May 2, 2009 - 5:53am
ಸಂಪದ ಮಿತ್ರರೇ, ನನ್ನ ತಮ್ಮನ ಮಗಳ ಮದುವೆ ವಿಚಾರವಾಗಿ ಬರೆದಿದ್ದೆ. ಇದೇ ಮೇ ೬ ರಂದು ಮದುವೆಯು ನಮ್ಮ ಹಳ್ಳಿಯಲ್ಲಿ ನಡೆಯಲಿದೆ. ನಮ್ಮೂರಿನಲ್ಲಿ ಯಾವ ಛತ್ರವೂ ಇಲ್ಲ. ಅಥವಾ ದೊಡ್ದ ಮನೆಯೂ ಇಲ್ಲ. ಇರುವ ಮನೆಗಳಲ್ಲೇ ಬಂದ ಅತಿಥಿ ಗಳಿಗೆ ಮಲಗಲು ಮತ್ತು ಸ್ನಾನ ಮಾಡಲು ವ್ಯವಸ್ಥೆ. ಮಳೆಗಾಲವಾದ್ದರಿಂದ ಊಟೋಪಚಾರಕ್ಕಾಗಿ ಒಂದು ಶೀಟ್ ಪೆಂಡಾಲ್ ಹಾಕಿಸಲಾಗಿದೆ. ಬನ್ನಿ ನಮ್ಮೂರ ಜನರ ಆತಿಥ್ಯ ಪಡೆಯಿರಿ. ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದ ಸರಸ್ವತಿಯವರು ಮದುವೆಯ ಹಿಂದಿನದಿನ ದಿನಾಂಕ ೫.೦೫.೨೦೦೯ ಸಂಜೆ ೫.೦೦ ಗಂಟೆಗೆ ಒಂದು ಉಪನ್ಯಾಸ ನೀಡಲಿದ್ದಾರೆ. ವಿಷಯ: ಸಾರ್ಥಕ ಬದುಕು
ಸ್ಥಳ: ಹರಿಹರಪುರ, ಹೊಳೆನರಸೀಪುರ ತಾಲ್ಲುಕ್,ಹಾಸನ-ಜಿಲ್ಲೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:




