ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!

June 6, 2007 - 12:01pm — naasomeswara

ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!

naasomeswara's picture

ನಿಸಾರರೊಡನೆ ಸಾರವತ್ತಾದ ಘಳಿಗೆಗೆಳು.........

ಥಟ್ ಅಂತ ಹೇಳಿ-೭೫೦ ನೆಯ ಕಂತಿಗಾಗಿ ಫ್ರೊ.ನಿಸಾರ್ ಅಹಮದ್ ಅವರನ್ನು ಕರೆಯಿಸಬೇಕು ಎಂದು ಬೆಂಗಳೂರು ದೂರದರ್ಶನಧ ನಿರ್ದೇಶಕಾರದ ದಾ.ಮಹೇಶ್ ಜೋಷಿ, ಕಾರ್ಯಕ್ರಮದ ನಿರ್ಮಾಪಕರಾದ ಶ್ರೀಮತಿ ಎಚ್.ಎನ್.ಆರತಿ ಹಾಗೂ ತಂಡದ ಉಳಿದ ಸದಸ್ಯರು ಸಹಮತದಿಂದ ನಿರ್ಣಯಿಸಿದಾಗ......ಕಾರ್ಯಕ್ರಮದ ಮುದ್ರಣದ ಕಾಲವನ್ನು ಎಲ್ಲರೂ ಎದುರುನೋಡಲಾರಂಬಿಸಿದೆವು.

ದಿ. ೦೨.೦೬.೦೭, ಶನಿವಾರ ಸಂಜೆ ಸುಮಾರು ೫.೦೦ ಗಂಟೆಗೆ ನಿಸಾರರು ಕೇಂದ್ರಕ್ಕೆ ಬಂದಾಗ, ಕೇಂದ್ರದ ಉಪನಿರ್ದೇಶಕರಾದ ಶ್ರೀರಾಮಚಂದ್ರ, ಶ್ರೀಮತಿ ಎಚ್.ಎನ್.ಆರತಿ, ನಾನು ಹಾಗೂ ತಂಡದ ಉಳಿದ ಸದಸ್ಯರು ಸ್ವಾಗತಿಸಿದೆವು. ನನ್ನನ್ನು ನೋಡುತ್ತಿರುವಂತೆಯೇ ನೀವು ಕನ್ನಡದ ಪ್ರೊಫೆಸರೋ ಇಲ್ಲ ಇಂಗ್ಲೀಷಿನ ಪ್ರೊಫೆಸರೋ ಎಂದು ಕೇಳಿದರು. ಆಗ ನಾನು, ಎರಡೂ ಅಲ್ಲ ಸಾರ್, ನಾನು ಇಂಜಕ್ಷನ್ ಕೊಡೋ ಡಾಕ್ಟರ್ ಅಂದೆ. ಅವರಿಗೆ ಪರಮಾಶ್ಚರ್ಯವಾಯಿತು. ನಂತರ ನಾನು ಸರ್ಕಾರಿ ಕಾಲೇಜಿನಲ್ಲಿ ಓದಿದ್ದು, ಎರಡು ವರ್ಷ ಭೂಗರ್ಭಶಾಸ್ತ್ರವನ್ನು ಅಧ್ಯಯನವನ್ನು ಮಾಡಿದ್ದು, ಅಂದಿನ ದಿನಗಳಲ್ಲಿ ದಾಖಲೆ ಎನ್ನಬಹುದಾದ ೯೯ (೧೦೦ಕ್ಕೆ) ಅಂಕಗಳನ್ನು ಗಳಿಸಿದ್ದು, ಅವರನ್ನು ಗಣ್ಯ ಅತಿಥಿಯಾಗಿ ಕನ್ನಡ ಸಂಘಕ್ಕೆ ಆಹ್ವಾನಿಸಿದ್ದು, ಅಲ್ಲಿ ಅವರು ಥಮ್ಮ ಕವನಗಳನ್ನು ಓದಿದ್ಧು, ನಂತರ ಸಂವಾದವನ್ನು ನದೆಸಿದ್ದು ಎಲ್ಲವನ್ನೂ ಹೇಳಿದೆ. ಶ್ರೀಕಲಾದರ್ಶಿ (ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು) ಅವರೊಡನೆ ಸಕ್ರಿಯವಾಗಿದ್ದುದನ್ನು ವಿವರಿಸಿದೆ. ಹಳೆಯ ನೆನಪುಗಳು ಬಂದು ಭಾವಪೂರ್ಣರಾದರು.

