ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಮೊದಲು ಎತ್ನಿಕ್ತನ/Ethnicity ಬಗ್ಗೆ ಅರಿಮೆ.
ವಿಕೀಪೀಡಿಯದ ಸಾಲುಗಳಲ್ಲಿ ತಪ್ಪಿಲ್ಲ.. ಇದೇ
(ವಿಕಿಪೀಡಿಯದಿಂದ)
An ethnic group is a group of human beings whose members identify with each other, usually on the basis of a presumed common genealogy or ancestry.[1] Ethnic identity is also marked by the recognition from others of a group's distinctiveness[2] and by common cultural, linguistic, religious, behavioral or biological traits.
Ethnicity is a social construction that indicates identification with a particular group which is often descended from common ancestors. Members of the group share common cultural traits (such as language, religion, and dress) and are an identifiable minority within the larger nation-state. In Latin America, it often refers to Indians and Africans, although perhaps everyone has some type of ethnic identity.
ಎಲ್ಲಾ ಎತ್ನಿಕ್ ಗುಂಪುಗಳಿಗೂ ತನ್ನದೇ ಆದ ಉಲಿಕೆಯ ಕ್ರಮ ಅಂತ ಇರತ್ತೆ.. ಅದರಲ್ಲಿ ತಪ್ಪುಸರಿ ಅಂತ ಇರಲ್ಲ.. ತಮಿಳ, ಪಿಂಲ್ಯಾಂಡ್ ಮಂದಿ ಮುಂತಾದವರಿಗೆ ಅವರದೇ ಉಲಿಕೆ ಇದೆ... ಹಾಗೆ ಕನ್ನಡಿಗಲ್ಲೂ ಇದೆ.
ಈಗ ಇದನ್ನು ನೋಡಿ.
http://thatskannada.com/... .../kannada-grammer-dialects-hamsanandi.html
ನನ್ನ ಅನಿಸಿಕೆಯಲ್ಲಿ ಇದು ಒಂದು ಚೀಪ್ ಬರಹ.
ಕಾರಣಗಳು
೧) ಒಂದು ಪ್ರದೇಶದ ಒಂದು ವರ್ಗದ ಮಂದಿಯ ಉಲಿಕೆಯನ್ನು (ಒಂದು ಎತ್ನಿಕ್ ಗುಂಪಿನ ಉಲಿಕೆ) ಮೂದಲಿಸಿ ನಗುವುದು ಸಣ್ಣತನ... ಅದೇ ಈ ಬರಹದ ಜೀವಾಳ, ಸಾರ, ಸಾರಂಶ, ಹುರುಳು ತಿರುಳು. ಅದೂ ಇವರು ಹುಟ್ಟಿಬೆಳದ ಜಾಗದ ಇತರವರ್ಗದ ಉಲಿಕೆಯನ್ನೇ ಆಡಿಕೊಂಡಿದ್ದಾರೆ.
೨) ಕನ್ನಡ ಎತ್ನಿಕ್ ಮಂದಿಯ ಉಲಿಕೆ ಅವರ ವಿಶೇಶ ಗುರುತು.. ಹಾಗೆ ’ಹ’ಕಾರ ಉಲಿಯದೇ ಇರುವುದು ಆ ಪ್ರದೇಶದ ಮಂದಿಯ ವಿಶೇಶ ಗುರುತು..
ಇಂಗ್ಲೇಂಡಲ್ಲೂ ಒಂದು ಡಯ್ಲೆಕ್ಟ್ ಮಂದಿ ’ಹ’ ಉಲಿಯಲ್ಲ.. ( ಜಪ್ರೆ ಆರ್ಚರ್‍ರ A prison by birth ಕಾದಂಬರಿಯಲ್ಲಿ ಆಗಿರುವ ಆ ಡಯ್ಲೆಕ್ಟ್‌ನ ಬಳಕೆ ನೋಡಿ ) ಗ್ರೀಸ್ ಅಲ್ಲೂ ಹೀಗೆ.. ಓಕೆ ಅನ್ನು ಹೋಕೆ ಎಂದು ಅನ್ನುವ ಮಂದಿ ಇದ್ದಾರೆ.
ಇದು ಎಶ್ಟು ಚೀಪ್ ಅಂದ್ರೆ, ಒಬ್ಬ ನಾರ್ತ್ ಇಂಡಿಯದವನ್ನು ಕರೆದು ’ಹೇಳು’ ಅನ್ನು ಎಂದು ಉಲಿಸಿ ಅವನು ’ಹೇಲು’ ಎಂದಾಗ ಚಪ್ಪಳೆ ಹೊಡೆದು ಎಲ್ಲರ ಮುಂದೆ ಹೊಟ್ಟೆ ಹಿಡಿದು ನಗುವಶ್ಟು ಸಣ್ಣಬುದ್ದಿಯ ಬರಹ.
ಇದಕ್ಕೆ ನಾನು ವಯ್ಬವ ಯಾಕೆ ಎದುರು ಬರಿಯಬೇಕು?ಯಾಕೆಂದರೆ ನಮ್ಮಿಬ್ಬರ ಉಲಿಕೆ/phonology ಇದೇ. ನಮ್ಮ ಮನೆಯಲ್ಲಿ ನಾವು ಮೂರೊತ್ತು, ಬಂದೋಗು, ಬಿದ್ದೋಗು, ಅಲ್ಲಾಗು ಹಿಂಗೆ ಮಾತಾಡೋದು.. ನಮ್ಮ ಮನೆಯ ಉಲಿಕೆಯ ಆಡುಮಾತನ್ನು ಜಗಜ್ಜಾಹಿರಾಗಿ ನಗೆಪಾಟಲು ಮಾಡಿದ್ದು, ನಮ್ಮನ್ನು ಕೀಳುತೋರಿಸಶ್ಟೇ ಅಪಮಾನವೆಸಗಿದಂತೆ.
ಅಪ್ಪಟ,ತಲತಲೆಮಾರುಗಳಿಂದ ಕನ್ನಡ ಎತ್ನಿಕ್ಗುಂಪಿಗೆ/ಜನಾಂಗಕ್ಕೆ ಸೇರಿದ ನಾವು ’ಹ’ ಬಿಡುವ ಉಲಿಕೆಯನ್ನು ’ತಪ್ಪು ಕನ್ನಡ’ ಎಂದು ಒಪ್ಪುವುದಿಲ್ಲ.. ಅದು ನಮಗೆ ಅವಮಾನ. ಏಕೆಂದರೆ ನಮ್ಮ ತಾತ, ಅವರ ತಾತ, ತಾತರ ತಾತರೂ ನಮ್ಮ ಪ್ರದೇಶದಲ್ಲಿ ’ಹ’ಅನ್ನು ಎಲ್ಲೆಡೆ ಉಲಿದಿದ್ದಿಲ್ಲ... ಇದು ಕನ್ನಡದ ಒಂದು ಡಯ್ಲೆಕ್ಟ್ ಎಂದೇ ಎಣಿಸಬೇಕು.. ( ದಾರವಾಡ, ಮಂಗಳೂರು ಕನ್ನಡವನ್ನು ಎಣಿಸಿದಂತೆ ) .. ನಮ್ಮ ಪ್ರದೇಶದ ಹಲಕಲ್ಬರಹಗಳಲ್ಲೇ(ಶಾಸನ ಅಂತ ಸಂಸ್ಕೃತದಲ್ಲಿ ಹೇಳಬೋದು) ಹೀಗೆ ಹಕಾರ ಬಿಟ್ಟೋಗಿದೆ
ಕೆಳಗಿನದು ಜನರಲ್ ಆದ ಸಂಗತಿ ಇದು ಹಂಸಾನಂದಿಗೆ ನೇರ ಹೇಳಿದ್ದೆಂದು ಭಾವಿಸಕೂಡದು.
ಕನ್ನಡಮೂಲವರು ಉಲಿಕೆಯೇ ಸರಿಯುಲಿಕೆ. "English is what an English men speaks" ಎಂದು ಬ್ರಿಟನ್ನಿನ prime minister ಹೇಳಿದಂತೆ. ಎಂದು ನಮಗೆ ಅನ್ನಿಸಿದ್ದಂತೂ ದಿಟ. ಏಕೆಂದರೆ ಬೇರಿನ ವಾಸನೆ ಗಿಡದ ಚಿಗುರಲ್ಲೂ ಇದ್ದೇ ಇರತ್ತೆ. ನಾಳೆ ಒಬ್ಬ ನಾರ್ತಿ ಬಂದು ’ಭೀಭತ್ಸ’ ಎಂದು ಮಾಪ್ರಾಣಗಳನ್ನು ಉಲಿದು ನಮ್ಮ ಹುಡುಗ "ಬೀಬತುಸ" ಅಂದಾಗ ಬೆಟ್ಟಮಾಡಿ ನಗಬೋದು"
ತೆಂಕಣಕನ್ನಡದಲ್ಲಿ ’ಹ’ ಇರದೇ ಇರುವುದಕ್ಕೆ ತಕ್ಕ ಕಾರಣಗಳನ್ನು ಬಲ್ಲವರು ಹೇಳಿದ್ದಾರೆ.. ಹಲವಾರು ಹಳೆಗನ್ನಡದ ’ಪ’ಕಾರದ ಒರೆಗಳು ತುಂಗೆಯ ಮೇಲಿನ ಕನ್ನಡನಾಡಿಲ್ಲಿ ನಡುಗನ್ನಡದ ಕಾಲದಲ್ಲಿ ’ಹ’ಕ್ಕೆ ಹೊರಳಿತು.. ಆದರೆ ತೆಂಕಣಕನ್ನಡದಲ್ಲೂ/ಕೊಡವ ಮುಂತಾದ ಕನ್ನಡದ ಬಗೆಗಳಲ್ಲಿ ’ಪ’ಕಾರ ಹಲವು ಕಡೆ ಹಾಗೆ ಉಳಿಯಿತು ( ಪಳ್ಳಿ, ಪಲ್ಲಿ, ಪುಡಿ, ಪಿಂಡಿ ಮುಂತಾದವು ).. ಹಲವು ವಕಾರಕ್ಕೆ ಹೊರಳಿತು..( ಮನೆಗೆ ವೋಗು ) ಬಳಿಕ ವೋಗು ಮುಂತಾದವು ಓಗು ಆಯಿತು.
ಇದನ್ನೆಲ್ಲ ತಿಳಿದೂ ತಿಳಿದೂ ನಮ್ಮ ಪ್ರದೇಶದ ಉಲಿಕೆಯನ್ನು ಅಣಕ ಆಡಿಕೊಂಡಿತ್ತು ಸರಿಯಿಲ್ಲ......
ನಾನು ಕನ್ನಡಿಗ ಅಂದು ಹೇಳಿಕೊಳ್ಳುವುದು ಬೇರೆ.. ತಲೆಮಾರುಗಳಿಂದಾ ಕನ್ನಡಿಗರು ಎಂದು ಹೇಳಿಕೊಳ್ಳದೇ ಕನ್ನಡಿಗರಾಗಿರುವುದು ಬೇರೆ.. ( ಒಕ್ಕಲಿಗರ ಹಲವರು ಗುಂಪುಗಳಲ್ಲೂ ಹ ಇಲ್ಲ.. ಆದರೆ ಅವರು ಯಾವ ಕಾಲದಿಂದ ಕನ್ನಡವನ್ನು ಮಾತಾಡ್ತಾ ಇದ್ದಾರೆ ಅಂತ ಅವರಿಗೇ ಗೊತ್ತಿಲ್ಲ.. ನಮ್ಮ ಕನ್ನಡನೆಲಕ್ಕೆ ಇಂದು ವಲಸೆ ಬರುವ ನಾರ್ತಿಗಳು ಅಚ್ಚುಕಟ್ಟಾಗಿ ’ಹಕ್ಕಿಅಕ್ಕಿಹೆಕ್ಕಿಹಾರಿತು’ಎಂದು ಉಲಿಯಬೋದು.ಅದಕ್ಕೆ ಅವರು ಕನ್ನಡಜನಾಂಗ ಎನ್ನುಲುಬರುವುದೇ? ).
