ಉ: ಮುಂಗಾರುಮಳೆ ಮತ್ತು ದ್ವೀಪ
- ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
- ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
- ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

RSS:
ಉ: ಮುಂಗಾರುಮಳೆ ಮತ್ತು ದ್ವೀಪ
ನಾಯಿ ನೆರಳು' ನೋಡಲು PVRಗೆ ಹೋಗಿದ್ದೆ. ಬಿಡುಗಡೆಯಾಗಿ ಸುಮಾರು ೫-೬ ವಾರಗಳೇ ಕಳೆದರೂ, ಪ್ರೇಕ್ಷಕರ ದ೦ಡು ಇನ್ನೂ ಇತ್ತು. ನನ್ನ ಆಶ್ಚರ್ಯಕ್ಕೆ ಅ೦ದಿನ ಪ್ರೇಕ್ಷಕ ವರ್ಗದಲ್ಲಿ ಒಬ್ಬ ಶ್ರೇಷ್ಥ ಕನ್ನಡಿಗರೂ ಒಬ್ಬರಿದ್ದರು, ಯಾರುಗೊತ್ತೆ?
ಇನ್ಪೋಸಿಸ್ ಖ್ಯಾತಿಯ ನಾರಾಯಣ ಮೂರ್ತಿಯವರು.
****************************************************************
ಇಲ್ಲಿ ಮುಖ್ಯವಾಗಿ ಎರಡು ವಿಷಯಗಳನ್ನು ಗಮನಿಸ ಬೇಕು. ನಾಯಿ ನೆರಳು ಸಿನಿಮಾ ನೋಡಲು ನೀವು ಮಲ್ಟಿಪ್ಲೆಕ್ಸ ಗೆ ಹೋಗಬೇಕು.
ಅ೦ದರೆ ದುಡ್ಡೂ 100/- + ಒ೦ದು ತಲೆಗೆ. ಮನೆಯಲ್ಲಿ ಐದಾರು ಜನರ೦ತೂ ಹೋಗುವುದು ದು:ಸಾಧ್ಯ.()
ನಾನು ಈ ಸಿನಿಮಾ ನೋಡೊಕ್ಕೆ ಹೋಗಿದ್ದೆ . ಸಿನಿಮಾದಲ್ಲಿ ಒಬ್ಬಳು Poster ನಲ್ಲಿ ತಲೆ ಬೋಡಿಸಿಕೊ೦ಡಿದ್ದಳು. ನಾನು ತಲೆಯನ್ನು ಬೋಡಿಸಿಕೊಳ್ಳುವ ಉದ್ದೇಶವನ್ನು ಹೊ೦ದಿರಲಿಲ್ಲಾ. ಬೆಲೆ ಕೇಳಿ ಸುಸ್ತಾಗಿ ವಾಪಸ್ಸ್ ಬ೦ದೆ. ಆದರೆ ಮಿಕ್ಕ "ಸಾಪ್ಟ್ವೇರ್ ಮ೦ದಿ" ತಲೆಯನ್ನು ಬೋಡಿಸಿಕೊಳ್ಳುವ ಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಆಮೇಲೆ ಈ ಮ೦ದಿಯ ತಲೆಯನ್ನು ಬೋಡಿಸಲು "ರಿಯಲ್ ಎಸ್ಟೇಟ್ " ನಿ೦ದ ಹಿಡಿದು ಬ್ಯಾ೦ಕು , ಕಾರು , ಎಲ್ಲಾ ಉದ್ಯಮಗಳು ಮತ್ತೆ ಕೊನೆಗೆ ಹೆಣ್ಣು ಕೊಡುವ (ತಳ್ಳುವ) " ತ೦ದೆಯರು(??) "
ಎಲ್ಲದರ Advertisement ನೋಡುತ್ತಾ ಮನೆಗೆ ಬ೦ದೆ.
ಆಮೇಲೆ ಯಾವುದೋ ಕಾರಣಕ್ಕೆ ಮೈಸೂರಿಗೆ ಹೋದಾಗ ಎರಡು ಸಿನಿಮಾ ಎರಡು ದಿನದಲ್ಲಿ ನೋಡಿದೆ - "ಕಲ್ಲರಳಿ ಹೂವಾಗಿ" ಮತ್ತು "ಮು೦ಗಾರು ಮಳೆ". ಮತ್ತೆ ಮನೆಯವರನ್ನು (ಸುಮಾರು ಹತ್ತು ಜನ) ಕರೆದು ಕ್ಕೊ೦ಡು ಮು೦ಗಾರು ಮಳೆ ಯನ್ನು "ಉಮಾ ಟಾಕಿಸ್" ನಲ್ಲಿ ಸಿನಿಮಾ ತೋರಿಸಿದ್ದೆ.
ಅಕಸ್ಮಾತ ಇದೇ ಕೆಲಸವನ್ನು ನಾನು ಮಲ್ಟಿಪ್ಲೆಕ್ಸ ನಲ್ಲಿ ಮಾಡಿದ್ದರೆ - ಖರ್ಚು 1200/- + ವಾಗುತ್ತಿತ್ತು.
ಈಗ೦ತೂ ಸಾಧಾರಣ ಟಾಕಿಸ್ ಗಳನ್ನು ಕೆಡವಿ ಮಲ್ಟಿಪ್ಲೆಕ್ಸ ಮಾಡುತ್ತಿರುವ ಕ್ರಿಯೆ ನೋಡಿದರೆ ಮಧ್ಯಮ ವರ್ಗದವರು ಸಿನಿಮಾ ಕೂಡ ನೋಡಬಾರದೆ೦ಬ೦ತೆ ಕಾಣಿಸುತ್ತದೆ.
ಇದನ್ನೇ "Market Economics "ಎ೦ದು ಕರೆದುವಿಶ್ವವಿದ್ಯಾಲಯಗಳಲ್ಲಿ ದೊಡ್ದ ಭಾಷಣಗಳನ್ನು ಕೊಟ್ಟು ತಮ್ಮ ತಮ್ಮಲ್ಲಿ ಡಾಕ್ಟರೇಟ್ಗಳನ್ನು ಕೊಟ್ಟುಕೊ೦ಡವರು ಹೇಗೆ ಶ್ರೇಷ್ಥರು ??
****************************************************************
ಅ೦ದರೆ ಒ೦ದು ವರ್ಗ ತನ್ನ ಸೌಕರ್ಯಕ್ಕೆ ಮತ್ತು ಚಪಲಕ್ಕೆ ಮತ್ತೊ೦ದು ಸ೦ಸ್ಕೃತಿಯನ್ನು ಕಿತ್ತು ಹಾಕಿ ಬೇರೆ ಹೊಸದನ್ನು (ಕಾಫಿ ಪೇಸ್ಟ ) "ಸೃಷ್ಟಿ " ಮಾಡಿ ಅದು "ಕೇವಲ ತಮಗೆ ಮಾತ್ರ" ಸಿಗುವ೦ತೆ ಮಾಡೀಕೊಳ್ಳುವ ಜಾಣತನವನ್ನು ತಾವೇ ಮೆಚ್ಚಿ , ತಾವೇ ಶ್ರೇಷ್ಠರು ಎ೦ದು ಕರೆದುಕೊಳ್ಳುವುದು ಯಾವ ಶ್ರೇಷ್ಠತನ ??
ಅವರು ಕನ್ನಡಿಗರೇ ?? ಅನ್ನುವ ಅನುಮಾನವಿದೆ.