ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

deap thiniking ಅ೦ದರೇನು ??

ಎಷ್ಟೋ ಜನ ಡೀಪ್ thinkers na ಭೇಟಿ ಮಾಡಿದ್ದೇನಿ.
ಆದರೆ ಈ thinkಇನ್ಗ್ ಅನ್ನೋದು ಎನು ??
ಈ think ಮಾಡೋ ಮನುಜ ಯಾರು ??
ನಾವು ಯಾಕೆ ಅಷ್ಟೊ೦ದು think ಮಾಡ್ತೀವಿ.
thinker ಮತ್ತು thinking thoughts ಬೇರೆಯೇನು ??
ಕೊನೆಗೆ "ನಾನು" ಅನ್ನೋದು ಒ೦ದು thought ಮಾತ್ರವೇನು. ??
ಅಲ್ಲಾ ಅ೦ದರೆ "ನಾನ್ ಯಾರು" ???
ಶಿವೋಹಮ್ಮಾ ?? ಅದೂ ಇಲ್ಲಾ ದಾಸೋಹ೦ ??
ಇಲ್ಲಾ ಅಹ೦ ಬ್ರಹ್ಮಸ್ಮಿ ನೋ ??

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಥಾಟೇ ನಾನು ಅಂತಾರೆ ಜೆಕೆ

olnswamy's picture

ನನ್ನ ಥಾಟೇ ನಾನು ಅನ್ನುತ್ತಾರೆ ಜೆಕೆ. ಅವರ ಮಾತು ಯಾವಾಗಲಾದರೂ ಪೋಸ್ಟ್ ಮಾಡುತ್ತೇನೆ.

ವಿಡಂಬನೆ (ಪ್ರಶ್ನಾರ್ಥಕ)

Sunil Jayaprakash's picture

ಕೈಲಾಸಂ ನಾಟಕಗಳ ಥರಾ ಇದ್ಯಲ್ರಿ ನಿಮ್ಮ ಪ್ರಶ್ನೆ..ಇರಲಿ....ಇಂಗ್ಲೀಷ್ ಬರದ ನಮ್ಮ ಪ್ರಿಯ ಓದುಗರಿಗಾಗಿ, ನಿಮ್ಮ ಕನ್ನಡ ಪ್ರಶ್ನೆ(??) ಕನ್ನಡಿಗರಿಗೆ ಅರ್ಥವಾಗಲೆಂದು ಕನ್ನಡಕ್ಕೇ ಅನುವಾದಿಸುವ ಪ್ರಯತ್ನ ಮಾಡಿದ್ದೇನೆ.

ಚಿಂತನೆಗಳಲ್ಲಿ ತಲ್ಲೀನನಾಗಿರಲು, ಯೋಚನೆಗಳಲ್ಲಿ ಮುಳುಗಿರಲು, ಒಮ್ಮೊಮ್ಮೆ ಆಲೋಚಿಸುವೆ,  ಈ ಚಿಂತನ ಮಂಥನಗಳೇನೆಂಬುದರ ಬಗ್ಗೆ.
ಆಲೋಚನೆ ಎಂದರೇನು. ಈ ಚಿಂತನೆಗಳಲ್ಲಿ ಮುಳುಗೇಳುವವರು ಯಾರು. ನಾವೇಕೆ ಅಷ್ಚು ಚಿಂತಿಸುತ್ತೀವಿ. ಈ ಚಿಂತೆ ಮತ್ತು ಚಿಂತನೆಗಳು ಬೇರೆಯೇನು.
ಕೊನೆಗೆ "ನಾನು" ಅನ್ನೋದು ಒ೦ದು ಕಲ್ಪನೆಯೇ, ಚಿಂತನೆಯೇ. ನಾನು ಯಾರು. ನಾನು ಶಿವನೇ, ದಾಸನೇ, ಬ್ರಹ್ಮನೇ.

ಚಿಂತೆ, ಚಿಂತನೆ, ಆಲೋಚನೆ, ಯೋಚನೆ, ಯೋಜನೆ, ಕಲ್ಪನೆ. ಇನ್ನೆಷ್ಟು ಕಾಲ ಇವುಗಳಲ್ಲಿ ತೊಳಲಾಟ.

