ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
- ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ By: kishorpatwardhan (May 26 2007 - 11:54pm)
- ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ By: mahesha (May 26 2007 - 10:52pm)
- ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ By: ASHOKKUMAR (May 26 2007 - 9:09pm)


RSS:
ಉ: ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
ಬೆಂಗಳೂರೊಂದೇ ಈ ತೊಂದರೆಗಳಿಂದ ಬಳಲುತ್ತಿಲ್ಲ. ಮುಂಬಯಿ ಇದಕ್ಕಿಂತ ಹದಗೆಟ್ಟ ಪಟ್ಟಣವಂತೆ. ಅದಲ್ಲಿ ದಿನಾಲೂ ಲೋಕಲ್ ರೈಲಿಗೆ ಸಿಕ್ಕಿ ಸಾಯ್ತಾನೇ ಇರ್ತಾರಂತೆ.
ಒಟ್ಟಿನಲ್ಲಿ ನಮ್ಮ ದೇಶದೋರಿಗೆ, ಅಂದರೆ ನಮಗೆ ದೊಡ್ಡ ದೊಡ್ಡ ಪಟ್ಟಣ-ಹೊಳಲುಗಳನ್ನು ಕಟ್ಟಿ, ಅವನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ಲ. ಇದು ನಮ್ಮ ದೇಶದ ಎಲ್ಲಾ ದೊಡ್ಡವೊಳಲುಗಳ ಪಾಡೇ.
ಪಾಡು ಹೀಗಿರುವಾಗ ಬರೀ ಬೆಂಗಳೂರೇ ಎಕ್ಕುಟ್ಟಿ ಹೋಗಿದೇ, ಅಂದು ನೊಂದುಕೊಳ್ಳೋದು ಬೇಡ.
ಬೆಂಗಳೂರು ನಮ್ಮ ದೇಶದ ಬೇರೆ ಹೊಳಲುಗಳಿಗಿಂತ ಹಲವು ಸಂಗತಿಗಳಲ್ಲಿ ಮೇಲು.
೧) ಕೊಳಚೆಗೇರಿಗಳು ಬಹಳ ಕಡಮೆ
೨) ಕೆಲಸದ ಅವಕಾಶ ಹೆಚ್ಚು, ಅದೂ white-collarಕೆಲಸಗಳು ಹೆಚ್ಚುತ್ತಾ ಇವೆ.
೩) ಕಾಲೇಜುಗಳು ಹೆಚ್ಚು
೪) ಆಸ್ಪತ್ರೆ, ಅದರಲ್ಲೂ speciality ಆಸ್ಪತ್ರೆಗಳೂ ಹೆಚ್ಚಾಗಿಯೇ ಇವೆ.
ಅದೆಲ್ಲಕ್ಕಿಂತ, ಬೆಂಗಳೂರನ್ನು ಯಾವಾಗಲೂ ತೆಗಳಿಕೊಂಡು ಇರುವವರಿಗೂ, ಈ ಊರನ್ನು ಬಿಟ್ಟು ಹೋಗುವ ಕೊಂಚ ಮನವು ಇಲ್ಲ. ಇಲ್ಲದಿದ್ದರೆ ಯಾಕೆ ಇಲ್ಲಿಗೆ ಹೀಗೆ ಮಂದಿ ಗುಳೆ ಬರುತ್ತಿದ್ದರು.
ನೀವು ಏನೇ ಹೇಳಿ ಸಾರ್ "ನಮ್ ಬೆಂಗಳೂರು ಅಂದ್ರೆ ನಮ್ ಬೆಂಗಳೂರೇ"!! ನಂಗಂತೂ ಇದು ಬಹಳ ಇಷ್ಟವಾದ ಊರು.
- ಮಾಯ್ಸ