sampada.net ನಾನು ಕೊಂಡುಕೊಂಡಿದ್ದು ಹೋದ ವರ್ಷ. ಆಗ ನನಗೆ ಈ ಡೊಮೈನ್ ಕೊಳ್ಳುವುದಕ್ಕೆ ಬೇರೆ ಉದ್ದೇಶವಿತ್ತು. ಕನ್ನಡ ಲೋಕಲೈಸೇಶನ್ (ಆಕಾ l10n) ಗೆ ಒಂದು ಪ್ರತ್ಯೇಕ ಡೊಮೈನ್ ಇರಲಿ ಎಂದು ಆಲೋಚಿಸಿ ನಿರ್ಧಾರ ಮಾಡಿ ನಾನು ಮತ್ತು ಪ್ರಮೋದ್ ಎಲ್ಲರೂ ಜ್ಞಾಪಕವಿಟ್ಟುಕೊಳ್ಳಬಹುದಾದಂತ ಒಂದು ಒಳ್ಳೆಯ ಹೆಸರಿನ ಡೊಮೈನ್ ಕೊಳ್ಳೋಣವೆಂದು ಲೆಕ್ಕ ಹಾಕಿದ್ದೆವು.
ಯಾವುದಾದರೂ ಒಳ್ಳೆಯ ಹೆಸರು ಸೂಚಿಸಿ ಎಂದು ಕಾಲೇಜು ಅಧ್ಯಾಪಕರಾದ ಮಾಮನನ್ನು ಕೇಳಿದಾಗ 'ಸಂಪದ' ಎಂದರು.
sampada.com ಯಾರೋ ತೆಗೆದುಕೊಂಡಾಗಿತ್ತು. sampada.org ಕೂಡ ಅಷ್ಟೆ. 'ಸಂಪದ' ಬಹಳ ಒಳ್ಳೆಯ ಹೆಸರೆನಿಸಿದ್ದರಿಂದ sampada.net ಇರಲಿ, ತೊಂದರೆಯಿಲ್ಲ ಎಂದುಕೊಂಡು ತೆಗೆದುಕೊಂಡೆ. ಇದು ಹೋದವರ್ಷ - ಜುಲೈ ೨೦೦೪ ರ ಮಾತು!
ಹಾಗೆ ಕೊಂಡಿದ್ದ ಡೊಮೈನ್ ನಾವು ಉಪಯೋಗಕ್ಕೇ ತರಲಿಲ್ಲ. ಒಂದು ಬಾರಿ IISc ಕನ್ನಡ l10n ತಾಣಕ್ಕಾಗಿ ಒಂದಷ್ಟು ಜಾಗ ಕೊಟ್ಟಿತಾದರೂ ಅದರಲ್ಲಿ ಒಂದೂ ಸರಿ ಇರಲಿಲ್ಲ. ಬಹಳ ನಿಧಾನವಾದ ಸರ್ವರ್ (ಸೆಲೆರಾನ್ ಮೆಶೀನು), ಕೊನೆಗೆ ಡೊಮೈನ್ ಕೂಡ ಅದಕ್ಕೆ ಸಂಪರ್ಕಗೊಳ್ಳುವಂತೆ ಹೊಂದಿಸುವಲ್ಲಿ ತೊಂದರೆಯಾಯಿತು. ಹೀಗಾಗಿ ಅದು ಹಾಗೇ ಉಪಯೋಗಿಸದೇ ಬಿದ್ದಿತ್ತು.
.in ಡೊಮೈನುಗಳು ಹೆಚ್ಚಿನ ಚಾಲನೆಗೆ ಬಂದದ್ದು ಈ ವರ್ಷ ಜನವರಿ ಸಮಯದಲ್ಲಿ. ಆಗಲೇ ಮೈಸೂರಿನ ಶಶಿಶೇಖರ್ ಮತ್ತುಳಿದ ಸ್ನೇಹಿತರೆಲ್ಲ ತಮ್ಮ ತಮ್ಮ .in ಡೊಮೈನ್ ಕೊಂಡದ್ದೂ ನೋಡಿದೆ. ಆಗ ಅದರ ಬೆಲೆ ತುಟ್ಟಿಯಲ್ಲಿತ್ತು (ಈಗಲೂ ಏನೂ ಕಡಿಮೆಯಾಗಿಲ್ಲ). sampada.net ಬಳಕೆಗೆ ಬಾರದೆ ಹಾಗೆಯೇ ಉಪಯೋಗವಿಲ್ಲದೇ ಬಿದ್ದಿದ್ದರಿಂದ "ಬಿಡು, ಇನ್ಯಾಕೆ ಇದಕ್ಕೊಂದು .in ರಿಜಿಸ್ಟರ್ ಮಾಡೋದು" ಅಂತ ಆಲೋಚಿಸಿದೆ, ಆಗ.
ಮೊನ್ನೆ ಮೊನ್ನೆ ಮತ್ತೊಮ್ಮೆ ಇದರ ಆಲೋಚನೆ ತಲೆಗೆ ಹೊಕ್ಕಾಗ sampada.in ಇನ್ನೂ ಹಾಗೇ ಕೊಳ್ಳುವುದಕ್ಕೆ ಲಭ್ಯವಿದೆಯೋ ಎಂದು ಹುಡುಕಿ ನೋಡಿದೆ. ಆದರೆ ಚಂಡೀಗಡದ ಕೇಂದ್ರಾಡಳಿತ ಪ್ರದೇಶದ ಎಸ್ಟೇಟ್ ಕಾರ್ಯಾಲಯ ಅದನ್ನಾಗಲೇ ಕೊಂಡುಕೊಂಡು ಬಿಟ್ಟಿತ್ತು
sampada.in ಏಕೆ ನಮ್ಮದಲ್ಲ...

--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"