Re: ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು
- Re: ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು By: (Dec 11 2005 - 11:46pm)
- ಯೋಗ್ಯ ವಿಚಾರ By: tvsrinivas41 (Dec 10 2005 - 6:56pm)
- ಸಾರ್, By: muralihr (Dec 10 2005 - 11:48am)
- ಕೋಪ ಅಲ್ಲ, ನಿರಾಸೆಯೂ ಅಲ್ಲ By: olnswamy (Dec 13 2005 - 8:05am)
- ತಪ್ಪು ಮಾಡಿದ್ದರೆ ಕ್ಷಮಿಸಿ By: muralihr (Dec 14 2005 - 1:13pm)
- ಕೋಪ ಅಲ್ಲ, ನಿರಾಸೆಯೂ ಅಲ್ಲ By: olnswamy (Dec 13 2005 - 8:05am)

RSS:
Re: ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು
೧. ನಮಗೆ ಉಪಯುಕ್ತವೆನಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳಲು ಬಯಸುತ್ತೇವೆ. ನಮ್ಮ ಚಟುವಟಿಕೆಗಳು ಬೇರೆ ಆದಂತೆ ಸಂಗ್ರಹಗೊಂಡ ಪುಸ್ತಕಗಳು ಭಾರವೆನಿಸತೊಡಗುತ್ತವೆ. ಆದರೂ ಇಟ್ಟುಕೊಂಡೇ ಇರುತ್ತೇವೆ!
ಹಾಗೆ ಇಟ್ಟುಕೊಂಡ ಪುಸ್ತಕ ಒಂದು ದಿನ ಯಾರಿಗೋ ಉಪಯೋಗಕ್ಕೆ ಬರುತ್ತದೆ. ಕೆಲವೇ ದಿನಗಳ ಹಿಂದೆ HTML ಕಲಿಯಬೇಕೆಂದು ನೆಂಟರೊಬ್ಬರು ನನ್ನ ಬಳಿ ಇದ್ದ HTML ಕುರಿತ ಪುಸ್ತಕಗಳನ್ನು ಕೇಳಿ ತೆಗೆದುಕೊಂಡು ಹೋದರು.
ಕಂಪ್ಯೂಟರ್ ಕುರಿತ ಪುಸ್ತಕಗಳೆಲ್ಲ ನೀವು ಇಲ್ಲಿ ತಿಳಿಸಿದಂತೆಯೇ. ಆದರೆ, ಬೇರೆ ದಾರಿಯೇ ಇಲ್ಲ, ಪುಸ್ತಕ ಬೇಕೆಂದಾಗ ಕೊಳ್ಳಲೇ ಬೇಕು. ಬೇಡದಿದ್ದಾಗ ಗುಜರಿಗೆ ಹಾಕೋದಕ್ಕೆ ಮನಸ್ಸಾಗೋದಿಲ್ಲ - ಅದನ್ನಿಟ್ಟುಕೊಳ್ಳಲು ದುಡ್ಡೇನೂ ಖರ್ಚಾಗೋದಿಲ್ವಲ್ಲ!
ಮನೆ ಬದಲಾಯಿಸುವಾಗ ಮಾತ್ರ nuisance ಆಗತ್ತೆ. ಬೇಡದಿದ್ದನ್ನೆಲ್ಲ ಹೊತ್ತಿಕೊಂಡು ಹೋಗೋದಲ್ಲದೆ, ಹೊಸ ಮನೆ ತಲುಪಿದ ಮೇಲೆ ಅದನ್ನು sort out ಮಾಡಿಕೊಳ್ಳೋದು ತಲೆ ನೋವು ಕೆಲಸವೇ!
ಶಿವಮೊಗ್ಗೆಯಿಂದ ಮನೆ ಬದಲಾಯಿಸುವಾಗ ಅಕ್ಕ ಪಕ್ಕದ ಮನೆಯ, ಗುರುತ್ತಿದ್ದ, ಪುಸ್ತಕ ಪ್ರೇಮಿಗಳಿಗೆ ಬಾಲಮಂಗಳ, ಟಿಂಕಲ್, ಚಂಪಕ್, ಅಮರ ಚಿತ್ರಕತೆ, 'ಇದು ನಮ್ಮ ಭಾರತ' ಮುಂತಾದ ಪುಸ್ತಕಗಳನ್ನೆಲ್ಲ ಕೊಟ್ಟು ಖಾಲಿ ಮಾಡಿದ್ದೆ. ಈಗ ಆ ಪುಸ್ತಕಗಳು ನನ್ನ ಬಳಿಯೇ ಇದ್ದರೆ ಚೆನ್ನಾಗಿರುತ್ತಿತ್ತಲ್ಲ ಎಂದನಿಸುತ್ತದೆ!
೨. ಪುಸ್ತಕಗಳನ್ನು ಇಟ್ಟುಕೊಳ್ಳುವುದಕ್ಕೆ ಪುಸ್ತಕಗಳ ಮೌಲ್ಯ ಮತ್ತು ಉಪಯುಕ್ತತೆಗಳಿಗಿಂತ ನಮ್ಮ ಭಾವುಕತೆಯೇ ಬಹಳಷ್ಟು ಸಾರಿ ಕಾರಣವಾಗಿರುತ್ತದೆ. ಇದು ನನ್ನ ಎಸ್ ಎಸ್ ಎಲ್ ಸಿ ಪಠ್ಯ; ಈ ಪುಸ್ತಕ ನಾನು ದೆಹಲಿಗೆ ಮೊದಲು ಹೋದಾಗ ತೆಗೆದುಕೊಂಡದ್ದು; ಇದು ನನ್ನ ಗೆಳತಿ ಕೊಟ್ಟದ್ದು ಇತ್ಯಾದಿ. ಸೆಂಟಿಮೆಂಟಾಲಿಟಿಗೆ ಸಾವಿಲ್ಲವಾದ್ದರಿಂದ ಬೇಡದ ಪುಸ್ತಕಗಳು ಬೇಡದ ಅತಿಥಿಗಳಂತೆ ಉಳಿದೇ ಬಿಡುತ್ತವೆ.
ನಿಜವೇ. ಆದರೆ, ಇದು ಪುಸ್ತಕಗಳಿಗೆ ಮಾತ್ರ ಸೀಮಿತವಲ್ಲ.
೩. ಪುಸ್ತಕವನ್ನು ಸಂಪತ್ತು ಅಂದುಕೊಂಡವರಿದ್ದಾರೆ. ಆದರೆ ಈಗಿನ ನಮ್ಮ ಮನೆಯ ಮಕ್ಕಳು ಕನ್ನಡದ ಪುಸ್ತಕ ಓದುವುದಿರಲಿ, ಮುಟ್ಟುವುದು ಕೂಡ ಅಪರೂಪ. ಮಕ್ಕಳು ಹಾಗೆ ಬೆಳೆದಿರುವುದಕ್ಕೆ ಅಪ್ಪ ಅಮ್ಮಂದಿರಾದ ನಾವೇ ಕಾರಣ, ಅಲ್ಲವೆ. ಓದದ ಮಕ್ಕಳಿದ್ದರೆ ಪುಸ್ತಕಗಳು ಸಂಪತ್ತಲ್ಲ, ಕಸದ ರಾಶಿಯಾಗಿ ಕಾಣುವುದು ತಪ್ಪಿದ್ದಲ್ಲ. ಹಾಗಂತ ಮಕ್ಕಳು ಓದುವುದಿಲ್ಲ ಅಂತಲ್ಲ, ಅವರ ಓದಿನ ಪ್ರಯಾರಿಟಿಗಳು ಬೇರೆ, ನಾವು, ಹಿರಿಯ ತಲೆಮಾರಿನವು ಪುಸ್ತಕ ಸಂಗ್ರಹಿಸುವಾಗ ಇದ್ದ ಪ್ರಯಾರಿಟಿಗಳು ಬೇರೆ.
well, ಈ phenomenon ಬದಲಾಗುತ್ತಲೇ ಇರುತ್ತದೆ. ಎಲ್ಲರಿಗೂ ತಮ್ಮದೇ ಆದ ಟೇಸ್ಟ್ ಇರುತ್ತದಾದ್ದರಿಂದ 'ಪ್ರಯಾರಿಟಿ' ಇದ್ದೇ ಇರುತ್ತದೆ - ಅದು ಜೆನರೇಶನ್ ಗ್ಯಾಪಿನಿಂದ ಆಗಲೇಬೇಕೆಂದೇನಿಲ್ಲ.
