ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪಾರ್‍, ಪಾರು, ಹಾರು (ಕ್ರಿಯಾಪದ) [ತಮಿಳು, ಮಲಯಾಳ: ಪಾರ್‍]
೧. ನೋಡು; ಅವಲೋಕಿಸು ೨. (ಸಮಯವನ್ನು) ಎದುರುನೋಡು; ನಿರೀಕ್ಷಿಸು; ಪ್ರತೀಕ್ಷಿಸು ೩. ಬಯಸು; ಅಪೇಕ್ಷಿಸು; ಹಾರೈಸು ೪. ವಿಚಾರಮಾಡು; ಯೋಚಿಸು; ಆಲೋಚನೆ ಮಾಡು
(ಪಾರುಪತ್ಯ = ಮೇಲ್ವಿಚಾರಣೆ, ಉಸ್ತುವಾರಿ; ಪಾರುವೀಳೆಯ = ದರ್ಶನವನ್ನು ಮಾಡಿದವರಿಗೆ ಕೊಡುವ ಗೌರವತಾಂಬೂಲ)

ಪಾರು, ಹಾರು (ನಾಮಪದ)
೧. ಆಚೆಯ ದಡ; ಪಾರ ೨. ಕೊನೆ; ಅಂಚು ೩. ಮನೆಯ ಮಾಡಿನ ಇಳಿಜಾರು; ಸೂರಿನ ಇಳಿಜಾರು ಭಾಗ ೪. ನೊಗದ ಎರಡು ಪಕ್ಕ ೫. ಅಪಾಯದಿಂದ ತಪ್ಪುವಿಕೆ; ಬಚಾವು
(ಪಾರಾಗು - ಬಿಡುಗಡೆ ಹೊಂದು, ಬಚಾವಾಗು; ಪಾರುಮಾಡು = ಕಾಪಾಡು, ರಕ್ಷಿಸು, ಪಾರುಗಟ್ಟಿಗೆ = ಚೂಪಾದ ಆಯುಧವನ್ನು ತುದಿಗೆ ಅಳವಡಿಸಿದ ಕೋಲು; ಪಾರುಗಡೆ = ಬಿಡುಗಡೆ; ಪಾರುಗಾಣಿಸು = ದಡ ಮುಟ್ಟಿಸು/ರಕ್ಷಿಸು/ಮುಗಿಸು/ಪರಿಹರಿಸು)

ಪಾಱು -೧ (ನಾಮಪದ) [ತಮಿಳು, ಮಲಯಾಳ: ಪಾಱು, ತುಳು: ಪಾರು, ಕೊಡವ: ಪರ್‍, ತೆಲುಗು: ಪಾಱು, ತೊದ: ಪೊರ್‍]
ಪಾರ್‍, ಪಾರು, ಹಾರು, ಹಾಱು
೧. ಎಗರು; ಜಿಗಿ; ನೆಗೆ; ಪುಟಿ; ಚಿಮ್ಮು ೨. ಏರು; ಮೇಲಕ್ಕೆ ಹೋಗು ೩. ಆಕಾಶದಲ್ಲಿ ಚಲಿಸು; ಉಡ್ಡಾಣ ಮಾಡು ೪. ತೊಲಗು; ಹಿಂದೆಸರಿ; ದೂರವಾಗು ೫. ಚೆದರು; ಚೆಲ್ಲಾಪಿಲ್ಲಿಯಾಗು; ದಿಕ್ಕಾಪಾಲಾಗು ೬. ವೇಗವಾಗಿ ಮಿಡಿ; ಕಂಪಿಸು ೭. ನಾಶವಾಗು; ಹಾಳಾಗು ೮. ಇಲ್ಲವಾಗು; ಹೊರಟುಹೋಗು; ಕಳೆದುಹೋಗು ೯. ಸೂಸು; ಹೊರಚೆಲ್ಲು; ಹೊಮ್ಮಿಸು

ಪಾಱು -೨ (ನಾಮಪದ)
ಪಾರ, ಪಾರು, ಹಾಱು
೧. ಜಿಗಿತ; ಹಾರಿಕೆ ೨. ಹಾರಾಡುವಿಕೆ; ಉಡ್ಡಾಣ ೩. ಒಂದು ಬಗೆಯ ನಾವೆ; ಹರಿಗೋಲು ೪. ವಿಮಾನ ೫. (ಕರಾವಳಿಯಲ್ಲಿ) ಜಲಪಾತ; ದಬದಬೆ ೬. ಹೃದಯ, ನರ ಮೊದಲಾದವುಗಳ ಮಿಡಿತ

ಪಾಱು -೩ (ನಾಮಪದ)
೧. ಚಪಲತೆ; ಚಂಚಲತೆ ೨. ಹಾದರ; ಜಾರತನ ೩. ಹಾದರಗಿತ್ತಿ; ಜಾರೆ ೪. ಚಂಚಲನಾದ ವಿಟ; ಜಾರ ೫. ವಿಟವರ್ಗ; ಜಾರರಗುಂಪು ೬. ಕೈಲಾಗದವನು; ದುರ್ಬಲನಾದ ವ್ಯಕ್ತಿ; ಅಶಕ್ತ; ಹೇಡಿ

