ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ

May 26, 2007 - 8:49am — ಶ್ಯಾಮ ಕಶ್ಯಪ

ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ

ಶ್ಯಾಮ ಕಶ್ಯಪ's picture

ಅನಿವಾಸಿಗಳೇ,

ರಾಜಕೀಯ ನಿಲುವುಗಳ ಬಗ್ಗೆಯ ನಿಮ್ಮ ಮಾತುಗಳನ್ನು ನಾನಿನ್ನು ಅರ್ಥೈಸಿಕೊಳ್ಳುತ್ತಿದ್ದೇನೆ. ಅದರ ಬಗ್ಗೆ ನನಗಿನ್ನೂ ಏನು ಹೊಳೆದಿಲ್ಲ.

ಅಮೇರಿಕದ ಬಗ್ಗೆ ಅಚಿನ್ ಹೇಳಿದ ಮಾತುಗಳು ನೇರವಾಗಿ ಅಮೇರಿಕ ದೇಶದ ರಾಷ್ಟ್ರೀಯತೆಯನ್ನು ಜಾಗತಿಕ ಸಂದರ್ಭದಲ್ಲಿ ನೋಡಿದ್ದಲ್ಲ ಎಂಬುದು ನಿಜವೇ. ಆದರೂ ಅದನ್ನು ನಾನು ಪ್ರಸ್ತಾಪಿಸಿದ್ದು (ಜಗ್ಗಿದ್ದು if you will Smiling ) ಗೆ ಎರಡು ಕಾರಣವಿದೆ.
ಒಂದು. ಬಾಯಿ ಚಪಲ, ಇದು ನನ್ನ ಪೂರ್ವೋದ್ದೇಶ.
ಭಾರತದಂತಹ ದೇಶದ ರಾಷ್ಟ್ರೀಯತೆಯ ಬಗ್ಗೆ ಮಾತನ್ನಾಡುವಾಗ ಅದಕ್ಕೆ ತೀರ ವಿಭಿನ್ನವಾಗಿರುವ ಅಮೇರಿಕದ ವಿಷಯವು ಅಷ್ಟು ಪ್ರಸ್ತುತವಲ್ಲ ಎಂದು ಭಾವಿಸಿ, ಅದರ ಬಗ್ಗೆ ಹಗೂರವಾಗಿ ಮಾತನ್ನಾಡಿದರೆ ಹೆಚ್ಚು ತಪ್ಪಾಗಲಾರದು ಎಂದು ಹೀಗೆ ಹೇಳಿದೆ. ಇದನ್ನು ಬೇಕಿದ್ದರೆ ಕಡೆಗಣಿಸಬಹುದು.
ಎರಡು:

Quote:

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ "ಒಳ್ಳಗೊಳ್ಳುವ ರಾಷ್ಟ್ರೀಯತೆ" ವಲಸಿಗರಿಂದಾಗಿ ಇದೆ ಎಂಬ ಮಾತನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕು. ರಾಷ್ಟ್ರೀಯತೆ ಒಂದು ದೇಶದ ಆಂತರಿಕ ಮೌಲ್ಯವಾಗಿ ಇಲ್ಲಿ ಆ ಮಾತು ಬಂದಿದೆ ಎಂದು ನಾನು ಬಗೆಯುತ್ತೇನೆ.

"ಒಳ್ಳಗೊಳ್ಳುವ ರಾಷ್ಟ್ರೀಯತೆ"ಯನ್ನು ಆಶಯವನ್ನಾಗಿ ಇಟ್ಟುಕೊಳ್ಳದೇ ಇರಲು ಸಾಧ್ಯವೇ?

"ಒಳಗೊಳ್ಳುವ ರಾಷ್ಟ್ರೀಯತೆಯ ಒಂದು ಆರೋಗ್ಯಕರ ಸಮಾಜವಿದೆ". ಅದನ್ನು "ಒಳಗೊಳ್ಳುವ ರಾಷ್ಟ್ರೀಯತೆ" "ಆರೋಗ್ಯಕರ ಸಮಾಜದ" ಒಂದು ಅಂಗ ಎಂದು ಮಾತ್ರ ನಾನು ಅರ್ಥೈಸಿಕೊಂಡದ್ದು. ರಾಷ್ಟ್ರೀಯತೆಯನ್ನು ಅದು ರೂಪಿಸುತ್ತದೆ ಎಂಬ ತದ್ವಿರುದ್ಧ ಅರ್ಥದಲ್ಲಿ ಅಲ್ಲ.

ನನ್ನನ್ನು ನಂಬಿ Smiling, ನಾನು ಈ ವಿಷಯಗಳ ಬಗ್ಗೆ ಇಷ್ಟು clear ಆಗಲ್ಲದಿದ್ದರೂ, ಸ್ಥೂಲವಾಗಾದರೂ ಯೋಚಿಸಿದ್ದೇನೆ. ಅಮೇರಿಕ ದೇಶದಲ್ಲಿ ಒಳಗೊಳ್ಳುವ ರಾಷ್ಟ್ರೀಯತೆಯ ಆಶಯ ಇದೆಯೋ ಇಲ್ಲವೋ ಕಾಣೆ. ಆಶಯ ಒಳ್ಳೆಯದೇ.

ಆದರೆ ಈಗಾಗಲೇ ತಮ್ಮನ್ನೇ ತಾವು ಅಮೇರಿಕನ್ ಎಂದು ತಿಳಿದಿರುವ ಜನರು, ಅವರ "ಬರಮಾಡಿಕೊಳ್ಳುವ" ತವಕ ಹಾಗು ಅವರ ಗುಲಾಮರಾಗಿದ್ದವರು (ಆಫ್ರಿಕನ್, ಚೀನಿ) ಮತ್ತು ಹೊಸದಾಗಿ ವಲಸೆ ಬಂದ/ಬರುತ್ತಿರುವ ಜನರ "ಒಳಗೊಳ್ಳುವ" ಭಾವನೆಗಳು: ಇವೆರಡೂ ರಾಷ್ಟ್ರೀಯತೆ ಎಂಬ ಪದದ ಅರ್ಥಕ್ಕೆ ಹತ್ತಿರವಲ್ಲ ಎಂದು ನನಗೆ ಅನ್ನಿಸಿದ್ದಿದೆ.

ಈ "ಒಳಗೊಳ್ಳುವ" ವಿಷಯದ ಚಲನೆಗಳನ್ನು ಸಾಂಸ್ಕೃತಿಕ ಅಧ್ಯಯನಗಳಲ್ಲಿ ವಿಶದವಾಗಿ ದಾಖಲಿಸಲಾಗಿದ್ದರೂ, ವಲಸೆಗಾರರಲ್ಲಿ ಇರುವ ರಾಷ್ಟ್ರೀಯತೆಯ ಭಾವನೆ ಕೆಲವೊಮ್ಮೆ ನಿಜವಾಗಿದ್ದರೂ, ಅಮೇರಿಕನ್ನರೇ ತಮ್ಮ ಸಮಾಜ ಈ ಒಳಗೊಳ್ಳುವ ಪಥದಲ್ಲಿ ಎಷ್ಟು ಮುಂದೆ ಸಾಗಿದೆ ಎಂಬುದನ್ನು ಇನ್ನೂ ಕಂಡುಕೊಂಡಂತಿಲ್ಲ.

ಇದು ಈ ದೇಶದ collective conscious ಬಗ್ಗೆ ನನ್ನ ಅನಿಸಿಕೆಯಾದರೆ, ನನಗಾದ ಆ ದೇಶದ ಅನುಭವ ತೀರ ವಿಭಿನ್ನವಾದದ್ದು. ಅಮೇರಿಕದಲ್ಲಿರುವ ಕ್ಲಾಸ್ ವಿಭಜನೆ, ಈ ಕ್ಲಾಸ್ ಗಳಿಗನುಗುಣವಾಗಿ ಆಯ ಜನರ "ಒಳಗೊಳ್ಳುವ"ಭಾವನೆಗಳು, ರಾಷ್ಟ್ರೀಯತೆಯ ಭಾವನೆಗಳು ತೀರಾ ವಿಭಿನ್ನವಾಗಿರುವುದನ್ನು ಗಮನಿಸಿದ್ದೇನೆ.

ಇವೆಲ್ಲವನ್ನು, ಇದರ ಜೊತೆಗೆ ಭಾರತದ ಇಂದಿನ ಸಂದರ್ಭವನ್ನು ಗಮನಿಸಿದಾಗ ಈ ವಿಷಯದಲ್ಲಿ ಅಮೇರಿಕನ್ ಹೋಲಿಕೆ ಸಮಂಜಸವಲ್ಲ ಎಂದು ಅನಿಸಿತು.

(ಅಮೇರಿಕದಲ್ಲಿ ಪ್ರಸಿದ್ಧವಾಗಿರುವ 30 days ಎಂಬ ಸಾಕ್ಷಚಿತ್ರವನ್ನು, ಇತ್ತೀಚೆಗೆ ಬಂದ ಸಾಚಾ ಬ್ಯಾರೆನ್ ಕೋಹೆನ್ ಅವರ ಚಿತ್ರ ಬೋರಾಟ್ ಚಿತ್ರ, ಹಾಗು ಅಲಿ.ಜಿ ಪಾತ್ರಗಳು ಇವುಗಳನ್ನು ಸಾಧ್ಯವಾದರೆ ನೋಡಿ)

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (17 replies) May 20, 2007 - 7:38pm
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: anivaasi (May 25 2007 - 8:18am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 26 2007 - 8:49am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 25 2007 - 8:47pm)
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: kuchela (May 25 2007 - 3:27am)
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 11:03am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
      • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 8:21pm)
  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 21 2007 - 12:55am)
    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)
      • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
        • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
          • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
            • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
              • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
                • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
                  • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
                    • ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 24 2007 - 8:57pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:17pm
  • gurubaliga
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 12:15pm
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:04pm
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:51am
  • gurubaliga
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:37am
  • bhasip
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:35am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator