ಹಾಸಿಗೆ
ಹಾಸಿಗೆ (ನಾಮಪದ)
ಪಾಸುಗೆ (ಬೀಸುವುದೊಮ್ಮೆ ಪಿಡಿದು ಬಿಜ್ಜಣಿಗೆಯ ಪಾಸುವುದೊಮ್ಮೆ ಪಾಸಿಗೆಯ - ಹದಿಬದೆಯಧರ್ಮ; ಹಾವು ಎನ್ನ ಹಾಸಿಗೆಯಂತೆ ಕದ್ದು ಬೆಣ್ಣೆಯ ನಾ ತಿಂದೆನಂತೆ - ಪುರಂದರದಾಸರು; ಹಾಸಿಗೆಯಿದ್ದಷ್ಟು ಕಾಲುಚಾಚು - ಗಾದೆ)
[ತುಳು: ಹಾಸಿಗೆ]
(ಹಾಸಿಗೆಗಲ್ಲು, ಹಾಸುಗೆಗಲ್ಲು=ಉದ್ದಕ್ಕೆ ಚಾಚಿರುವ ಕಲ್ಲು, ಹಾಸುಗಲ್ಲು; ಹಾಸಿಗೆಹಾವು=ಹಾಸಿಗೆಯಲ್ಲಿ ಸೇರಿಕೊಂಡಿರುವ ಹಾವು, ದ್ರೋಹಿ; ಹಾಸಿಗೆಹಿಡಿ=ರೋಗದ ಕಾರಣದಿಂದ ಹಾಸಿಗೆಯಿಂದ ಮೇಲಕ್ಕೇಳದಂತಿರು; ಹಾಸಿಗೆಹುಣ್ಣು=ಯಾವಾಗಲೂ ಮಲಗಿಯೇ ಇರುವುದರಿಂದ ಆದ ಹುಣ್ಣು; ಹಾಸಿಗೆಪಥ್ಯ; ಹಾಸಿಗೆಯ ಊಳಿಗ)
(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

- Login or register to post comments
- 142 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಹಾಸಿಗೆ
ಇದು ಹಾಸು=ಹರಡು, ಬಿತ್ತರಿಸು ಎಂಬುದಱ ಭಾವನಾಮ ಎಂದೂ ಸೇರಿಸಬಹುದು.
ಉ: ಹಾಸಿಗೆ
ನಿಘಂಟುವಿನಿಂದ ಸರಿಯಾದ ರೂಪ. ನಿಘಂಟು ನಿತ್ಯ ಉಕಾರಾಂತ ಶಬ್ದ. ನಿಗಂಟುಗೆ ಬೇಕಾದರೆ ನಿಗಂಟಿಂದ ಎಂದು ಹೇೞಬಹುದೇನೋ? ಎಕೆಂದರೆ ಅದು ತದ್ಭವವಾಗಿ ಕನ್ನಡವಾಗುತ್ತದೆ.