ಅರ್ಧ ಕಪ್ ಚಹದ ನಂತರ, ಮೇಕಪ್ ಮುಗಿಸಿಕೊಂಡು ಸ್ಟುಡಿಯೋ ಪ್ರವೇಶಿಸಿದರು. ವಿಶೇಷ ಕಾರ್ಯಕ್ರಮಕ್ಕಾಗಿ ಸರಳವಾದ ಹೊಸ ಸೆಟ್ ಹಾಕಲಾಗಿತ್ತು. ಇಬ್ಬರೂ ನಮ್ಮ ಬೂಟುಗಳನ್ನು ಕಳಚಿ ಸೆಟ್ ಮೇಲೆ ಕುಳಿತೆವು. ಬೆಳಕನ್ನು ಹೊಂದಿಸುತ್ತಿರುವಾಗ ನಮ್ಮ ಕಾರ್ಯಕ್ರಮದ ಬಗ್ಗೆ ವಿಚಾರಿಸಿದರು. ಇದುವರೆಗೂ ಸುಮಾರು ೧೨,೦೦೦ ಪ್ರಶ್ನೆ, ಸುಮಾರು ೮,೦೦೦ ಕನ್ನಡ ಪುಸ್ತಕಗಳನ್ನು ಕೊಟ್ಟಿರುವುದರ ಬಗ್ಗೆ ವಿವರಿಸಿದೆ. ಆಗ ಅವರು ತಮ್ಮ ಆಶ್ಚರ್ಯ ಹಾಗೂ ಸಂತೋಷವನ್ನು ವ್ಯಕ್ತಪಡಿಸಿದರು. ಎಲ್ಲ ಪ್ರಶ್ನೆಗಳನ್ನು ಪುಸ್ತಕರೂಪದಲ್ಲಿ ತರಲು ಸಲಹೆ ನೀಡಿದರು.

ಕಾರ್ಯಕ್ರಮವನ್ನು ನಿಸಾರರ `ಜೋಗದ ಸಿರಿ ಬೆಳಕಿನಲ್ಲಿ.....` ಕವನವನ್ನು ತೋರಿಸುವುದರ ಮೂಲಕ ಆರಂಬಿಸಿದೆವು. ಆ ಕವನದಲ್ಲಿ ಚಿತ್ರೀಕರಿಸಿದ್ದ ಕನ್ನಡ ಕವಿಗಳ ಚಿತ್ರಮಾಲಿಕೆಯಿಂದ ಕಾರ್ಯಕ್ರಮ ಆರಂಭವಾದದ್ದು, ಕಾರ್ಯಕ್ರಮಕ್ಕೆ ಒಂದಷ್ಟು ಕನ್ನಡತನದ ಕಳೆಯನ್ನು ತಂದುಕೊಟ್ಟಿತು.

ಮುಸ್ಲೀಮರಾಗಿರುವ ನಿಸಾರರು ಕನ್ನಡದ ಬಗ್ಗೆ ಒಲವನ್ನು ಗಳಿಸಿಕೊಂಡ ಪರಿ ಹೇಗೆ ಎಂಬ ಕುತೂಹಲವು ನನಗಿತ್ತು. ಇದಕ್ಕೆ ಕಾರಣ, ನಿಸಾರರ ತಂದೆಯಾದ ಶ್ರೀಕೆ.ಎಸ್.ಹೈದರ್ ಅವರು. ಅಂದಿನ ದಿನಗಳಲ್ಲಿ ಎಲ್ಲ ಮುಸ್ಲೀಮರೂ ತಮ್ಮ ಮಕ್ಕಳನ್ನು ಉರ್ದೂ ಶಾಲೆಗೆ ಕಳುಹಿಸುತ್ತಿದ್ದರೆ, ಹೈದರ್ ಸಾಹೇಬರು ನಿಸಾರರನ್ನು ಕನ್ನಡ ಶಾಲೆಗೆ ಕಳುಹಿಸಿದರು. ಕನ್ನಡ ನಾಡಿನಲ್ಲಿ ಕನ್ನಡಿಗರೊಡನೆ ಬಾಳಿ ಬದುಕಬೇಕಾದ ಅವಶ್ಯಕತೆಯನ್ನು ಕಂಡಿದ್ದ ಅವರು, ತಮ್ಮ ಮಗನನ್ನು ಕನ್ನಡ ಶಾಲೆಗೆ ಕಳುಹಿಸಿ, ತಮ್ಮ ಕನ್ನಡ ಋಣವನ್ನು ತೀರಿಸಿಕೊಂಡಿದ್ದರು.

