ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ

July 8, 2007 - 4:35am — honnalichandras...

ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ

honnalichandrashekhar's picture

ನಾನೂ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಅನಂತಮೂರ್ತಿ ಅವರು ಬರುವವರೆಗಿನ, ನಂತರದ ಹೋರಾಟವನ್ನು ಹತ್ತಿರದಿಂದ ಕಂಡಿದ್ದೇನೆ. ಅನಂತಮೂರ್ತಿ ಅವರು ಹೋರಾಟಕ್ಕೆ ಧುಮುಕಿದ ನಂತರ ಹೋರಾಟದಲ್ಲಿ ಆದ ದೊಡ್ಡ ಬದಲಾವಣೆಯನ್ನೂ ಗಮನಿಸಿದ್ದೇನೆ. ಶ್ರೀಧರ್ ಅವರು ಎಲ್ಲವನ್ನೂ ವಿವರವಾಗಿ ಬರೆದಿದ್ದಾರೆ.

ತುಂಗಾ ಮೂಲ ಉಳಿಸಿ ಹೋರಾಟ ಒಕ್ಕೂಟ, ನಂತರದ ದಿನಗಳಲ್ಲಿ ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ ನೀಡಿದ ನೇತೃತ್ವ ಜನರನ್ನು ಈ ದಿಸೆಯಲ್ಲಿ ಜಾಗೃತಿಗೊಳಿಸಿತು. ಜನರ ಒತ್ತಾಸೆಗೆ ಹಾಗೂ ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೆ ಕೋರ್ಟ್ ಸ್ಪಂದಿಸಿ ಗಣಿಗಾರಿಕೆಗೆ ಕೊನೆ ಹಾಡಿತು.

ಈ ಹೋರಾಟದ ಮುಖ್ಯ ಲಕ್ಷಣ ನಾನು ಗಮನಿಸಿದಂತೆ... ಹೋರಾಟ ಒಕ್ಕೂಟದ ನೇತೃತ್ವದಲ್ಲೇ ಆದರೂ ಕೊನೆಗೆ ಅದು ಜನರ ಹೋರಾಟವಾಯಿತು. ಶಿವಮೊಗ್ಗ ಬಂದ್ ಕರೆಗೆ ಎಲ್ಲರೂ ಓಗೊಟ್ಟರು. ನದಿ ಉಳಿವಿಗಾಗಿ ಅಲ್ಲಿ ಎಡ-ಬಲಗಳ ಪ್ರಶ್ನೆ ಬರಲಿಲ್ಲ. ಶಿವಮೊಗ್ಗ ಬಂದ್‌ಗಿಂತಲೂ ಮುನ್ನ ದಾವಣಗೆರೆಯಲ್ಲಿ ಕುದುರೆಮುಖ ಗಣಿಗಾರಿಕೆ ವಿರೋಧಿ ಒಕ್ಕೂಟ ಏರ್ಪಡಿಸಿದ್ದ ನದಿ ತೀರದ ಜನರ ಸಮಾವೇಶಕ್ಕೆ ಬಯಲುಸೀಮೆಯ ಜನ ತೀವ್ರವಾಗಿ ಸ್ಪಂದಿಸಿದ್ದರು.

ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಒಂದೆಡೆ ಕ್ರಾಂತಿಯಾಗಿಬಿಡುತ್ತದೆ, ಎಲ್ಲ ಬದಲಾಗಿಬಿಡುತ್ತದೆ ಎನ್ನುವ ಎಡಬಿಡಂಗಿ ಎಡಪಂಥೀಯರು, ಎಲ್ಲವನ್ನೂ ಬಹುಸೂಕ್ಷ್ಮವಾದ ಧರ್ಮದ ಪ್ರಶ್ನೆಯನ್ನಾಗಿ ಮಾಡಿಬಿಡುವ ಬಾಜಾಬಜಂತ್ರಿ ಬಲಪಂಥೀಯರು ಸಾಮಾಜಿಕ ಪರಿಸ್ಥಿತಿಯನ್ನೇ ಕಲುಷಿತಗೊಳಿಸಿದ್ದಾರೆ. ಎಡ-ಬಲ ನಡುವಿನ ಗೆರೆಯನ್ನು ಅತಿ ತೆಳುವಾಗಿ ಮಾಡಿದ್ದು, ಎರಡನ್ನೂ ಎಚ್ಚರದಿಂದ ಗಮನಿಸುವವರಿಗೆ ಬೆಲೆಯೇ ಇಲ್ಲವಾಗಿದೆ. ನೀನು ಎಡಪಂಥೀಯನಾಗು.. ಇಲ್ಲವೇ ಬಲಪಂಥೀಯನಾಗು ಎನ್ನುವ ಒತ್ತಡ ಎಲ್ಲಡೆ ಸೃಷ್ಟಿಯಾಗುತ್ತಿದೆ. ಮಾನವೀಯತೆಯ ಅಂಶಗಳು ಮರೆಮಾಚುತ್ತಿವೆ.

ಯಾರನ್ನೇ ಆಗಲಿ ಎಡಪಂಥೀಯನನ್ನಾಗಿ ಬ್ರಾಂಡ್ ಮಾಡಿದರೆ ಅವರಿಗೆ ಬೈಯಲು ಸುಲಭ. ಬಲಪಂಥೀಯನೆಂದರೆ ಇವರಿಗೆ ಟೀಕಿಸಲು ಸಲೀಸು. ಯಾರಾದರೂ ಮಾತಾಡುವುದನ್ನೇ ಗಮನಿಸುತ್ತಾ ಈತ ಬಳಸಿದ ಯಾವ ಪದದಿಂದ ಇವನನ್ನು ಬ್ರಾಂಡ್ ಮಾಡಬಹುದು ಎಂದು ಕಾಯುವ ವಿಘ್ನಸಂತೋಷಿಗಳೇ ಅಧಿಕವಾಗಿದ್ದಾರೆ.

ಆದರೆ ವಿಶ್ವದ ಇತಿಹಾಸವನ್ನು ಗಮನಿಸಿದರೆ ಎಲ್ಲಿಯೂ ಸಹ ಕ್ರಾಂತಿಯಿಂದಾಗಲಿ.... ರಕ್ತಪಾತದಿಂದಾಗಲಿ.... ಕುರುಡು ಆರಾಧನೆಯಿಂದಾಗಲಿ.... ಸುಖಿ ಸಮಾಜ ಸೃಷ್ಟಿಯಾಗಿದ್ದು ಕಾಣಿಸದು. ಅದು ವಿಕಾಸದಿಂದ ಮಾತ್ರ ಸಾಧ್ಯವಾಗಿದೆ.

ಮನುಷ್ಯನಂತ ಜೀವಿ ಸಹಜೀವಿಗಳ ಪ್ರಾಮಾಣಿಕತೆಯನ್ನು, ವಿಶ್ವಾಸವನ್ನು, ಪ್ರೀತಿಯನ್ನು ನಂಬುವುದೇ ಮಾನವೀಯತೆ. ತಪ್ಪಾದಾಗ ತಿದ್ದಲು ಹಲವು ಮಾರ್ಗಗಳಿವೆ. ‘ಇದೊಂದೇ ದಾರಿ’ ಎಂದು ಹೊರಟಾಗಲೆಲ್ಲಾ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ.

ಆದರೂ ಎಡಬಿಡಂಗಿ ಎಡಪಂಥೀಯ ಕ್ರಾಂತಿಯ ಹುಚ್ಚು, ಬಾಜಾಬಜಂತ್ರಿ ಬಲಪಂಥೀಯ ಭ್ರಾಂತಿಯ ಹುಚ್ಚುಗಳು ಯಾಕೆ ಉಳಿದಿವೆ?
ಹೊನ್ನಾಳಿ ಚಂದ್ರಶೇಖರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: sreeedhar (5 replies) July 3, 2007 - 11:36pm
  • ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: honnalichandrashekhar (Jul 8 2007 - 4:35am)
    • ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: jaiguruji (Jul 9 2007 - 11:42am)
  • ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: ismail (Jul 4 2007 - 5:21pm)
    • ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: roshan_netla (Jul 5 2007 - 10:09am)
  • ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: prapancha (Jul 4 2007 - 11:05am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator