ಹೊಗಳಿ ಹೊನ್ನ ಶೂಲಕ್ಕೇರಿಸದಿರಿ
- ಕಂಬಾರರವರ ಮಾತುಗಳಿಂದ... By: (Nov 16 2005 - 10:46pm)
- ತಿದ್ದಿರುವೆ By: hpn (Nov 17 2005 - 7:22pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ಖಂಡಿತ By: (Nov 22 2005 - 4:39pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ತಿದ್ದಿರುವೆ By: hpn (Nov 17 2005 - 7:22pm)
- ಎರಡನೆಯ ಸಿಕ್ಸರ್! By: tvsrinivas41 (Nov 15 2005 - 9:16pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)
- ಇಸ್ಮಾಯಿಲ್ ಸ್ಫೂರ್ತಿ By: muralihr (Nov 17 2005 - 11:48pm)
- By: (Nov 16 2005 - 10:52pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)

RSS:
ಹೊಗಳಿ ಹೊನ್ನ ಶೂಲಕ್ಕೇರಿಸದಿರಿ
ತಮ್ಮ ಹೊಗಳಿಕೆ, ಅಭಿನಂದನೆಗಳಿಗೆ ಧನ್ಯವಾದಗಳು. ಚೆನ್ನಾಗಿದೆ ಎಂದಷ್ಟೇ ಹೇಳಿದರೆ ನಮ್ಮ ಕೆಲಸದ ಗುಣಮಟ್ಟ ಎಂಥದ್ದು ಎಂಬುದು ಅರ್ಥವಾಗುವುದಿಲ್ಲ. ನಾನಂತೂ ಇದೇ ಮೊದಲ ಬಾರಿಗೆ ಈ ಬಗೆಯ ಸಂದರ್ಶನಗಳಲ್ಲಿ ತೊಡಗಿದ್ದೇನೆ. ಪತ್ರಿಕೆಗಳಿಗಾಗಿ ಸಂದರ್ಶಿಸುವಾಗ ನನ್ನ ಧ್ವನಿ ಹೇಗಿದೆ. ಎಷ್ಟು ಸ್ಪಷ್ಟವಾಗಿದೆ ಎಂಬ ಸಮಸ್ಯೆಗಳಿರುವುದಿಲ್ಲ. ಧ್ವನಿಮುದ್ರಿತ ಸಂದರ್ಶನವನ್ನು ಬರೆಹಕ್ಕೆ ಇಳಿಸುವಾಗ ಸರಿಪಡಿಸುವ ಅವಕಾಶವೂ ಇರುತ್ತದೆ. ಧ್ವನಿ ಮುದ್ರಣ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಅದರಿಂದಾಗಿ ಕೆಲವು ಅನುಕೂಲಗಳು ಇವೆಯಾದರೂ ಮಾತಿನ ಧ್ವನಿಯನ್ನು ಬದಲಾಯಿಸಲು ಸಾಧ್ಯವೇ. ಮಾತಿನ prosodyಯನ್ನು ಹೇಗೆ ಬರೆಹದಲ್ಲಿ ತರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಬರೆಹದ ಸ್ವಾತಂತ್ರ್ಯ ಧ್ವನಿ ಮುದ್ರಿತ ಸಂದರ್ಶನದಲ್ಲಿ ಇರುವುದಿಲ್ಲ.
ಈ ಮಿತಿಗಳ ಮಧ್ಯೆ ವೃತ್ತಿಪರ ಸಂದರ್ಶಕರಲ್ಲದ ನಾವು ಹಿರಿಯ ಸಾಹಿತಿಗಳನ್ನು ಸಂದರ್ಶಿಸುವ ಸಾಹಸ ಮಾಡುತ್ತಿದ್ದೇವೆ. ಇದನ್ನು ಇನ್ನಷ್ಟು ಚೆನ್ನಾಗಿ ಮಾಡುವುದಕ್ಕಾಗಿ ನಮಗೆ ನಮ್ಮ ಪ್ರಯತ್ನದ ಮೌಲ್ಯ ಮಾಪನ ಬೇಕಾಗಿದೆ.
ಇಸ್ಮಾಯಿಲ್