"ಬರಹ" ತಂತ್ರಾಂಶದ ಶೇಷಾದ್ರಿವಾಸು ಚಂದ್ರಶೇಖರ್‌ರವರೊಡನೆ ಒಂದು ಸಂವಾದ ಹಾಗು ಅವರಿಗೆ `ನಲ್ನುಡಿಗಳ ಸತ್ಕಾರ'' ಕಾರ್ಯಕ್ರಮ
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ನಂ. 1855, 6 ನೆ ಎ ಮೈನ್, ೨ನೇ ಸ್ಟೇಜ್, ಡಿ ಬ್ಲಾಕ್, ರಾಜಾಜಿನಗರ, ಬೆಂಗಳೂರು-೧೦kannadasaahithya@yahoogroups.comದೂರವಾಣಿ:: 9845696565
ಸ್ನೇಹಿತರೆ,
ಬೆಂಬಲಿಗರ ಬಳಗವು, ಅಂತರ್ಜಾಲದಲ್ಲಿ ಕನ್ನಡದ ಅತ್ಯುನ್ನತ ಸಾಹಿತ್ಯವನ್ನು ಬೆಳೆಸುತ್ತಲೇ ಅಂತರ್ಜಾಲಕ್ಕೆ ಹೊಸ ವ್ಯಾಖ್ಯಾನವನ್ನು ತೆರೆದಿಡುತ್ತಾ ಬಂದಿರುವ ಕನ್ನಡಸಾಹಿತ್ಯ.ಕಾಂ ಗಾಗಿ ಮೀಸಲಾಗಿರುವ ಯುವ ತಂಡದ ಬಳಗ.
ಈ ಬಳಗವು ಇದೇ ೨೯ ರಂದು "ಬರಹ" ತಂತ್ರಾಂಶದ ಶೇಷಾದ್ರಿವಾಸು ಚಂದ್ರಶೇಖರ್‌ರವರೊಡನೆ ಒಂದು ಸಂವಾದ ಹಾಗು ಅವರಿಗೆ `ನಲ್ನುಡಿಗಳ ಸತ್ಕಾರ'' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆ: ಪಿ ಶೇಷಾದ್ರಿ, ಕನ್ನಡ ಸಿನಿಮಾ ನಿರ್ದೇಶಕರು
ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಹಳೆ ಜಿಲ್ಲಾಧಿಕಾರಿಯವರ ಕಚೇರಿ ಆವರಣ.
ವೇಳೆ: ಬೆಳಿಗ್ಗೆ: ೧೦.೦೦
"ಬರಹ" ದ ಬಗೆಗೆ: ಭಾರತದ ಎಲ್ಲ ಭಾಷೆಗಳ ಬಳಕೆಯನ್ನು ಒಂದೆಡೆಯಿಂದಲೇ ಸರಳವಾಗಿಸಿರುವ ಈ ತಂತ್ರಾಂಶವು ಉಚಿತವಾಗಿ ಅಂತರ್ಜಾಲದಲ್ಲಿ ದೊರೆಯುತ್ತಿದ್ದು, ಇದನ್ನು ಜಗತ್ತಿನಾದ್ಯಂತ ೨೦ ಲಕ್ಷಕ್ಕೂ ಅಧಿಕ ಮಂದಿ ಬಳಸುತ್ತಿದ್ದಾರೆ
ಶೇಷಾದ್ರಿಯವರ ಬಗೆಗೆ: ಮುನ್ನುಡಿ, ಅತಿಥಿ, ಬೇರು ತುತ್ತೂರಿಯಂತಹ ಚಿತ್ರಗಳ ನಿರ್ದೇಶನಕ್ಕಾಗಿ ರಾಜ್ಯ ಹಾಗು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿ ಕಿರುತೆರೆ, ಡಾಕ್ಯುಮೆಂಟರಿ ಮುಂತಾದ ಕ್ಷೇತ್ರದಲ್ಲೂ ಮನ್ನಣೆ ಗಳಿಸಿರುವ ಸೃಜನಶೀಲರು.
- ಈ ಕಾರ್ಯಕ್ರಮಕ್ಕೆ ಆಗಮಿಸಿ, ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ಮನವಿ
ಕಿರಣ್ ಎಂಬಳಗದ ನಿರ್ವಾಹಕ
ಕಾರ್ಯಕ್ರಮಕ್ಕೆ ಸೀಮಿತ ೭೫ ಆಸನಗಳು ಮಾತ್ರ ಲಭ್ಯವಿರುತ್ತವೆ..............
ಲಘು ಭೋಜನ: ಮಧ್ಯಾಹ್ನ: ೧೨-೩೦ ಕ್ಕೆ
ಕಾರ್ಯಕ್ರಮದ ಸ್ಥಳ(ಸಂಪೂರ್ಣ ವಿಳಾಸ): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ, ಹಳೇ ಜಿಲ್ಲಾಧಿಕಾರಿ ಕಛೇರಿ ಆವರಣ, ಸೇಂಟ್ ಮಾರ್ಥಾಸ್ ಆಸ್ಪತ್ರೆ ಪಕ್ಕ, ಮೈಸೂರು ಬ್ಯಾಂಕ್ ವೃತ್ತ, ಕೆ.ಜಿ.ರಸ್ತೆ, ಬೆಂಗಳೂರು
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ಫೋನ್:9845696565
ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚೆಯೇ ಎಲ್ಲರೂ ಬಂದರೆ ಆಸನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದು.....





RSS: