ಉ: ಕಲಾಂ --ಸಲಾಂ
- ಉ: ಕಲಾಂ --ಸಲಾಂ By: Sunil Jayaprakash (Jul 24 2007 - 2:51pm)
- ಉ: ಕಲಾಂ --ಸಲಾಂ By: ASHOKKUMAR (Jul 25 2007 - 6:21am)
- ಉ: ಕಲಾಂ --ಸಲಾಂ By: kishorpatwardhan (Jul 25 2007 - 7:34am)
- ಉ: ಕಲಾಂ --ಸಲಾಂ By: muralihr (Jul 24 2007 - 3:56pm)
- ಉ: ಕಲಾಂ --ಸಲಾಂ By: mahesha (Jul 24 2007 - 4:02pm)
- ಉ: ಕಲಾಂ --ಸಲಾಂ By: ASHOKKUMAR (Jul 25 2007 - 6:21am)

RSS:
ಉ: ಕಲಾಂ --ಸಲಾಂ
ಕಳೆದ ವಾರ ನಮ್ಮ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಿತಷ್ಟೇ. ಆದರೆ ನಮ್ಮ ಪ್ರಜಾವಾಣಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿತ್ತು ನೋಡಿ. ಇವುಗಳು ಪ್ರಜಾವಾಣಿಯ ಮೊದಲ ಪುಟದ ಸುದ್ಧಿಯ ತುಣುಕುಗಳು.
ಜುಲೈ ೧೯
ವಿಮಾನ ದುರಂತ : ೨೦೦ ಸಾವು
ಮುಂಬೈ ಕಟ್ಟಡ ಸುಸಿದು ೧೦ ಸಾವು
ಅಸ್ಸಾಂ ಮಾಜಿ ಸಚಿವರ ಮನೆಯಲ್ಲಿ ಶಸ್ತ್ರಾಸ್ತ್ರ ವಶ
ಮೂವರಿಗೆ ಗಲ್ಲು - ೧೯೯೩ರ ಮುಂಬೈ ಸರಣಿ ಸ್ಫೋಟಕ್ಕೆ ಕಾರಣರಾದವರಿವರು
ಗಾಯಗೊಂಡಿದ್ದ ಬಾಲಕಿ ಸಾವು
ವೆಂಕಟೇಶ್ ಹತ್ಯೆ ಯಾರಿಂದ
ಸರಳ ಹಿಂದೆ ಕರಾಳ ಬದುಕು...
ಇಂದು ರಾಷ್ಟ್ರಪತಿ ಆಯ್ಕೆಗೆ ಮತದಾನ - ಶಹಾಬುದ್ದಿನ್, ಶಿಬು ಸೇರಿದಂತೆ ಜೈಲಲ್ಲಿರುವವರಿಗೂ ಮತಾಧಿಕಾರ
ಜುಲೈ ೨೦
ಮುಂಬೈ ಕಟ್ಟಡ ಕುಸಿತ; ಸತ್ತವರ ಸಂಖ್ಯೆ ೨೬ಕ್ಕೆ
ತೃತೀಯ ರಂಗದಲ್ಲಿ ಒಡಕು
ಮುಂಬೈ : ಮತ್ತೆ ಮೂವರಿಗೆ ಮರಣ ದಂಡನೆ
ಹಣಕ್ಕೆ ನಕ್ಸಲರಿಂದ ಬೆದರಿಕೆ
ಪಾಪ ಪ್ರಜಾವಾಣಿಯವರಿಗೆ, ಆ ಎರಡು ದಿನವೂ ಕೂಡ ಡಾ||ಕಲಾಂ ಅವರು ನೆನಪೇ ಆಗಲಿಲ್ಲ ಅನ್ನಿಸುತ್ತೆ
:( ಅಂದು ಮೊದಲ ಪುಟದಲ್ಲಿ ಎಲ್ಲಿಯಾದರೂ ಕಲಾಂ ಅವರ ಫೋಟೋ ಆಗಲೀ ಅಥವಾ ಅವರಿಗೆ ನಂಟಾದ ಬರಹ ಇದ್ದಿದ್ದರೆ ಎಷ್ಟು ಚೆನ್ನಾಗಿರೋದಲ್ವೇ. ಅದು ಬಿಟ್ಟು ಅಲ್ಲಿ ಸ್ಫೋಟ, ಇಲ್ಲಿ ಸಾವು, ಅಲ್ಲಿ ದುರಂತ.
ಕಲಾಂ ಅವರೇ ಒಮ್ಮೆ ಏನೇ ಕೆಟ್ಟ ಸಮಾಚಾರವಿರಲಿ ಮೊದಲ ಪುಟದಲ್ಲಿ ಆನಂದವನ್ನು ಹುಟ್ಟಿಸುವಂತಹ ಸುದ್ಧಿಯಿರಲಿ ಎಂದಿದ್ದರು. ಅದೊಂದು ದಿನವಾದರೂ ಈ ಮಾತನ್ನು ಫಾಲೋ ಮಾಡಬಹುದಿತ್ತಲ್ಲವೇ ?
ಇಷ್ಟಕ್ಕೆ ನಿಲ್ಲದೆ, ಮುಂದಿನ ದಿನಗಳ ಮೊದಲ ಪುಟದ ಸುದ್ಧಿ ನೋಡಿ.
ಜುಲೈ ೨೧
ಮುಂಗಾರು.. ಚಿತ್ರಕ್ಕೆ ಪ್ರಶಸ್ತಿಗಳ ಸುರಿ ಮಳೆ.
ರಾಷ್ಟ್ರಪತಿ ಫಲಿತಾಂಶ ಇಂದು
ಸ್ಫೋಟದ ಸ್ಥಳದಲ್ಲಿ ಸಿಮ್ ಇರಲೇ ಇಲ್ಲ.
ಮಸೂದೆ ವಾಪಸಾಗಿಲ್ಲ.
ಭಾರಿ ಮಳೆಗೆ ಉದ್ಯಾನನಗರಿ ತಲ್ಲಣ.
ನಂದಿ ಹೋದ ಬಾಲಕಿ ಸಂಜನಾ ಬದುಕು!
ಜುಲೈ ೨೨
ಹೊಸ ಇತಿಹಾಸ
ಅಪನಂಬಿಕೆ ಹೋಗಲಾಡಿಸಿ
ಶೆಡ್ ಕುಸಿದು ಮೂವರ ಸಾವು