ಉ: ಕರುಣೆಯಲ್ಲೂ ಕಲಬೆರಕೆಯೇ?
- ಉ: ಕರುಣೆಯಲ್ಲೂ ಕಲಬೆರಕೆಯೇ? By: ritershivaram (Jul 3 2007 - 10:42am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: krishnamurthy bmsce (Jul 2 2007 - 4:29pm)
- ಉ: ಕರುಣೆಯಲ್ಲೂ ಕಲಬೆರಕೆಯೇ? By: ritershivaram (Jul 3 2007 - 11:35am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jul 3 2007 - 6:41am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: srivathsajoshi (Jun 26 2007 - 4:14pm)
- ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jun 26 2007 - 11:08pm)
- ಉ: ಕರುಣೆಯಲ್ಲೂ ಕಲಬೆರಕೆಯೇ? By: Abhimani (Jun 27 2007 - 1:16am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jun 27 2007 - 5:12am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: Abhimani (Jun 27 2007 - 6:24am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jun 27 2007 - 5:12am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: Abhimani (Jun 27 2007 - 1:16am)
- ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jun 26 2007 - 11:08pm)

RSS:
ಉ: ಕರುಣೆಯಲ್ಲೂ ಕಲಬೆರಕೆಯೇ?
"ಕರುಣೆಯಲ್ಲಿ ಕಲಬೆರೆಕೆ" ಎಂಬ ವ್ಯಾಖ್ಯೆ ಸರಿಯಲ್ಲ.
ಪ್ರೀತಿಯಲ್ಲಿ ಕಲಬೆರೆಕೆ, ನಗುವಿನಲ್ಲಿ, ನಲಿವಿನಲ್ಲಿ,ನೋವಿನಲ್ಲಿ ಕಲಬೆರೆಕೆ ಹೀಗೇ ಇಂತಹ ಭಾವನಾತ್ಮಕ ಪದಗಳೊಂದಿಗೆ "ಕಲಬೆರೆಕೆ" ಪದವನ್ನು ಸೇರಿಸುತ್ತಾ ಹೋಗಬೇಕಾದೀತು!!.
ಯಾಕೆಂದರೆ, ಪ್ರೀತಿ ಮಾಡಬೇಕಲ್ಲಾಂತ ಮಾಡಿದರೆ ಕಲಬೆರೆಕೆ, ನಗಬೇಕಲ್ಲಾಂತ ನಕ್ಕರೆ ಕಲಬೆರೆಕೆ, ಇಲ್ಲದ ನಲಿವನ್ನು ತಂದುಕೊಳ್ಳಬೇಕಾದಾಗಲೂ ಅದು ಕಲಬೆರೆಕೆ, ನೋವು ಆದಾಗಲೂ ನಮಗೇತರ ನೋವು ಅದರಿಂದ ಎಂದು ಭಾವಿಸಿದಾಗಲೂ ಕಲಬೆರೆಕೆಯೆ.
-ಹೀಗೆ ಹೊಸದೊಂದು ವ್ಯಾಖ್ಯೆಯೆ ಸರಣಿಯೆ ಬೆಳೆದೀತು!
ಈಗ ನಿಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ-
ಗಟ್ಕಾ ಚಟವಿದ್ದವನು ಸತ್ತಿದ್ದಾನೆ. ಅವನು ಬದುಕಿದ್ದಾಗ ಅದನ್ನು ತಿನ್ನಬೇಡ ಸಾಯ್ತೀಯ, ನಿನ್ನ ಹೆಂಡತಿ ಮಕ್ಕಳನ್ನ ತಬ್ಬಲಿ ಮಾಡ್ತೀಯ ಅಂತ ಹೇಳಿದ್ದರೆ ಆ ಮನುಷ್ಯ ಕೇಳ್ತೀದ್ದನೇನು. ಹಾಗೆ ಕೇಳುವುದೇ ಆಗಿದ್ದರೆ, ಚಟ ಹತ್ತಿಸಿಕೊಂಡವರನ್ನೆಲ್ಲ ಸರಿ ದಾರಿಗೆ ತರೋದು ಬಹಳ ಬಹಳವೆ ಸುಲಭವಾದೀತು! ಸಮಾಜ ಸುಧಾರಣೆಗೂ ಸಹ.
