ಕಾಯ್
ಕನ್ನಡದಲ್ಲಿ ಕಾಯ್ ಎಂಬ ಪದ ಮೂಱು ಅರ್ಥಗಳಲ್ಲಿ ಬಳಕೆಯಾಗುವುದು ಕಂಡುಬರುತ್ತದೆ
೧)ಕಾ(ಯ್)=ರಕ್ಷಿಸು, ಕಾಪಾಡು ಉದಾ:- ನಾಯಿ ಮನೆ ಕಾಯುತ್ತದೆ.
೨)ಕಾಯ್=ಬಿಸಿಯಾಗು. ಉದಾ:- ಸ್ನಾನಕ್ಕೆ ನೀರಿನ್ನೂ ಕಾಯಬೇಕು.
೩)ಕಾಯ್=ನಾಮಪದವಾಗಿ ಕಾಯ್(ಯಿ)=ಇನ್ನೂ ಬಲಿತಿರದ ಹಣ್ಣು. ಹಾಗೆಯೇ ಕ್ರಿಯಾಪದವಾಗಿ ಕಾಯಿಬಿಡು. ಉದಾ:-ಮರ ಕಾಯುತ್ತದೆ (ಕಾಯಿ ಬಿಡುತ್ತದೆ)
ನೋಡಿ:-
ಕಾಡಿನೊಳ್ ಪೂತ ಕಾತ ಪಣ್ತ ಬೀತ ಮರಗಳುಂಟು.
ಕಾಡಿನಲ್ಲಿ ಹೂತ (ಹೂಬಿಟ್ಟ) ಕಾತ(ಕಾಯಿ ಬಿಟ್ಟ) ಹಣ್ತ (ಹಣ್ಣು ಬಿಟ್ಟ) ಬೀತ (ಮುಪ್ಪಾದ) ಮರಗಳುಂಟು.
ಇಲ್ಲೂ ಪೂ(ಹೂ), ಕಾಯ್, ಪಣ್ ಇವುಗಳು ನಾಮಪದಗಳು ಅದೇ ಅರ್ಥದಲ್ಲಿ ಕ್ರಿಯಾಪದಗಳು ಕೂಡ.

- Login or register to post comments
- 160 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ







RSS:
ಉ: ಕಾಯ್
ಕನ್ನಡಕಂದರೆ,
ಇನ್ನೊಂದು ಅರ್ಥವನ್ನು ನೀವು ಬಿಟ್ಟಿದ್ದೀರಲ್ಲ!
ಊಟ ಮಾಡಲು ನೀವು ಬರೋದನ್ನೇ ನಾನು ಕಾಯ್ತಿದ್ದೆ
ಅಥವಾ,
ನೀರು ಕಾಯ್ದಿಲ್ಲ ಅಂತ, ಸ್ನಾನ ಮಾಡೋದಕ್ಕಿನ್ನೂ ಕಾಯ್ತಿರೋವಾಗ, ಸೀಬೇಕಾಯಿ ತಿಂತಾ ಇದೀನಿ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕಾಯ್
>>ನೀರು 'ಕಾಯ್'ದಿಲ್ಲ ಅಂತ, ಸ್ನಾನ ಮಾಡೋದಕ್ಕಿನ್ನೂ 'ಕಾಯ್"ತಿರೋವಾಗ, ಸೀಬೇ'ಕಾಯ್' ..
ವಾ..ವ್ವಾ..
ನೀವು ಸೀಬೆಕಾಯ್ ಮುಗಿಸೋದ್ರೊಳಗೆ ಊಟಕ್ಕೆ ನಾವ್ ರೆಡಿ .
-ಗಣೇಶ.
ಉ: ಕಾಯ್
ತುಂಬಾ ಧನ್ನವಾದಗಳು. ಕಾಯ್=ನಿರೀಕ್ಷಿಸು, ಎದುರು ನೋಡು, ಪಾರು ಅಥವಾ ಹಾರು (ಹಾಱು ಅಲ್ಲ). ಈ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು.