ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: kannadakanda (May 24 2008 - 9:55am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 5:32pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 4 2007 - 5:19pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:25pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 3:54pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 4 2007 - 11:01am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 4 2007 - 10:48am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ಸಂಗನಗೌಡ (Jul 4 2007 - 2:36pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 3:15pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:31pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 4:06pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 7:35pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: Khavi (Jul 3 2007 - 6:40pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 5:08pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 12:18pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 12:41pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 3 2007 - 11:21am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:25am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hene (Jul 2 2007 - 11:10pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: ವೈಭವ (Jul 3 2007 - 9:16am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: srivathsajoshi (Jul 2 2007 - 5:29pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:20am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 3 2007 - 11:19am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: hamsanandi (Jul 3 2007 - 1:08am)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 6:03pm)
- ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ? By: mahesha (Jul 2 2007 - 1:42pm)

RSS:
ಉ: ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?
ವೈಭವರೆ,
ನಿಮ್ಮ ಮಾತು ಸುಳ್ಳಲ್ಲ.
ಆದರೆ ಒಂದೇ ಸಮುದಾಯದಲ್ಲಿ, ಒಂದೇ ನುಡಿ ಆಡುವ ಜನರಲ್ಲಿ, ಅವರ ಪರಿಸರಕ್ಕೇ ವಿಶಿಷ್ಟವಾದ ವಸ್ರು/ಕ್ರಿಯೆ/ಅನುಭವ ಹೇಳುವ ಪದಗಳು ಸಹ ಕೆಲವೊಮ್ಮೆ ಹೀಗಿರುತ್ತವೆ. 'ತಳಿ' ಎಂಬ ಪದ ಇಲ್ಲಿ ನೆನಪಾಗುತ್ತಿದೆ. (ಇಂತಹವು ಹಲವಾರಿವೆ ಎಂದಿಟ್ಟುಕೊಳ್ಳಿ) ನಾಮಪದವಾಗಿ ತಳಿ ಅಂದರೆ ಅನ್ನ ಬೆಂದಾದಮೇಲೆ ಬಸಿಯಬಹುದಾದ ದಪ್ಪ ನೀರು (ಗಂಜಿಯಲ್ಲ, ತಳಿ ಅನ್ನದೊಟ್ಟಿಗೇ ಇದ್ದರೆ ಅದು ಗಂಜಿ). ತೆಂಗಿನ ಗರಿ ಹೆಣೆದು ಮಾಡಿದ ಮಡ್ಲ್-ಇನ ಮುಚ್ಚಿಕೆಯೂ ತಳಿಯೇ. ಮಳೆಗಾಲದಲ್ಲಿ ಊರುಮನೆಯ ಜಗಲಿಗೆ ಮುಚ್ಚಿಕೆಯಾಗಿ ಇದನ್ನು ಹಾಕುತ್ತಾರೆ. ಕ್ರಿಯಾಪದವಾಗಿ, ಒಪ್ಪವಾಗಿರುವುದನ್ನು ಕೆಡಿಸುವುದೂ ತಳಿಯೇ- ಮಡಿಸಿಟ್ಟ ವಸ್ತ್ರ ತಳಿಯಬೇಡ; ಚಿಮುಕಿಸು - ಹಿಟ್ಟು ಗಟ್ಟಿಯಾಗಿದ್ದರೆ ಒಂದು ಚೂರು ನೀರು ತಳಿ; ಚದುರಿಸು - ನಾಲ್ಕು ಕಾಳು ಉಪ್ಪು ತಳಿ... ಸದ್ಯಕ್ಕೆ ಹಂಬಲಾಗುತ್ತಿರುವುದು ಇಷ್ಟು. ಇವೆಲ್ಲವೂ ಒಂದು ಹತ್ತಿಪ್ಪತ್ತು ಚದರ ಕಿಲೋಮೀಟರು ದೊಡ್ಡದಿರುವ ಊರಿನ ಜನರ ನುಡಿಗಳು.
ನೂರಾರು ಕಿಲೋಮೀಟರ್ ದೂರವಿರುವ ಬೇರೆ ಊರಲ್ಲಿ ತಳಿಗೆ ಜಾತಿ, species ಎಂಬ ಅರ್ಥವೂ ಇದೆ. ನನಗೆ ತಿಳಿಯದ ಇನ್ನೂ ಏನೇನೋ ಅರ್ಥಗಳಿದ್ದರೂ ಇರಬಹುದು.
ನೀವು ಪದದ ಮೇಲೆ ಅರ್ಥಗಳ ಹೊರೆ ಎಂದಿರಿ. ನನ್ನನ್ನ ಕೇಳಿದರೆ, ಪದಗಳು ಹೆಚ್ಚೆಚ್ಚು ಹೊರೆ ಹೊತ್ತಷ್ಟೂ ನುಡಿಯ ಮೇಲಿನ ಪದಗಳ ಹೊರೆ ಕಡಿಮೆಯಾಗುತ್ತದೆ. ಇದನ್ನೇ ನಾನು ನುಡಿಯ economy ಎಂದಿದ್ದು. ಇದಕ್ಕೆ ತೀರ ವಿರುದ್ಧವಾದ ಒಂದು ವಿದ್ಯಮಾನವೂ ಇದೆ. ಅದರ ಬಗ್ಗೆ ಬೇರೊಮ್ಮೆ ಮಾತಾಡೋಣ.
'ಹೆಣೆ'ಯೇ!