ಹೀಗೆ ಕನ್ನಡ ಒಂದು ಪ್ರದೇಶದ ಮಂದಿಯನ್ನು ಬೆಟ್ಟುಮಾಡಿನಗುವುದು ತಪ್ಪು.. ಅದು ಯಾವ ಕನ್ನಡದವರನ್ನೇ ಆಗಲಿ,

- Login or register to post comments
- 307 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಈ ದಟ್ಸ್ ಕನ್ನಡ ದಲ್ಲಿ ಅಂಸಾನಂದಿಯವರ ಬರವಣಿಗೆ ಓದಿ ಬ್ಯಾಡ ಬ್ಯಾಡ ಅಂದ್ರು ಸಿಕ್ಕಾಪಟ್ಟೆ ನೋವಾಯಿತು. ಬ್ಯಾರೆ ಯಾರೊ ಬರ್ದಿದ್ದರೆ ಇಶ್ಟು ನೋವಾಗುತ್ತಿರಲಿಲ್ಲ ಆದರೆ ನಮ್ಮ ನಲ್ಮೆಯ ಮತ್ತು ಕನ್ನಡ, ತಮಿಳು, ಸಕ್ಕದ ಎಲ್ಲಾದರೆ ಬಗ್ಗೆ ಹೆಚ್ಚು ಅರಿವುಳ್ಳ ಅಂಸಾನಂದಿಯವರೆ ಈ ರೀತಿ ಮಾಡಬೋದೆ ಅಂತ ನೆನೆದು ಎಶ್ಟೊ ಸಾರಿ ಮನ ನೊಂದಿತು.
ಈಗ ಉದಾರಣ್ಗೆ ನಾವು ಚಾ.ನಗರದಲ್ಲಿ ಮನಯ್(ಮನೆ), ಮಲಯ್(ಮಲೆ), ಅಪ್ಪಯ್(ಅಪ್ಪ) ಅಂತಿವಿ ಹಾಗಂತ ನಾವು ತಮಿಳರೆ. ?ನಮ್ಮ ಉಲಿಕೆಯನ್ನು ಗೇಲಿ ಮಾಡುವುದು ಸರಿಯೆ? ಆಲು, ಅಸು, ಅಣ್ಣು ಅಂತಿವಿ. ಇವು ನಮ್ಮ ಕಿವಿಗೆ ದಿನವೂ ಕೇಳುವ ಪದಗಳು. ಕಿವಿಗೆ ಇತವಾಗಿರೊ ಈ ಪದಗಳು ಕಣ್ಣಿಗೆ ಯಾಕೆ ಇತವಾಗ್ಬಾರದು ಅಂತಿನಿ??
ವಸಿ ಉಂಕಿಸಿ ಅಂಸಾನಂದಿ. ನೀವು ಇಂಗೆ ಬರೆದುದರಿಂದ ನಮಗೆ(ಮೇಣ್ ನಮ್ಮಂತವರಿಗೆ) ನೋವಾಗುತ್ತದೆ ಎಂಬ ಅರಿವು ನಿಮಗಿರಲಿಲ್ಲವೆ.? ಒಬ್ಬ ಬರೆಪುಗಾರನಿಗೆ ತನ್ನ ಓದುಗರ ಬಗ್ಗೆ ಅರಿವು ಇರುವುದು ಒಳ್ಳೆಯದಲ್ಲವೆ?
ಅದರಲ್ಲೂ ಅಂತ ತಾಣದಲ್ಲಿ ಇಂಗೆ ನಮ್ಮ, ನಾವು ಮೆಚ್ಚುವ ಉಲಿಕೆಯನ್ನು ನಗೆಪಾಟಲು ಮಾಡುವುದು ಸರಿಯೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
"ನಿಂದಕರಿರಬೇಕು ಅಂದಿಯತರಅ ನಿಂದಕರಿರಬೇಕು"
ಇಲ್ಲಿ ನಿಂದಕರು ಯಾರೋ ಗೊತ್ತಿಲ್ಲ.. ಆದರೆ ’ಅಂದಿ’ಯಾರು?
ಹಂದಿಯನ್ನ ’ಅಂದಿ’ ಎಂದು ಯೋಳೋರು ’ಅಂದಿ’ಗಳಾ ಬುದ್ದಿ.. ? ಯೆಸರು ಇಡಬೇಕಾದರೆ ಯಿಂಗಾ ಇಡಾದು?
ಬರಹ ನಿಮ್ಮದು ಅಂದ ಮೇಲೆ, ಬರಹದ ತಲೆ ನಿಮ್ಮದಲ್ವರ?