ಇನ್ನು ಏಡ್ಸ್ ರೋಗಿ ವಿಷಯ ಅವನಿಗೆ ಅನೈತಿಕ ಸಂಬಂಧದಿಂದ ಏಡ್ಸ್ ಬಂತೇ? ಅಥವಾ ನಿಜಕ್ಕೂ ಅವನು ಸಾಚಾ ಮನುಷ್ಯನೇ ಆಗಿದ್ದಿರಬೇಕು(ಯಾಕೆಂದರೆ, ನೀವು ನೋಡಿದ್ದು ಹತ್ತಿರದಿಂದ ಅಲ್ಲ;ಟಿ.ವಿ.ಯಲ್ಲಿ ಆ ಮನುಷ್ಯನನ್ನು) ಯಾವುದೋ ರೀತಿಯಲ್ಲಿ ಪಾಪ ಆತನಿಗೆ ಆ ರೋಗ ಅಂಟಿರಲೂ ಬಹುದು. ಸರಿ, ನಿಜಕ್ಕೂ ಅವನು ಕರುಣೆಗೆ ಅರ್ಹನೇ ಆಗಿರಲೂ ಬಹುದು.
-ಇಂತಹ ಸನ್ನಿವೇಶ ಸಂದರ್ಭಗಳಲ್ಲಿ ನಾವು ತೋರುವ ಕರಣೆ ಸಂಶಯಾಸ್ಪದವಾಗಿರುತ್ತದೆಯಷ್ಟೇ. ಅದು ಎಲ್ಲ ಮನುಷ್ಯರಾದವರಿಗೂ ಸಹಜವೇ ಆಗಿರುತ್ತದೆ. ಇಂತಹ ಸಂಶಯಾಸ್ಪದ ಸುಳಿಯಲ್ಲಿಯೆ ಅಂತಹವರಿಗೆ ನಿಜಕ್ಕೂ ಕರುಣೆ ತೋರಿ ಯಾವ ರೀತಿಯಲ್ಲಾದರೂ ಸಹಾಯ ಮಾಡಬಯಸುವಾತನಲ್ಲಿ ತನ್ನ ಸಂಶಯ ನಿವಾರಣೆಗೆ ದಾರಿಗಳೂ ಗೋಚರಿಸುತ್ತವೆ. ಒಂದು ವೇಳೆ ಆತನ ಸಂಶಯ ನಿಜವೇ ಆಗಿದ್ದಾಗ್ಯೂ ಆತ ಸಹಾಯ ಹಸ್ತ ಚಾಚಲು ಮುಂದಾಗುವಾಗಲೂ ಆತನಲ್ಲಿರುವ ಮಾನವೀಯತೆ ಮುಂದೆ ಅಂತ ಹ ಸಂಶಯ ಸೋಲುತ್ತದೆಯಷ್ಟೇ. ಯಾಕೆಂದರೆ, ಕಿಂಚಿತ್ ಮಾನವೀಯತೆ ಇಲ್ಲದಾತನಲ್ಲಿ ಕರುಣೆಯ ಲವಲೇಶವೂ ಉದ್ಭವಿಸಲಾರದಲ್ಲ. ಆದ್ದರಿಂದ, ಇಂತಹ ಸನ್ನಿವೇಶ ಸಂದರ್ಭಗಳಲ್ಲಿ, ಭಾವನೆಯೆಲ್ಲಿ ಕಲಬೆರೆಕೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಮನುಷ್ಯನಾದವನಿಗೆ ಮತ್ತು ಮಾನವೀಯತೆಯುಳ್ಳವರಿಗೆ ಮಾತ್ರ ಕರುಣೆ ತೋರುವಲ್ಲಿ ಕಿಂಚಿತ್ ಸಂಶಯದ ಸುಳಿಯಬಹುದಾದರೂ ಅನಂತರ ಅವರಲ್ಲಿರುವ ಮಾನವೀಯತೆಯೇ ಮೆರೆಯುತ್ತದೆಯಲ್ಲವೇ?
-ಎಚ್.ಶಿವರಾಂ
ಜೀವನ-ಚೇತನ