೩. ಕ್ಲಾಸಿಕ್ ಗಳನ್ನು ಎಷ್ಟು ಬಾರಿ ಬೇಕಾದರೂ ಓದಬಹುದು ಅನ್ನುವ ವಾದ ಇದೆಯಲ್ಲ, ನಮ್ಮ ಮನೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಇರುವ ಕ್ಲಾಸಿಕ್‌ಗಳಲ್ಲಿ ಶೇ ೧ ಭಾಗವನ್ನೂ ಎರಡನೆಯ ಮೂರನೆಯ ಬಾರಿ ಓದಿಲ್ಲ.
hmm... ಯಾವ ಕ್ಲಾಸಿಕ್ ಅನ್ನೋದರ ಮೇಲೆ depend ಆಗುತ್ತೆ. ಬಿ ಜಿ ಎಲ್ ಸ್ವಾಮಿಯವರ ಕೆಲವು ಕೃತಿಗಳನ್ನ ನಾನು ಹಲವಾರು ಬಾರಿ ಓದಿರುವೆ (ಮತ್ತೆ ಮತ್ತೆ ಓದುವಾಗ ಬೇಜಾರೂ ಆಗಿಲ್ಲ). Asterix, Tintin ಮುಂತಾದ ಕಾಮಿಕ್ಸ್ ಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ ಓದಿರುವೆ
೪. ನಾವು ಯಾವುದೇ ಪುಸ್ತಕ ಗಮನವಿಟ್ಟು ಓದಿದ ನಂತರವೂ ಅದರ ಸ್ಥೂಲ ಅರ್ಥ, ಮನಸ್ಸಿನಲ್ಲಿ ಉಂಟಾದ ಆನಂದದ ಸ್ಥೂಲ ನೆನಪು ಉಳಿದಿರುತ್ತದೆ. ಅಷ್ಟೇ ದಕ್ಕುವುದು. ನಮ್ಮದಾಗುವುದು. ಅದಕ್ಕೆ ಕಾರಣವಾದ ಪುಸ್ತಕ ನಮ್ಮ ಬಳಿ ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ.
ನಿಜ. ಮೊದಲ ಬಾರಿ ಓದಿದ ಅನುಭವ ಚಿರಕಾಲ ಉಳಿಯುವಂತದ್ದು.
೫. ನಾಡಿಗ್ ಅವರು ಹೇಳುವಂತೆ ತಾಂತ್ರಿಕ ವಿಷಯಗಳ ಪುಸ್ತಕ ಕೌಶಲದ ಕಲಿಕೆಗೆ ಅಗತ್ಯ. ಅದು ಕಸುಬುದಾರನೊಬ್ಬನಿಗೆ ಹತ್ಯಾರಗಳು ಅಗತ್ಯವಾಗಿರುವಂತೆ. ಕಸುಬನ್ನೇ ಬದಲಾಯಿಸಿದಾಗ ಆ ಕಸುಬಿನ ಹತ್ಯಾರಗಳೂ ಬೇಡವಾಗುತ್ತವಷ್ಟೆ. ಅಡುಗೆ ಭಟ್ಟರಿಗೇಕೆ ಹಾರೆ ಪಿಕಾಸಿ ನೇಗಿಲು? ಹಾಗೆ ನಾವು ಕಸುಬು ಬದಲಿಸಿದಾಗಲೂ ಹಳೆಯ ಕಸುಬಿನ ಕೌಶಲದ ಪುಸ್ತಕಗಳು ಯಾಕೆ ಸುಮ್ಮನೆ ರಾಶಿಯಾಗಿ ಇರಬೇಕು?
ಇದಕ್ಕೆ ಮಾತ್ರ ನನ್ನ ಬಳಿ ಉತ್ತರವಿಲ್ಲ. ಕೆಲವರು ತಮ್ಮ 'ಯಾದೇಂ' ಖಾಯಂ ಆಗಿ ಇಟ್ಟುಕೊಳ್ಳೋದಕ್ಕೆ ಹಳೆಯ ಕಸುಬಿನ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ. (ಸಣ್ಣವನಿದ್ದಾಗ ಸಂಸ್ಕೃತ ಕಲೆಯುವಾಗ ಬಳಸಿದ ಪುಸ್ತಕಗಳು ಇನ್ನೂ ನನ್ನ ಬಳಿ ಇವೆ. ಶಾಲೆಯಲ್ಲಿ, ಸಂಸ್ಕೃತ ಓದಲು ಪ್ರಾರಂಭಿಸಿದಾಗ ಅವನ್ನೊಮ್ಮೆ "revisit" ಮಾಡಿದ್ದೆ. ಈಗ, ಅದರ ಉಪಯೋಗವೇನು ಎಂಬುದು ತಿಳಿದಿಲ್ಲ. ಮುಂದೊಮ್ಮೆ ಮತ್ತಷ್ಟು ಸಂಸ್ಕೃತ ಓದಲು ಸಾಧ್ಯವಾಗುತ್ತದೆಯೋ ಅದೂ ಗೊತ್ತಿಲ್ಲ)
೬. ಯಾವುದೇ ವ್ಯಾಮೋಹ ಬಿಡುವುದು ಕಷ್ಟವಾದಂತೆ ಪುಸ್ತಕ ಸಂಗ್ರಹದ ವ್ಯಾಮೋಹ ಬಿಡುವುದು ಕೂಡ ಕಷ್ಟವೇ.