ನಿಸಾರರ ಬಾಲ್ಯದಲ್ಲಿ ಅಜ್ಞಾತ ಜಾನಪದ ಕವಿಯ `ಧರಣಿ ಮಂದಲದೊಳಗೆ....` ಹಾಗೂ ಕುವೆಂಪು ಅವರ `ಕಿಂದರಿ ಜೋಗಿ` ಕವನಗಳು ಅಪಾರ ಪರಿಣಾಮವನ್ನು ಬೀರಿದವು. ಜೊತೆಗೆ `ಅರೇಬಿಯನ್ ಕಥೆಗಳು` ತಮ್ಮ ಅದ್ಭುತ ಮಾಂತ್ರಿಕ-ಮಾಯಾಜಾಲದ ಕತೆಗಳು ಆಕರ್ಶಿಸಿದ್ದವು. ಯಾರೋ ಶ್ರೀಮಂತರ ಮನೆಯಲ್ಲಿದ್ದ `ಬುಕ್ ಆಫ್ ನಾಲೆಡ್ಜ್` ಪುಸ್ತಕದಲ್ಲಿ ಮೊದಲ ಬಾರಿಗೆ ನಯಾಗರ ಜಲಪಾತದ ಚಿತ್ರವನ್ನು ನೋಡಿದಾಗ `ಜಲಪಾತ` ಎಂಬ ತಮ್ಮ ಮೊತ್ತ ಮೊದಲ ಕವನವನ್ನು ಬರೆದರು. ಆಗ ನಿಸಾರರು ಫೊರ್ತ್ ಫಾರಮ್ (ಎಂಟನೆಯ ತರಗತಿ) ನಲ್ಲಿದ್ದರು.

ನಿಸಾರರು ಭೂಗರ್ಭಶಾಸ್ತ್ರಕ್ಕೆ ಸಂದ ಬಗೆಯೂ ಕುತೂಹಲಕರವಾಗಿದೆ. ಲೆಕ್ಕದಲ್ಲಿ ಸ್ವಲ್ಪ ದಡ್ಡರಾಗಿದ್ದ (ನಾನು ಪೂರ್ತಿ ದಡ್ಡ) ಅವರು ಹೆಚ್ಚು ಅಂಕಗಳನ್ನು ಗಳಿಸದ ಕಾರಣ ಪಿ.ಸಿ.ಎಂ ಸಿಗಲಿಲ್ಲ. ಚಿಕ್ಕಪ್ಪನವರ ಸಲಹೆಯ ಮೇರೆಗೆ ಸಿ.ಬಿ.ಜಿ (ಕೆಮಿಸ್ಟ್ರಿ, ಬಾಟನಿ, ಜಿಯಾಲಜಿ) ಅಧ್ಯಯನವನ್ನು ಮಾಡಿದರು. ಮೈಸೂರು ಮೈನ್ಸ್ ಅಂಡ್ ಜಿಯಾಲಜಿ ಸಂಸ್ಥೆಯಲ್ಲಿ ಅಸಿಸ್ಟಂಟ್ ಜಿಯಾಲಜಿಸ್ಟ್ ಆಗಿ ಗುಲ್ಬರ್ಗದಲ್ಲಿ ಕೆಲಸ ಮಾಡುವಾಗ, ಸುತ್ತಮುತ್ತಲಿನ ಸುಣ್ಣ, ಮಣ್ಣಿನ ಬದುಕು ಬೇಸರವನ್ನು ತರಿಸಿತು. ದಸರಾ ಕವಿಸಮ್ಮೇಳನದಲ್ಲಿ ಕುವೆಂಪು ಅವರ ಕಣ್ಣಿಗೆ ಬಿದ್ದ ನಿಸಾರರ ಬದುಕಿನಲ್ಲಿ ಒಂದು ದೊಡ್ಡ ತಿರುವು. ಅಧ್ಯಾಪನ ಕ್ಸೇತ್ರವನ್ನು ಪ್ರವೇಶಿಸಿದರು. ನಂತರ ತಿರುಗಿ ನೋಡಲಿಲ್ಲ. ಒಬ್ಬ ಸಹೃದಯ ಕವಿ ಕನ್ನಡಕ್ಕೆ ದಕ್ಕಿದರು.

ನಿಸಾರರಿಗೆ ಕ್ರಿಕೆಟ್ ಹಾಗೂ ಫ್ತುಟ್‍ಬಾಲ್ ಕ್ರೀಡೆಗಳೆಂದರೆ ಪಂಚಪ್ರಾಣ. ಈಗಲೂ ವರ್ಲ್ದ್ ಕಪ್ ಫುಟ್ಬಾಲ್ ಮಧ್ಯರಾತ್ರಿಯಲ್ಲಿದ್ದರೂ ಸರಿ, ಬೆಳಗಿನ ಜಾವ ಮೂರು ಗಂಟೆಯಲ್ಲಿದ್ದರೂ ಸರಿ, ಎದ್ದು ನೋಡುತ್ತಾರೆ. ಅವರು ಎಮ್.ಎಸ್‍ಸಿ ಓದುವಾಗ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ವಾಸ. ಅಂದಿನ ದಿನಗಳಲ್ಲಿ ರಾಜ್ಯ, ರಾಷ್ತ್ರೀಯ ಹಾಗೂ ಅಂತಾರಾಷ್ತ್ರೀಯ ಕ್ರಿಕೆಟ್ ಮ್ಯಾಚುಗಳು ನಡೆಯುತ್ತಿದ್ಧುದು ಸೆಂಟ್ರಲ್ ಕಾಲೇಜಿನ ಮೈದಾನದಲ್ಲಿ. ಹಾಗಾಗಿ ನಿಸಾರರು ಅಲ್ಲಿಗೆ ಹಾಜರ್! ಕೈಯಲ್ಲಿ ಸ್ಫಟಿಕಶಾಸ್ತ್ರದ ರೆಕಾರ್ಡ್ ಇಲ್ಲವೇ ಹಳೆಯ ಎಕ್ಸರ್‍ಸೈಸ್ ಪುಸ್ತಕ. ಸ್ಫಟಿಕಗಳ ಚಿತ್ರ ಬಿಡಿಸುತ್ತಾ ಮ್ಯಾಚ್ ನೋಡುವುದು....ಇಲ್ಲವೇ ಹಠಾತ್ತನೆ ಕವನದ ಸಾಲು ಮಿಂಚಿನಂತೆ ಹೊಳೆದಾಗ, ಅಲ್ಲಿಯೇ ಅದನ್ನು ಬರೆಯುವುದು.....ಈ ವಿಷಯವನ್ನು ಎತ್ತಿದಾಗ ನಿಸಾರರಿಗೆ ಆಶ್ಚರ್ಯ! ಕಾಲಗರ್ಭದಲ್ಲಿ ಹೂತುಹೋಗಿದ್ದ ಈ ಘಟನೆಯನ್ನು ನೆನಪಿಸಿಕೊಂಡರು. ಯಾರಿಗೂ ಗೊತ್ತಿಲ್ಲದ, ಎಲ್ಲಿಯೂ ದಾಖಲಾಗದ ಈ ಮಾಹಿತಿ ನಿಮಗೆಲ್ಲಿ ದೊರೆಯಿತು ಎಂದು ಕೇಳಿದರು. ಇದನ್ನು ನನಗೆ ಹೇಳಿದವರು ನನ್ನ ಗುರುಗಳಾಗಿರುವ ಶ್ರೀ ಸಂಪಟೂರು ವಿಶ್ವನಾಥ್ ಅವರು. ಅವರು ನಿಸಾರರ ಜೂನಿಯರ್!

