ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: raghunayak (Jul 4 2007 - 11:49pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hene (Jul 4 2007 - 9:15pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavaraj_ts (Jul 5 2007 - 10:13am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 7:45pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: keshavamurali (Jul 5 2007 - 3:29pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: hpn (Jul 4 2007 - 11:02pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 5 2007 - 9:12pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: sunilprao (Jul 5 2007 - 11:47am)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: mahesha (Jul 4 2007 - 8:36pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: ritershivaram (Jul 4 2007 - 9:51pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: smurthygr (Jul 4 2007 - 8:24pm)
- ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ By: basavarajdengi (Jul 4 2007 - 7:43pm)

RSS:
ಉ: ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
ನೀವು ಕನ್ನಡ ಸಾಫ್ಟ್ ವೇರ್ ತಜ್ಞರಾಗಿದ್ದು MSDN subscription ಪಡೆದಿದ್ದೀರಷ್ಟೇ. ಪ್ರಾಯಶಃ ನಮ್ಮಂತಹ ಸಾಮಾನ್ಯ ಬಳಕೆದಾರರಿಗೆ ಈ ಸೌಲಭ್ಯ ಒದಗಲಾರದೆಂದು ಕೊಂಡಿದ್ದೇನೆ. ಮೈಕ್ರೋಸಾಫ್ಟ್ ನಿಂದ MS_Lip ನಾನು ಡೌನ್ ಲೋಡ್ ಮಾಡಿಕೊಂಡಿದ್ದೇನೆ. ಅದರಲ್ಲಿ ನೀವು ಹೇಳಿದಂತೆ Glossary ಆಷ್ಷನ್ ನನಗೆ ಸಿಗಲಿಲ್ಲ. ಅದರಲ್ಲಿ ಇಲ್ಲದಿರಲೂಬಹುದು. ನೀವು ಹೇಳಿದಂತೆ ಅಧಿಕೃತವಾಗಿ MSDN ಬಳಕೆದಾರರಾದವರಿಗೆ ಮಾತ್ರ ಅದು ಲಭ್ಯವಿದೆಯೆಂದಾದೀತು.
ನಾನು ತಿಳಿದಿರುವಂತೆ-
Glossary ಎಂದರೆ ಪದಕೋಶ.
estimated time left ಇದನ್ನು ಕನ್ನಡಕ್ಕೆ ಅನುವಾದಿಸಿದರೆ-
ಅಂದಾಜಿಸಿದಂತೆ ಉಳಿದ ವೇಳೆ . ಅಥವಾ ಅಂದಾಜು ಮಾಡಿದಂತೆ ಉಳಿದ ಕಾಲಾವಧಿ ಎಂದಾಗುತ್ತದೆ.
(ಈ ನನ್ನ ಅನುವಾದದ ಬಗ್ಗೆ ತಮ್ಮ ನೇರ ಅಭಿಪ್ರಾಯ ತಿಳಿಸಿ)
ನನ್ನ ಅನುಭವಕ್ಕೆ ಬಂದಿರವಂತೆ-
ಕನ್ನಡದಲ್ಲಿ ಇಂಗ್ಲೀಷ್ ನಿಂದ ಎಲ್ಲವನ್ನೂ ಇದ್ದಂತೆ ಅನುವಾದ ಮಾಡುವುದೂ ದೊಡ್ಡ ಸವಾಲೇ ಸರಿ. ಬದಲಾಗಿ ಮುಊಲಕ್ಕೆ ಲೋಪ ಬಾರದ ಹಾಗೆ ಭಾವಾನುವಾದದ ಮೊರೆ ಹೋಗುವುದು ಎಷ್ಟೋ ವೇಳೆ ಅನಿವಾರ್ಯವೇ ಆಗುತ್ತದೆ. ಅದೇ ತೃಪ್ತಿಯನ್ನೂ ಕೊಡುತ್ತದೆ. ಇತರೆ ತಾಂತ್ರಿಕ ಶಬ್ದಗಳನ್ನು ಹಾಗೆಯೆ ಕನ್ನಡದ ವಾಕ್ಯಗಳ ಜೊತೆಗೇ ಅರ್ಥ ಬರುವಂತೆ ಬಳಸುವುದು ಅತ್ಯುತ್ತಮ.
Glossary ವಿಷಯಕ್ಕೆ ಬಂದರೆ ಮೈಕ್ರೋಸಾಫ್ಟ್ ಅವರದು ತಂತ್ರಾಂಶದಲ್ಲಿ ಕೆಟ್ಟ ಅನುವಾದವಿದ್ದೀತು. ಮೈಕ್ರೋಸಾಫ್ಟ್ ಸಂಸ್ಥೆಗೆ ಅಂಥ ಕೆಟ್ಟ ಕನ್ನಡ ಅನುವಾದಕರನ್ನು ಪರಿಚಯಿಸಿದವರು ನಮ್ಮವರೇ ಅಲ್ಲವೇ? ಆದ್ದರಿಂದ, ತಪ್ಪು ಯಾರದು?
ನನ್ನ ಅಭಿಪ್ರಾಯದಲ್ಲಿ ನಾವಿಂದು ಕನ್ನಡದಲ್ಲಿ ಬ್ಲಾಗ್ ಮಾಡುತ್ತಿದ್ದರೆ, ಮೈಕ್ರೋ ಸಾಫ್ಟ್ ವಿಂಡೋಸ್ XP ಯಲ್ಲಿ ಒದಗಿಸಿರುವ,
control panel>Regional language Options>Languages>install files for complex script...
ಈ ಆಪ್ಷ್ ನ್ ಇರುವುದರಿಂದಲೆ ಅಲ್ಲವೇ?
ಆದ್ದರಿಂದ "ಮೈಕ್ರೋಸಾಫ್ಟ್ ನಿಂದ ಕನ್ನಡ ಕೊಲೆ" ಎಂದು ನೇರವಾಗಿ ದೋಷಾರೋಪಣೆ ಸರಿಯಲ್ಲ.
(ಆದರೆ, ಇದರಲ್ಲಿ ಸಿಗುವ Tunga ಫಾಂಟ್ ನಲ್ಲಿ 'ಮು' ಗೆ ಕೊಂಬಿನ ಇಳಿ ಕೊಡಲು ಸಾಧ್ಯವಾಗುವುದಿಲ್ಲ.
ಇದೊಂದೇ ಏಕೈಕ ದೋಷವಿದೆ ಎಂದು ಈ ವರೆಗೆ ಭಾವಿಸಿದ್ದೇನೆ.( ಉದಾ: moola = ಮೂಲ).
-ಎಚ್.ಶಿವರಾಂ
ಜೀವನ-ಚೇತನ- ನನ್ನ ಕನ್ನಡ ಕಂಪ್ಯೂಟರ್ ಪುಸ್ತಕಗಳು