(ಪಾಱುಂಗುಪ್ಪೆ/ಪಾರ್ಗುಪ್ಪೆ/ಪಾಱುಗುಪ್ಪೆ/ಹಾಱುಗುಪ್ಪೆ = ಮರಳಿನ ಗುಡ್ಡೆಯನ್ನು ರಚಿಸಿ ಅದನ್ನು ನೆಗೆದು ದಾಟುವ ಮಕ್ಕಳ ಒಂದು ಬಗೆಯ ಆಟ; ಪಾಱುಂಬನಿ = ಸಿಡಿಯುವ ಹನಿ; ಪಾಱುಂಬಳೆ = ಚಕ್ರ, ಚಕ್ರಾಯುಧ, ಒಂದು ಬಗೆಯ ಆಟ; ಪಾಱುಂಬಳೆಗೈಯ = ಚಕ್ರಪಾಣಿ, ವಿಷ್ಣು; ಪಾಱುಂಬಳೆದಿರುಪು = ಚಕ್ರದಂತೆ ತಿರುಗಿಸು; ಪಾಱುಂಬಳೆವಿಡಿ = ಚಕ್ರಾಯುಧವನ್ನು ಹಿಡಿ; ಪಾಱುಗಂಡ = ಚಂಚಲನಾದ ವ್ಯಕ್ತಿ, ಅಲ್ಪನಾದ ಜಾರ; ಪಾಱುಗಣ್ = ಚಂಚಲವಾದ ಕಣ್ಣು; ಪಾಱುಗೆಡು = ಹಾರಾಡುವುದು ನಿಂತುಹೋಗು; ಪಾಱುಗೆಯ್ತ = ೧. ಹಾರಾಡುವ ಕ್ರಿಯೆ ೨.ಜಾರತನ, ಹಾದರ, ವ್ಯಭಿಚಾರ ೩.ಅನಿಶ್ಚಯಸ್ಥಿತಿ, ಚಾಂಚಲ್ಯ; ಪಾಱುಗೊಂಬು = ಎತ್ತರದಲ್ಲಿ ತೂಗಾಡುವ ಕೊಂಬೆ; ಪಾಱುತನ = ಹಾರಾಟ; ಪಾಱುನೀರೆ = ಹಾರುವ ಚೆಲುವೆ, ಖೇಚರ ಸುಂದರಿ; ಪಾಱುಬೊಜಂಗ = ಚಪಲನಾದ ವಿಟ; ಪಾಱುವೆಂಡತಿ = ಹಾದರಗಿತ್ತಿ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪಾರು

mahesha's picture

ಹೊತ್ತಿಗೆ ತಕ್ಕದ್ದು..

ಕನ್ನಡಕಂದ ನೋಡಿ

ಉ: ಪಾರು

kannadakanda's picture

ನಿಜವಾಗಿ ಪಾರ್/ಹಾರು=ನೋಡು, ನಿರೀಕ್ಷಿಸು
ಪಾಱ್/ಹಾಱು=ಹಕ್ಕಿಯಂತೆ ಹಾಱು

ಉ: ಪಾರು

kannadakanda's picture

ಪಾರುಗಾಣಿಸು=ನಿರೀಕ್ಷೆಯನ್ನು ತೋಱಿಸು(ಕಾಣಿಸು)
ಪಾರುಗಾಣು=ನಿರೀಕ್ಷೆಯನ್ನು ಕಾಣು (ತಲುಪು) ಇರಬಹುದೇ?

ಆರು ಕಾಯುವರಿಲ್ಲ
ಸಾರಿದೆ ನಿನಗಯ್ಯಾ
ಧೀರ ವೇಣುಗೋಪಾಲ
ಪಾರುಗಾಣಿಸೊ ಹರಿಯೆ

ಎಂದರು ರಾಘವೇಂದ್ರಸ್ವಾಮಿಗಳು. ಇದಱರ್ಥ ಇದೇ ಇರಬಹುದೇನೋ?

ಉ: ಪಾರು

hamsanandi's picture

ಪಾರುಗಾಣಿಸು ಅನ್ನೋದು ದಡ ಸೇರಿಸು ಅಂತ ಇರಬಹುದೆ? ( ಗಮನಿಸಿ: ಪಾರ್ = ದಾಟು, ಪಾರ್ = ದಡ; ಹಿಂದಿ ಮತ್ತೆ ಅದಕ್ಕೆ ಹತ್ತಿರದ ಭಾಷೆಗಳಲ್ಲಿ)
ದಾಟಿಸು, ತಪ್ಪಿಸು ಅನ್ನೋ ಅರ್ಥವಂತೂ ಇದ್ದೇ ಇದೆ (ಮಾದರಿ- ಅಪಘಾತದಿಂದ ಪಾರಾದರು ಅನ್ನೋ ಸಾಲನ್ನ ನೋಡಿ)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