ನಿಜ. ಕೆಲವರು ಈ ವ್ಯಾಮೋಹಕ್ಕೇ ಬಲಿಯಾಗಿ ತಮ್ಮ ಬಳಿ ಇರುವ 'ಓದಿದ', ಮತ್ತೊಮ್ಮೆ ಓದಲು ಬೇಕಿಲ್ಲದ ಪುಸ್ತಕಗಳನ್ನೂ ಬೇರೆಯವರಿಗೆ ಕೊಡುವುದಿರಲಿ, ಅವರೊಂದಿಗೆ share ಕೂಡ ಮಾಡಿಕೊಳ್ಳೋದಿಲ್ಲ. ಪ್ರತಿಯೊಬ್ಬರೂ ಎಲ್ಲವನ್ನೂ ಕೊಳ್ಳುವುದು ಪ್ರಕಾಶಕರಿಗೆ ಒಳ್ಳೆಯದೆ, ಆದರೆ ನೀವು ಈ ಲೇಖನಗಳಲ್ಲಿ ಹೇಳುತ್ತಿರುವಂತೆ ಅದು ಮನೆಯಲ್ಲೊಂದು 'ಪುಸ್ತಕರಾಶಿ'ಗೆ ಎಡೆ ಮಾಡಿಕೊಡುತ್ತದೆ. ನನ್ನ ಮಟ್ಟಿಗೆ, ಪುಸ್ತಕವನ್ನು ಕೊಳ್ಳುವುದು ಮತ್ತು ಬೇರೆಯವರಿಂದ 'ಓದಿದ' ಪುಸ್ತಕಗಳನ್ನು ಪಡೆಯುವುದು - ಇವೆರಡನ್ನೂ ಜೊತೆಜೊತೆಯಾಗಿ ರೂಢಿಸಿಕೊಂಡು ಒಂದು ಬ್ಯಾಲೆನ್ಸ್ ಸ್ಟ್ರೈಕ್ ಮಾಡಬೇಕು.
೭. ಸಾಹಿತ್ಯ, ಕತೆ, ಕಾದಂಬರಿ, ಕವಿತೆ ಇತ್ಯಾದಿಗಳು ಕಾಲಾತೀತವೆಂದರೂ ಅವುಗಳ ಮೂಲಕ ಭಾವವನ್ನು ಪರಿಷ್ಕರಿಸಿಕೊಳ್ಳುವುದು ಸಾಧ್ಯವಿದ್ದರೂ, ಅವುಗಳ ಭಾವ ಒಮ್ಮೆ ನಮ್ಮ ಮನಸ್ಸಿಗೆ ಇಳಿದಮೇಲೆ ಅಚ್ಚಾದ ಹಾಳೆಗಳನ್ನು ಇಟ್ಟುಕೊಳ್ಳುವ ಅಗತ್ಯವೇನು?
ನನಗನ್ನಿಸಿದಂತೆ ಭಾವ ಅಚ್ಚಾದರೂ, ಚಿತ್ರಣ ಬಹುಶಃ ಮೂಲರೂಪದಲ್ಲಿ, ಶಬ್ಧರೂಪದಲ್ಲಿ ಅಚ್ಚಾಗದು. ಕೆಲವು ಕವನಗಳಿಗೆ, ಕೃತಿಯ ಕೆಲವು ಭಾಗಗಳಿಗೆ ಅದು ಆದೀತು, ಆದರೆ context enjoy ಮಾಡಬೇಕೆನಿಸಿದಾಗ ಮತ್ತೊಮ್ಮೆ ಆ ಹಾಳೆಗೇ, ಆ ಪುಸ್ತಕಕ್ಕೇ ಮೊರೆ ಹೋಗಬೇಕಾಗಬರಬಹುದು.
೮. ಹಾಗೆ ಓದಿ, ವಿಚಾರವನ್ನು ಕೇಳಿ ಬದಲಾಗುವುದಕ್ಕಿಂತ ನಮಗೆ ಬದುಕಿನಿಂದ ದೊರೆಯುವ ಅನುಭವಗಳಿಂದ ಬದಲಾಗುತ್ತೆವೆ ಅಷ್ಟೆ ಅಲ್ಲವೆ.
ಓದುವುದರಿಂದ ವಿಚಾರಗಳನ್ನು ಕಲೆಯುವುದಕ್ಕಿಂತ "ಹೀಗೂ ಉಂಟು" ಎನ್ನುವುದನ್ನು ಅರಿಯುತ್ತೇವಲ್ಲವೆ? ಅನುಭವಗಳಿಂದ ಹೆಚ್ಚು ಕಲಿಕೆ ಎಂಬುದು ನಿಜವೆ, ಆದರೆ ಪುಸ್ತಕಗಳಿಲ್ಲದ ಕಲಿಕೆ ಬಾವಿಯಲ್ಲಿ ಕೂಡಿ ಹಾಕಿದ ಕಪ್ಪೆಯ ಅನುಭವದಂತೆ!
ಚಿಂತನೆಯನ್ನು ಪರಿಶೀಲಿಸಿ ಮರುಚಿಂತನೆ ಮಾಡುವ ಗುಣ ಬರುವುದು ಓದಿನಿಂದಲೇ ಅಲ್ವೆ? ಹಾಗೆ ಮಾಡುವಾಗ ಈ ಹಿಂದೆ ಆಲೋಚಿಸಗೋಜಿಗೂ ಹೋಗದ ಹಲವು ವಿಚಾರಗಳು ಮನದ ಮುಂದೆ ಸುಳಿದು ಚಿಂತನೆಯನ್ನು broaden ಮಾಡುತ್ತದಲ್ಲವೆ?
ಆದ್ದರಿಂದಲೇ ಸಮಾಜವನ್ನು ಬದಲಾಯಿಸಲು ಬರೆಯುತ್ತೇನೆ, ಓದಿನಿಂದ ಜನ ಸಂಪನ್ನರಾಗುತ್ತಾರೆ ಅನ್ನುವುದೆಲ್ಲ ಸುಳ್ಳು ಭ್ರಮೆಗಳು.
ಜಗತ್ತಿನ ಕೆಡುಕಿಗೆ ಓದಿ ಬುದ್ಧಿವಂತರಾದವರೇ ಹೆಚ್ಚು ಕಾರಣ ಅಲ್ಲವೆ?
ಕಲಿಕೆಯಿಂದ, ವಿಜ್ಞಾನದಿಂದ, ಕೊನೆಗೆ ಚಿಂತನೆಯಿಂದ ಒಳಿತು - ಕೆಡುಕು ಜೊತೆಜೊತೆಯಾಗಿ ಬರುವಂತದ್ದಲ್ವೆ?
ಭ್ರಷ್ಟತನ, ಮೋಸ ಇವೆಲ್ಲ ಕೇವಲ ಓದಿನಿಂದ, ಮಾತಿನಿಂದ ಬದಲಾಗುವಂತಿದ್ದರೆ ಜಗತ್ತು ಹೀಗೆ ಯಾಕೆ ಇರುತ್ತಿತ್ತು? ಓದಿನಿಂದ ಬದಲಾಗದ ನಾವು ಪುಸ್ತಕ ಕೂಡಿಟ್ಟುಕೊಂಡು ಬದಲಾಗುತ್ತೇವಾ?
ಓದಿನಿಂದ ಜಗತ್ತು ಬದಲಾಗುತ್ತದೆ ಎನ್ನುವ notion ತಪ್ಪು ಎಂದು ನನ್ನ ಅನಿಸಿಕೆ. ಯಾರನ್ನೂ ಯಾರೂ ಬಹುಶಃ ಬದಲಾಯಿಸಲು ಸಾಧ್ಯವಿಲ್ಲ. ಹೀಗಿರುವಾಗ ಬರಿಯ ಓದು ಯಾರನ್ನಾದರೂ ಬದಲಾಯಿಸಬಹುದು ಎಂಬುದು ನಂಬಲು ಕಷ್ಟಕರವಾದ ವಿಷಯ. ಯಾರಲ್ಲಾದರೂ ಬದಲಾವಣೆ ಆಗಬೇಕಿದ್ದರೆ ಅದು ಅವರಿಂದಲೇ ಆಗಬೇಕು. ಪುಸ್ತಕಗಳು, ಮಾತುಗಳು ಮತ್ತಿನ್ನೆಲ್ಲವೂ ಬರಿಯ influence ಮಾತ್ರಕ್ಕಷ್ಟೆ. ಯಾವ ರೀತಿಯ influence ಆಗುತ್ತದೆಂಬುದೂ ಪ್ರತಿಯೊಬ್ಬರ ಟೆಂಪರ್ಮೆಂಟ್ ಹಾಗೂ ಪರ್ಸನಾಲಿಟಿಯ ಮೇಲೆ ಅವಲಂಭಿಸಿರುತ್ತೆ.
- h.p.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"