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಮೈಸೂರಲ್ಲಿ ಮಳೆ ಆದ್ರೆ ಬೆಂಗಳೂರಲ್ಯಾಕೆ ಛತ್ರಿ ಹಿಡಿತಿದಿರಾ? ಆ ಬರಹ ಬಂದದ್ದು ದಟ್ಸ್ ಕನ್ನಡದಲ್ಲಿ. ನೋವು ತೋಡಿಕೊಂಡದ್ದು ಸಂಪದದಲ್ಲಿ

ಆದ್ರೂ ಒಳ್ಳೇ ಮಜಾ ಕೊಡ್ತು "ನಿಂದಕರಿರಬೇಕು ಅಂದಿಯ ತರಅ "
**************************
http://vikasavada.blogspot.com/
**************************
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಒಪ್ಪತಕ್ಕ ಮಾತು!
’ಎಗಡೆ’ಗಳಿಗೆ ಬೇರೊಬ್ಬರನ್ನು ’ಅಂದಿ’ ಅಂದಾಗ ಮಜಾ ಬಂದೇ ಬರತ್ತೆ.. ಅದು ಅವರ ಎತ್ನಿಕ್ತನ.!!
ಅದನ್ನು ನಾವು ಮೆಚ್ಚಬೇಕು.
ಎಗಡೆಗಳು ಇದರಲ್ಲಿ ಮಜ ತಗೊಳ್ಳೋದ್ರಲ್ಲಿ ಯಾವ ಸೋಜಿಗವಿಲ್ಲ..
ಇದನ್ನೇ ತಾನೇ ಹಂಸಾನಂದಿಗಳು ’ಅಂಸಾನಂದಿ’ಯಾಗಿ ಮಾಡಿದ್ದು..
ಸಂಪದದಲ್ಲಿ ಯಾಕೆ ಹಾಕಿದ್ದು ... ಅಂತ ಸಂಪದದಲ್ಲಿರುವ ಮೂರುಮುಕ್ಕಾಲು ಮಂದಿಗೆ ಗೊತ್ತು.. ಸಂಪದದ ತಮ್ಮ ಹಳೆಬರಹವನ್ನು ಹೆಸರು ಬದಲಿಸಿ ಹೊರತಂದು ’ಅಂದಿ’ ಎಂದು ಮಜ ತಗೊಳ್ಳುವ ಪ್ರತಿಭೆ.!
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಎತ್ನಿಕ್ತನ!! ಈ ಎತ್ತಿ ಇಕ್ಕುವ ತನವನ್ನು ಬಿಟ್ಟು ಜನಾಂಗ ಗುಣ ಅಂದರೆ ತಪ್ಪೇನಿಲ್ಲ.
ನಾನು ಬರಹ ಓದಿ ಮಜಾ ಬಂತ ಅಂದೆ. ಹಾಗೆಯೇ ಇನ್ನೂ ಹಲವು ಬರಹಗಳನ್ನು ಓದಿದಾಗಲು ಮಜಾ ಬರುತ್ತದೆ. ಅದರಲ್ಲೇನು ತಪ್ಪು? ನಾನು ಈ ಮೇಲಿನ ಲೇಖನ ಬರೆದವರು ಅಂದಿ ಅಂತ ಏಳಿಲ್ವಲ್ಲ!
ಅಂದಿಗಳು ಅಂತ ಅನಿಸಿಕೊಂಡು/ತಿಳಿದುಕೊಂಡು ನೋವಾದವರು ಕೆಸರಲ್ಲಿ ಬಿದ್ದು ಹೊರಳಾಡಿ ತಂಪುಮಾಡಿಕೊಳ್ಳಬಹುದು.
ಬೇರೆಯವರಿಗೆ ಕೆಸರೆರೆಚಬೇಕಿಲ್ಲ. ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅಂತ ಮತ್ತೆ ಬಂದೈತೆ
**************************
http://vikasavada.blogspot.com/
**************************
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ನಾವು ಅಂಸನಾಂದಿಗಳ ಜೊತೆ ಚರ್ಚೆ ಮಾಡಕ್ಕೆ ಅನುಮತಿ ಕೊಡಿ..!
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಇನ್ನೊಬ್ಬರನ್ನ ಕೆಸರಣ್ಣ ಎಂದು ಕರೆಯೋರ್ದು ಅದ್ಯಾವ ಎತ್ತಿನಿಕ್ಕು ಗುಣವೇನೋ ಪಾಪ ! ಕನ್ನಡಿಗರದ್ದಂತೂ ಅಲ್ಲವಾ ಅಂತ !
