇರಬಹುದು ಎನ್ನಿಸುತ್ತೆ. ಆದರೆ ನನಗೆ ಈ ಕ್ಷಣದಲ್ಲಿ ತಮಿಳಿನ ಒಂದೆರಡಕ್ಕಿಂತ ಹೆಚ್ಚು ಉದಾಹರಣೆಗಳು ಹೊಳೆಯುತ್ತಿಲ್ಲ.
ಪಚ್( ದ್ರಾವಿಡ ಮೂಲ )
ಈ ಪದಗಳು ಹಸಿರು + ಹಸಿರು ಎಂಬ ಜೋಡು ಪದ ಬಂದಾಗ, ಸ ಗೆ ಚ ಆದೇಶವೂ ( ತಮಿಳಲ್ಲಿ ಸ, ಚ ಭೇದವಿಲ್ಲವೆನ್ನುವುದೂ ಗಮನಿಸಬೇಕಾದ ಅಂಶ), ಮತ್ತು ವರ್ಗದ ಮೂರನೇ ಅಕ್ಷರಕ್ಕೆ ಮೊದಲ ಅಕ್ಷರ ಎರಡುಸಲ (ಒತ್ತಕ್ಶರ) ಆದೇಶವಾಗಿ ಬರುವುದರಿಂದ ಆಗುತ್ತವೆ.
ಹಸಿರು + ಹಸಿರು -> ಹಚ್ಚ ಹಸಿರು ( ಸ ಗೆ ಚ್ಚ)
ಮೊದಲು + ಮೊದಲು -> ಮೊತ್ತಮೊದಲು ( ಮೊಟ್ಟಮೊದಲು ಎಂಬುದು ತಪ್ಪು ಪ್ರಯೋಗ - ದ ಗೆ ತ್ತ)
ನಡುವೆ + ನಡುವೆ -> ನಟ್ಟನಡುವೆ ( ಡ ಗೆ ಟ್ಟ)
ಕಡೆಗೆ + ಕಡೆಗೆ -> ಕಟ್ಟಕಡೆ ( ಡ ಗೆ ಟ್ಟ)
ಹೊಸತು + ಹೊಸತು -> ಹೊಚ್ಚಹೊಸತು ( ಸ ಗೆ ಚ್ಚ)
ಹೊಚ್ಚಹೊಸತುಗೆ ತಮಿಳಿನ ರೂಪ ಪುದುಸು + ಪುದುಸು -> ಪುತ್ತಂಪುದುಸು (ದ ಗೆ ತ್ತ)
* ಇಲ್ಲಿಯೂ ಕನ್ನಡದ್ದೇ ನಿಯಮ ಉಪಯೋಗವಾಗಿರುವುದನ್ನು ಹಮನಿಸಬಹುದು.
ನಟ್ಟನಡುವಿಲೆ ಎಂಬ ಪ್ರಯೋಗವನ್ನೂ ತಮಿಳಿನಲ್ಲಿ ಕೇಳಿದ್ದೇನೆ. ಆದರೆ, ಮುತ್ತಮುದಲ್, ಕಟ್ಟಕಡೈಸಿ ಇತ್ಯಾದಿ (ಕನ್ನಡಕ್ಕೆ ಸಮಾಂತರವಾದ) ಪದಗಳನ್ನು ನಾನು ಕೇಳಿಲ್ಲ. ತಮಿಳು ಚೆನ್ನಾಗಿ ಬರುವವರಿದ್ದರೆ ಬರೆಯಿರಿ.
-ಹಂಸಾನಂದಿ