ಉ: ಮುಂಗಾರುಮಳೆ ಮತ್ತು ದ್ವೀಪ
- ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
- ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
- ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
- ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
- ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
- ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

RSS:
ಉ: ಮುಂಗಾರುಮಳೆ ಮತ್ತು ದ್ವೀಪ
ಕೇಶವರೆ,
ಲೇಖನ ಇಷ್ಟವಾಯಿತು.
ನಿಮ್ಮ ಬರಹದ ಹಿಂದಿನ ತುಡಿತ ಅರ್ಥವಾಗುತ್ತದೆ. ನೀವೇ ಹೇಳಿದ ಕೆಟಗರಯಂತೆ, ಹೃದಯ/ಮೆದುಳು ಗಳ ಮಾತು ಕೂಡ ಸರಳೀಕೃತ ಅನಿಸಿತು. ಬರೇ ಮೆದುಳಿಂದ ಅಥವಾ ಬರೇ ಹೃದಯದಿಂದ ಸ್ಪಂದಿಸಲು ಸಾಧ್ಯವೆ? ನಿಮ್ಮ ಮಾತಿನ ಅರ್ಥ ಒಂದು ಮತ್ತೊಂದಕ್ಕಿಂತ ಮುಂದು ಇರುತ್ತದೆ ಎಂದು ತೆಗೆದುಕೊಂಡರೂ ಕೂಡ ಸ್ವಲ್ಪ ಕ್ಲಿಷ್ಟವಾದ ವಿಚಾರವದು. ಒಮ್ಮೊಮ್ಮೆ ನನ್ನೊಬ್ಬನಿಗೇ ನಾನು ಏಕೆ ಹಾಗೆ ಪ್ರತಿಕ್ರಿಯಿಸಿದೆ ಎಂದು ಕಂಡುಕೊಳ್ಳುವುದು ಕಷ್ಟವಾಗಿರುವಾಗ, ಒಂದು ಸಮುದಾಯದ ಪ್ರತಿಕ್ರಿಯೆನ್ನು ಅಳೆಯುವುದು ಮತ್ತೂ ಕಷ್ಟಕರವಾದ್ದಲ್ಲವೆ?
ಸಿನೆಮಾಸಕ್ತರಿಗೆ ಇಂದು ಇರುವುದು ಆಯ್ಕೆಯ ಮಿತಿ ಎಂದು ನನ್ನ ಎಣಿಕೆ. ಹತ್ತು ಹಲವಾರು ಕಮರ್ಷಿಯಲ್ ಚಿತ್ರಗಳು ಪ್ರತಿದಿನವೂ ಅವರಿಗೆ ನೋಡಲು ಸಿಕ್ಕುತ್ತದೆ. ಆದರೆ, ಒಂದೇ ಒಂದು "ಬೇರೆ ರೀತಿಯ" ಚಿತ್ರಗಳು ಅವರಿಗೆ ಬೇಕೆಂದಾಗ ನೋಡಲು ಸಿಕ್ಕುವುದು ಕಷ್ಟವೇ. ಜನರನ್ನು ಹೋಗಿ ನೋಡಿ ಅನ್ನುವ ಬದಲು, ಜನರು ನೋಡುವಂತೆ ಪ್ರೇರೇಪಿಸುವ ಪರಿಸರ, ಸವಲತ್ತು ಇರಬೇಕು.
ಇದರ ಬಗ್ಗೆ "ಮುಂಗಾರು ಮಳೆ" ಯ ನನ್ನ ಬರಹದ ಬಗ್ಗೆಗಿನ ಖಾರದ ಪ್ರತಿಕ್ರಿಯೆಗಳ ಕೊನೆಗೆ ನಾಡಿಗರು ಸೊಗಸಾಗಿ ಈ ಕೆಳಗಿನ ಕಾಮೆಂಟಲ್ಲಿ ಹೇಳಿದ್ದಾರೆ. http://www.sampada.net/article/4484#comment-8535