ಅನುಮತಿ ನೀಡಲಾಗಿದೆ
**************************
http://vikasavada.blogspot.com/
**************************
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ನೋಡಿ ಸ್ವಾಮೀ, ಮೊದಲೇ ನಾನು ಹೇಳಿರುವೆ - ತಲೆಬರಹ ಬದಲಾಯಿಸಿದ್ದು ನಾನಲ್ಲ. ಪ್ರಕಟಮಾಡುವ ಮೊದಲು ಅವರು ಹೆಸರು ಬದಲಿಸುವೆನೆಂದು ನನಗೆ ಹೇಳಿಲ್ಲ -ಹಾಗೇನಾದರೂ ಹೇಳಿದ್ದಿದ್ದರೆ, ನಾನು ನಾನಿತ್ತ ತಲೆಬರಹವನ್ನೇ ಇಡಿ ಎನ್ನುತ್ತಿದ್ದೆ. ಅಷ್ಟೇ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಸರಿ. ತಪ್ಪು ನಿಮ್ಮದೂ ಅಲ್ಲ ಯಾರದು ಅಲ್ಲ
’ಹ’ ಹೇಳದ ’ಅಂದಿ’ಗಳದ್ದು.....
ನಂದು ತಪ್ಪಾಯ್ತು.. ನೀವು ಮತ್ತು ಹೆಗಡೆಯವರು ಮನ್ನಿಸಿರಿ.......
ಒಟ್ಟಿನಲ್ಲಿ ನೀವು ನಕ್ಕಿರಿ, ಹೆಗಡೆಯವರಿಗೆ ಮಜ ಬಂತು ಅದು ಮುಕ್ಯ..!
ನನ್ನಿ....
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ತಲೆಬರಹ ಹಾಗಿದ್ದ ಮಾತ್ರಕ್ಕೆ ಹ ಹೇಳದವರು ಹಂದಿಗಳು ಅಂತ ಯಾಕೆ ಅರ್ಥೈಸುವ ಕುತಂತ್ರ ಯಾಕೆ ಮಾಡುತ್ತಿದ್ದೀರಾ?
ಒಂದು ಜನಪ್ರಿಯ phrase ತೆಗೆದುಕೊಂಡು ಅದನ್ನು ಇಟ್ಟಿದ್ದಾರಷ್ಟೆ . ಹ ಹೇಳದವರು ಹಂದಿಗಳು ಅಂತ ಎಲ್ಲೂ ಯಾರೂ ಹೇಳಿಲ್ಲ.
**************************
http://vikasavada.blogspot.com/
**************************
ಉ: ಕನ್ನಡ ಎತ್ನಿಕ್ತನದ(ಜನಾಂಗಗುಣದ) ಅವಮಾನ
ಹಂಸಾನಂದಿಯವರ ಆ ಬರಹದಲ್ಲಿ ಹೇಳಿದ್ದಕ್ಕೆ ಇಲ್ಲ್ಲೇ ಉದಾಹರಣೆಗಳಿವೆ ನೋಡಿ.
ನಿಮಗೆ ethnic, primeminister ಎಂಬ ಇಂಗ್ಲೀಷ್ ಪದಗಳನ್ನು ಬಳಸಲು ಯಾವ ಮುಜುಗುರವೂ ಇಲ್ಲ. ಆದರೆ ಎಲ್ಲರಿಗೂ ಗೊತ್ತಾಗುವ ಸಂಸ್ಕೃತ ಪದ ಕೆಲವನ್ನು ಬಳಸಿದಾಗ ಮಾತ್ರ ಆಗುವುದಿಲ್ಲ. ಅಷ್ಟಿದ್ದವರು ಈ ಪದಗಳಿಗೆ ಕನ್ನಡ ಪದಗಳನ್ನೇ ಬಳಸಬೇಕಿತ್ತು. ಅಥವಾ ಪ್ರಧಾನಮಂತ್ರಿ ಎನ್ನಬೇಕಿತ್ತು. ಅಲ್ಲವೆ? ಈ ’ಎತ್ನಿಕ್ತನ ’ ಎನ್ನುವ ಪದ ಅದು ಹೇಗೆ ಕನ್ನಡದ ಸೊಗಡಿಗೆ ಹೊಂದಿಕೊಂಡು ಬಿಡ್ತು ?
**************************
http://vikasavada.blogspot.com/
**************************