ಎಷ್ಟೊಂದು ಪ್ರಶ್ನೆಗಳು

tvsrinivas41's picture

ಒಂದೇ ಸಲಕ್ಕೆ ಎಷ್ಟೊಂದು ಪ್ರಶ್ನೆಗಳನ್ನು ಎಸೆದುಬಿಟ್ಟಿದ್ದೀರಿ ಸರ್. ಇದರ ಬಗ್ಗೆ ಯೋಚಿಸ್ತಿದ್ರೆ ನಾನು ಬ್ರಹ್ಮ ಆಗಬಹುದೇನೋ (ತಮಾಷೆ). ಯೋಚಿಸುವ ಮನುಷ್ಯ ಯಾರು ಅಂದ್ರೆ - ಎಲ್ಲರೂ. ಎಲ್ಲರೂ ಯೋಚಿಸ್ತಾರೆ. ಆದರೆ ಏಕಾಗ್ರರಾಗಿ ಯೊಚಿಸ್ತಾ ಅದರಲ್ಲೇ ಮುಳುಗಿಹೋಗುವವರನ್ನು (ಅಕ್ಕಪಕ್ಕದ ಆಗುಹೋಗು ತಿಳಿಯದಷ್ಟು), ಡೀಪ್ ಥಿಂಕರ್ಸ್ ಅನ್ನಬಹುದೇನೋ.

ಇನ್ನು ಮುಂದಿನ ಪ್ರಶ್ನೆಗಳಿಗೆ ಉತ್ತರ ಕೊಡೋದು ನನಗೆ ಅಷ್ಟು ಸುಲಭವಲ್ಲ. ಜಿಡ್ಡು ಅವರ ಕೃತಿಗಳನ್ನು ಓದಿ ನಿಮಗೆ ಉತ್ತರ ಸಿಗುತ್ತದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಕವಿಗಳು

muralihr's picture

ಕವಿ ಮಹಾಶಯರು ಹೀಗೆಲ್ಲಾ ತಪ್ಪಿಸಿ ಕೊಳ್ಳಬಹುದೇನು ??
ನಾನು ಉತ್ತರ ಕಾವ್ಯದಿ೦ದ ಬರುತ್ತೆ ಅ೦ದುಕೊ೦ಡಿದ್ದೆ.

ಇದರ ನಿರೀಕ್ಷಣೆಯೇ?

tvsrinivas41's picture

ಒಂದು ವಿಷಯದ ಜಾಡು ಹಿಡಿದು
ಲಟ್ಟಿಸಿ ಮಥಿಸಿ ಅಂಗವ ಮರ್ದಿಸಿ
ತಲೆಗೆದರಿಕೊಂಡು ಮೈ ಪರಚಿಕೊಂಡು
ಅಂಗಿ ಹರಿದುಕೊಂಡು ಕೊನೆಗೂ
ಯುರೇಕಾ! ಎಂದು ಕೂಗುವುದೇ!

ಮನದ ಒಳ ಹೊಕ್ಕು ಹೆಕ್ಕಿ ತಿಕ್ಕಿ
ಹೊರ ಬಂದು ಬೆಳಕಿಗೆ ಹಿಡಿದು
ಮೇಲೆತ್ತಿ ನೋಡಿ ಕೆಳಗಿಳಿಸಿ
ಮೂಗಿಗೆ ತಾಗಿಸಿ ನೆಕ್ಕಿ ಮತ್ತೆ ವಾಸನೆ ನೋಡಿ
ಗಬ್ಬಿನ ವಾಸನೆಗೆ ಅಸಹ್ಯ ಪಟ್ಟು
ಬಿಸುಟು - ಮತ್ತೆ ಒಳ ಹೊಕ್ಕು
ಹೆಕ್ಕಿ ತಂದು ಆನಂದಿಸುವುದೇ

ಕೇನೋಪನಿಷತ್ತಿನಂತೆ
ಜೀವನವೇ ಒಂದು ಕನಸೆಂದು
ಕನಸಿನಾಚೆಗೆ ಬರಲು ತಿಳಿಯುವುದೆಂದು
ಕಣ್ಣಿಗೆ ಕಂಡದ್ದು ಸುಳ್ಳೆಂದು
ಬಣ್ಣಗಳಿಲ್ಲದೇ ಜಗವೆಲ್ಲ ಕಪ್ಪು ಬಿಳುಪೆಂದು
ವಿಲಕ್ಷಣ ವಿಚಿತ್ರ ವ್ಯಕ್ತಿ ಎನಿಸಿಕೊಳ್ಳುವವನ
ಲಹರಿಯೇ ಆಳದ ಯೋಚನೆಗಳೇ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಶಿವೋಹಮ್ಮಾ

muralihr's picture

ಶಿವೋಹಮ್ಮಾ ?? ಅದೂ ಇಲ್ಲಾ ದಾಸೋಹ೦ ??
ಇಲ್ಲಾ ಅಹ೦ ಬ್ರಹ್ಮಸ್ಮಿ ನೋ ??
>>>

ಶಿವನು ನಾನಲ್ಲಾ.
ಬ್ರಹ್ಮ ನಾನಲ್ಲಾ.
ದಾಸನ೦ತು ಅಲ್ಲವೆ ಅಲ್ಲಾ.
ಕೇವಲ೦ ಧನ್ಯೋಸ್ಮಿ ...ಆದರೂ ಇನ್ನು ಭಾವ ಸ್ವಲ್ಪ ಅವ್ಯಕ್ತವನ್ನು ಸರಿಯಾಗಿ
ವ್ಯಕ್ತ ಪಡಿಸಬಹುದಾಗಿತ್ತು.

ಇನ್ನೂಸ್ವಲ್ಪ

tvsrinivas41's picture

ಈ ಮೊದಲು ಸ್ವಲ್ಪ ತಮಾಷೆಯಾಗಿ ಬರೆದಿದ್ದೆ. ಈ ಒಂದು ಚರಣವನ್ನೂ ಸೇರಿಸಿದರೆ ಹೇಗಿರುತ್ತೆ ನೋಡಿ - ತಿಳಿಸಿ.

ಬ್ರಹ್ಮಾಂಡದ ಅಣುಗಳನೆಲ್ಲ ಕಾಣುವ ತವಕವೇ
ತೀಕ್ಷ್ಣ ತೇಜದ ಉಗಮ ಭೇದಿಸುವ ಪ್ರಯತ್ನವೇ
ನನ್ನೊಳಿರುವ ಆತ್ಮವೂ ಆ ಪ್ರಮಾತ್ಮನ ಒಂದು ಭಾಗವೇ
ನನ್ನನು ಬ್ರಹ್ಮಾಂಡದ ಒಂದು ಭಾಗವೆಂದು ತಿಳಿಯುದೇ
ಇದರ ಚಿಂತನೆಗಳೇ ಆಳದ ಯೋಚನೆಗಳೇ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಮೂಲಪ್ರಶ್ನೆ

shreeharsha4u's picture

ಅಬ್ಬಬ್ಬಬ್ಬ. ಕೇಳಿರೋ ಐದು ಪ್ರಶ್ನೆಗಳಲ್ಲೇ ಜೀವನದ ಅರ್ಥ, ಅನರ್ಥ, ಸಾರ, ನಿಸ್ಸಾರಗಳನ್ನೆಲ್ಲಾ ಪಟ್ಟಿಮಾಡಿಬಿಟ್ಟಿದೀರಲ್ರಿ. ೫೦೦೦ ವರ್ಷಗಳಿಂದ ಮನುಷ್ಯ ಉತ್ತರ ಕಂಡುಕೊಳ್ಳೋಕೆ ಪ್ರಯತ್ನ ಪಡ್ತಾ ಇದ್ರೂ ಇನ್ನೂ ಉತ್ತರ ಸಿಗದೆ ಇರೋ ಪ್ರಶ್ನೆನೇ "ನಾನು ಯಾರು?" ಅನ್ನೋದು. ಈ ಪ್ರಶ್ನೆ ಒಂದಲ್ಲ ಒಂದು ಸಮಯದಲ್ಲಿ ಎಲ್ಲರ ಮನಸ್ಸಿನಲ್ಲೂ ಬಂದಿದ್ದರಿಂದಲೇ ಕೃಷ್ಣ ವಿಶ್ವರೂಪವನ್ನ ತೋರಿ ಭಗವದ್ಗೀತೆಯನ್ನ ಭೋದಿಸಬೇಕಾಯ್ತು; ಸಿದ್ಧಾರ್ಥ ಬುದ್ದನಾಗಬೇಕಾಯ್ತು; ಮಹಾಮಹಾ ರಾಜರುಗಳೆಲ್ಲಾ ಸಮಸ್ತವನ್ನೂ ತ್ಯಾಗ ಮಾಡಿ ಸರ್ವಸಂಗ ಪರಿತ್ಯಾಗಿಗಳಾಗಬೇಕಾಯ್ತು; ಹೊಸ ಹೊಸ ಧರ್ಮಗಳು, ನಂಬಿಕೆಗಳ ಹುಟ್ಟು ಆಗಬೇಕಾಯ್ತು. ಆ ಮಟ್ಟಿಗೆ ಇದು ಸ್ವಲ್ಪ dangerous ಪ್ರಶ್ನೆ. ಅಂದ ಹಾಗೆ ಇದು ನೀವು ಇತರರಿಗೆ ಪ್ರಶ್ನೆ ಕೇಳಿದ್ದೋ ಅಥವ ನಿಮಗೆ ಹೊಳೆದ ಜೀವನದ ಅರ್ಥವನ್ನ ಇತರರಿಗೆ ತಿಳಿಸಿದ್ದೋ?

ಮರು ಪ್ರಶ್ನೆ - ??

muralihr's picture

ನಿಮ್ಮ ಪ್ರಶ್ನೆ ನನ್ನ ಪ್ರಶ್ನೆ ಗೆ ಉತ್ತರೆ ಕೊಡುವುದರಲ್ಲಿ ಸಹಾಯ ಮಾಡುವುದಿಲ್ಲಾ.
ಆದರಿ೦ದ ಉತ್ತರವನ್ನು ಕೊಡುವುದಿಲ್ಲಾ.
ನಾವು ಜಿಡ್ಡು ಗಿನ್ನಾ ಮು೦ಚೆ, ಬುದ್ಧನಿಗಿನ್ನಾ ಮು೦ಚೆ, ಎಲ್ಲಾ ಗುರುಗಳು ಧರ್ಮಗಳು ಹುಟ್ಟುವ ಮು೦ಚಿನ
ಕಾಲದಲ್ಲಿ ಇದ್ದೇವಿ ಅ೦ದುಕ್ಕೊಳ್ಳೋಣಾ. ಅವಾಗ ನಮ್ಮ ಪ್ರಶ್ನೆಗೆ ನಾವೇ ಉತ್ತರ್ ಕ೦ಡು ಹಿಡಿಯಬೇಕಾಗತ್ತೆ.
ಇಲ್ಲಾ ಅ೦ದರೆ ಅವರ ಅನುಯಾಯಿಗಳೋ ಅಥವಾ ಶಿಷ್ಯರೋ ಆಗಿ ಮಠ, ಆಶ್ರ ಮವನ್ನು ಕಟ್ಟಿ
ಧ್ಯಾನ ಶಿಬಿರ, ಶಾ೦ತಿ ಶಿಬಿರ ಹೀಗೆ ಮಾಡುವುದಕ್ಕೆ ಪ್ರಾರ೦ಭ ಮಾಡ್ತೀವಿ.ಸ೦ಸಾರದಿ೦ದ ಶಿಬಿರಗಳತ್ತ ಪಲಾಯನ. ಯಾವ ಅಧ್ಯಾತ್ಮದ ಪುಸ್ತಕ ಓದಿದರೂ ಪ್ರಯೋಜನ ಇಲ್ಲಾ ಅ೦ತಾ ನನ್ನಗೆ ಒಬ್ಬ ಪಿತ್ರ ಹೇಳಿದ್ದಾ.
ಆತ ಚಿಕ್ಕ ವಯಸಿನಲ್ಲಿ ಮನೆ ಮಠ ಬಿಟ್ಟು ಎಲ್ಲಾ ಪುಸ್ತಕ (ಶ೦ಕರ, ಮಧ್ವ, ರಾಮಾನುಜ, ಜಿಡ್ಡೂ, ) ಓದಿ - ಈಗ ಪುಸ್ತಕವನ್ನು ಓದುವುದನ್ನೇ ನಿಲಿಸಿದ್ದಾನೆ.ಸತ್ಯ ಪುಸ್ತಕದಲ್ಲಿ ಇಲ್ಲ್ಲಾ, ಪುಸ್ತಕದಲ್ಲಿ ಬರಿ ಅಕ್ಷರಗಳು.

ನಾವೆಲ್ಲರೂ ಮಾಡಿದ್ದೇ ತಪ್ಪನ್ನು ಮಾಡ್ತೀವಿ. ನಾನು ಸಾಕಷ್ಟು ಕಾಲ ವ್ಯಯ ಮಾಡಿದೆ ಈ ಪುಸ್ತಕಗಳನ್ನು ಓದಿ
ಅವುಗಳು ಒ೦ದು ಭಯ೦ಕರ ಸುಳಿಯಲ್ಲಿ ಹಾಕಿಬಿಟ್ಟವು ಅ೦ದಾ.
ಅವನ ಪ್ರಕಾರ ಎಲ್ಲಾ ಗುರುಗಳು misguide ಮಾಡ್ತಾರೆ ಅ೦ತಾ.
ಆತ ಅಧ್ಯಾತ್ಮದ ಗುರುಗಳೆಲ್ಲರ ಹತ್ತಿರ ವ್ಯಾಸ೦ಗ ಮಾಡಿ "ಅವೆಲ್ಲಾ ಕೇವ ಲ
plastic ಹೂವುಗಳನ್ನು ಕೊಡಬಲ್ಲದೆ ಹೊರತು ನಿಜವಾದ ಕುಸುಮ ವನ್ನು ಕೊಡಾಲಾರದು"

deep!

hpn's picture

deap -> deep!!

(ಕೀಬೋರ್ಡ್ ಕುಟ್ಟುವಾಗ ಬೆರಳು ಜರುಗಿತು ಅಂತ ಕಾಣತ್ತೆ)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಉ: deap thiniking ಅ೦ದರೇನು ??

hndivya's picture

ಅಬ್ಬಬ್ಬ ಒಳ್ಳೆಯ ಸವಾಲನ್ನೇ ಹಾಕ್ಕಿದ್ದೀರ ಮುರಳಿ.
ಕನ್ನಡದ ಕುವರಿ
ದಿವ್ಯ