ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಾರ್ಯಕ್ರಮಗಳು
ಹೆಗ್ಗೋಡಿನ ಜನಮನದಾಟ ತಂಡದಿಂದ ಬಾಬಾ ಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನ.
ರಚನೆ: ಎಲ್. ಮುಕುಂದರಾವ್
ಅನುವಾದ: ವೆಂಕಟರಮಣ ಐತಾಳ
ಪರಿಕಲ್ಪನೆ, ಸಂಗೀತ, ನಿರ್ದೇಶನ: ಇಡೀ ತಂಡದ್ದು.
- 237 hits
- more info
ಹೆಗ್ಗೋಡಿನ ಜನಮನದಾಟ ತಂಡದಿಂದ ಬಾಬಾ ಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನ
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ.
ಆಯೋಜನೆ: ನಮ್ ಟೀಮ್?! ಶಿವಮೊಗ್ಗ
ರಚನೆ: ಎಲ್. ಮುಕುಂದರಾವ್
ಅನುವಾದ: ವೆಂಕಟರಮಣ ಐತಾಳ
ಪರಿಕಲ್ಪನೆ, ಸಂಗೀತ, ನಿರ್ದೇಶನ: ಇಡೀ ತಂಡದ್ದು.
- 259 hits
- more info
ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು?
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು?
ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು.
ಒಂದು ಕವಿತೆಗೂ ಕೂಡ ಮನ ಕರಗಬಹುದು.
-(ಒಂದು ಹಲವು- ಜೀನಿಯಾ)
- 150 hits
- more info
ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ
'ಮಠ' ಚಿತ್ರದ ಬಗ್ಗೆ ಬಹಿರಂಗ ಚರ್ಚೆಗಳೇನೂ ಆಗಲಿಲ್ಲ. ಮೊಟ್ಟ ಮೊದಲ ಬಾರಿಗೆ ಕಲಾತ್ಮಕ
ಮತ್ತು ವಾಣಿಜ್ಯ ಚಿತ್ರಗಳ ಗುಣಾತ್ಮಕ ಅಂಶಗಳ Fly Over ಅಂತ ಅನಿಸಿಕೊಂಡಿದ್ದು ಮಠ
ಚಿತ್ರದ ಹೆಗ್ಗಳಿಕೆ.
- 173 hits
- more info
ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ. ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ.
ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು, ಕೈ ಕುಲುಕಲು, ನೆತ್ತಿ ಸವರಿ ಹರಸಲು. ಯಾಕೇಂದ್ರೆ... ಆದಿನ, ಇವರಿಬ್ಬರೂ ಆಸಕ್ತ ಓದುಗರ ಸಂಗ್ರಹಕ್ಕೆ ಸೇರಿಸಲು, ತಮ್ಮ ಹೊಸ ಕೃತಿಗಳ ಪೊರೆ ಕಳಚುವ ಹಂಚಿಕೆಯಲ್ಲಿದ್ದಾರೆ... ಅವರಿಬ್ಬರು ಯಾರು-ಯಾರೆಂಬ ಕುತೂಹಲವೆ? "ತುಳಸಿಯಮ್ಮ" ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾಯರು "ತುಳಸಿವನ"ದ ಘಮಲು ಹಬ್ಬಿಸುವ ಹಂಬಲ ಹೊತ್ತಿದ್ದಾರೆ.
"ಸುಪ್ತದೀಪ್ತಿ" ಕಾವ್ಯನಾಮದ ಜ್ಯೋತಿ ಮಹಾದೇವ್ ತನ್ನ "ಭಾವಬಿಂಬ"ಕ್ಕೆ ಕನ್ನಡಿ ಹಿಡಿಯಲಿದ್ದಾರೆ. ಒಂದೇ ವೇದಿಕೆಯಲ್ಲಿ ಇಬ್ಬರು ಸಾಹಿತ್ಯ ಸೋದರಿಯರ ಕಲ್ಪನೆಯ ನೌಕೆಗಳು ದುಗಭಿಯಾನ ಹೊರಡಲಿವೆ.. ಅಂದು ಇನ್ನೂ ಯಾರು-ಯಾರಿರುತ್ತಾರೆ? ಆ ವಿವರಗಳಿಗೆ ನಿಮ್ಮ ಕೌತುಕದ ಮರಿ ಗರಿಗೆದರಿ ಕಾದಿರಲಿ.
- 227 hits
- more info


RSS: