~
ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ
- ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ By: ರಘುನಂದನ (May 26 2007 - 5:03pm)
- ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ By: ASHOKKUMAR (May 26 2007 - 5:12pm)
- ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ By: ASHOKKUMAR (May 25 2007 - 9:51pm)

RSS:
ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ
ಶಿವಮೊಗ್ಗದಲ್ಲಿ ನೆಹರೂ ಪಾರ್ಕು ಇದೆಯಲ್ಲ, ಜನ ಪಾರ್ಕಿನೊಳಗೆ ಹಾಯ್ದು ಪಾರ್ಕಿನ ಇನ್ನೊಂದು ಬದಿಯನ್ನು ತಲುಪುವುದು ರೂಢಿ. ಒಂದು ಬದಿಯ ಗೇಟಿಗೆ ಹತ್ತಿರವಾಗಿ ಒಂದು ಪುಟ್ಟ ಪ್ರಾಣಿಗಳ ಪಂಜರದಲ್ಲಿ ಮಂಗ, ಪಾರಿವಾಳ ಇತ್ಯಾದಿಗಳನ್ನು ಸಲಹಿದ್ದಾರೆ(ಸಲಹಿದ್ದರು) ಇವುಗಳ ಪಂಜರದ ನಂತರ ಇನ್ನೊಂದು ಚಿಕ್ಕ ಮನೆಯಂಥಾದ್ದನ್ನು ನಿರ್ಮಿಸಿ ಒಳಗಡೆ ಹಲವಾರು ಹಾವುಗಳನ್ನು ಬಿಟ್ಟಿದ್ದರು. ಅದರಲ್ಲಿಯೇ ಇನ್ನೊಂದು ಭಾಗವನ್ನು ಮಾಡಿ ಅದರಲ್ಲಿ ನಾಲ್ಕಾರು ಕಾಳಿಂಗಸರ್ಪಗಳನ್ನೂ ಬಿಟ್ಟಿದ್ದರು. ಹೊರಗಿನಿಂದ ನೋಡಲು ಅನುಕೂಲವಾಗುವಂತೆ ಜರಡಿಯಂತಹ ಜಾಲರಿಯನ್ನು ಬಿಗಿದು ಅದರ ಮೇಲೆ "ಅಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ" ಎನ್ನುವ ಬೋರ್ಡನ್ನೂ ನೇತು ಹಾಕಿದ್ದರು! ಅಪ್ಪಣೆ ಕೊಟ್ಟರೂ ಕಾಳಿಂಗಸರ್ಪಗಳಿರುವ ಕಿಷ್ಕಿಂಧೆಯಂತಹ ಕೋಣೆಯೊಳಗೆ ಹೋಗುವ ಧೀರ ಶಿವಮೊಗ್ಗದಲ್ಲಿ ಯಾರಿರಬಹುದೆಂದು ನನಗೆ ಗೊತ್ತಾಗಲಿಲ್ಲ. ಇದು ಐದಾರು ವರ್ಷಗಳ ಹಿಂದೆ ನೋಡಿದ್ದು. ಈಗ ಏನಿದೆಯೋ?. ಬಹುಶಃ ಆ ಹಾವುಗಳು ಯಾರದೋ ಬೆಲ್ಟುಗಳಾಗಿ ಪರಿವರ್ತನೆಯಾಗಿರಲಿಕ್ಕೂ ಸಾಕು.
ಅಂದ ಹಾಗೆ : ಕಾಳಿಂಗಸರ್ಪಕ್ಕೆ ರೇಡಿಯೋಕಾಲರ್ ತೊಡಿಸಿ ಅದರ ಬಗ್ಗೆ ಅಧ್ಯಯನ ಮಾಡುತ್ತಿದ್ದುದನ್ನು ನ್ಯಾಶನಲ್ ಜಿಯೋಗ್ರಫಿಯಲ್ಲಿ ನೋಡಿದ ನೆನಪು.
ಎನಗಿಂತ ಕಿರಿಯರಿಲ್ಲ