ಶ್ರೀಸಂಪಟೂರರ ಶ್ರೀಮತಿಯರಾದ ರಾಜಲಕ್ಸ್ಮಿ ಅವರು ನಿಸಾರರ ಪ್ರಥಮ ವಿದ್ಯಾರ್ಥಿನಿ...ಚಿತ್ರದುರ್ಗದಲ್ಲಿ. ತರಗತಿಯಲ್ಲಿ ಟೇಬಲ್ಲಿನ ಮೇಲೆ ಕುಳಿತು ಕುವೆಂಪು ಅವರ `ನಾನೇ ವೀಣೆ..ನೀನೆ ತಂತಿ..`ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎನ್ನುತ್ತಾರೆ ಶ್ರೀಮತಿ ರಾಜಲಕ್ಷಿ! ಈ ಬಗ್ಗೆ ನಿಸಾರರನ್ನು ವಿಚಾರಿಸಿದಾಗ, ತಾವು ಹರಯದ ದಿನಗಳಲ್ಲಿ ರಫಿ, ತಲತ್ ಮೆಹಮೂದ್, ಲತಾ ಅವರ ಹಾಡುಗಳಿಂದ ಪ್ರಭಾವಿತರಾಗಿದ್ದುದಾಗಿಯೂ, ಅದರ ಫಲವಾಗಿ ಬೇಂದ್ರೆ, ಕುವೆಂಪು, ಪುತಿನ ಅವರ ಹಾಡುಗಳನ್ನು ಹಾಡುತ್ತಿದ್ದುದಾಗಿಯೂ ಹೇಳಿದರು. ಸಾರ್ವಜನಿಕರ ಮುಂದೆ ಹಾಡುವಷ್ಟು ಪ್ರಬುದ್ದ ಕಂಠ ತಮಗಿಲ್ಲ ಎಂದರು.

ನಂತರ ಅವರ ವಿಡಂಬನಾತ್ಮಕ ಗೀತೆಗಳ (ಕುರಿಗಳು ಸಾರ್, ಅಮ್ಮ, ಆಚಾರ ಮತ್ತು ನಾನು) ಜೊತೆಯಲ್ಲಿ ಬರುವ ವಿಚಾರದ ಬಗ್ಗೆ ಮಾತನಾಡಿದೆವು. ಚಿಲಿಯ ಮಹಾನ್ ಕವಿ ಪ್ಯಾಬ್ಲೊ ನೆರುಡ ಅವರ ಗೀತೆಗಳನ್ನು `ಬರೀ ಮರ್ಯಾದಸ್ತರೇ` ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ ಬಗ್ಗೆ, ಕವಿ ಇಕ್ಬಾಲ್ ಮೊಹಮದ್ ಅವರ `ಸಾರೆ ಜಹಾಮ್ ಸೆ ಅಚ್ಚ ಹಿಂದೂಸ್ಥಾನ್ ಹಮಾರ`ಗೀತೆಯನ್ನು ಕನ್ನಡಕ್ಕೆ ತಂದ ಬಗ್ಗೆ ಮಾತನಾಡಿದೆವು. ನಿಸಾರರು ಇಡೀ ಗೀತೆಯನ್ನು ವಾಚಿಸಿದರು.

`ನಿಮ್ಮೊಡನಿದ್ದು ನಿಮ್ಮಂತಾಗದೆ` ಎಂಬ ಕವನ ನನ್ನ ಕುತೂಹಲವನ್ನು ಕೆರಳಿಸಿತ್ತು. ಈ ಬಗ್ಗೆ ವಿಚಾರಿಸಿದಾಗ, ಎಂದೊ ತಮ್ಮ ಮನಸಿಗಾದ ನೋವು ಈ ರೀತಿ ಕವನ ರೂಪದಲ್ಲಿ ಬಂದಿತು ಎಂದರು. ಆ ನೋವನ್ನು ಯಾರು ಮಾಡಿದರು ಎಂಬುದನ್ನು ಹೇಳಲು ನಿರಾಕರಿಸಿದರು.

`ಥಟ್ ಅಂತ ಹೇಳಿ` ಕಾರ್ಯಕ್ರಮ ೧೦೦೦ ಕಂತುಗಳನ್ನು ಮೀರಿ ಸಾಗಲಿ ಎಂದರು. ಕನ್ನಡದ ಜೊತೆಗೆ ಜಗದ ಅರಿವನ್ನು ನೀಡಲಿ ಎಂದು ಆಶಿಸಿದರು. ನಾವು ಅವರಿಗೆ ಕೊಟ್ಟ ಗ್ರಂಥ ಕೊಡುಗೆಯನ್ನು ಸಂತೋಷದಿಂದ ಸ್ವೀಕರಿಸಿದರು. ನನ್ನ ಎರಡು ಪುಸ್ತಕ `ಹುಲಿಯ ಬೆನ್ನೇರಿ` ಹಾಗೂ `ಹುಲಿಯ ಜೊತೆಜೊತೆಯಲ್ಲಿ`ಕುತೂಹಲದಿಂದ ನೋಡಿದರು. ಒತ್ತಡ ನಿರ್ವಹಣೆಯ ಈ ಪುಸ್ತಕಗಳನ್ನು ಓದಿ ಪತ್ರ ಬರೆಯುವುದಾಗಿ ಹೇಳಿದರು.

ಕೇಳಲು ನನ್ನಲ್ಲಿ ಸಾಕಷ್ಟು ಪ್ರಶ್ನೆಗಳಿದ್ದವು. ಹೇಳಲು ನಿಸಾರರು ಸಿದ್ದವಿದ್ದರು. ಆದರೆ ಶ್ರೀಮತಿ ಆರತಿಯವರು ಸಮಯ ಮುಗಿದಿರುವುದನ್ನು ಇಯರ್ ಫೊನಿನಲ್ಲಿ ಸೂಚಿಸಿದರು.....

೭೫೦ ರ ಹಂತವನ್ನು ತಲುಪಿದ್ದ ಸಂತಸವನ್ನು ಹಂಚಿಕೊಳ್ಳಲು ನಿಸಾರರು ಕೇಕ್ ಕತ್ತರಿಸಿದರು....ಕೇಕಿನ ಸವಿಯೊಡನೆ....೭೫೦ರ ಗಡಿ ಮುಟ್ಟಿದ ಸಂತೋಷದೊಡನೆ...ನಿಸಾರರೊಡನೆ ಕಳೆದ ಸಾರವತ್ತಾದ ಘಳಿಗೆಗಳೊಡನೆ.....ಅಂದಿನ ಕಾರ್ಯಕ್ರಮ ಮುಗಿಸಿದೆವು.

ಸವಿನೆನಪುಗಳು...ಸವಿದಷ್ಟು ಹಸಿರು....

- ನಾಸೋಮೇಶ್ವರ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
`ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: naasomeswara (11 replies) May 31, 2007 - 12:07pm
  • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: naasomeswara (Jun 6 2007 - 12:01pm)
  • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: pavanaja (Jun 5 2007 - 1:12pm)
    • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: naasomeswara (Jun 6 2007 - 9:34am)
  • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: prapancha (May 31 2007 - 4:24pm)
    • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: kishorpatwardhan (Jun 3 2007 - 9:45am)
      • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: ASHOKKUMAR (Jun 3 2007 - 1:03pm)
        • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: kishorpatwardhan (Jun 3 2007 - 4:46pm)
          • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: mahesha (Jun 4 2007 - 1:32pm)
            • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: mahesha (Jun 4 2007 - 1:34pm)
          • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: ವೈಭವ (Jun 3 2007 - 11:50pm)
  • ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್! By: ಶಿವ (May 31 2007 - 3:40pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:44am
ಇನ್ನಷ್ಟು


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator