ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಭಗವದ್ ಗೀತೆಯ ಶ್ಲೋಕ!

May 31, 2007 - 2:56pm — benaka

ಉ: ಭಗವದ್ ಗೀತೆಯ ಶ್ಲೋಕ!

benaka's picture

ಮಹೇಶರೇ,

ಒಳ್ಳೆಯ ಪ್ರಶ್ನೆಯನ್ನೇ ಕೇಳಿದಿರಿ; ನನಗೆ ತಿಳಿದಿದ್ದನ್ನು ಹೇಳುತ್ತೇನೆ:

ಅಹಮ್ ವೈಶ್ವಾನರೋ... ಚತುರ್ವಿಧಮ್|| ಶ್ಲೋಕದ ಮೂರು ಪಾದಗಳನ್ನು ಸರಿಯಾಗಿಯೇ ತಿಳಿಸಿದ್ದೀರಿ. ಆದರೆ, ಕೊನೆಯ ಪಾದದ ವಿವರಣೆ ಮಾತ್ರ ತಪ್ಪಾಗಿದೆ!
ಪಚಾಮ್ಯನ್ನಂ ಚತುರ್ವಿಧಮ್ - ಎಂದರೆ "ಅನ್ನವನ್ನು ನಾಲ್ಕು ತೆರನಾಗಿ ಅರಗಿಸುವೆ" ಎಂದರ್ಥವಲ್ಲ! ಬದಲಿಗೆ "ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ. --> ’ಪಚಾಮಿ ಚತುರ್ವಿಧಂ ಅನ್ನಂ’ ಎಂದು ಮರುಜೋಡಿಸಬೇಕು.

ಇಲ್ಲಿ ಅನ್ನವೆಂದರೆ ಈಗ ನಾವೆಲ್ಲ ತಿಳಿದಿರುವ ’ನೀರಿನಲ್ಲಿ ಬೇಯಿಸಿದ ಅಕ್ಕಿ’ ಅಲ್ಲ! ಬದಲಿಗೆ ಎಲ್ಲ ರೀತಿಯ ’ಆಹಾರ’ ಎಂದರ್ಥ. ಅಕ್ಕಿಯ ಅನ್ನವನ್ನು ತಯಾರಿಸಿ ತಿನ್ನುವುದು ಮಾನವರು ಮಾತ್ರ; ಆದರೆ ಶ್ರೀಕೃಷ್ಣ "...ಪ್ರಾಣಿನಾಂ ದೇಹಮಾಶ್ರಿತಃ" ಎಂದು ಹೇಳಿರುವುದರಿಂದ ಈ ’ಅನ್ನ’ ಎಲ್ಲ ’ಪ್ರಾಣಿ’(ಪ್ರಾಣವಿರುವ ಜೀವಿ)ಗಳು ತಿನ್ನಬಲ್ಲ ಆಹಾರ ಎಂದರ್ಥ. ಈ ಎಲ್ಲ ಪ್ರಾಣಿಗಳ ಅಹಾರವನ್ನೂ ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು - ಅದನ್ನೇ ಇಲ್ಲಿ ’ಚತುರ್ವಿಧಂ ಅನ್ನಂ’ ಎಂದು ಹೇಳಿರುವುದು.

ಆ ನಾಲ್ಕು ವಿಧಗಳೇ - ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.

ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು [ಭಕ್ಷ್ -> ಕಚ್ಚು, ಕಡಿ, ಅಗಿ, ಜಗಿ ಎಂದರ್ಥ] ಉದಾ: ಹಣ್ಣು, ಅಕ್ಕಿಯ ಅನ್ನ

ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು [ಭುಜ್/ಭುಂಜ್ -> ತಿನ್ನು, ನವಣಿಸು, ನುಂಗು] ಉದಾ: ಗಂಜಿ, ಹಿಟ್ಟು

ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು [ಲಿಹ್ -> ನೆಕ್ಕು, ನಾಲಿಗೆಯಿಂದ ಸವರು] ಉದಾ: ಉಪ್ಪಿನಕಾಯಿಯ ರಸ, ಬೆಲ್ಲದ ಪಾಕ

ಚೋಷ್ಯ = ಹೀರಿ ತಿನ್ನಲು/ಕುಡಿಯಲು ಯೋಗ್ಯವಾದುದು [ಚುಷ್ -> ಹೀರು, ಕುಡಿ] ಉದಾ: ನೀರು, ಮಾವಿನ ರಸ

ಈ ನಾಲ್ಕು ವಿಧದ ’ಅನ್ನ’ಗಳನ್ನು ಸೇವಿಸುವ ಎಲ್ಲ ಜೀವಿಗಳ ಜಠರಾಗ್ನಿಯ ರೂಪದಲ್ಲಿ ಪರಮಾತ್ಮನಿದ್ದಾನೆ ಎಂಬುದೇ ಇಲ್ಲಿಯ ಸಾರ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಭಗವದ್ ಗೀತೆಯ ಶ್ಲೋಕ! By: mahesha (19 replies) May 31, 2007 - 12:57pm
  • ಉ: ಭಗವದ್ ಗೀತೆಯ ಶ್ಲೋಕ! By: benaka (May 31 2007 - 2:56pm)
    • ಉ: ಭಗವದ್ ಗೀತೆಯ ಶ್ಲೋಕ! By: mahesha (May 31 2007 - 3:36pm)
      • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 6:27pm)
        • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 6:42pm)
          • ಉ: ಭಗವದ್ ಗೀತೆಯ ಶ್ಲೋಕ! By: mahesha (May 31 2007 - 6:59pm)
          • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 6:54pm)
            • ಉ: ಭಗವದ್ ಗೀತೆಯ ಶ್ಲೋಕ! By: mahesha (May 31 2007 - 7:02pm)
              • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 7:34pm)
                • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 7:36pm)
                  • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 7:39pm)
                    • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 7:42pm)
                      • ಉ: ಭಗವದ್ ಗೀತೆಯ ಶ್ಲೋಕ! By: mahesha (May 31 2007 - 8:08pm)
                        • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 8:28pm)
                          • ಉ: ಭಗವದ್ ಗೀತೆಯ ಶ್ಲೋಕ! By: mahesha (May 31 2007 - 8:40pm)
            • ಉ: ಭಗವದ್ ಗೀತೆಯ ಶ್ಲೋಕ! By: kishorpatwardhan (May 31 2007 - 6:57pm)
        • ಉ: ಭಗವದ್ ಗೀತೆಯ ಶ್ಲೋಕ! By: mahesha (May 31 2007 - 6:41pm)
  • ಉ: ಭಗವದ್ ಗೀತೆಯ ಶ್ಲೋಕ! By: ವೈಭವ (May 31 2007 - 1:55pm)
    • ಉ: ಭಗವದ್ ಗೀತೆಯ ಶ್ಲೋಕ! By: mahesha (May 31 2007 - 3:31pm)
      • ಉ: ಭಗವದ್ ಗೀತೆಯ ಶ್ಲೋಕ! By: nandakishore_bhat (Jun 11 2007 - 11:36pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
ಇನ್ನಷ್ಟು


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator