ಪುಸ್ತಕಸ್ಫೋಟ
- ಒಳ್ಳೆ ವಿಚಾರ By: muralihr (Dec 9 2005 - 9:56am)
- ಖಂಡಿತ ತೆಗೆದುಕೊಳ್ಳಿ By: olnswamy (Dec 9 2005 - 1:07pm)
- ಪುಸ್ತಕಗಳ ಬಗ್ಗೆ By: srikanth (Dec 8 2005 - 6:13pm)
- ಆಗ ಹೀಗೂ ಆದೀತು By: olnswamy (Dec 9 2005 - 1:21pm)
- ಪುಸ್ತಕಸ್ಫೋಟ By: ಪ್ರಶಾಂತ.ಪಂಡಿತ (Dec 8 2005 - 5:30pm)
- ಹೊಳೆದಿರಲಿಲ್ಲ By: Rohit (Dec 8 2005 - 9:26am)
- ನನಗೂ ಹೊಳೆದಿರಲಿಲ್ಲ By: (Dec 8 2005 - 11:58am)


RSS:
ಪುಸ್ತಕಸ್ಫೋಟ
ನೀವು ಹೇಳಿದಂತೆ ಎಲ್ಲಾ ಬಗೆಯ ಪುಸ್ತಕಗಳನ್ನು ಸಂಗ್ರಹಿಸುವ ಅಗತ್ಯವೇನೂ ಇಲ್ಲ. ಅದರಲ್ಲೂ ಕೇವಲ ಮಾಹಿತಿ ನೀಡುವ ಪುಸ್ತಕಗಳು, reference materialಗಳನ್ನು ಬರವಣಿಗೆಯ ವ್ಯವಸಾಯದಲ್ಲಿರುವವರು ಇಟ್ಟುಕೊಳ್ಳಬಹುದು. ಉಳಿದವರು ಅಗತ್ಯ ಬಿದ್ದಾಗ ಗ್ರಂಥಾಲಯಕ್ಕೆ ಹೋಗಬಹುದು. ಆದರೆ ಇದೇ ಮಾತನ್ನು ‘ಕಲಾಕೃತಿ’ಗಳಿಗೆ ಅಥವಾ ವೈಚಾರಿಕ ಬರಹಗಳಿಗೆ ಅನ್ವಯಿಸಲಾಗದೇನೋ. ಇಂತಹ ಮೌಲಿಕ ಕೃತಿಗಳು ಕೇವಲ ದಿನಪತ್ರಿಕೆಗಳಲ್ಲಿ ವಾರಪತ್ರಿಕೆಗಳಲ್ಲಿ ಪ್ರಕಟವಾದರೆ ನಂತರದ ಪೀಳಿಗೆಯ ಓದುಗರಿಗೆ ಅವು ಸಿಗದೇ ಹೋಗುತ್ತವೆ. Paper cutting ಗಳನ್ನು ಸಂಗ್ರಹಿಸಿಡುವುದಕ್ಕಿಂತ ಮುನ್ನುಡಿ ಬೆನ್ನುಡಿಗಳನ್ನೊಳಗೊಂಡ ಪುಸ್ತಕವು ಓದಿಗೆ ಬೇಕಾದ context ಒದಗಿಸುತ್ತದೆ. ಕಾಲೇಜು ದಿನಗಳಲ್ಲಿ ಹತ್ತಿರದಲ್ಲೇ ಇದ್ದ ಸೆಂಟ್ರಲ್ ಲೈಬ್ರರಿಗೆ ಪದೇಪದೇ ಹೋಗಿ ಬೇಕಾದ ಪುಸ್ತಕ ಸಿಗದೇಹೋದಾಗ ಬೇಸರಪಟ್ಟುಕೊಂಡು (ಕೆಲವೊಮ್ಮೆ ಆ ಅಸಹಾಯಕ ಪರಿಸ್ಥಿತಿಗೆ ನೊಂದು) ಹಿಂತಿರುಗಿ ಬರುತ್ತಿದ್ದುದು ನೆನಪಿಗೆ ಬರುತ್ತಿದೆ. ಮುಂದೊಮ್ಮೆ ದುಡಿಯುವಂತಾದಾಗ ಮೊದಲು ಈ ಪುಸ್ತಕಗಳನ್ನು ಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ. ನಿಮ್ಮ ಚಿಂತನೆ ಓದಿದ ಮೇಲೆ ನನ್ನ ಬಳಿಯಿರುವ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. ಬಹುತೇಕ ಎಲ್ಲಾ ಪುಸ್ತಕಗಳನ್ನೂ ನಾನು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೇನೆ. ಒಂದೆರಡು ಪುಸ್ತಕಗಳನ್ನು ಬಿಟ್ಟು ಬೇರೆ ಯಾವ ಪುಸ್ತಕವನ್ನೂ ಕೊಳ್ಳಬಾರದಿತ್ತು ಎನ್ನಿಸಿಲ್ಲ (ಸಧ್ಯಕ್ಕೆ ನನ್ನ ಹತ್ತಿರ ಇರುವ ಪುಸ್ತಕಗಳು 60 ಮೀರುವುದಿಲ್ಲ. ಬಹುಶಃ ಅದಕ್ಕೆ ಹೀಗನಿಸುತ್ತಿರಬೇಕು!). ಕೆಲವೊಮ್ಮೆ ಕೊಳ್ಳುವವರೆಗೆ ‘ಈ ಪುಸ್ತಕ ನನ್ನಂತವರಿಗಾಗಿಯೆ’ ಎಂಬುದು ತಿಳಿಯುವುದಿಲ್ಲ!
ಇನ್ನು ಓದಿದ್ದು ಮನಸ್ಸಿಗಿಳಿದು ವ್ಯಕ್ತಿತ್ವದ ಭಾಗವಾಗುವ ಬಗ್ಗೆ ನನಗೆ ಸ್ವಲ್ಪ ಅನುಮಾನವಿದೆ. ಪ್ರತಿ ಓದಿಗೂ ಹೊಸದೇನನ್ನೋ ಕೊಡುವ ಓದುಗನ ಮನಸ್ಥಿತಿಗೆ ತಕ್ಕಂತೆ ಹಿಂದೆ ಹೊಳೆಯದ್ದೇನೋ ಈಗ ಹೊಳೆಯುವ ಕಾಣದ ಒಳಪದರಗಳು ಅನಾವರಣಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ ಎನ್ನಿಸುತ್ತದೆ. ಒಂದು ಒಳ್ಳೆಯ ಕೃತಿಗೆ (ಕಾವ್ಯ, ಕಥೆ, ವೈಚಾರಿಕ ಬರಹ ಇತ್ಯಾದಿ) ಈ ಗುಣ ಇರುತ್ತದೆ ಹಾಗಾಗಿ ಆ ಪುಸ್ತಕವನ್ನು revisit ಮಾಡುವ ಬರಹದೊಂದಿಗೆ ಬರಹಗಾರರೊಂದಿಗೆ ಮುಖಾಮುಖಿಯಾಗುವ ಅಗತ್ಯ ಇರುತ್ತದೆ. ಆ ಕಾರಣಕ್ಕೆ ಪುಸ್ತಕಗಳು ‘ಸಜೀವ’ವಾಗಿರುತ್ತವೆ. ಲೈಬ್ರರಿಯಲ್ಲಿ ಪುಸ್ತಕ ಸಿಗದೇ ಬೇಸರಪಟ್ಟುಕೊಳ್ಳುವುದರ ಬದಲು ಅಥವಾ ಪ್ರತಿ ಸಲ ಪುಸ್ತಕ ಬೇಕಾದಾಗ ಇನ್ನೊಬ್ಬರನ್ನು ಮುಜುಗರಪಟ್ಟುಕೊಂಡು ಕೇಳುವುದರ ಬದಲು ಕೊಂಡಿಟ್ಟುಕೊಳ್ಳ್ರವುದೇ ಮೇಲು ಎನ್ನಿಸುತ್ತದೆ. ಆದರೆ 1000 ಪುಸ್ತಕಗಳ ರಾಶಿಯಿದ್ದರೆ ಏನು ಮಾಡಬೇಕೋ ತಿಳಿಯದು! ಬಹುಶಃ ನಿಮ್ಮ ಅಭಿಪ್ರಾಯಕ್ಕೆ ಮೂಲಕಾರಣ ಪುಸ್ತಕಸ್ಫೋಟ!