ಕನ್ನಡ - ಸಂಸ್ಕೃತ = ತಮಿಳು
ಗಮನಿಸಿ ನೋಡಿ ಬೇಕಿದ್ರೆ, ನೀವು ಯಾವ್ದಾದ್ರು, "ಕನ್ನಡ-ಸಂಸ್ಕೃತ" ವಿಷಯ ಚರ್ಚೆಯಾಗುವ ಯಾವುದಾದರೂ ಉಪನ್ಯಾಸದಲ್ಲಿ ಕುಳಿತು ಕೇಳಿ. "ಕನ್ನಡದಿಂದ ಸಂಸ್ಕೃತ ತೆಗೆದುಬಿಟ್ರೆ ಒಳ್ಳೆ ಆ ತಮಿಳಿನವನು ಮಾತಾಡಿದ ಹಾಗೆ ಇರತ್ತೆ" ಎಂಬ ಮಾತು ಉಪನ್ಯಾಸ ನಡೆಸಿಕೊಡುತ್ತಿರುವ ವಿದ್ವಾಂಸರ ಜಿಹ್ವೆಯಿಂದ ಅಚಾನಕ್ಕಾಗಿ ಕೇಳಿ ಬರತ್ತೆ. ಇದು ಎಂತಹ ಮನಸ್ಥಿತಿಯನ್ನು ಹುಟ್ಟುಹಾಕತ್ತೆ ಗಮನಿಸಿ.
೧. "ತಮಿಳಿನವರ ಮಾತು ತುಂಬಾ ಕೀಳು" ಎನ್ನುವಂತಹ ಕೆಟ್ಟ ಭಾವನೆಯನ್ನು ಕೇಳುಗರಲ್ಲಿ ಬಿತ್ತುತ್ತದೆ.
೨. "ತಮಿಳಿನವನನ್ನು ಬೈದರೆ ಕನ್ನಡಿಗನಿಗೆ ಖುಷಿಯಾಗತ್ತೆ" ಎಂಬ ಕೀಳುಮಟ್ಟದಲ್ಲಿ ಜನರ ಭಾವನೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುತ್ತದೆ.
೩. "ಕನ್ನಡಿಗರಿಗೂ ತಮಿಳಿಗರಿಗೂ ದ್ವೇಷವನ್ನು" ಬಿತ್ತುತ್ತದೆ.
೪. "ಕನ್ನಡದಿಂದ ಸಂಸ್ಕತ ತೆಗೆದರೆ ತಮಿಳಾಗತ್ತೆ" ಎಂಬ ದೊಡ್ಡ ಸುಳ್ಳು ಹೇಳಿದಂತಾಗುತ್ತದೆ.
ಅಂದರೆ ಕನ್ನಡ - ಸಂಸ್ಕೃತ = ತಮಿಳು
೫. ಮತ್ತು ಅದೆಲ್ಲದಕ್ಕಿಂತ ಮುಖ್ಯವಾಗಿ, "ವೇದ, ಉಪನಿಷತ್ತು, ಕಾಳಿದಾಸನ ಕಾವ್ಯ, ಪಾಣಿನಿಯ ದೇವಭಾಷೆ ಸಂಸ್ಕೃತ ಇದ್ದರೇನೇ ಕನ್ನಡ". "ಇವುಗಳಿಲ್ಲದ ಕನ್ನಡ ಕೀಳು" ಎಂಬ ಹೇಳೀ ಹೇಳೀ, ಸಂಸ್ಕೃತ ಗೊತ್ತಿರದ ಕನ್ನಡಿಗರಲ್ಲಿ ಕೀಳರಿಮೆ ಹುಟ್ಟುಹಾಕುತ್ತದೆ. ನಾನಂತೂ ತುಂಬಾ ಜನನ್ನ ನೋಡಿದ್ದೀನಿ, ಅಸಾಧ್ಯ ಪ್ರತಿಭೆಯಿದ್ದರೂ ಈ ರೀತಿಯ ಉಪನ್ಯಾಸಗಳನ್ನು ಕೇಳೀ ಕೇಳೀ, ಸಂಸ್ಕೃತದ ಬಗ್ಗೆ ಒಂದು ರೀತಿಯ ಭ್ರಮೆಯನ್ನು ಕಟ್ಟಿಕೊಂಡು, ತುಂಬಾ ಕೀಳರಿಮೆಯಿಂದ ಬಳಲುತ್ತಿರುತ್ತಾರೆ.
ಕನ್ನಡಿಗರಲ್ಲಿ ಈ ರೀತಿ ಕೀಳಮಟ್ಟದಲ್ಲಿ ಕೀಳರಿಮೆಯನ್ನು (ಅದೇ ರೀ inferiority complex) ಮೂಡಿಸೀ ಮೂಡಿಸೀ ಯಾರು ಯಾರು ಏನೇನು ಬೇಳೆಕಾಳು ಬೇಯಿಸಿಕೊಂಡಿರುವರೋ/ಬೇಯಿಸಿಕೊಳ್ತಾ ಇದ್ದಾರೋ/ಬೇಯಿಸಿಕೊಳ್ಳುವರೋ ಆ ದೇವರೇ ಬಲ್ಲ.

- Login or register to post comments
- 246 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಕನ್ನಡ - ಸಂಸ್ಕೃತ = ತಮಿಳು
ನೀವು ಹಾಕಿರೋ ಐದೂ ಸಾಲುಗಳೂ ಹದಿನಾರಾಣೆ ಸರಿ; ಕನ್ನಡ ತಮಿಳು ಸಂಸ್ಕೃತ ಮೂರನ್ನೂ ಬಲ್ಲವರ ಕೊರತೆಯೇ ಇದಕ್ಕೆ ಬೇರಾಗಿರಬಹುದು. ಅಲ್ಲದೆ, ಮೂರು ಮೂರುದಿನಕ್ಕೂ ಭುಗಿಲೆನುವ ಕಾವೇರಿ ನೀರಿನ ಹಿನ್ನೆಲೆಯೂ ಇದಕ್ಕೆ ಒಗ್ಗರಣೆ ಹಾಕುವುದೇ?
(ಕನ್ನಡ - ಸಂಸ್ಕೃತ != ತಮಿಳು ಎನ್ನುವುದಕ್ಕೆ ಮೇಲಿನ ಸಾಲೇ ಗುರುತು)
:) 
ಅಂದಹಾಗೆ ತಮಿಳು ಸಂಸ್ಕೃತ ಪದಗಳನ್ನು ತೆಗೆದುಕೊಂಡಿಲ್ಲ ಅನ್ನುವುದೂ ಹಲವರಿಗಿರುವ ಒಂದು ತಪ್ಪು ಅನಿಸಿಕೆ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡ - ಸಂಸ್ಕೃತ = ತಮಿಳು
ಅವರ ಹುರುಳು..
ಎಲ್ಲರೂ ಸಂಸ್ಕೃತಯೀಕರಣದ ಕನ್ನಡ ಕಲಿತು.. ವೇದೋಪನಿಶತ್ತುಗಳನ್ನು ಅರಿಯಲಿ ಎಂಬ ಮಹದಾಸೆ!
ಇನ್ನೊಂದು ’ಹ’ಕಾರ ಉಲಿಯದವರು ತಮಿಳರಂತೆ.. ಇದೊಂದು ವಸ ಸಿದ್ದಾಂತ..